ಸರಸ್ವತಿ*
ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವ ಗಾದೆ ಕೇಳಿದ್ದೀರಾ ಅಲ್ವಾ. ಈ ಗಾದೆ ಬಗ್ಗೆ ಯಾಕೀಗ ಅಂತೀರಾ..? ‘ಹೆಗ್ಗಣ ಮುದ್ದು’ ಎನ್ನುವ ಹೆಸರಿನಲ್ಲೇ ಈಗ ಸ್ಯಾಂಡಲ್‌ವುಡ್ ನಲ್ಲಿ ಸಿನಿಮಾ ಬರ್ತಾ ಇದೆ. ನಟ ರಾಕ್ಷಸ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ನಲ್ಲಿ ಮತ್ತೊಂದು ವಿಭಿನ್ನ ಸಿನಿಮಾ ಮೂಡಿಬರುತ್ತಿದ್ದು ಹೆಗ್ಗಣ ಮುದ್ದು ಎಂದು ಟೈಟಲ್ ಇಡಲಾಗಿದೆ. ಸಖತ್ ವಿಭಿನ್ನವಾಗಿರುವ ಟೈಟಲ್ ಇಟ್ಕೊಂಡು ಹೊಸ ಸಿನಿಮಾ ಮೂಲಕ ಡಾಲಿ ಪಿಕ್ಚರ್ಸ್ ಹೊಸ ವರ್ಷಕ್ಕೆ ಸಿನಿ ಅಭಿಮಾನಿಗಳಿಗೆ ಬರ್ಜರಿ ಸುದ್ದಿ ನೀಡಿದ್ದಾರೆ.
ಅಂದಹಾಗೆ ಹೆಗ್ಗಣ್ಣ ಮುದ್ದು ಪೂರ್ಣ ಮೈಸೂರು ನಟನೆಯ ಸಿನಿಮಾ. ಅವಿನಾಶ್ ಬಳೆಕ್ಕಳ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಪೂರ್ಣಗೆ ಜೋಡಿಯಾಗಿ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶಿವಣ್ಣ ಜೊತೆ ವೇದ ಸಿನಿಮಾದಲ್ಲಿ ಮಿಂಚಿರುವ ಅದಿತಿ ಇದೀಗ ಮೊದಲ ಬಾರಿಗೆ ಹೆಗ್ಗಣ ಮುದ್ದು ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೆಗ್ಗಣ ಮುದ್ದು ಪ್ರಸಿದ್ಧ ಗಾದೆ ಮಾತಿನಿಂದ ಸ್ಫೂರ್ತಿ ಪಡೆದು ಇಟ್ಟಿರುವ ಟೈಟಲ್. ಟೈಟಲ್ ನಿಂದನೇ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಹೆಚ್ಚಾಗಿದೆ. ಇದೊಂದು ಡ್ರಾಮ ಥ್ರಿಲ್ಲರ್ ಸಿನಿಮಾವಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅವನಾಶ್, ‘ಸಂಬಂಧಗಳ ಬಗ್ಗೆ ಇರುವ ಸಿನಿಮಾವಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹೇಗೆ ಹೇಳ್ತಿವೋ ಹಾಗೆ ಈ ಸಿನಿಮಾದಲ್ಲಿ ನನಗೆ ನಾನೆ ಮುದ್ದು ಎನ್ನುವುದನ್ನು ಹೇಳಲಾಗಿದೆ’ ಎಂದು ಹೇಳಿದರು.
ಸೈಲೆಂಟ್ ಆಗಿಯೇ ಶೂಟಿಂಗ್ ಮುಗಿಸಿರುವ ಹೆಗ್ಗಣ ಮುದ್ದು ಸದ್ಯ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಟೈಟಲ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕುತೂಹಲ ಹೆಚ್ಚಿಸಿರುವ ಹೆಗ್ಗಣ್ಣ ಮುದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹೆಗ್ಗಣ ಮುದ್ದು ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಇಬ್ಬರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಚಿಕೇತ್ ಬಲೆಕ್ಕಳ ಅವರ ಕ್ಯಾಮರಾ ವರ್ಕ್ ಇದೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಹೆಗ್ಗಣ ಮುದ್ದು ಡಾಲಿ ಪಿಕ್ಚರ್ಸ್ ನಿಂದ ಜೆಸಿ ಸಿನಿಮಾ ರಿಲೀಸ್ ಆದ ಬಳಿಕ ತೆರೆ ಮೇಲೆ ಬರಲಿದೆ.





