ಬೆಳಗ್ಗೆ ಎದ್ದ ತಕ್ಷಣ ಎಲ್ಲರ ಮನೆಯಲ್ಲೂ ಚಹಾ ಸೇವನೆ ಅನಿವಾರ್ಯ ಎಂಬಂತೆ ಆಗಿಹೋಗಿದೆ. ಯಾರನ್ನು ಎಲ್ಲೇ ಭೇಟಿ ಮಾಡಲಿ ಅತಿಥಿಗಳು ಬಂದು ಹೋಗಲಿ, ಒಟ್ಟಾರೆ ಎಲ್ಲಾ ಸಂದರ್ಭದಲ್ಲೂ ದಿನಕ್ಕೆ ಹಲವು ಸಲ ಟೀ ಕುಡಿಯುವವರುಂಟು. ಚಹಾದಲ್ಲಿರುವ ಟ್ಯಾನಿನ್‌ ಎಂಬ ಕೆಮಿಕಲ್ ಜೊತೆ ಸಕ್ಕರೆಯೂ ಬೆರೆತು ನಮ್ಮ ದೇಹ ಹಲವು ರೋಗಗಳಿಗೆ ತವರಾಗುತ್ತದೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ರೆಗ್ಯುಲರ್‌ ಟೀ ಬದಲು ಇಲ್ಲಿ ವಿಭಿನ್ನ, ವೈವಿಧ್ಯಮಯ ಟೀಗಳ ಬಗ್ಗೆ ಹೇಳಲಾಗಿದೆ. ಇದರಿಂದಾಗಿ ಎಷ್ಟೋ ರೋಗಗಳು ನಮ್ಮನ್ನು ಮುತ್ತುವ ಸಾಧ್ಯತೆಯೇ ಇರುವುದಿಲ್ಲ! ಇದನ್ನು ಕನಿಷ್ಠ 5-6 ತಿಂಗಳ ಕಾಲ ಸತತ, ದಿನಕ್ಕೆ 3 ಬಾರಿ ಸೇವಿಸಬೇಕು.

ರಿಫ್ರೆಶಿಂಗ್‌ ಮಿಂಟ್‌ ಟೀ : 2 ಕಪ್‌ನೀರು ಬಿಸಿ ಮಾಡಿ. ಇದಕ್ಕೆ ಹೆಚ್ಚಿಕೊಂಡ ಅರ್ಧ ಕಪ್‌ ಪುದೀನಾ ಎಲೆ, ಚಿಟಕಿ ಉಪ್ಪು, 2 ಕಾಳುಮೆಣಸು ಹಾಕಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. 10 ನಿಮಿಷ ಬಿಟ್ಟು ಸೋಸಿ, ಸವಿಯಿರಿ.

ಲಾಭ : ಇದರ ಸೇವನೆ ಲವಲವಿಕೆ ಹೆಚ್ಚಿಸಿ, ಜ್ವರ ದೂರ ಮಾಡುತ್ತದೆ, ಪಚನ ಶಕ್ತಿ ಸುಧಾರಿಸುತ್ತದೆ. ಹೊಟ್ಟೆ ತೊಳೆಸುವಿಕೆ, ವಾಂತಿ ಇತ್ಯಾದಿ ನಿಲ್ಲುತ್ತದೆ. ಇಮ್ಯೂನ್‌ ಸಿಸ್ಟಮ್ ನ್ನು ಬೂಸ್ಟ್ ಗೊಳಿಸುತ್ತದೆ. ಸ್ವಾಸ್ಥ್ಯ ಸುಧಾರಿಸಿ, ಹಸಿವನ್ನು ಕಡಿಮೆ ಮಾಡಿ ತೂಕ ನಿಯಂತ್ರಣಕ್ಕೆ ಸಹಕಾರಿ ಆಗಿದೆ. ಉಸಿರಿನ ದುರ್ಗಂಧ ನಿವಾರಿಸಿ, ಸ್ಟ್ರೆಸ್‌ ಲೆವೆಲ್‌ ತಗ್ಗಿಸುತ್ತದೆ.

ಕೆಮೊಮೈಲ್ ‌ಟೀ : 2 ಕಪ್‌ನೀರು ಬಿಸಿ ಮಾಡಿ. ಇದಕ್ಕೆ ಕೆಮೊಮೈಲ್‌ ಹೂಗಳ ದಳ, ಚಿಟಕಿ ಉಪ್ಪು 1-2 ಕಾಳುಮೆಣಸು ಹಾಕಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. 10 ನಿಮಿಷ ಬಿಟ್ಟು ಸೋಸಿ, ಸವಿಯಿರಿ

ಲಾಭ : ಈ ಟೀ ಸೇವನೆಯಿಂದ ನರಮಂಡಲ ಎಷ್ಟೋ ರಿಲೀಫ್‌ ಆಗುತ್ತದೆ. ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಮಧುಮೇಹಿಗಳಿಗೆ ಇದರ ಸೇವನೆ ಲಾಭಕರ. ದೇಹದಲ್ಲಿ ಎಲ್ಲಾದರೂ ಗಾಯ, ಕಟ್‌ ಆಗಿದ್ದರೆ, ಈ ಟೀ ಸೇವನೆಯಿಂದ ಗಾಯ ಬೇಗ ವಾಸಿ ಆಗುತ್ತದೆ. ಇದರ ಸೇವನೆ ದೇಹದಲ್ಲಿನ ಕ್ಯಾನ್ಸರ್‌ ಸೆಲ್ಸ್ ನಿವಾರಿಸುವಲ್ಲಿಯೂ ಪೂರಕ, ಹಾಗಾಗಿ ಕ್ಯಾನ್ಸರ್‌ ನಿಯಂತ್ರಿಸುವಲ್ಲಿಯೂ ಸಹಾಯಕ. ಚರ್ಮಕ್ಕೂ ಈ ಟೀ ಉಪಕಾರಿ. ಇಮ್ಯೂನ್‌ಸಿಸ್ಟಂ ಚುರುಕಾಗಿಸಲಿಕ್ಕೂ ಸಹಕಾರಿ.

ಹೈಬಿಸ್ಕಸ್‌(ದಾಸಾಳದ) ಟೀ : 4 ಕಪ್‌ನೀರು, ಅರ್ಧ ಕಪ್‌ ಹೆಚ್ಚಿದ ದಾಸವಾಳದ ಹೂವಿನ ಪಕಳೆ, ತುಸು ಹೆಚ್ಚಿದ ಪುದೀನಾ, ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು, ಜೇನುತುಪ್ಪ. ಮೊದಲು ನೀರು ಬಿಸಿ ಮಾಡಿ. ಅದಕ್ಕೆ ಹೂವಿನ ಪಕಳೆ ಹಾಕಿ 10 ನಿಮಿಷ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿರಿ. 10 ನಿಮಿಷ ಮುಚ್ಚಿರಿಸಿ, ಸೋಸಿಕೊಂಡು ಉಳಿದ ಸಾಮಗ್ರಿ ಬೆರೆಸಿ ಕದಡಿಕೊಂಡು ಸವಿಯಿರಿ.

ಲಾಭ : ಇದರ ಸೇವನೆ  ಬಿ.ಪಿ., ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತದೆ. ಮಧುಮೇಹಕ್ಕೂ ಲಾಭ. ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿರುವ ಇದು ಆ್ಯಂಟಿ ಕ್ಯಾನ್ಸರ್‌ ಎನಿಸಿದೆ. ಇದರಿಂದ ಡಿಪ್ರೆಶನ್‌ ಎಷ್ಟೋ ಕಡಿಮೆ ಆಗುತ್ತದೆ, ತೂಕ ನಿಯಂತ್ರಿಸುತ್ತದೆ. ಇಮ್ಯೂನ್‌ ಸಿಸ್ಟಂ ಸುಧಾರಿಸುತ್ತದೆ. ಈ ಟೀ ವಿಟಮಿನ್‌ಗಳಿಂದ ತುಂಬಿದೆ. ಹಾಗಾಗಿ ಚರ್ಮದ ಸಮಸ್ಯೆಗಳಾದ ಆ್ಯಕ್ನೆ, ಸನ್‌ಬರ್ನ್‌, ಎಗ್ಝಿಮಾ, ಸ್ಕಿನ್‌ ಅಲರ್ಜಿಗಳಿಂದ ಮುಕ್ತಿ ಕೊಡಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ