ಜೀವ ಇರುವ ಪ್ರತೀ ವ್ಯಕ್ತಿಗೂ ಆಹಾರ ಅತ್ಯಾವಶ್ಯಕ. ಹಾಗಾಗಿ ಅವನ ಪ್ರತಿಯೊಂದು ಕಾರ್ಯಗಳೂ ತನ್ನ ಎರಡು ಹೊತ್ತಿನ ಆಹಾರವನ್ನು ಗಳಿಸುವ ನಿಟ್ಟಿನಲ್ಲಿಯೇ ಇರುತ್ತದೆ. ಅದನ್ನೇ ಪುರಂದರ ದಾಸರು ಅತ್ಯಂತ ಸರಳವಾಗಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಗೇಣು ಬಟ್ಟೆಗಾಗಿ ಎಂದು ತಿಳಿಸಿದ್ದಾರೆ.

ಹಿಂದೆಲ್ಲಾ  ಮಳೆ ಬೆಳೆ ಇಂದಿಗಿಂತಲೂ ಚೆನ್ನಾಗಿ ಆಗುತ್ತಿದ್ದರೂ ಅದೇಕೋ  ಹೊತ್ತು ಹೊತ್ತಿನ ಊಟಕ್ಕೆ ಬರವೇ. ಈಗಿನಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ.  ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಹೊತ್ಟಿಗೆ ಹೊಟ್ಟೆ ತುಂಬುವ ಊಟ  ಸಿಕ್ಕರೇ ಅದುವೇ ಅವರಿಗೆ ಮಹದಾನಂದ. ಕೆಲವೊಮ್ಮೆ ಅದೂ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲಾ ಎನ್ನುವ ಪರಿಸ್ಥಿತಿ. ಮನೆಗಳಲ್ಲಿ ಅನ್ನಪೂರ್ಣೆಯರು ಇದ್ದರೂ ಅನ್ನಕ್ಕೇಕೋ ಬರ.  ಹೀಗೆ ಬಹುತೇಕರ ಮನೆಗಳಲ್ಲಿ ಮಕ್ಕಳಿಗೆ ಪೌಷ್ಥಿಕ ಆಹಾರವೂ ಸಿಗದೇ ಸೂಕ್ತ ಶಿಕ್ಷಣವೂ ಸಿಗದೇ ಇದ್ದದ್ದನ್ನು ಮನಗಂಡ ನಮ್ಮ ಫೂರ್ವಜರು ಮಂದಿರ ಮತ್ತು ಮಠಗಳಲ್ಲಿ ನಡೆಸುತ್ತಿದ್ದ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹವನ್ನೂ ಆರಂಭಿಸಿ, ಹಸಿದವರಿಗೆ ಉಚಿತವಾಗಿ ಆಹಾರವನ್ನು ಬಡಿಸುವ ಪವಿತ್ರ ವ್ಯವಸ್ಥೆಯನ್ನು ಸೇವೆಯ ರೂಪದಲ್ಲಿ ಜಾರಿಗೆ ತಂದರು. ಊರಿನ ಪ್ರತಿಯೊಬ್ಬರೂ ತಾವು ಬೆಳೆದ ಬೆಳೆಗಳಲ್ಲಿ ಇಂತಿಷ್ಟು ಪಾಲು ಬೆಳೆಯನ್ನು ದೇವರಿಗೆ ಅರ್ಪಣೆ ಮಾಡಬೇಕೆಂಬ ಪದ್ದತಿಯನ್ನು ಅಲಿಖಿತ ರೂಪದಲ್ಲಿ ಜಾರಿಗೆ ತಂದು ಭಕ್ತಾದಿಗಳು ಕೊಡುವ ಧನ ಧಾನ್ಯಗಳನ್ನು ಮತ್ತೆ ಭಕ್ತರಿಗೇ ಪ್ರಸಾದದ ರೂಪದಲ್ಲಿ ಹಂಚುವ ಸುಂದರವಾದ ಸಂಸ್ಜೃತಿಯು ನಮ್ಮ ಕರ್ನಾಟಕದ ಬಹುಭಾಗಗಳು ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಮತ್ತು ಉತ್ತರ ಕರ್ನಾಟಕದ ಮತ್ತು ಹಳೇ ಮೈಸೂರು ಪ್ರಾಂತ್ಯದ ವೀರಶೈವ ಮಠಗಳಲ್ಲಿ ಈ ಪರಂಪರೆ ಇಂದಿಗೂ ಅವ್ಯಾವಹತವಾಗಿ ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರ ಹಸಿವನ್ನು ನೀವಾರಿಸುತ್ತಿದೆ.

annapoorna 1

ಹೀಗೆ ಮಂದಿರಗಳಲ್ಲಿ ಉಚಿತವಾಗಿ ಊಟೋಪಚಾರಗಳು ನಡೆಯುತ್ತದೆ ಎಂದು ಎಲ್ಲರೂ ಪ್ರತೀ ದಿನವೂ ಅಲ್ಲಿಗೆ ಹೋಗಿ ಉಚಿತವಾಗಿ ಊಟ ಮಾಡುತ್ತಿರಲಿಲ್ಲ. ಹಬ್ಬ ಹರಿದಿನಗಳು, ಯಜ್ಞ ಯಾಗಾದಿಗಳಂತಹ ವಿಶೇಷ ದಿನಗಳಲ್ಲಿ ಊರಿನವರೆಲ್ಲರೂ ಸೇರಿ ಆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ತಮ್ಮ ತಮ್ಮ ಕೈಯ್ಯಲ್ಲಿ ಆದ ಸೇವೆಯನ್ನು ಸಲ್ಲಿಸಿ, ಪ್ರಸಾದ ರೂಪದಲ್ಲಿ ಊಟವನ್ನು ಮಾಡುತ್ತಿದ್ದು ಉಳಿದಂತೆ, ಯಾರಿಗೆ ಅವಶ್ಯಕವಿದೆಯೋ ಅಥವಾ ಹೊರ ಊರಿನಿಂದ ಬಂದ ಭಕ್ತಾದಿಗಳಿಗೆ ಅಥವಾ ಯಾತ್ರಾತ್ರಿಗಳು ಮಾತ್ರವೇ ಈ ಸೌಲಭ್ಯವನ್ನು ಮೀಸಲಾಗಿಸಿದ್ದಾರೆ. ಅಕಸ್ಮಾತ್ ಯಾರಾದರೂ ಪ್ರತಿ ದಿನವೂ ಮಂದಿರ ಮಠಗಳಲ್ಲಿ ಊಟಕ್ಕೆ ಬಂದರೆ ಥೂ! ಊಟಕ್ಕೆ ಗತಿಯಿಲ್ಲದೇ ದರಿದ್ರವೇ? ಎಂದು ಹಂಗಿಸುವುದೂ ರೂಢಿಯಲ್ಲಿದೆ.

annapoorna 2

ದಾಸೋಹ ಮೂಲಕ ತತ್ವವೇ ಬಸವಣ್ಣನವರು ಹೇಳಿರುವ ಕಾಯಕವೇ ಕೈಲಾಸ ಎನ್ನುವುದಾಗಿದ್ದು, ಈಗಾಗಲೇ ತಿಳಿಸಿರುವಂತೆ ಪ್ರತಿಯೊಬ್ಬ ನಾಗರೀಕರೂ, ತಾವು ಗಳಿಸಿದುದರಲ್ಲಿ ಒಂದು ಪಾಲನ್ನು ಸಮಾಜದ ಹಸಿದವರಿಗೆ ನೀಡುವುದೇ ದಾಸೋಹ. ಇದನ್ನು ಶರಣ ಸಾಹಿತ್ಯದಲ್ಲಿ ಬಹಳವಾಗಿ ಪ್ರೋತ್ಸಾಹಿಸಲಾಗಿದೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ತ್ರಿವಿಧ ದಾಸೋಹಿ ಪದ್ದತಿ ಅರ್ಥಾತ್ ಅನ್ನ, ಜ್ಞಾನ, ಅಕ್ಷರಗಳನ್ನು ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಸಮಾನತೆಯನ್ನು ತಂದಿದ್ದಕ್ಕಾಗಿ ತ್ರಿವಿಧ ದಾಸೋಹಿ ಎಂದೇ ಅವರನ್ನು ಕರೆಯಲಾಗುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ