ತೂಕ ಹೆಚ್ಚಾಗುವುದು ಇಂದು ಎಲ್ಲ ವಯಸ್ಸಿನರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರ ಲಾಭ ಪಡೆದು ತೂಕ ಕರಗಿಸುತ್ತೇವೆಂದು ಹೇಳುವ ಬಹಳಷ್ಟು ಆಯುರ್ವೇದಿಕ್‌ ಹಾಗೂ ಅಲೋಪಥಿಕ್‌ ಔಷಧಗಳ ಮಾರುಕಟ್ಟೆ ಬಹಳ ಹೆಚ್ಚಾಗಿದೆ. ಆದರೆ ಬ್ಲಡ್‌ ಗ್ರೂಪ್‌ ಆಧಾರಿತ ಡಯೆಟ್‌ ಕೂಡ ನಿಮ್ಮ ತೂಕ ಕರಗಿಸುವಲ್ಲಿ ಸಹಾಯ ಮಾಡುತ್ತದೆಂದು ನಿಮಗೆ ತಿಳಿದಿದೆಯೇ?

ಆಶ್ಚರ್ಯವಾಯಿತೇ? ಬ್ಲಡ್‌ ಗ್ರೂಪ್‌ಗೆ ತಕ್ಕಂತೆ ಡಯೆಟಿಂಗ್‌ ಮಾಡುವುದರಿಂದ ನಿಮ್ಮ ಶರೀರವನ್ನು ತೆಳುವಾಗಿ ಇಟ್ಟುಕೊಳ್ಳಬಹುದು. `ಇದನ್ನು ಬ್ಲಡ್‌ ಗ್ರೂಪ್‌ ಡಯೆಟ್‌' ಎನ್ನುತ್ತಾರೆ.  ಬ್ಲಡ್‌ ಗ್ರೂಪ್‌ ಡಯೆಟ್‌ ಬಗ್ಗೆ ಹೆಸರಾಂತ ಮೆಡಿಕಲ್ ಕಾಲೇಜ್‌ ಹಾಗೂ ಹಾಸ್ಪಿಟಲ್‌ನ ನ್ಯೂಟ್ರಿಶನಿಸ್ಟ್ ಮತ್ತು ಡಯೆಟೀಶಿಯನ್‌ ರಂಜಿನಿ ಹೀಗೆ ಹೇಳುತ್ತಾರೆ.

ಮೆಡಿಕಲ್ ಸೈನ್ಸ್ ನಲ್ಲಿ ಬ್ಲಡ್‌ ಗ್ರೂಪ್‌ ಡಯೆಟ್‌ ಒಂದು ಗ್ರಹಿಕೆಯಾಗಿದೆ. ಇನ್ನೂ ಈ ಗ್ರಹಿಕೆಗೆ ಪಕ್ಕಾ ವೈಜ್ಞಾನಿಕ ಆಧಾರ ಸಿಕ್ಕಿಲ್ಲ. ಆದರೆ ಬ್ಲಡ್‌ ಗ್ರೂಪ್‌ ಆಧಾರಿತ ಡಯೆಟ್‌ನಿಂದ ಬಹಳಷ್ಟು ಜನರಿಗೆ ಲಾಭ ಆಗಿದೆ ಎನ್ನುವುದು ನಿಜ. ಪಾಶ್ಚಾತ್ಯ ದೇಶಗಳಲ್ಲಿ ಈ ಗ್ರಹಿಕೆಯನ್ನು ಒಪ್ಪಿ ಡಯೆಟ್‌ ಚಾರ್ಟ್‌ ಬಹಳ ಚಾಲ್ತಿಯಲ್ಲಿದೆ.

ತೂಕ ಕಡಿಮೆ ಮಾಡಲು ಈ ಡಯೆಟ್‌ ಪ್ಲ್ಯಾನ್‌ನ್ನು `ಟೇಲರ್‌ ಮೇಡ್‌ ಟ್ರೀಟ್‌ಮೆಂಟ್‌' ಎಂದು ರಂಜಿನಿ ಹೇಳುತ್ತಾರೆ. ಈ ಕೆಲಸವನ್ನು ಪರ್ಸನೈಸ್ಡ್ ಡಯೆಟ್‌ ಚಾರ್ಟ್‌ ಮಾಡುತ್ತಾರೆ. ಹಾಗಾದರೆ ಬ್ಲಡ್‌ ಗ್ರೂಪ್‌ ಡಯೆಟ್‌ ಏಕೆ?

ಪ್ರತಿ ವ್ಯಕ್ತಿಯ ಜೀರ್ಣಶಕ್ತಿ ಮತ್ತು ರೋಗನಿರೋಧಕ ಸಾಮರ್ಥ್ಯ ಅವರ ಬ್ಲಡ್‌ ಗ್ರೂಪ್‌ನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ `ಓ' ಬ್ಲಡ್‌ ಗ್ರೂಪ್‌ನ ವ್ಯಕ್ತಿ ಸಾಧಾರಣವಾಗಿ ಎಗ್ಸಿಮಾ, ಅಲರ್ಜಿ, ಜ್ವರ ಇತ್ಯಾದಿಗಳಿಂದ ಹೆಚ್ಚು ಪೀಡಿತರಾಗುತ್ತಾರೆ.

`ಬಿ' ಬ್ಲಡ್‌ ಗ್ರೂಪ್‌ನವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುತ್ತದೆ. ಅವರು ಹೆಚ್ಚು ಆಯಾಸಭರಿತರಾಗಿರುತ್ತಾರೆ. ತಪ್ಪು ಆಹಾರ ಸೇವಿಸಿದರೆ ಅವರಿಗೆ ಅಲರ್ಜಿಯುಂಟಾಗುತ್ತದೆ. `ಎಬಿ' ಬ್ಲಡ್‌ ಗ್ರೂಪ್‌ನವರ  ಸಮಸ್ಯೆ ವಿಭಿನ್ನವಾಗಿರುತ್ತದೆ. ಅವರಿಗೆ ಸಣ್ಣಪುಟ್ಟ ಕಾಯಿಲೆಗಳು ಅಷ್ಟಾಗಿ ಬರುವುದಿಲ್ಲ. ಆದರೆ ಇವರಿಗೆ ಕ್ಯಾನ್ಸರ್‌, ಅನೀಮಿಯಾ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಂಭಾವ್ಯತೆ ಹೆಚ್ಚು.

ರಂಜನಿ ಪ್ರಕಾರ, ಡಯೆಟ್‌ ಥಿಯರಿ ಹೇಳುವುದೇನೆಂದರೆ, ನಾವು ಆಹಾರ ಸೇವಿಸಿದಾಗ ನಮ್ಮ ರಕ್ತದಲ್ಲಿ ಒಂದು ವಿಶೇಷ ಬಗೆಯ ಮೆಟಬಾಲಿಕ್‌ ಪ್ರತಿಕ್ರಿಯೆ ಅಥವಾ ರಿಯಾಕ್ಷನ್‌ ಉಂಟಾಗುತ್ತದೆ. ಅಂದಹಾಗೆ ನಾವು ತಿಂದ ಆಹಾರದಲ್ಲಿರುವ ಪ್ರೋಟೀನ್‌ ಮತ್ತು ವಿಭಿನ್ನ ರೀತಿಯ ಬ್ಲಡ್‌ ಗ್ರೂಪ್‌ನಲ್ಲಿ ಇರುವ ಆ್ಯಂಟಿಜೆನ್‌ನಲ್ಲಿ ಪರಸ್ಪರ ಪ್ರತಿಕ್ರಿಯೆ ಉಂಟಾಗುತ್ತದೆ. ಗಮನಿಸಬೇಕಾದ ವಿಷಯವೆಂದರೆ, ಪ್ರತಿ ಬ್ಲಡ್‌ ಗ್ರೂಪ್‌ಗೆ ತನ್ನದೇ ಆದ ಆ್ಯಂಟಿಜನ್‌ ತಯಾರಾಗುತ್ತದೆ. ತಪ್ಪು ಆಹಾರ ಸೇವಿಸಿದಾಗ ಆ್ಯಂಟಿಜನ್‌ನಲ್ಲಿ ಬಲವಂತವಾಗಿ ಪ್ರತಿಕ್ರಿಯೆ ನಡೆಯುತ್ತದೆ. ಆದ್ದರಿಂದ ನಾವು ಬ್ಲಡ್‌ ಗ್ರೂಪ್‌ನ ಲೆಕ್ಕದಲ್ಲಿ ನಮ್ಮ ಡಯೆಟ್‌ ಚಾರ್ಟ್‌ಮಾಡಿಕೊಂಡರೆ ಉತ್ತಮ. ಈ ಡಯೆಟ್‌ ನಮ್ಮನ್ನು ಸ್ಲಿಮ್ ಟ್ರಿಮ್ ಮಾಡುತ್ತದೆ.

ಬ್ಲಡ್ಗ್ರೂಪ್‌ `'

ಬ್ಲಡ್‌ ಗ್ರೂಪ್‌ನ ಥಿಯರಿ ಲೆಕ್ಕದಲ್ಲಿ ಇದು ಅತ್ಯಂತ ಪುರಾತನ ಬ್ಲಡ್‌ ಗ್ರೂಪ್‌ ಆಗಿದೆ. ಅಂದರೆ ಅದು ಇತಿಹಾಸ ಪೂರ್ವ ಮಾನವನ ಬ್ಲಡ್‌ ಗ್ರೂಪ್‌ ಆಗಿದೆ. ಈ ಬ್ಲಡ್‌ ಗ್ರೂಪ್‌ನವರ ಪಚನ ಸಾಮರ್ಥ್ಯ ಬಹಳ ಚೆನ್ನಾಗಿರುತ್ತದೆ. ಈ ಬ್ಲಡ್‌ ಗ್ರೂಪ್‌ನಲ್ಲಿ ಹೈ ಸ್ಟಮಕ್‌ ಆ್ಯಸಿಡ್‌ (ಹೊಟ್ಟೆಯಲ್ಲಿನ ಆಮ್ಲ) ಇರುವುದರಿಂದ ಹೈ ಪ್ರೋಟೀನ್‌ನ್ನು ಅರಗಿಸಿಕೊಳ್ಳುವುದು ಸುಲಭ.ಸಾಮಾನ್ಯವಾಗಿ `ಓ' ಬ್ಲಡ್‌ ಗ್ರೂಪ್‌ನವರು ಪ್ರೋಟೀನ್‌ಯುಕ್ತ ಆಹಾರ ತೆಗೆದುಕೊಳ್ಳಬೇಕು. ಅವರು ಮೀನು ಇತ್ಯಾದಿ ಸೀ ಫುಡ್‌ ತಿನ್ನಬಹುದು. ಆದರೆ ಅದು ಕೆಮಿಕಲ್ ಫ್ರೀ ಆಗಿರಬೇಕು. ಹೈ ಪ್ರೋಟೀನ್‌ ಫುಡ್‌ನಲ್ಲೂ ಕೆಲವು ಆಹಾರ ಪದಾರ್ಥಗಳು ವರ್ಜ್ಯ. ಈ ಬ್ಲಡ್‌ ಗ್ರೂಪ್‌ನವರು ತೆಳ್ಳಗಿನ ಶರೀರ ಇಚ್ಛಿಸಿದರೆ ಅವರು ಆಟಾ ಮತ್ತು ಮೈದಾದಿಂದ ತಯಾರಾದ ಆಹಾರವನ್ನು ಬಹಳ ಕಡಿಮೆ ತಿನ್ನಬೇಕು. ಆದರೆ ಎಲೆಕೋಸು, ಹೂಕೋಸು ಇತ್ಯಾದಿಗಳನ್ನು ಆದಷ್ಟೂ ಕಡಿಮೆ ತಿನ್ನಿ. ಅಲ್ಲದೆ ಡ್ರೈಫ್ರೂಟ್‌, ಹಾಲು, ಬೆಣ್ಣೆ, ಚೀಸ್‌ ಇತ್ಯಾದಿ ಡೈರಿ ಪ್ರಾಡಕ್ಟ್ ಗಳಿಂದ ದೂರವಿದ್ದರೆ ಉತ್ತಮ. ಬ್ರೋಕ್ಲಿ, ಪಾಲಕ್‌, ರೆಡ್‌ ಮೀಟ್‌, ಸೀಫುಡ್‌ ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಬ್ಲಡ್‌ ಗ್ರೂಪ್‌ನವರಿಗೆ ಎಕ್ಸರ್‌ಸೈಜ್‌ ಬಹಳ ಅಗತ್ಯ. ಹಣ್ಣು, ತರಕಾರಿ ಹೆಚ್ಚು ತಿನ್ನಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ