ಹೆಂಗಸರು ಯಾವಾಗ ಐ ಮೇಕಪ್‌ ಮಾಡಿಕೊಂಡರೂ ಏನಾದರೊಂದು ಕೊರತೆ ಕಾಡುತ್ತದೆ. ಆಗ ಅವರು ಟೆನ್ಶನ್‌ಗೆ ಒಳಗಾಗುತ್ತಾರೆ. ಆದರೆ ಇನ್ನು ಅವರಿಗೆ ಆ ಚಿಂತೆ ಇಲ್ಲ. ಇಲ್ಲಿ ಕೆಳಗೆ ನೀಡಲಾಗಿರುವ ವಿಶೇಷ ಸಲಹೆಗಳನ್ನು ಗಮನವಿಟ್ಟು ಅಳವಡಿಸಿಕೊಂಡರೆ, ಹೆಂಗಸರು ತಾವೇ ಮೇಕಪ್‌ ಆರ್ಟಿಸ್ಟ್ ಗಿಂತ ಚೆನ್ನಾಗಿ ಮೇಕಪ್‌ ಮಾಡಿಕೊಂಡು, ಪಾರ್ಟಿಯಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಬಹುದು.

ಐ ಪ್ರೈಮರ್‌ನಿಂದ ಉಳಿಯುವ ಮೇಕಪ್‌ : ನೀವು ಐ ಮೇಕಪ್‌ ಮಾಡಿಕೊಂಡ ನಂತರ ಅದು ಕೆಲವೇ ಗಂಟೆಗಳಲ್ಲಿ ಅತ್ತಿತ್ತ ಹರಡಿಕೊಂಡರೆ ನಿಮ್ಮ ಇಡೀ ಲುಕ್ಸ್ ಕೆಟ್ಟದಾಗುತ್ತದೆ. ಹೀಗಾದಾಗ ಐ ಪ್ರೈಮರ್‌ನ ಪಾತ್ರ ಪ್ರಮುಖವಾಗುತ್ತದೆ. ಮುಖದ ಮೇಲೆ ಎಲ್ಲಕ್ಕಿಂತ ಮೊದಲು ಐ ಮೇಕಪ್‌ ಮಾಡಿ. ಐ ಮೇಕಪ್‌ನ ಬೇಸ್‌ನ್ನು ಆರಿಸಿ ಬಳಸಿರಿ. ಆಗ ನಿಮ್ಮ ಐ ಶ್ಯಾಡೋಸ್‌ನ ಲುಕ್ಸ್ ಎದ್ದು ಕಾಣುತ್ತದೆ. ಎಲ್ಲಕ್ಕೂ ಹೆಚ್ಚಿನ ತೊಂದರೆ ಆಯ್ಲಿ ರೆಪ್ಪೆಗಳನ್ನು ಹೊಂದಿರುವವರಿಗೆ ಆಗುತ್ತದೆ. ನೀವು ಕ್ರೀಂ ಮತ್ತು ನಿಮ್ಮ ಆಯ್ಕೆಯ  ಕನ್ಸೀಲರ್‌ ಬೆರೆಸಿಕೊಂಡು ಐ ಬೇಸ್‌ ಕ್ರೀಂ ಸಿದ್ಧಪಡಿಸಿ. ಇದಾದ ಮೇಲೆ ಲೂಸ್‌ ಪೌಡರ್‌ನಿಂದ ಇದನ್ನು ಸೆಟ್‌ ಮಾಡಿ. ಆಗ ರೆಪ್ಪೆಗಳು ಆಯ್ಲಿ ಆಗಿರುವುದಿಲ್ಲ.

ಕನ್ಸೀಲರ್‌ : ಸಾಮಾನ್ಯವಾಗಿ ಜನ ಭಾವಿಸುವುದೆಂದರೆ, ಕಂಗಳ ಕೆಳಗೆ ಕಪ್ಪು ವೃತ್ತಗಳು, ಕಲೆಗುರುತು ಇಲ್ಲದಿದ್ದರೆ ಕನ್ಸೀಲರ್‌ ಬಳಸುವ ಅಗತ್ಯವೇ ಇಲ್ಲ ಎಂಬುದು. ಆದರೆ ಪ್ರತಿ ಸಲ ಹಾಗಾಗುವುದಿಲ್ಲ. ಲೈಟ್‌ ಮೇಕಪ್‌ ಮಾಡುವಾಗ ಲೈಟ್‌ ಕವರೇಜ್‌ನ ಕನ್ಸೀಲರ್‌ನ್ನು ಬಳಸಿಕೊಳ್ಳಬಹುದು.

ಇಲ್ಲಿ ಕಲರ್‌ ಕರೆಕ್ಟರ್‌ಗೂ ಪ್ರಮುಖ ಪಾತ್ರವಿದೆ. ನಾವೇ ನಮ್ಮ ಮೇಕಪ್‌ ಮಾಡಿಕೊಳ್ಳಬೇಕಾದಾಗ, ನಮ್ಮ ಅಂಡರ್‌ ಟೋನ್‌ ಸ್ಕಿನ್‌ನ್ನು ಗುರುತಿಸಬೇಕು. ಇದರಲ್ಲಿ 3 ಆಯ್ಕೆಗಳಿವೆ. ಯೆಲ್ಲೋ, ಆರೆಂಜ್‌ ಯಾ ಬ್ಲೂ. ಹೀಗೆ ಸ್ಕಿನ್‌ ಅಂಡರ್‌ಟೋನ್‌ ಗುರುತಿಸಿಕೊಂಡ ನಂತರ ಉತ್ತಮ ಕರೆಕ್ಟರ್‌ ಖರೀದಿಸಿ. ಇದಾದ ಮೇಲೆ ಕನ್ಸೀಲರ್‌ ಹಚ್ಚಬೇಕು ಹಾಗೂ ಲೂಸ್‌ ಪೌಡರ್‌ ಉದುರಿಸಿ.

ಐ ಶ್ಯಾಡೋ : ಇದನ್ನು ಚೆನ್ನಾಗಿ ಬ್ಲೆಂಡ್‌ ಮಾಡಿದಾಗ ಮಾತ್ರ ಇದರ ಲುಕ್ಸ್ ಎದ್ದು ಕಾಣಬಲ್ಲದು. ಮೇಕಪ್‌ ಆರ್ಟಿಸ್ಟ್ ಬಲು ಆಕರ್ಷಕವಾಗಿ ಐ ಶ್ಯಾಡೋ ಬ್ಲೆಂಡ್‌ ಮಾಡುತ್ತಾರೆ. ನೀವೇ ಮೇಕಪ್‌ ಮಾಡಿಕೊಳ್ಳುವ ಹಾಗಿದ್ದರೆ, ಬ್ಲೆಂಡಿಂಗ್‌ ಕುರಿತಾಗಿ ವಿಶೇಷ ಗಮನಕೊಡಿ. ಐ ಶ್ಯಾಡೋನಲ್ಲಿ 1 ಅಥವಾ 2 ಬಣ್ಣದ ಆಯ್ಕೆ ಮಾಡುತ್ತಿದ್ದೀರಿ ಎಂಬುದು ಮುಖ್ಯವಲ್ಲ. ಬ್ಲೆಂಡ್‌ ಮಾಡುವಾಗ ಗಮನಿಸಬೇಕಾದ ವಿಷಯ ಎಂದರೆ, ಅದು ಚೆನ್ನಾಗಿ ಮಿಕ್ಸ್ ಆಗುವಂತಿರಬೇಕು. ಐ ಶ್ಯಾಡೋ ಸಹ ಹಲವು ಆಯ್ಕೆಗಳಲ್ಲಿ ಲಭ್ಯ. ಅಂದ್ರೆ  ಪೌಡರ್‌ ಬೇಸ್‌, ಕ್ರೀಂ ಬೇಸ್‌ ಇತ್ಯಾದಿ.

ಆದರೆ ಹೆಚ್ಚು ಜನಪ್ರಿಯ ಎಂದರೆ ಪೌಡರ್‌ ಐ ಶ್ಯಾಡೋ. ಇದನ್ನು ಬಳಸುವುದೂ ಸುಲಭ. ಜೊತೆಗೆ ಇದನ್ನು ಬಳಸುವಾಗ ಬಣ್ಣ ಚೆನ್ನಾಗಿ ತೇಲುತ್ತದೆ. ಮ್ಯಾಟ್‌, ಸ್ಯಾಟಿನ್‌, ಶಿಮರ್‌, ಪರ್ಲಿ, ಗ್ಲಿಟರಿ ಇತ್ಯಾದಿ ಐ ಶ್ಯಾಡೋ ತಮ್ಮ ಲುಕ್ಸ್  ಡ್ರೆಸ್‌ಗೆ ತಕ್ಕಂತೆ ಬಳಸಿಕೊಳ್ಳಬಹುದು. ಸ್ಮೋಕಿ ಐಗಾಗಿ ಡಾರ್ಕ್‌ ಐ ಶ್ಯಾಡೋ  ಆರಿಸಬಹುದು. ಐ ಬ್ರೋಸ್‌ನ್ನು ಹೈಲೈಟ್‌ಗೊಳಿಸಲು ಶಿಮರ್‌ ಐ ಶ್ಯಾಡೋ ಬಳಸಬೇಕು. ಸ್ಯಾಟಿನ್‌ ಮ್ಯಾಟ್‌ ಐ ಶ್ಯಾಡೋ ಅಧಿಕ ಕ್ರೀಝ್ ಬಳಸಿ ಯೂಸ್‌ ಮಾಡಬೇಕು. ನ್ಯಾಚುರಲ್ ಲುಕ್ಸ್ ಗಾಗಿ ಲೈಟ್‌ ಬ್ರೌನ್‌ ಶೇಡ್‌ ಬಳಸಿರಿ.

ಐ ಮೇಕಪ್‌ ಬ್ರಶ್ಶಿನ ಮಾಹಿತಿ : ಮೇಕಪ್‌ ಮಾರ್ಕೆಟ್‌ನಲ್ಲಿ ಹಲವಾರು ಬಗೆಯ ಬ್ರಶ್ಶುಗಳು ಬಳಕೆಯಲ್ಲಿವೆ. ಫ್ಲಾಟ್‌ ಅಪ್ಲಿಕೇಟರ್‌ ಬ್ರಶ್‌ ಐ ಶ್ಯಾಡೋವನ್ನು ಕಣ್ಣೆವೆಗಳಿಗೆ ಹಚ್ಚಲು ಬಳಸುತ್ತಾರೆ. ಇದರ ಬದಲಾಗಿ ನೀವು ಫಿಂಗರ್‌ ಟಿಪ್‌ ಸಹ ಬಳಸಿಕೊಳ್ಳಿ. ಪೆನ್ಸಿಲ್‌ ಬ್ರಶ್ಶನ್ನು ಮೇಲಿನ ಹಾಗೂ ಕೆಳಗಿನ ಲ್ಯಾಶ್‌ ಲೈನ್‌ ಮೇಲೆ ಐ ಶ್ಯಾಡೋ ಹಚ್ಚಲು ಹಾಗೂ ಕಂಗಳ ಅಂಚನ್ನು ಹೈಲೈಟ್‌ಗೊಳಿಸಲು ಬಳಸುತ್ತಾರೆ. ಬ್ಲೆಂಡಿಂಗ್‌ ಬ್ರಶ್ಶಿನಿಂದ ನೀವು ಕ್ರೀಝ್ ಮೇಲೆ ಐ ಶ್ಯಾಡೋವನ್ನು ಮಿಕ್ಸ್ ಮಾಡಬಹುದು. ಈ ಬ್ರಶ್‌ ಎಲ್ಲರಿಗೂ ಹೆಚ್ಚು ಉಪಯುಕ್ತ. ಫ್ಲಾಟ್‌ ಆ್ಯಂಗಲ್ ಬ್ರಶ್‌ ಸಹ ಒಂದು ವಿಶಿಷ್ಟ ಬ್ಲೆಂಡಿಂಗ್‌ ಬ್ಲಶ್‌ ಆಗಿದ್ದು, ಇದು ಕಣ್ಣಿನ ಅಂಚು, ಬ್ರೋ ಬೋನ್‌ನ್ನು ಹೈಲೈಟ್‌ಗೊಳಿಸಲು ಬಳಸಲಾಗುತ್ತದೆ.

ಐ ಲೈನರ್‌ : ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಐ ಲೈನರ್ಸ್‌ ಲಭ್ಯವಿವೆ. ಇದರಲ್ಲಿ ಅತಿ ಜನಪ್ರಿಯ ಎಂದರೆ ಲಿಕ್ವಿಡ್‌ ಬ್ಲ್ಯಾಕ್‌ ಐ ಲೈನರ್‌. ಜೊತೆಗೆ ವಾಟರ್‌ಪ್ರೂಫ್‌ ಐ ಲೈನರ್‌ರನ್ನೂ ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಇರಿಸಿಕೊಳ್ಳಿ. ಪೆನ್ಸಿಲ್‌ ಐ ಲೈನರ್‌ ಬಳಸಲಿಕ್ಕೂ ಸುಲಭ.

ಇದನ್ನು ನೀವು ಐ ಶ್ಯಾಡೋ ಆಗಿಯೂ ಬಳಸಬಹುದು. ಆದರೆ ಶಾರ್ಪ್‌ ಲುಕ್ಸ್ ಗಾಗಿ ಪೆನ್ಸಿಲ್‌ ಶಾರ್ಪ್‌ ಆಗಿರಲಿ. ಕ್ಯಾಟ್‌ ಐಸ್‌ಗಾಗಿ ಪೆನ್‌ ಐ ಲೈನರ್‌ ನಿಮಗೆ ಉತ್ತಮ ಆಯ್ಕೆ.

ಕಾಜಲ್ : ಇದರ ವಿನಾ ಮೇಕಪ್‌ ಅಪೂರ್ಣ. ಐ ಮೇಕಪ್‌ನಲ್ಲಿ ಕಾಜಲ್ ಪ್ರಧಾನ ಪಾತ್ರ ವಹಿಸುತ್ತದೆ. ಕಂಗಳು ಸುಸ್ತಾಗಿ ಹೆವಿ ಎನಿಸಿದರೆ, ಕಾಜಲ್ ತೀಡಿದ ತಕ್ಷಣ ಆ ತೊಂದರೆ ನಿವಾರಣೆ ಆಗುತ್ತದೆ.

ಬ್ಲೂ, ಗ್ರೇ, ಗ್ರೀನ್‌, ಬ್ಲ್ಯಾಕ್‌ನಂಥ ಹಲವು ಬಣ್ಣಗಳಲ್ಲಿ ಕಪ್ಪು, ಬೂದು ಕಂಗಳ ಮೇಲೆ ಹಸಿರು ಬಣ್ಣದ ಕಾಜಲ್ ಹಚ್ಚಬಹುದು. ಗ್ರೀನ್‌ ಕಂಗಳಿಗೆ ಬದನೆ, ವೈಟ್‌ ಗ್ರೇ, ನೀಲಿ, ಹಸಿರು ಸಹ ಒಪ್ಪುತ್ತದೆ. ನೀಲಿ ಕಂಗಳಿಗೆ ನೀಲಿ ಕಾಜಲ್ ಎಂದೂ ಹಚ್ಚಬೇಡಿ. ಅವಕ್ಕೆ ಕಪ್ಪು, ಗ್ರೇ, ವೈಟ್‌ ಇತ್ಯಾದಿಗಳಿಂದ ಸೊಬಗು ಹೆಚ್ಚುತ್ತದೆ.

ಐ ಬ್ರೋಸ್‌ : ಮುಖದ ಸೌಂದರ್ಯ ಹೆಚ್ಚಿಸಲು ಐ ಬ್ರೋ ಕಲರ್‌ ಬಗ್ಗೆ ವಿಶೇಷ ಗಮನ ಕೊಡಿ. ಐ ಬ್ರೋ ಕಲರ್‌ನಿಂದ ನೀವು ಮುಖವನ್ನು ಆಕರ್ಷಕಗೊಳಿಸಬಹುದು. ಶೇಪ್‌ ನೀಡಲು ಬ್ರೌನ್‌ ಪೆನ್ಸಿಲ್‌ ಬಳಸಿರಿ. ಐ ಬ್ರೋ ಕಲರ್‌ ಆರಿಸುವ ಮೊದಲು ನಿಮ್ಮ ಕೂದಲು ಮತ್ತು ಸ್ಕಿನ್‌ ಟೋನ್‌ ಕಡೆ ಗಮನವಿರಲಿ. ಇವು ನ್ಯಾಚುರಲ್ ಆಗಿರಬೇಕು.

ಕಣ್ಣೆವೆಗಳು : ನೀವು ಐ ಲ್ಯಾಶೆಸ್‌ಗೆ ಮಸ್ಕರಾ ಹಚ್ಚುವಾಗೆಲ್ಲ ಅವನ್ನು ಕರ್ಲ್ ಮಾಡಲು ಮರೆಯದಿರಿ. ಇದು ನಿಮ್ಮ ಕಣ್ಣೆವೆಗಳ ಅಂದ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಮಸ್ಕರಾ ಹಚ್ಚುವಾಗ ಅದು ಹರಡೀತು ಎಂಬ ಭಯ ಕಾಡುತ್ತದೆ. ಹಾಗಾದಾಗ ಈ ಟ್ರಿಕ್‌ ಬಳಸಿರಿ. ಮೇಲು ಭಾಗಕ್ಕೆ ಹಚ್ಚುವಾಗ ದೃಷ್ಟಿ ಕೆಳಗಿರಲಿ. ಪರಸ್ಪರ ಅಂಟಿದ ಲ್ಯಾಶೆಸ್‌ ಮಸ್ಕರಾದ ಲುಕ್ಸ್ ಹಾಳು ಮಾಡುತ್ತವೆ. ಆಗ ಮಸ್ಕರಾವನ್ನು ಕೆಳಗಿನಿಂದ ಮೇಲಕ್ಕೆ ಝಿಗ್‌ಝ್ಯಾಗ್‌ ಸ್ಟೈಲಲ್ಲಿ ಹಚ್ಚಿರಿ. ಜೊತೆಗೆ ಮೊದಲ ಕೋಟ್‌ ಒಣಗಿದ ನಂತರ 2ನೇ ಕೋಟ್‌ ಹಚ್ಚಿರಿ. ಮಸ್ಕರಾ ಒಣಗಿದ ನಂತರ ಐ ಲೈನರ್‌ ಕೋಂಬ್‌ ಬಳಸಿ ಇದಕ್ಕೆ ಕ್ಲೀನ್‌ ಲುಕ್‌ ಕೊಡಿ.

ಕೃತಕ ಐ ಲ್ಯಾಶೆಸ್‌ಗೆ ಮಸ್ಕರಾದ ಒಂದೇ ಕೋಟ್‌ ಸಾಕು. ಅದನ್ನು ಖರೀದಿಸುವಾಗ ಅದು ನಿಮ್ಮ ಲ್ಯಾಶ್‌ ಲೈನ್‌ಗೆ ಬಲು ಹತ್ತಿರವಿರಬೇಕು ಎಂಬುದನ್ನು ಮರೆಯದಿರಿ.

– ಸಿ.ಆರ್‌. ತೇಜಸ್ವಿನಿ

ಸಂದರ್ಭಕ್ಕೆ ತಕ್ಕಂತೆ ಮೇಕಪ್

ನೀವು ಯಾವಾಗಲೂ ಸಂದರ್ಭಕ್ಕೆ ತಕ್ಕಂತೆ ಮೇಕಪ್‌ ಮಾಡಬೇಕು. ಹಗಲಿನ ಪಾರ್ಟಿಗೆ ಮೈಲ್ಡ್ ಕಲರ್‌ ಹಾಗೂ ಈವ್ನಿಂಗ್‌ ಪಾರ್ಟಿಗೆ ಸ್ಮೋಕಿ ಐ, ನ್ಯೂಡ್‌ ಲುಕ್ಸ್, ಗ್ಲಿಟರ್‌ ಐ ಮೇಕಪ್‌ ಆರಿಸಿಕೊಳ್ಳಿ. ಆಫೀಸ್‌ ಲುಕ್ಸ್ ನಲ್ಲಿ ನ್ಯೂಡ್‌ ಕಲರ್‌ನ ಮೇಕಪ್‌ನಿಂದ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಫೌಂಡೇಶನ್‌ ಸಹ ಸಂಜೆಯ ವೆಡ್ಡಿಂಗ್‌ ರಿಸೆಪ್ಶನ್‌ ಇತ್ಯಾದಿಗೆ ಫುಲ್ ಕವರೇಜ್‌ ಬಳಸಿರಿ. ಹಗಲಿನಲ್ಲಿ ಲೈಟ್‌ ಮೂಸ್‌ ನಿಮಗೆ ನ್ಯಾಚುರಲ್ ಲುಕ್ಸ್ ನೀಡುತ್ತದೆ. ವಾಟರ್‌ ಲೈನ್‌ ಮೇಲೆ ನ್ಯೂಡ್‌ ಐ ಪೆನ್ಸಿಲ್‌ನಿಂದ ಕಂಗಳನ್ನು ಹೆಚ್ಚು ಬ್ರೈಟ್‌ ಮಾಡಿ. ಸಂಜೆಯ ಪಾರ್ಟಿಗಳಿಗೆ ಶಿಮರ್‌ ಹೈಲೈಟರ್‌ನ ಬಳಕೆಯಿಂದ ನಿಮ್ಮ ಲುಕ್ಸ್ ನ್ನು ಇಂಪ್ರೂವ್ ಮಾಡಿ. ಮುಖಚಹರೆ ತಿದ್ದಿ ತೀಡಿದಂತಿರಲು ಕಂಟೂರಿಂಗ್‌ ನೆರವಿನಿಂದ ಉತ್ತಮ ಶೇಪ್‌ ನೀಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ