ಪತ್ರಿಕಾ    ಪ್ರಕಟಣೆ

ದಿನಾಂಕ: 20 ಮೇ 2026

ಬೆಂಗಳೂರು

 

ಗುಬ್ಬಿವಾಣಿ ಟ್ತಸ್ಟ್ ಆಯೋಜಿತ *ಅವಳ ಹೆಜ್ಜೆ ಕಿರುಚಿತ್ರೋತ್ಸವ 2026*:

*ಭಾನುವಾರ 24 ಮೇ, 9 am - 7 pm, ಕನ್ನಡ ಸಾಹಿತ್ಯ ಪರಿಷತ್ತು*, ಚಾಮರಾಜಪೇಟೆ, ಬೆಂಗಳೂರು 560018

ಮಹಿಳಾ ನಿರ್ದೇಶಿತ ಆಯ್ದ *10 ಕಿರುಚಿತ್ರಗಳ ಪ್ರದರ್ಶನ* ಮತ್ತು ವಿಜೇತ ನಿರ್ದೇಶಕಿಗೆ *₹1 ಲಕ್ಷ ನಗದು ಬಹುಮಾನ* ಘೋಷಣೆ

ಮೊದಲ ಆವೃತ್ತಿಯಲ್ಲೇ ಅಪಾರ ಆಸಕ್ತಿ ಮೂಡಿಸಿ, ವಿವಿಧೆಡೆ ಮರು-ಪ್ರದರ್ಶನಗಳ ಮೂಲಕ ಯಶಸ್ಸು ಕಂಡಿರುವ ಗುಬ್ಬಿವಾಣಿ ಟ್ರಸ್ಟ್‌ನ ಹೆಮ್ಮೆಯ ಯೋಜನೆ *'ಅವಳ ಹೆಜ್ಜೆ ಕಿರುಚಿತ್ರೋತ್ಸವ’* ಈ ಬಾರಿ *ಮೇ 24ರಂದು* 2026ರ ಮಹಿಳಾ ಕನ್ನಡ ಕಿರುಚಿತ್ರೋತ್ಸವಕ್ಕೆ ಸಂಪೂರ್ಣ ಸಜ್ಜಾಗಿದೆ. ಈ ವರ್ಷವೂ 'ಅವಳ ಹೆಜ್ಜೆ' ಪ್ರಶಸ್ತಿಯು 1 ಲಕ್ಷ ರೂಪಾಯಿಗಳ ನಗದು ಬಹುಮಾನವಾಗಿದ್ದು, ಆಯ್ದ 10 ಚಿತ್ರಗಳ ಪ್ರದರ್ಶನ ಮತ್ತು ಬಹುಮಾನ ಘೋಷಣೆ ನಡೆಯಲಿದೆ.

'ಅವಳ ಹೆಜ್ಜೆ' ಕಿರುಚಿತ್ರೋತ್ಸವ ಕೇವಲ ಪ್ರದರ್ಶನವಲ್ಲ, ಇದೊಂದು ಸಾಂಸ್ಕೃತಿಕ ಚಳವಳಿ. ಕನ್ನಡದ ಮಹಿಳಾ ನಿರ್ದೇಶಕಿಯರಿಗಾಗಿಯೇ ಮೀಸಲಾಗಿರುವ ಈ ವಿಶಿಷ್ಟ ಚಿತ್ರೋತ್ಸವದಲ್ಲಿ, ಈ ಬಾರಿ ಕರ್ನಾಟಕದ ಮೂಲೆ ಮೂಲೆಯ ಪ್ರತಿಭೆಗಳಷ್ಟೇ ಅಲ್ಲದೆ, ದೂರದ ಅಮೆರಿಕದ ಅನಿವಾಸಿ ಕನ್ನಡತಿಯೊಬ್ಬರು ನಿರ್ದೇಶಿಸಿದ ಕಿರುಚಿತ್ರವೂ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ವಿಶೇಷ. ಆಯ್ಕೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, *ಸಂಗೀತಾ ನಂಜುಂಡಸ್ವಾಮಿ, ದೀಪ್ತಿ ಮೂರ್ತಿ ಅಯ್ಯರ್, ಸುಮನಾ ಚಂದ್ರಗಿರಿ* ಇವರನ್ನು ಒಳಗೊಂಡ *ಪ್ರತಿಷ್ಠಿತ ತೀರ್ಪುಗಾರರ ತಂಡ* ಸೂಕ್ಷ್ಮವಾಗಿ ಪರಿಗಣಿಸಿ ಆಯ್ದ 10 ಚಿತ್ರಗಳನ್ನು ಈ ಕಿರುಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು.

IMG-20260520-WA0107

* *ಆಯ್ಕೆಯಾದ 10 ಕಿರುಚಿತ್ರಗಳು ಇಲ್ಲಿವೆ:* 'ಕಾಶಿ ಕೈಲಾಸ', ಸೋರುತಿಹುದು ಮನೆಯ ಮಾಳಿಗಿ', ರೊಟ್ಟಿ', ಎ ಲಿಟ್ಲ್ ಕೇರ್', ಹುಲಿಯಪ್ಪ', ದಾರಿ', ಮೌನ ರಾಗ', ಆ ಮಾಡಿ', ಗೆಜ್ಜೆ', ನಿತ್ಯ'

ಚಿತ್ರೋತ್ಸವದಲ್ಲಿ *“ಸಿನೆಮಾದಲ್ಲಿ ಅವಳ ಹೆಜ್ಜೆ ‘ಅ - ಅಃ’ ವರೆಗೆ”* ವಿಷಯಾಧಾರಿತ *ಚರ್ಚಾಗೋಷ್ಠಿ* ಯನ್ನು ಆಯೋಜಿಸಲಾಗಿದ್ದು, *ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ, ಸಂಜೋತಾ ಭಂಡಾರಿ* ಅವರು ಭಾಗವಹಿಸಲಿದ್ದಾರೆ.

ಚರ್ಚಾಗೋಷ್ಠಿಯ ನಂತರ *ವಿಜೇತರ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ* ನಡೆಯಲಿದೆ. ಅತ್ಯುತ್ತಮ ಕಿರುಚಿತ್ರಕ್ಕೆ *"ಅವಳ ಹೆಜ್ಜೆ ಪ್ರಶಸ್ತಿ" ನಗದು ₹1,00,000 (ಒಂದು ಲಕ್ಷ)* ಮತ್ತು ಕೆಲವು ಚಿತ್ರಗಳಿಗೆ ಮೆಚ್ಚುಗೆಯ ಬಹುಮಾನ ನಗದು ₹10,000 (ಹತ್ತು ಸಾವಿರ) ವಿರುತ್ತದೆ.

ಪತ್ರಿಕಾ ಗೋಷ್ಠಿಯನ್ನು ಸ್ಥಾಪಕ ಟ್ರಸ್ಟಿ ಮಾಲವಿಕ ಗುಬ್ಬಿವಾಣಿ, ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಮತ್ತು ಚಿತ್ರ ಸಮಿತಿ ಮುಖ್ಯಸ್ಥೆ ಉಷಾ ಸಂಪತ್ಕುಮಾರ್ ನಡೆಸಿಕೊಟ್ಟರು.

ಪ್ರವೇಶ ಉಚಿತ. ಭಾಗವಹಿಸಲು ಈ ಲಿಂಕ್ ಮೂಲಕ ನೋಂದಾಯಿಸಬಹುದು: https://forms.gle/3es12sFpvpKcrXgd7

*ಕಾರ್ಯಕ್ರಮದ ವೇಳಾಪಟ್ಟಿ*

* ಬೆಳಿಗ್ಗೆ  9:00 - ನೋಂದಣಿ; ಲಘು ಉಪಹಾರ

* 10:00 - *ಉದ್ಘಾಟನೆ* ಮತ್ತು ಪ್ರಾಸ್ತಾವಿಕ ನುಡಿ

* *10:30 ರಿಂದ 12:30 - ಪ್ರದರ್ಶನ : 5 ಕಿರುಚಿತ್ರಗಳು*

IMG-20260520-WA0105

(1) ಅನು ಕುಲಕರ್ಣಿ ನಿರ್ದೇಶನದ 'ಕಾಶಿ ಕೈಲಾಸ' (2025)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ