ನಮ್ಮ ಜೀವನವಿಡೀ ಹೃದಯದ ಕಾಯಿಲೆಗೆ ಕೊಲೆಸ್ಟ್ರಾಲ್ ಒಂದೇ ಮುಖ್ಯ ಕಾರಣ ಎಂದು ನಂಬುತ್ತಾ ಬಂದಿದ್ದೇವೆ. ನಮಗೆ ಬರುವ ಎದೆನೋವು ಮತ್ತು ಕೆಲವು ವಿಪರೀತ ಸಂದರ್ಭಗಳಲ್ಲಿ ಹೃದಯಾಘಾತ ಉಂಟು ಮಾಡುವ ಅಪಧಮನಿಗಳಲ್ಲಿ ಅಡಚಣೆಗೆ ಕಾರಣವಾಗುವಲ್ಲಿ ವಿಪರೀತ ಕೊಲೆಸ್ಟ್ರಾಲ್ ಶೇಖರಣೆ ಕಾರಣ ಎಂದು ನಾವು ನಂಬುತ್ತಾ ಬಂದಿದ್ದೇವೆ. ಆದರೆ ವಾಸ್ತವಾಂಶವೆಂದರೆ, ಸತ್ಯ ಬಹಳ ಸಂಕೀರ್ಣವಾದದ್ದು. ಮೊದಲಿಗೆ, ನಿಜಕ್ಕೂ ಕೊಲೆಸ್ಟ್ರಾಲ್ ಎಂದರೇನು ಎಂದು ತಿಳಿಯೋಣವೇ. ದೇಹದಲ್ಲಿ ಸಹಸ್ರಾರು ಕ್ರಿಯೆ/ಕಾರ್ಯಗಳನ್ನು ಮಾಡಲು ಸಹಾಯ ಮಾಡುವ ಯಕೃತ್ತು ಉತ್ಪಾದಿಸುವ ಕೊಬ್ಬಿನಿಂದ ಕೂಡಿದ ಪದಾರ್ಥವೇ ಕೊಲೆಸ್ಟ್ರಾಲ್. ಯಕೃತ್ತು, ಸುಮಾರು 75% ಕೊಲೆಸ್ಟ್ರಾಲ್ ಉತ್ಪಾದಿಸುತ್ತದೆ, ಉಳಿದದ್ದು ನಾವು ತಿನ್ನುವ ಆಹಾರದಿಂದ ಶೇಖರಣೆಯಾಗುತ್ತದೆ. ಕೋಶಗಳ ಪೊರೆ ನಿರ್ಮಿಸಲು ದೇಹ ಕೊಲೆಸ್ಟ್ರಾಲ್‌ನ್ನು ಉಪಯೋಗಿಸಿಕೊಳ್ಳುತ್ತದೆ. ಅದಿಲ್ಲದಿದ್ದರೆ, ನಾವು ಸೂಕ್ತ ಮಟ್ಟದ ಹಾರ್ಮೋನ್‌ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕೊಲೆಸ್ಟ್ರಾಲ್ ಎನ್ನುವುದು ವ್ಯಾಪಕ ಪದವಾಗಿದ್ದು, ಉತ್ತಮ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ನ್ನು ಪ್ರತಿನಿಧಿಸುತ್ತದೆ. ಸಾಮಾನ್ಯವಾಗಿ ಜನ ಕೊಲೆಸ್ಟ್ರಾಲ್ ಪದ ಬಳಸುವಾಗ, ಅದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂಬರ್ಥದಲ್ಲಿಯೇ ಹೇಳುತ್ತಾರೆ. ಈ ಕೆಟ್ಟ ಕೊಲೆಸ್ಟ್ರಾಲ್, ಹೃದಯದ ಕಾಯಿಲೆಗಳಿಗೆ ಕಾರಣವಾಗುವ ಏಕಮಾತ್ರ ಅಂಶ ಎಂದೂ ನಂಬುತ್ತಾರೆ. ಆದರೆ, ಇದು ಸತ್ಯಕ್ಕೆ ಬಹಳ ದೂರವಾದ ಮಾತು.

ಹೃದಯದ ಸಮಸ್ಯೆಗಳಿಗೆ ಅನೇಕ ಕಾರಣಗಳಿವೆ. ಉದಾಹರಣೆಗೆ ಅಡಚಣೆಗಳು, ಉರಿಯೂತ, ಅನಾರೋಗ್ಯಕರ ಜೀವನಶೈಲಿ, ಒತ್ತಡ ಇತ್ಯಾದಿ. ಹೃದಯ ಸಮಸ್ಯೆಗಳಿಗೆ ಕೊಲೆಸ್ಟ್ರಾಲ್ 30% ಕಾರಣವಾಗಬಹುದು. ಆದ್ದರಿಂದ, ಸುಮ್ಮನೆ ಕೊಲೆಸ್ಟ್ರಾಲ್ ನಿಯಂತ್ರಣದ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುವುದನ್ನು ಬಿಟ್ಟು, ಚಿಕ್ಕ ವಯಸ್ಸಿನಿಂದಲೇ ಹೃದಯದ ಸರಿಯಾದ ಆರೈಕೆ ಬಗ್ಗೆ ತಿಳಿದುಕೊಂಡು ಪರಿಹಾರ ಹುಡುಕುವುದು ಸರಿಯಾದ ವಿಧಾನವಾಗುತ್ತದೆ.

ಹೃದಯಕ್ಕೆ ಆರೋಗ್ಯಕರವಾಗಿರುವಂಥ ಜೀವನಶೈಲಿ ಅನುಸರಿಸುವ ಮೂಲಕ ಹೃದಯದ ಕಾಯಿಲೆಗಳನ್ನು ತಡೆಗಟ್ಟಬಹುದು. ನಿಮ್ಮ ಹೃದಯವನ್ನು ರಕ್ಷಿಸಲು ಕೆಳಗೆ ಕೆಲವು ಕಾರ್ಯತಂತ್ರಗಳನ್ನು ನೀಡಲಾಗಿದೆ :

ಹೃದಯಕ್ಕೆ ಆರೋಗ್ಯಕರ ಆಹಾರ

ಆರೋಗ್ಯಕರವಾದ ಆಹಾರ ಸೇವನೆ ಪದ್ಧತಿ ರೂಢಿಸಿಕೊಳ್ಳುವ ಮೂಲಕ ಹೃದಯದ ಕಾಯಿಲೆಗಳನ್ನು ತಡೆಗಟ್ಟಬಹುದು. ಹಣ್ಣು, ತರಕಾರಿ ಮತ್ತು ಇಡೀ ಕಾಳುಗಳಿಂದ ಕೂಡಿದ ಆಹಾರವನ್ನು ನಿಮ್ಮ ನಿತ್ಯದ ಆಹಾರ ಪದ್ಧತಿ ಮಾಡಿಕೊಂಡರೆ ಹೃದಯದ ಸಂರಕ್ಷಣೆ ಸಾಧ್ಯ. ಅಗತ್ಯಕ್ಕಿಂತ ಹೆಚ್ಚು ಉಪ್ಪು ಮತ್ತು ಸಕ್ಕರೆ ಸೇವನೆ ಮಾಡಬೇಡಿ. ಸ್ಯಾಚ್ಯುರೇಟೆಡ್‌ ಕೊಬ್ಬಿನ ಸೇವನೆಯನ್ನೂ  ಮಿತಗೊಳಿಸುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ನಾವು ಕೈಗೊಳ್ಳಬೇಕಾದ ಮೊದಲ ಹೆಜ್ಜೆಯೆಂದರೆ, ಹೃದಯದ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂಥ ಸರಿಯಾದ ಪ್ರಮಾಣದಲ್ಲಿ ಸರಿಯಾದ ಘಟಕಾಂಶಗಳನ್ನು ಹೊಂದಿರುವ ಅಡುಗೆ ಎಣ್ಣೆಯ ಆಯ್ಕೆ. ಉತ್ತಮ ಅಡುಗೆ ಎಣ್ಣೆಯಲ್ಲಿ ಒಮೆಗಾ 6 ಹಾಗೂ ಒಮೆಗಾ 3ರ ನಡುವೆ ಸರಿಯಾದ ಅನುಪಾತವಿರಬೇಕು. ಅದರಲ್ಲಿ ವಿಟಮಿನ್‌ ಎ,  ಡಿ, ಇ ಮತ್ತು ಓರಿಜನೋಲ್‌ ಪೌಷ್ಟಿಕಾಂಶಗಳೂ ಇರಬೇಕು. ಹೃದಯಕ್ಕೆ ಆರೋಗ್ಯಕರವಾದ ಆಹಾರ ಸೇವನೆ ಎಂದರೆ, ಮದ್ಯಪಾನ ಮತ್ತು ತಂಬಾಕು ಸೇವನೆಯ ಮೇಲೂ ಹಿಡಿತವಿರಬೇಕು.

ಆರೋಗ್ಯಪೂರ್ಣ ದೇಹದ ತೂಕ ಕಾಪಾಡುವುದು ಮತ್ತು ನಿಯಮಿತ ವ್ಯಾಯಾಮ ಮಾಡುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ