`ಒಬಿಸಿಟಿ' ಎಂದು ಕರೆಯಲ್ಪಡುವ ಬೊಜ್ಜು ಒಂದು ರೋಗವೇ ಆಗಿದ್ದು, ಆ ಕಾರಣದಿಂದ ಬೇರೆ ಬೇರೆ ರೋಗಗಳು ಕೂಡ ಉಂಟಾಗುತ್ತವೆ. ಈ ಎರಡೂ ಪ್ರಕಾರದ ಬೊಜ್ಜು ಉಂಟಾಗುವ ವಿಶೇಷ ಕಾರಣಗಳೇನು ಹಾಗೂ ಅವಕ್ಕೆ ಪರಿಹಾರವೇನು ಎಂದು ತಿಳಿದುಕೊಳ್ಳುವುದು ಅತ್ಯಗತ್ಯ.
ಬೊಜ್ಜಿನ ಲಕ್ಷಣಗಳು
ನಿಖರ ಮಾನದಂಡಗಳ ಪ್ರಕಾರ ತೂಕ ಇರದೇ, ಎತ್ತರಕ್ಕೆ ಹೋಲಿಸಿದಲ್ಲಿ 120% ಹೆಚ್ಚಾಗಿದ್ದರೆ.
ಎಜಿ ರೇಶಿಯೊ (ಇದು ಹೊಟ್ಟೆಯ ಹೆಚ್ಚು ಸುತ್ತಳತೆ ಮತ್ತು ಸೊಂಟದ ಗರಿಷ್ಠ ಸುತ್ತಳತೆಯ ಅನುಪಾತ) ಪುರುಷರಲ್ಲಿ 0.9 ಮತ್ತು ಮಹಿಳೆಯರಲ್ಲಿ 0.8ಕ್ಕಿಂತ ಹೆಚ್ಚಾಗಿದ್ದರೆ.
ಬೊಜ್ಜಿನ ಪ್ರಕಾರಗಳು
ಒಬಿಸಿಟಿ : ಅಂದರೆ ದೇಹದ ಒಂದು ವಿಶಿಷ್ಟ ಭಾಗದಲ್ಲಿ ಬೊಜ್ಜು ಕೇಂದ್ರೀಕೃತಗೊಂಡಿರುವುದು.
ಸೆಂಟ್ರಲ್ ಒಬಿಸಿಟಿ : ಇದು ಕೇವಲ ಹೊಟ್ಟೆಯ ಬೊಜ್ಜು ಆಗಿರುತ್ತದೆ. ಅದು ಇಡೀ ದೇಹದ ಬೊಜ್ಜಿಗಿಂತ ಹೆಚ್ಚಾಗಿ ಹಾನಿಕಾರಕಾಗಿರುತ್ತದೆ.
ಜನರೈಸ್ಡ್ ಒಬಿಸಿಟಿ : ಇಡೀ ದೇಹದಲ್ಲಿ ಸಮಾನ ರೂಪದಲ್ಲಿರುವ ಬೊಜ್ಜು.ಕಾರಣ
ಹೈಪೊ ಥೈರಾಯಿಡಿಸಂ : ಈ ಸ್ಥಿತಿಯಲ್ಲಿ ಹಾರ್ಮೋನಿನ ಕೊರತೆಯ ಕಾರಣದಿಂದ ತೂಕ ಹೆಚ್ಚುವುದರ ಜೊತೆಗೆ ತ್ವಚೆಯ ಶುಷ್ಕತೆ ಮತ್ತು ಹೆಚ್ಚು ಋತುಸ್ರಾವವುಂಟಾಗುತ್ತದೆ.
ಪಾಲಿಸಿಸ್ಟಿಕ್ ಓವರಿ : ಇದು ಅಂಡಾಶಯದ ಒಂದು ಸಾಮಾನ್ಯ ರೋಗವಾಗಿದ್ದು, ಇದರಲ್ಲಿ ಬೊಜ್ಜಿನ ಜೊತೆಗೆ ಋತುಚಕ್ರದ ಅನಿಯಮಿತತೆ, ಬಂಜೆತನ, ಅತಿರಕ್ತದೊತ್ತಡ ಮತ್ತು ಬೇಡದ ಜಾಗದಲ್ಲಿ ಕೂದಲು ಬೆಳೆಯುವಂತಹ ಸಮಸ್ಯೆ ಉತ್ಪತ್ತಿಯಾಗುತ್ತದೆ.
ಆ್ಯಡ್ರಿನ್ ಗ್ರಂಥಿಯ ರೋಗಗಳು ಕೂಡ ಬೊಜ್ಜಿಗೆ ಕಾರಣವಾಗಿವೆ.
ಮೆದುಳಿನಲ್ಲಿರುವ ಪಿಟ್ಯೂಟರಿ ಗ್ಲ್ಯಾಂಡ್‌ಗೆ ಸಂಬಂಧಪಟ್ಟ ರೋಗಗಳು, ಮಧುಮೇಹ ಹಾಗೂ ಕೆಲವು ಔಷಧಿಗಳು ಅದರಲ್ಲೂ ಚರ್ಮ ಮತ್ತು ಶ್ವಾಸ ರೋಗಗಳಲ್ಲಿ ಉಪಯೋಗಿಸಲ್ಪಡುವ ಔಷಧಿಗಳು, ಮಾನಸಿಕ ರೋಗಗಳ ನಿವಾರಣೆಗಾಗಿ ಬಳಸುವ ಔಷಧಿಗಳು ಬೊಜ್ಜಿಗೆ ಕಾರಣವಾಗುತ್ತವೆ.
ಅನುವಂಶೀಯ ಅಥವಾ ಕ್ರೊಮೋಸೋಮ್ ಡಿಫೆಕ್ಟ್ಸ್. ಉದಾ : ಡೌನ್ ಸಿಂಡ್ರೋಮ್.
ಮೆದುಳು ರೋಗ : ಇದು ಮೆದುಳಿನಲ್ಲಿರುವ ಹೈಪೋಥೆಲೆಮಸ್ ಮೇಲೆ ತನ್ನ ಪ್ರಭಾವ ಬೀರುತ್ತದೆ.
ಓವರ್ ಈಟಿಂಗ್ : ಹಸಿವು ಇರಲಿ ಇಲ್ಲದಿರಲಿ ಬೊಜ್ಜು ದೇಹಿಗಳು ಈ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾರೆ.
ಹೆರಿಗೆ ಸಮಯದಲ್ಲಿ ಕೊಡುವ ಅತಿ ಹೆಚ್ಚಿನ ಪ್ರಮಾಣದ ಆಹಾರ ಮಹಿಳೆಯರಲ್ಲಿ ಬೊಜ್ಜಿಗೆ ಮುಖ್ಯ ಕಾರಣವಾಗಿದೆ.
ಶಕ್ತಿಗೂ ಬೊಜ್ಜಿಗೂ ಸಂಬಂಧ
7000 ಕಿಲೋ ಕ್ಯಾಲೋರಿ 1 ಕಿಲೋ ತೂಕಕ್ಕೆ ಸಮಾನ.
ದೇಹದಲ್ಲಿ ಎನರ್ಜಿ ಅಗತ್ಯಕ್ಕಿಂತ ಹೆಚ್ಚಾದರೆ ಅದು ಕೊಬ್ಬಿನಲ್ಲಿ ಪರಿವರ್ತನೆಗೊಳ್ಳುತ್ತದೆ.
ಈ ಕೊಬ್ಬು ಒಂದು ನಿಶ್ಚಿತ ಸ್ಥಳದಲ್ಲಿ ಕ್ರಮವಾಗಿ ಜಮೆಗೊಳ್ಳುತ್ತದೆ. ಉದಾಹರಣೆಗೆ ಪುರುಷರಲ್ಲಿ ಹೊಟ್ಟೆ, ಸೊಂಟ, ಬೆನ್ನು ಹಾಗೂ ಕುತ್ತಿಗೆಯ ಹಿಂಭಾಗ, ತೊಡೆ ಹಾಗೂ ಕೈಗಳ ಮೇಲೆ ಮತ್ತು ಸ್ತ್ರೀಯರಲ್ಲಿ ಹೊಟ್ಟೆ, ಕಿಬ್ಬೊಟ್ಟೆಯ ಕೆಳಭಾಗ, ಕುತ್ತಿಗೆ, ನಿತಂಬ, ತೊಡೆ ಮತ್ತು ಕೈಗಳಲ್ಲಿ ಜಮೆಗೊಂಡಿರುತ್ತದೆ.
ಎನರ್ಜಿ ಹೇಗೆ ಖರ್ಚಾಗುತ್ತದೆ?
70 ಕಿಲೋ ತೂಕದ ವ್ಯಕ್ತಿಯ ಎನರ್ಜಿ ಈ ರೀತಿಯಲ್ಲಿ ಖರ್ಚಾಗುತ್ತದೆ:
ವಿಶ್ರಾಂತಿಯ ಸ್ಥಿತಿಯಲ್ಲಿ : 1.3 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.ನಡೆಯುವಾಗ : (3.5 ಮೈಲಿ ಪ್ರತಿ ಗಂಟೆಗೆ) 5.2 ಕಿಲೋ ಕ್ಯಾಲೋರಿ ಪ್ರತಿ ನಿಮಿಷಕ್ಕೆ.