ದಿನವಿಡಿಯ ಧಾವಂತದಿಂದ ವ್ಯಕ್ತಿ ದಣಿದು ಮನೆಗೆ ಬಂದಾಗ ರಾತ್ರಿ ನೆಮ್ಮದಿಯ ನಿದ್ರೆ ಬರಲಿ ಎನ್ನುವುದೇ ಪ್ರತಿಯೊಬ್ಬರ ಅಪೇಕ್ಷೆ ಯಾಗಿರುತ್ತದೆ. ಗಾಢ ನಿದ್ರೆ ದಣಿವು ನಿವಾರಿಸಿ ದೇಹಕ್ಕೆ ತಾಜಾತನ ನೀಡುತ್ತದೆ.

ಆರೋಗ್ಯವಂತ ವ್ಯಕ್ತಿಯೊಬ್ಬನಿಗೆ 5-6 ಗಂಟೆಗಳ ನಿದ್ರೆ ಅತ್ಯವಶ್ಯಕ. ಅದೇ ಚಿಕ್ಕ ಮಕ್ಕಳಿಗೆ 10-12 ಗಂಟೆಗಳ ನಿದ್ರೆ ಬೇಕು. ವೃದ್ಧರಿಗೆ 4-5 ಗಂಟೆಗಳ ನಿದ್ರೆ ಸಾಕು ಎನಿಸುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರದೇ ಇರುವುದರಿಂದ ಹಲವು ಬಗೆಯ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು, ಗೊರಕೆ, ಸಿಡಿಮಿಡಿತನ, ಏಕಾಗ್ರತೆಯಲ್ಲಿ ಕೊರತೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ, ಹೊಟ್ಟೆಯಲ್ಲಿ ತೊಂದರೆ, ಉದಾಸತನ, ದಣಿವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ನಿದ್ರೆ ಬರದೇ ಇರಲು ಕಾರಣಗಳು

ನಿದ್ರೆ ಬರದೇ ಇರಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಚಿಂತೆ, ಒತ್ತಡ, ನೌಕರಿಗೆ ಸಂಬಂಧಪಟ್ಟ ಸಮಸ್ಯೆಗಳು, ಮಾನಸಿಕ ಹಾಗೂ ಭಾವನಾತ್ಮಕ ಅಸುರಕ್ಷತೆ ಮುಂತಾದವು.

ಇದರ ಹೊರತಾಗಿ ನಿಶ್ಚಿತ ಸಮಯಕ್ಕೆ ಮಲಗದೇ ಇರುವುದು, ಚಹಾ ಅಥವಾ ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಯಾವುದಾದರೂ ದೈಹಿಕ ಸಮಸ್ಯೆ, ರಾತ್ರಿ ತಡವಾಗಿ ಮಲಗುವುದು, ಏನೂ ತಿನ್ನದೇ ಮಲಗುವುದು, ರಾತ್ರಿ ಬಹಳ ಹೊತ್ತಿನ ತನಕ ಟಿವಿ ನೋಡುವುದು, ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡುತ್ತಾ ಇರುವುದು, ದಿನವಿಡೀ ಯಾವುದೇ ಕೆಲಸ ಮಾಡದೇ ಇರುವುದು ಇವೇ ಮುಂತಾದವು ನಿದ್ರಾಹೀನತೆಗೆ ಕಾರಣವಾಗಬಹುದು.

ಸಿಹಿ ನಿದ್ರೆ ಹೇಗೆ ಬರುತ್ತದೆ?

- ಯಾರಿಗೆ ಹಗಲು ಹೊತ್ತಿನಲ್ಲಿ ಮೇಲಿಂದ ಮೇಲೆ ಚಹಾ/ಕಾಫಿ ಕುಡಿಯುವ ಅಭ್ಯಾಸ ಇರುತ್ತೊ, ಅವರಿಗೆ ರಾತ್ರಿ ಬೇಗ ನಿದ್ರೆ ಬರುವುದಿಲ್ಲ. ಚಹಾ/ಕಾಫಿಯಲ್ಲಿರುವ ಕೆಫಿನ್‌ ನಿದ್ರೆಗೆ ಅಡಚಣೆಯನ್ನುಂಟು ಮಾಡುತ್ತದೆ. ಮಲಗುವ ಮುಂಚೆ ಕಾಫಿ/ಟೀ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ, ಬದಲಿಗೆ ಬಿಸಿ ಹಾಲು ಕುಡಿದು ಮಲಗಿ.

- ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ, ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗದಿದ್ದರೆ, ಅದು ನಿದ್ರೆಗೆ ಅಡಚಣೆಯನ್ನುಂಟು ಮಾಡಬಹುದು. ಒಳ್ಳೆಯ ನಿದ್ರೆಗೆ ಚಿಂತಾಮುಕ್ತರಾಗಿರಬೇಕು.

- ನೀವು ನಿದ್ರೆ ಮಾಡಲು ಪ್ರಯತ್ನಿಸುತ್ತಿದ್ದರೂ, ನಿದ್ರೆ ಹತ್ತಿರ ಸುಳಿಯದಿದ್ದರೆ ಎದ್ದು ಸ್ವಲ್ಪ ಹೊತ್ತು ಟಿವಿ ನೋಡಿ, ಇಲ್ಲವೇ ನಿಮಗಿಷ್ಟವಾದ ಯಾವುದಾದರೂ ಪುಸ್ತಕ ಓದಿ. ಇಲ್ಲವೇ ಇಂಪಾದ ಸಂಗೀತ ಆಲಿಸಿ. ಇದರಿಂದ ಒಳ್ಳೆಯ ನಿದ್ರೆ ಬರುತ್ತದೆ.

- ಹಗಲು ಹೊತ್ತು ಮಲಗದೇ ಇದ್ದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.

- ರಾತ್ರಿ ಮಲಗುವ ಮುಂಚೆ 10-15 ನಿಮಿಷಗಳಾದರೂ ಹೊರಗೆ ಸುತ್ತಾಡಿ ಬನ್ನಿ. ಅದರಿಂದ ಪಚನಕ್ರಿಯೆ ಸಮರ್ಪಕಗೊಂಡು ಚೆನ್ನಾಗಿ ನಿದ್ರೆ ಬರುತ್ತದೆ.

- ರಾತ್ರಿ ಊಟ ಮಾಡಿದ ತಕ್ಷಣವೇ ಮಲಗಲು ಹೋಗಬೇಡಿ. 1-2 ಗಂಟೆಗಳ ಅಂತರವಾದರೂ ಇರಬೇಕು.

- ಮಲಗುವ ಮುನ್ನ ಸ್ನಾನ ಮಾಡುವುದರಿಂದ ಚೆನ್ನಾಗಿ ನಿದ್ರೆ ಲಭಿಸುತ್ತದೆ.

- ಮಲಗುವ ಹಾಗೂ ಏಳುವ ಸಮಯವನ್ನು ನಿಗದಿಪಡಿಸಿಕೊಳ್ಳಿ. ದಿನ ನಿಗದಿಪಡಿಸಿದ ಸಮಯಕ್ಕೆ ಮಲಗುವುದರಿಂದ ಗಾಢ ನಿದ್ರೆ ಲಭಿಸುತ್ತದೆ.

- ಮಲಗುವಾಗ ಯಾವಾಗಲೂ ಸಡಿಲವಾದ ಬಟ್ಟೆಗಳನ್ನು ಧರಿಸಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ