ಇಂದಿನ ಬಿಝಿ ಜೀವನದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ತಾನು ಮತ್ತು ಕುಟುಂಬದವರು ಸದಾ ಆರೋಗ್ಯವಂತರಾಗಿ, ಸುಖಿಗಳಾಗಿರಬೇಕೆಂದು ಬಯಸುತ್ತಾನೆ. ಆದರೆ ಇತ್ತೀಚೆಗೆ ಅವ್ಯವಸ್ಥಿತ ಆಹಾರಭ್ಯಾಸ, ಅನಿಯಮಿತ ದಿನಚರ್ಯೆ ಇತ್ಯಾದಿಗಳಿಂದ ಅನೇಕ ರೋಗಗಳು ಕಾಡುತ್ತವೆ. ಇಂಥ ರೋಗಗಳು ಯಾರನ್ನಾದರೂ ಯಾವಾಗಲಾದರೂ ಕಾಡಬಹುದು.

ಫ್ಯಾಮಿಲಿ ಡಾಕ್ಟರ್ಏಕೆ ಅವಶ್ಯಕ? : ಈ ಕುರಿತಾಗಿ ವೈದ್ಯರು ಹೇಳುವುದೆಂದರೆ, ಯಾವ ರೋಗವೇ ಇರಲಿ, ಬಾಗಿಲು ತಟ್ಟಿ ನಿಧಾನವಾಗಿ ಬರಲಾರದು. ಆದ್ದರಿಂದ ಮನೆಯವರೆಲ್ಲರ ಆರೋಗ್ಯ ಸದಾ ಸುಸ್ಥಿತಿಯಲ್ಲಿರಲು ಪ್ರತಿ ಮನೆಗೂ ಒಬ್ಬೊಬ್ಬ ಫ್ಯಾಮಿಲಿ ಡಾಕ್ಟರ್‌ ಇರಬೇಕಾದುದು ಅನಿವಾರ್ಯ. ಅವರು ಮಾತ್ರವೇ ಸಮರ್ಪಕ ಚಿಕಿತ್ಸೆ ನೀಡಬಲ್ಲರು ಹಾಗೂ ನಿಮ್ಮನ್ನು ಸೂಕ್ತ ಸರ್ಜನ್‌ರಿಗೆ ರೆಫರ್‌ ಮಾಡಬಲ್ಲರು. ನಿಮ್ಮ ಫ್ಯಾಮಿಲಿ ಡಾಕ್ಟರ್‌ ನಿಮ್ಮ ಮನೆಯವರೆಲ್ಲರ ವಯಸ್ಸು, ಜೀವನ ಶೈಲಿ, ಆರೋಗ್ಯ ಸಮಸ್ಯೆ ಇತ್ಯಾದಿಗಳ ಕುರಿತು ಚೆನ್ನಾಗಿ ಬಲ್ಲವರಾಗಿರುತ್ತಾರೆ.  ಹೀಗಾಗಿ ಅವರು ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಹಾರ್ಟ್‌ ಅಟ್ಯಾಕ್‌, ಆಸ್ತಮಾ ಅಟ್ಯಾಕ್‌ ಅಥವಾ ಮೂಳೆಯ ದೊಡ್ಡ ಗಂಭೀರ ಸಮಸ್ಯೆಗಳಿದ್ದರೆ ತಕ್ಷಣ ಸಂಬಂಧಿಸಿದ ತಜ್ಞರಿಗೆ ರೆಫರ್‌ ಮಾಡುತ್ತಾರೆ.

ಒಬ್ಬ ಫಿಟ್ನೆಸ್ಫ್ರೆಂಡ್‌ : ನಿಮ್ಮ ಫ್ಯಾಮಿಲಿ ಡಾಕ್ಟರ್‌ನ್ನು ಒಬ್ಬ ಉತ್ತಮ ಫಿಟ್ನೆಸ್‌ ಫ್ರೆಂಡ್‌ ಎಂದು ನೀವು ಭಾವಿಸಿದರೆ ಏನೂ ತಪ್ಪಿಲ್ಲ. ಏಕೆಂದರೆ ಅವರಿಗೆ ನಿಮ್ಮ ಆರೋಗ್ಯ ಮತ್ತು ರೋಗಗಳ ಕುರಿತು ಚೆನ್ನಾಗಿ ಗೊತ್ತಿರುತ್ತದೆ. ಅವರಿಗೆ ನಿಮ್ಮ ಪರ್ಸನಲ್ ಹಿಸ್ಟರಿ ಚೆನ್ನಾಗಿ ಗೊತ್ತು. ಹೀಗಾಗಿ ಯಾವ ಔಷಧಿ ನಿಮಗೆ ಸೂಟ್‌ ಆಗುತ್ತದೆ, ಯಾವುದರಿಂದ ನಿಮಗೆ ಸೈಡ್‌ ಎಪೆಕ್ಟ್  ಆಗುತ್ತದೆ ಎಂಬುದು ಅವರಿಗೆ ಆರಂಭದಿಂದಲೇ ಗೊತ್ತಿರುತ್ತದೆ. ನಿಮ್ಮ ಸಮಸ್ಯೆಗೆ ತಕ್ಕಂತೆ ಅವರು ನಿಮ್ಮ ಕುಟುಂಬದವರೆಲ್ಲರಿಗೂ ಚಿಕಿತ್ಸೆ ನೀಡುತ್ತಾರೆ.

ಕಾಲಹರಣ ಮಾಡದೆ ಚಿಕಿತ್ಸೆ : ನೀವು ನಿಮ್ಮ ಫ್ಯಾಮಿಲಿ ಡಾಕ್ಟರ್‌ ಬಳಿ ಯಾವಾಗ ಬೇಕಾದರೂ ಚಿಕಿತ್ಸೆ ಪಡೆಯಬಹುದು ಹಾಗೂ ಕಾಲಹರಣ ಮಾಡದೆ, ನೀವು ಮಂಡಿ ನೋವಿನಿಂದ ಹಿಡಿದು ಹೃದ್ರೋಗಗಳವರೆಗೂ ಚಿಕಿತ್ಸೆ ಪಡೆಯಬಹುದು. ಯಾವುದೇ ಗಂಭೀರ ರೂಪದ ಕಾಯಿಲೆ ಕಾಡಿಸಲು ಆರಂಭಿಸಿದಾಗ, ಈ ಡಾಕ್ಟರ್‌ ತಕ್ಷಣ ಪ್ರಾಥಮಿಕ ಚಿಕಿತ್ಸೆ ಒದಗಿಸಿ, ನಿಮ್ಮನ್ನು ಬೇರೆ ನುರಿತ ವೈದ್ಯರಿಗೆ ರೆಫರ್‌ ಮಾಡುತ್ತಾರೆ. ಹೀಗಾಗಿ ನಿಮಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸುತ್ತದೆ.

ಸ್ವಾಸ್ಥ್ಯ ಸಲಹೆ ಎರಡೂ : ಒಬ್ಬ ಫ್ಯಾಮಿಲಿ ಡಾಕ್ಟರ್‌ಇದ್ದಾಗ ಮಾತ್ರವೇ ಅವರು ನಿಮಗೆ ಸೂಕ್ತ ಸಲಹೆ ನೀಡಬಲ್ಲರು. ಯಾವ ರೀತಿಯ ಚಿಕಿತ್ಸೆ ನಿಮಗೆ ಸರಿಹೊಂದುತ್ತದೆ ಎಂಬುದವರಿಗೆ ಗೊತ್ತು, ಏಕೆಂದರೆ ಒಮ್ಮೊಮ್ಮೆ ನಿಮ್ಮ ನಿರ್ಲಕ್ಷ್ಯದಿಂದಾಗಿ ಒಂದು ಸಣ್ಣ ರೋಗ ಸಹ ಮುಂದೆ ದೊಡ್ಡದಾಗಿ ಉಲ್ಬಣಗೊಂಡು ಮಹಾಮಾರಿ ಆಗಬಹುದು. ಹೀಗಾಗಿ ನಿಮ್ಮ ಫ್ಯಾಮಿಲಿ ಡಾಕ್ಟರ್‌ ಬಳಿ ನಿಮ್ಮ ಆರೋಗ್ಯದ ಕುರಿತಾಗಿ ಏನನ್ನೂ ಬಚ್ಚಿಡದೆ ಸೂಕ್ತ ಮಾಹಿತಿ ನೀಡಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ಸಂಪರ್ಕ ಎಲ್ಲಾದರೂ ಯಾವಾಗ ಬೇಕಾದರೂ : ನೀವು ನಿಮ್ಮ ಫ್ಯಾಮಿಲಿ ಡಾಕ್ಟರ್‌ ಜೊತೆ ಎಷ್ಟು ಫ್ರೆಂಡ್ಲಿ ಆಗಬಹುದು ಎಂದರೆ, ಯಾವ ಸಂಕೋಚ ಅಥವಾ ಅಳುಕಿಲ್ಲದೆ, ಯಾವುದೇ ಸಮಯದಲ್ಲಾದರೂ, ಎಲ್ಲಿಂದಾದರೂ ಅವರಿಗೆ ಫೋನ್‌ ಮಾಡಿ ನಿಮ್ಮ ಸಮಸ್ಯೆ ಕುರಿತು ವಿಚಾರಿಸಬಹುದು. ನೀವೇನಾದರೂ ಬೇರೆ ಊರಿನಲ್ಲಿದ್ದರೆ, ಅವರು ಫೋನಿನಲ್ಲೇ ನಿಮಗೆ ಸಲಹೆ ಸೂಚನೆ ನೀಡಿ ಯಾವ ಔಷಧ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂದು ತಿಳಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ