ಮಳೆಗಾಲದಲ್ಲಿ ನಿಮ್ಮ ಆಹಾರ ಮತ್ತು ಪಾನೀಯಗಳು ಸಮರ್ಪಕವಾಗಿದ್ದರೆ, ನೀವು ಡೀಹೈಡ್ರೇಶನ್‌, ಡಯೆರಿಯಾ, ಬೆವರು, ದಣಿವು ಹಸಿವಾಗದೆ ಇರುವಂತಹ ಸಮಸ್ಯೆ, ವಾಂತಿ, ಹೀಟ್‌ ಸ್ಟ್ರೋಕ್‌, ಫುಡ್‌ ಪಾಯಿಸನಿಂಗ್‌ ನಂತಹ ಸಮಸ್ಯೆಗಳಿಂದ ದೂರವಿರಿಬಹುದು.

ಈ ಹವಾಮಾನದಲ್ಲಿ ಈ ಎಲ್ಲಾ ತೊಂದರೆಗಳಿಂದ ದೂರವಿರಲು ನೀವು ನಿಮ್ಮ ಡಯೆಟ್‌ ಚಾರ್ಟ್‌ ನಲ್ಲಿ ಕೆಳಕಂಡಗಳನ್ನು ಸೇರ್ಪಡೆ ಮಾಡಿಕೊಳ್ಳಿ.

ಸಲಾಡ್‌ : ಟೊಮೇಟೊದಲ್ಲಿ ವಿಟಮಿನ್‌ `ಎ, ಸಿ' ಮತ್ತು ಲೈಕೋಪಿನ್‌ ಇರುವುದರಿಂದ ಪೋಷಕಾಂಶಗಳ ಈ `ಪವರ್‌ ಹೌಸ್‌' ಹಣ್ಣು ಮತ್ತು ತರಕಾರಿ ಎರಡೂ ವರ್ಗದಲ್ಲಿ ಪರಿಗಣಿಸಲ್ಪಡುತ್ತದೆ. ಒಂದು ಟೊಮೇಟೊದಲ್ಲಿ 35-40 ಕ್ಯಾಲೋರಿ ಇರುತ್ತದೆ. ಆದರೆ ಇದು ಒಂದು ದಿನದಲ್ಲಿ ವಿಟಮಿನ್‌ `ಸಿ'ಯ 40% ಹಾಗೂ ವಿಟಮಿನ್‌ `ಎ'ಯ 20%ನ ಅವಶ್ಯಕತೆಯನ್ನು ನೀಗಿಸುತ್ತದೆ.

ಟೊಮೇಟೊದಲ್ಲಿ ಇನ್ನೂ ಹಲವು ಲಾಭಗಳಿವೆ. ಲೈಕೋಪಿನ್‌ ನಂತಹ ಆ್ಯಂಟಿ ಆಕ್ಸಿಡೆಂಟ್‌ ಕಾರಣದಿಂದ ಇದು ಹಲವು ಬಗೆಯ ಕ್ಯಾನ್ಸರ್‌ ವಿರುದ್ಧ ಹೋರಾಡಲು ನೆರವಾಗುತ್ತದೆ. ಸಂಶೋಧನೆಗಳು ಹೇಳುವುದೇನೆಂದರೆ, ಲೈಕೋಪಿನ್‌ ಇದು ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ನಿಂದ ರಕ್ಷಿಸುತ್ತದೆ. ಅದರಿಂದಾಗಿ ಹೃದಯ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಸೌತೇಕಾಯಿ ಕೂಡ ಸಲಾಡ್‌ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇದರಲ್ಲಿ ಪೊಟ್ಯಾಶಿಯಂ ಇರುತ್ತದೆ. ಅದು ಅತಿ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಸರ್‌ನ ಚಿಕಿತ್ಸೆಯಲ್ಲೂ ಸೌತೆಕಾಯಿಯ ಸೇವನೆ ನಿರಾಳತೆ ದೊರಕಿಸಿ ಕೊಡುತ್ತದೆ. ಕರಿಮೆಣಸಿನಲ್ಲಿ ಬೀಟಾ ಕೆರೋಟಿನ್‌ ನಂತಹ ಆ್ಯಂಟಿ ಆಕ್ಸಿಡೆಂಟ್‌ ಇರುತ್ತದೆ. ಇದು ಇಮ್ಯೂನ್‌ ಸಿಸ್ಟಮ್  ಬಲಿಷ್ಠಗೊಳಿಸುತ್ತದೆ ಮತ್ತು ಫ್ರೀ ರಾಡಿಕಲ್ಸ್ ನಿಂದ ಆಗುವ ಹಾನಿಯನ್ನು ತಪ್ಪಿಸುತ್ತದೆ. ಪ್ರತಿದಿನ ಒಂದು ಬೌಲ್‌ ನಷ್ಟು ಟೊಮೇಟೊ ಸಲಾಡ್‌ ಅವಶ್ಯ ಸೇವಿಸಿ. ಆದರೆ ನಿಮಗೆ ಹೊಟ್ಟೆಯಲ್ಲಿ ಹರುಳುಗಳಿದ್ದರೆ ಟೊಮೇಟೊ ಸೇವನೆ ಬಗ್ಗೆ ವೈದ್ಯರ ಸಲಹೆಯನ್ನು ಕೇಳಿರಿ.

appetizer-delicious-dinner-1639556

ಹಣ್ಣು : ಈ ಹವಾಮಾನದಲ್ಲಿ ಲೋ ಕ್ಯಾಲೋರಿ ಇರುವ ಹಲವು ಬಗೆಯ ಹಣ್ಣುಗಳು ಲಭಿಸುತ್ತವೆ. ಅವುಗಳಲ್ಲಿ ಕ್ಯಾಲ್ಶಿಯಂ, ನಾರಿನಂಶ ಹಾಗೂ ಇತರೆ ಮಹತ್ವದ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುತ್ತವೆ.

ಇವು ದೇಹದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಂಡು ಹೋಗಲು ನೆರವಾಗುತ್ತವೆ. ಈ ಹವಾಮಾನದಲ್ಲಿ ಲಭಿಸುವ ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ ಮುಂತಾದವುಗಳ ಸೇವನೆ ಬಹಳ ಲಾಭಕರವಾಗಿರುತ್ತದೆ. ಸೋಡಿಯಂ, ಪೊಟ್ಯಾಶಿಯಂ ಹಾಗೂ ವಿಟಮಿನ್‌ `ಬಿ' ಯಿಂದ ತುಂಬಿ ತುಳುಕುವ ಕಲ್ಲಂಗಡಿ ದೇಹಕ್ಕೆ ಅತ್ಯುಪಯುಕ್ತ. ಹೀಗಾಗಿ ಈ ಎಲ್ಲ ಋತುಮಾನದ ಹಣ್ಣುಗಳನ್ನು ನಿಮ್ಮ ಡಯೆಟ್‌ ಚಾರ್ಟ್‌ ನಲ್ಲಿ ಸೇರ್ಪಡೆ ಮಾಡಿಕೊಳ್ಳಿ.

ಜೂಸ್‌ : ಈ ಹವಾಮಾನದಲ್ಲಿ ದೇಹದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿ ಉಂಟಾಗುತ್ತದೆ. ಹೀಗಾಗಿ ದ್ರವ ಪದಾರ್ಥಗಳ ಸೇವನೆಯನ್ನು ಹೆಚ್ಚೆಚ್ಚು ಮಾಡಬೇಕು. ಏಕೆಂದರೆ ದೇಹಕ್ಕೆ ಹೆಚ್ಚೆಚ್ಚು ನೀರು ದೊರಕಬೇಕು ಹಾಗೂ ತೀವ್ರ ಹ್ಯುಮಿಡಿಟಿ ಮಧ್ಯೆ ನಿಮಗೆ ಚುರುಕುತನ, ಸ್ಛೂರ್ತಿ ದೊರಕಬೇಕು. ಹೀಗಾಗಿ ನಿಮ್ಮ ಡಯೆಟ್‌ ಚಾರ್ಟ್‌ನಲ್ಲಿ ಜೂಸ್‌ನ್ನು ಕೂಡ ಸೇರ್ಪಡೆಗೊಳಿಸಬೇಕು. ನಿಂಬೆ ಹಣ್ಣಿನ ಪಾನಕಕ್ಕಿಂತ ಅದ್ಭುತ ಜೂಸ್‌ ಮತ್ತೊಂದಿಲ್ಲ. ಕಿತ್ತಳೆ, ಮೂಸಂಬಿ ಜೂಸ್‌ ಕೂಡ ಸೇವಿಸಬಹುದು. ಎಳನೀರಿನಲ್ಲೂ ಕೂಡ ಹೇರಳ ಮಿನರಲ್ಸ್ ಇರುತ್ತದೆ. ಅವು ದೇಹವನ್ನು ನಿರ್ಜಲೀಕರಣ ಆಗದಂತೆ ರಕ್ಷಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ