ಎಷ್ಟೋ ಸಲ ಅತಿಯಾಗಿ ತಿನ್ನುವ ಅಭ್ಯಾಸದಿಂದ ಹೊರಬರುವುದು ಬಹಳ ಕಠಿಣ ಎನಿಸುತ್ತದೆ. ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರ ಸೇವಿಸಿದರೆ ಎಲ್ಲ ಸರಿ ಇದೆ ಎನಿಸುತ್ತದೆ. ಹೊರಗಡೆ ಹೋದಾಗ ಮಾತ್ರ ನಿಮ್ಮನ್ನು ನೀವು ಜಂಕ್‌ಪುಡ್‌ಗೆ ಅಡಿಕ್ಟ್ ಮಾಡಿಕೊಳ್ಳುವಿರಿ. ಅಲ್ಲಿ ಆಹಾರ ನೋಡುತ್ತಿದ್ದಂತೆ, ನಿಮ್ಮ ಹಸಿವು ಕೆರಳುತ್ತದೆ. ಆಗ ನೀವು ಡಯೆಟ್‌ ಮರೆತು ಜಂಕ್‌ಫುಡ್‌ನ ಟೇಸ್ಟ್ ತೆಗೆದುಕೊಳ್ಳಲು ಮುಂದಾಗುವಿರಿ.

ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಈ ಅಭ್ಯಾಸಗಳನ್ನು ತೊರೆಯಬಹುದು.

ಆಹಾರದಲ್ಲಿ ವಿನಿಗರ್‌ ಮತ್ತು ದಾಲ್ಚಿನ್ನಿ ಸೇವಿಸಿ : ಆಹಾರವನ್ನು ರುಚಿಕರ ಮತ್ತು ಆರೋಗ್ಯಕರಗೊಳಿಸಲು ಬಹಳಷ್ಟು ಮಸಾಲೆ ಮತ್ತು ಫ್ಲೇವರ್‌ಗಳನ್ನು ಸೇರಿಸಲಾಗುತ್ತದೆ. ವಿನಿಗರ್‌ನಿಂದ ಗ್ಲೈಸೆಮಿಕ್‌ ಇಂಡೆಕ್ಸ್ ಕಡಿಮೆಯಾಗುತ್ತದೆ. ಆಹಾರದಲ್ಲಿ ಕ್ಯಾಲೋರಿಯ ಪ್ರಮಾಣ ಹೆಚ್ಚಿಸದೆಯೇ ಸಲಾಡ್‌ನ ಡ್ರೆಸ್ಸಿಂಗ್‌ ಮಾಡಿ. ಸಾಸ್‌ ಮತ್ತು ಹುರಿದ ತರಕಾರಿಗಳಿಂದ ಅವುಗಳಿಗೆ ಅಸಿಡಿಕ್‌ ಫ್ಲೇವರ್‌ ದೊರೆಯುತ್ತದೆ.

ಹಸಿವಿಲ್ಲದಿದ್ದಾಗ ತಿನ್ನಿ : ಹಸಿವು ತೀವ್ರವಾಗಿರುವಾಗ ವ್ಯಕ್ತಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುತ್ತಾನೆ. ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದರಿಂದ ನೀವು ಹೊಟ್ಟೆ ತುಂಬಿದ ಅನುಭವ ಪಡೆದುಕೊಳ್ಳುವಿರಿ. ಆಗ ಇನ್ಸುಲಿನ್‌ನ ಪ್ರಮಾಣ ಹೆಚ್ಚುತ್ತದೆ ಮತ್ತು ನಿಮಗೆ ದಣಿವಿನ ಅನುಭವವಾಗುತ್ತದೆ. ಆ ಬಳಿಕ ಬೇಗ ಹಸಿವಾಗುತ್ತದೆ. ನೀವು ಮತ್ತೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುವಿರಿ. ಹಸಿವನ್ನು ಕೊಲ್ಲುವುದಕ್ಕಿಂತ ಬೇರೆ ವಿಧಾನಗಳನ್ನು ಅನುಸರಿಸಿ ನೋಡಿ. ನಿಮಗೆ ಹಸಿವು ಆಗದಿದ್ದಾಗ ಅಥವಾ ಹಸಿವೆ ಕಡಿಮೆ ಇದ್ದಾಗಲೇ ತಿನ್ನಿ. ಆ ಸಮಯದಲ್ಲಿ ನೀವು ಕಡಿಮೆ ಆಹಾರ ಸೇವಿಸುವುದರಿಂದ ಹಲವು ಲಾಭಗಳಿವೆ. ಈ ಅಭ್ಯಾಸದಿಂದ ವ್ಯಕ್ತಿ ಹೆಚ್ಚಿನ ಸ್ಛೂರ್ತಿಪಡೆಯುತ್ತಾನೆ.

ಪೇಯಗಳ ಬದಲು ನೀರು ಕುಡಿಯಿರಿ : ಜ್ಯೂಸ್‌ ಮತ್ತು ಸೋಡಾದಂತಹ ಪೇಯಗಳಲ್ಲಿರುವ ಕ್ಯಾಲೋರಿಯಿಂದ ದೇಹಕ್ಕೆ ಯಾವುದೇ ಲಾಭವಿಲ್ಲ. ಇವು ಇನ್ಸುಲಿನ್‌ನ ಪ್ರಮಾಣ ಹೆಚ್ಚಿಸುತ್ತದೆ. ಒಂದು ಒಳ್ಳೆಯ ವಿಧಾನವೆಂದರೆ, ಈ ಪೇಯಗಳ ಬದಲಿಗೆ ನೀವು ನೀರನ್ನು ಹೆಚ್ಚಾಗಿ ಕುಡಿಯಿರಿ. ರುಚಿ ಹೆಚ್ಚಿಸಲು ನಿಂಬೆ, ಸ್ಟ್ರಾಬೆರಿ ಅಥವಾ ಸೌತೇಕಾಯಿ ರಸ ಮಿಶ್ರಣ ಮಾಡಿಕೊಳ್ಳಿ. ನಿಮ್ಮ ಪೇಯದಲ್ಲಿ ಎಂದೂ ಕ್ಯಾಲೋರಿ ಮಿಶ್ರಣ ಮಾಡಬೇಡಿ. ದಿನಕ್ಕೆ 8-10 ಗ್ಲಾಸ್‌ ನೀರು ಕುಡಿಯುವ ಗುರಿ ನಿರ್ಧರಿಸಿಕೊಳ್ಳಿ.

ನಿಧಾನವಾಗಿ ಸೇವಿಸಿ : ಆಹಾರವನ್ನು ಅಗಿಯುವ ಸ್ಥಿತಿಯಲ್ಲಿ ಅದರಿಂದ ತೃಪ್ತರಾಗಲು ಸ್ವಲ್ಪ ಸಮಯ ತಗುಲುತ್ತದೆ. ಈ ಅವಧಿ   10-30 ನಿಮಿಷ ಆಗಿರಬಹುದು. ಈ ವಿಳಂಬದ ಕಾರಣದಿಂದಾಗಿ ನಾವು ಎಷ್ಟೋ ಸಲ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತೇವೆ. ನಾವು ಎಷ್ಟು ವೇಗವಾಗಿ ಆಹಾರ ಸೇವಿಸುತ್ತೇವೆಯೋ ಅಷ್ಟೇ ಹೆಚ್ಚಿನ ಪ್ರಮಾಣದ ಆಹಾರವನ್ನೂ ಸೇವಿಸಿಬಿಡುತ್ತೇವೆ. ಪ್ರತಿಯೊಂದು ತುತ್ತನ್ನೂ ಚೆನ್ನಾಗಿ ಅಗಿದು ತಿನ್ನಿ. ಈ ಒಂದು ಸಾಧಾರಣ ನಿಯಮ ಅನುಸರಿಸುವುದರಿಂದ ನೀವು ಆಹಾರದ ಪ್ರಮಾಣದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ನೀವು ಆಹಾರವನ್ನು ಚೆನ್ನಾಗಿ ಅಗಿದು ತಿನ್ನಲು ಪ್ರ್ಯಾಕ್ಟೀಸ್‌ ಮಾಡುವಿರಿ

ಸ್ನ್ಯಾಕ್ಸ್ ಸೇವಿಸಿ : ಎರಡು ಊಟಗಳ ನಡುವಿನ ಅವಧಿಯಲ್ಲಿ ಆಲಿವ್‌ ಆಯಿಲ್‌ ಅಥವಾ ಸಕ್ಕರೆ ಮಿಶ್ರಿತ 1 ಗ್ಲಾಸ್‌ ನೀರು ಸೇವಿಸಬಹುದು. ಉಪ್ಪು ಸವರದ ಬಾದಾಮಿಯನ್ನು ಕೂಡ ತಿನ್ನಬಹುದು. ದಿನಕ್ಕೆ 1 ಸಲ ಹೀಗೆ ಮಾಡುವುದರಿಂದ ನಿಮ್ಮ ಹಸಿವಿನ ಮೇಲೆ ನಿಯಂತ್ರಣ ಸಾಧಿಸಬಹುದು. ನಿಮಗೆ ತೂಕ ಕಡಿಮೆ ಮಾಡಿಕೊಳ್ಳಬೇಕಿದ್ದರೆ ಈ ವಿಧಾನ ಬಹಳ ಉಪಯುಕ್ತ ಎನಿಸಬಹುದು. ಇದರಿಂದ ಘ್ರೇಲಿನ್‌ ನಿಯಂತ್ರಣದಲ್ಲಿರುತ್ತದೆ. ಇದು ಹಸಿವು ಹೆಚ್ಚಿಸುವ ಹಾರ್ಮೋನ್‌ ಆಗಿದೆ. ಫ್ಲೇವರ್‌ ಮತ್ತು ಕ್ಯಾಲೋರಿಯ ನಡುವಿನ ಸಂಬಂಧ ದುರ್ಬಲಗೊಳ್ಳುತ್ತದೆ. ಈ ವಿಧಾನ ಯಶಸ್ವಿಯಾದರೆ ನೀವು ಹಗುರ ಸ್ನ್ಯಾಕ್ಸ್ ಸೇವನೆ ಮಾಡಬಹುದು ಮತ್ತು ಸ್ನ್ಯಾಕ್‌ ಸೇವನೆಯ ಮೊದಲು ಹಾಗೂ ನಂತರ ನೀವು ನೀರಿನ ಹೊರತು ಬೇರೇನನ್ನೂ ಸೇವಿಸಬೇಡಿ.

ಫ್ರಂಟ್‌ ಡೋರ್‌ ಸ್ನ್ಯಾಕ್‌ : ನಿಮಗೊಂದು ವಿಷಯ ಚೆನ್ನಾಗಿ ನೆನಪಿರಬಹುದು. ಬಹಳ ಹಸಿವಾದಾಗ, ನೀವು ಯಾವುದೇ ದೃಢ ನಿಶ್ಚಯ ಮಾಡಲಾಗದು. ಮನೆಯಿಂದ ಹೊರಟ ಬಳಿಕ ನಿಮಗೆ ಹೊರಗಿನ ಆಕರ್ಷಕ ಫುಡ್‌ ಕಣ್ಣಿಗೆ ಬೀಳುತ್ತದೆ. ಹಾಗಾಗಿ ಮನೆಯಿಂದ ಹೊರಡುವಾಗ ಆರೋಗ್ಯಕರ ಆಹಾರ ಸೇವಿಸಿ ಅಥವಾ ಮನೆಯಿಂದ ಡಬ್ಬದಲ್ಲಿ ಹಾಕಿಕೊಂಡು ಹೊರಡಿ. ಮೇನ್‌ ಡೋರ್‌ ಸಮೀಪ ಬಾದಾಮಿ ಅಥವಾ ಬಾಳೆಕಾಯಿ ಚಿಪ್ಸ್ ಇಡಿ. ಹೊರಡುವ ಮುಂಚೆ ಸ್ವಲ್ಪ ತಿಂದುಕೊಂಡು ಹೊರಡಿ.

– ಡಾ. ಸುನಂದಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ