ಬೊಟಾಕ್ಸ್ ಅಥವಾ ಫಿಲ್ಲರ್‌ ಅಷ್ಟೇ ಅಲ್ಲ, ಹಲವು ಬಗೆಯ ಸರ್ಜರಿಗಳು ಕೂಡ ಪರ್ಫೆಕ್ಟ್ ಲುಕ್ಸ್ ಕೊಡಲು ಪರಿಣಾಮಕಾರಿಯಾಗಿವೆ. ಮುಖದ ಕಲೆಗಳನ್ನು ನಿವಾರಿಸಿ ಮುಖದಲ್ಲಿ ಹೊಳಪು ತರಲು ಕೆಮಿಕಲ್ಸ್ ಪೀಲ್‌ ಮಾಡುವುದು ಕೂಡ ಈಗ ಸಾಕಷ್ಟು ಜನಪ್ರಿಯವಾಗಿದೆ. ಪರ್ಮನೆಂಟ್‌ ಹೇರ್‌ ರಿಮೂವ್‌ ಮತ್ತು ಟಮಿಟಕ್‌ ಎಂತಹ ಕೆಲವು ಚಿಕಿತ್ಸೆಗಳೆಂದರೆ, ಅದರಿಂದ ವ್ಯಕ್ತಿತ್ವದಲ್ಲಿ ವಿಶಿಷ್ಟ ಹೊಳಪು ಬರುತ್ತದೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಇವುಗಳನ್ನೆಲ್ಲ ಮಾಡಿಸಿಕೊಳ್ಳಲು ಮದುವೆಗೂ ಕೆಲವು ತಿಂಗಳ ಮುಂಚೆಯೇ ಯೋಜನೆ ಮಾಡಬೇಕಾಗುತ್ತದೆ.

ನೀವು ಇಷ್ಟಪಟ್ಟರೆ ಮದುವೆಗೂ 1 ತಿಂಗಳು ಮುಂಚೆ ಬೊಟಾಕ್ಸ್ ಅಥವಾ ಲಿಪ್‌ ಫಿಲರ್‌ ಇಂಜೆಕ್ಷನ್‌ ಹಾಕಿಸಿಕೊಳ್ಳಬಹುದು. ಬೊಟಾಕ್ಸ್ ನಿಂದ ನಿಮ್ಮ ವಯಸ್ಸು ಕಡಿಮೆ ಎಂಬಂತೆ ಭಾಸವಾಗುತ್ತದೆ. ಅದೇ ಲಿಪ್‌ ಫಿಲರ್‌ ತುಟಿಗಳಿಗೆ ಆಕರ್ಷಕ ಲುಕ್‌ ತರುತ್ತದೆ.

ಡರ್ಮಾಬ್ರೇಶನ್‌, ಲೇಸರ್‌ ಸ್ಕಿನ್‌ ರೀಸರ್ಫೇಸಿಂಗ್‌ ಮತ್ತು ಕೆಮಿಕಲ್ ಪೀಲ್‌ನಂತಹ ಟ್ರೀಟ್‌ಮೆಂಟ್‌ನ ಅತ್ಯುತ್ತಮ ಪರಿಣಾಮಕ್ಕಾಗಿ ಕೆಲವೊಮ್ಮೆ ಅವನ್ನು ಮತ್ತೊಮ್ಮೆ ತೆಗೆದುಕೊಳ್ಳಬೇಕಾಗಿ ಬರುತ್ತದೆ.

ಈ ಎಲ್ಲ ಸರ್ಜರಿಗಳು ಒಂದೇ ದಿನದಲ್ಲಿ ಮುಗಿದುಹೋಗುವಂಥದು. ಅಂದೇ ಮನೆಗೆ ಮರಳಬಹುದು. ಆದರೆ ಶಸ್ತ್ರಚಿಕಿತ್ಸೆಯ ಕಲೆ ನಿವಾರಣೆಯಾಗಲು ಒಂದಿಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಮದುವೆಗೂ 36 ತಿಂಗಳುಗಳ ಮುಂಚೆಯೇ ಇದನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ಬೊಟಾಕ್ಸ್ ಮತ್ತು ಫಿಲರ್‌ ಪ್ರಕ್ರಿಯೆ

ನೀವು ಇದರ ಚಿಕಿತ್ಸೆ ಪಡೆಯಬೇಕಿದ್ದರೆ, ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಇನ್ಸುಲಿನ್‌ ಇಂಜೆಕ್ಷನ್‌ನ ಹಾಗೆ ಚಿಕ್ಕ ಬೊಟಾಕ್ಸ್ ಇಂಜೆಕ್ಷನ್‌ನ್ನು ಮುಖಕ್ಕೆ ನೀಡಲಾಗುತ್ತದೆ. ಈ ಪರಿಪೂರ್ಣ ಪ್ರಕ್ರಿಯೆಗೆ 15-20 ನಿಮಿಷಗಳಷ್ಟು ಸಮಯ ತಗಲುತ್ತದೆ. ಇದರ ತಕ್ಷಣದ ಪರಿಣಾಮ ಗೋಚರಿಸುವುದಿಲ್ಲ. 3 ರಿಂದ 7 ದಿನಗಳ ಅಂತರದಲ್ಲಿ ಮುಖದಲ್ಲಿ ಪರಿಣಾಮ ಕಂಡುಬರುತ್ತದೆ. ಅದರ ಪರಿಣಾಮ 3 ರಿಂದ 6 ತಿಂಗಳ ಕಾಲ ಇರುತ್ತದೆ. ರಿಂಕಲ್ಸ್, ಪಿಂಪಲ್ಸ್, ಡಾರ್ಕ್‌ ಸರ್ಕಲ್ಸ್, ಲ್ಯೂಕೋಡರ್ಮಾದಂತಹ ಸಾಮಾನ್ಯ ಸಮಸ್ಯೆಗಳಿಗೆ ಈಗ ಕಾಸ್ಮೆಟಿಕ್ಸ್ ನ ಅಡ್ವಾನ್ಸ್ಡ್ ಬ್ಯೂಟಿ ಟ್ರೀಟ್‌ಮೆಂಟ್‌ ಸಾಧ್ಯ ಎಂದು ಸಾಬೀತುಪಡಿಸಿದೆ. ಈ ಟ್ರೀಟ್‌ಮೆಂಟ್‌ನ ಸಹಾಯ ಪಡೆದು ನೀವು ತ್ವಚೆಗೆ ಮೆರುಗು ಕೊಡುವುದರ ಜೊತೆಗೆ ತುಟಿ, ಕೆನ್ನೆ, ಐ ಬ್ರೋಸ್‌ನ ಆಕಾರದಲ್ಲೂ ಖಾಯಂ ಆಗಿ ನಿಮಗಿಷ್ಟವಾದ ಪರಿವರ್ತನೆ ತಂದುಕೊಳ್ಳಬಹುದು.

ಏನಿದು ರೈನೊಪ್ಲಾಸ್ಟಿ?

ನಿಮ್ಮ ಮೂಗಿನ ಆಕಾರ ಇರಬೇಕಾದ ರೀತಿಯಲ್ಲಿ ಇರದೇ ಇದ್ದರೆ, ನೀವು ರೈನೊಪ್ಲಾಸ್ಟಿಯಿಂದ 1-2 ಗಂಟೆಗಳಲ್ಲಿಯೇ ಸೂಕ್ತ ಆಕಾರ ಪಡೆದುಕೊಳ್ಳಬಹುದು ಅಷ್ಟೇ ಅಲ್ಲ, ತುಟಿಯ ಮೇಲ್ಭಾಗ ಹಾಗೂ ಮೂಗಿನ ಹೊರಳೆಯ ಆಕಾರವನ್ನೂ ಬದಲಿಸಿಕೊಳ್ಳಬಹುದು. ಇದನ್ನು ನೀವು ಫೇಸ್‌ ಲಿಫ್ಟ್ ಜೊತೆಗೆ ಮಾಡಿಸಿಕೊಳ್ಳಬಹುದು.

ಅದಕ್ಕಾಗಿ ನೀವು 1 ದಿನದ ಮಟ್ಟಿಗೆ ಅಡ್ಮಿಟ್‌ ಆಗಬೇಕಾಗುತ್ತದೆ. ಅಂದಹಾಗೆ ಊತ ಪರಿಪೂರ್ಣವಾಗಿ ಹೊರಟುಹೋಗಲು 2 ತಿಂಗಳು ಬೇಕು. ಆದರೆ  2-3 ವಾರದಲ್ಲೇ ಕೆಲಸಕ್ಕೆ ಮರಳಬಹುದು. ಅದಕ್ಕೆ 50 ರಿಂದ 70 ಸಾವಿರ ತನಕ ಖರ್ಚು ಬರುತ್ತದೆ.

ಪ್ಲಾಸ್ಟಿಕ್‌ ಸರ್ಜರಿಯ ಪರ್ಯಾಯ

ದೇಹದ ಯಾವುದೇ ಭಾಗಕ್ಕೆ ಏಟು ತಗುಲಿದಾಗ ಅಥವಾ ಸುಟ್ಟ ಗಾಯಗಳುಂಟಾದಾಗ ಆ ಭಾಗ ಬಹಳ ಕೆಟ್ಟದಾಗಿ ಕಂಡುಬರುತ್ತದೆ. ಅದನ್ನು ಪ್ಲಾಸ್ಟಿಕ್‌ ಸರ್ಜರಿ ಮುಖಾಂತರ ಸರಿಪಡಿಸಬಹುದು. ಈ ಚಿಕಿತ್ಸೆಗಾಗಿ ತೊಡೆಯ ಬಳಿಯ ಚರ್ಮವನ್ನು ತೆಗೆದು ಅಲ್ಲಿ ಅಳಡಿಸಲಾಗುತ್ತದೆ. ಪ್ಲಾಸ್ಟಿಕ್‌ ಸರ್ಜರಿಯ ಈ ಚಿಕಿತ್ಸೆಯನ್ನು `ಸ್ಕಿನ್‌ ಗ್ರಾಫ್ಟಿಂಗ್‌' ಎಂದು ಕರೆಯುತ್ತಾರೆ. ಯುವತಿಯರು ಮೂಗು, ತುಟಿ, ಬಾಯಿಯ ಅಗಲಗೊಳಿಸುವಿಕೆ, ಬ್ರೆಸ್ಟ್ ಮುಂತಾದವುಗಳ ಶಸ್ತ್ರಚಿಕಿತ್ಸೆಯನ್ನು ಹೆಚ್ಚಾಗಿ ಮಾಡಿಸಿಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ