ಪ್ರತಿಯೊಬ್ಬ ತಾಯಿಯೂ ತನ್ನ ಕಂದನ ತ್ವಚೆ ಸದಾ ನಳನಳಿಸುತ್ತಿರಬೇಕೆಂದೇ ಬಯಸುತ್ತಾಳೆ. ಅಂದಹಾಗೆ ಎಳೆಯ ಮಕ್ಕಳ ತ್ವಚೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅದರ ತ್ವಚೆಯ ಬಗ್ಗೆ ವಿಶೇಷವಾಗಿ ಗಮನಹರಿಸಬೇಕಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಶಿಶುವಿನ ತ್ವಚೆಯ ಕೋಮಲತೆ ಕಾಯ್ದುಕೊಂಡು ಹೋಗುವಂತಹ ಅನೇಕ ಉತ್ಪನ್ನಗಳು ಲಭ್ಯವಿವೆ. ಇಂತಹ ಸಂದರ್ಭದಲ್ಲಿ ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಶಿಶುವಿನ ತ್ವಚೆಯ ಆರ್ದ್ರತೆ ಕಾಪಾಡಿಕೊಂಡು ಹೋಗಬಹುದಾಗಿದೆ.

ಎಷ್ಟೋ ಸಲ ಕೆಲವು ಕೆಮಿಕಲ್ ಯುಕ್ತ ಉತ್ಪನ್ನಗಳು ಶಿಶುವಿನ ತ್ವಚೆಗೆ ಹಾನಿಯುಂಟು ಮಾಡುತ್ತವೆ. ಅವುಗಳ ಬಳಕೆಯಿಂದ ತ್ವಚೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಶಿಶುವಿನ ತ್ವಚೆಯ ತೇವಾಂಶ ಕಾಯ್ದುಕೊಂಡು ಹೋಗಲು ಕೆಳಕಂಡ ಸಂಗತಿಗಳನ್ನು ಗಮನಿಸಿ.

ಶಿಶುವಿಗೆ ಸ್ನಾನ ಮಾಡಿಸುವ ಮುಂಚೆ ಅವಶ್ಯವಾಗಿ ಮಸಾಜ್‌ ಮಾಡಿ. ಮಸಾಜ್‌ ತ್ವಚೆಗೆ ತೇವಾಂಶ ತಂದುಕೊಡುತ್ತದೆ ಮತ್ತು ಶುಷ್ಕತನದಿಂದ ಕಾಪಾಡುತ್ತದೆ. ಮಸಾಜ್‌ ಮಾಡಲು ಆಯ್ದುಕೊಳ್ಳುವ ತೈಲ ನ್ಯಾಚುರಲ್ ಆಯಿಲ್‌ಗಳಾದ ಕೋಕೋನಟ್‌, ಬಾದಾಮಿ ಅಥವಾ ಆಲಿವ್ ‌ಆಯಿಲ್‌ನಿಂದ ಕೂಡಿರಬೇಕು.

ಶಿಶುವಿನ ತ್ವಚೆ ಸೋಂಕುರಹಿತವಾಗಿರಲು ಮಗುವಿನ ದೇಹ ಒರೆಸುವ ಟವೆಲ್‌‌ನ್ನು ಆ್ಯಂಟಿಸೆಪ್ಟಿಕ್‌ ಸೋಪ್‌ನಿಂದ ಸ್ವಚ್ಛಗೊಳಿಸಿ.

ಶಿಶುವಿಗೆ ಸ್ನಾನ ಮಾಡಿಸಲು ಗ್ಲಿಸರಿನ್‌ಯುಕ್ತ ಸೋಪ್‌ನ್ನು ಆಯ್ದುಕೊಳ್ಳಿ. ಏಕೆಂದರೆ ತ್ವಚೆ ಚೆನ್ನಾಗಿ ಸ್ವಚ್ಛವಾಗಬೇಕು ಹಾಗೂ ಅದು ಮಾಯಿಶ್ಚರೈಸ್‌ಯುಕ್ತವಾಗಿಯೂ ಇರಬೇಕು. ಹರ್ಬಲ್ ಯುಕ್ತ ಸೋಪ್‌ ಎಳೆಮಕ್ಕಳಿಗೆ ತುಂಬಾ ಉಪಯುಕ್ತವಾಗಿರುತ್ತದೆ.

ಶಿಶುವಿನ  ತ್ವಚೆಯ ಮೇಲ ಡೈಪರ್‌ನ ರಾಶೆಸ್‌ ಉಂಟಾಗದಿರಲು ಟ್ಯಾಲ್ಕಮ್ ಪೌಡರ್‌ನ್ನು ಬಳಸಿ. ಮಗುವಿಗೆ ಯಾವಾಗಲೂ ಹತ್ತಿಯ ಬಟ್ಟೆಗಳನ್ನೇ ತೊಡಿಸಿ. ನೀವು ಎಂತಹ ಪೌಡರ್‌ನ್ನು ಆಯ್ದುಕೊಳ್ಳಬೇಕೆಂದರೆ, ಅದು ಮಗುವಿನ ಎಳೆಯ ತ್ವಚೆಯನ್ನು ರಕ್ಷಿಸುವ ರೋಮ ಛಿದ್ರವನ್ನು ಮುಚ್ಚುವಂತಿರಬಾರದು. ಏಕೆಂದರೆ ತ್ವಚೆ ನೈಸರ್ಗಿಕವಾಗಿ ಉಸಿರಾಡುತ್ತಿರಬೇಕು.

ಮಗುವಿನ ಕೂದಲನ್ನು ಸ್ವಚ್ಛಗೊಳಿಸಲು ಹಾನಿಕರ ಕೆಮಿಕಲ್ಸ್ ಇಲ್ಲದ ಶ್ಯಾಂಪೂವನ್ನು ಬಳಸಿ. ಈಚೆಗೆ ಮಾರುಕಟ್ಟೆಯಲ್ಲಿ ಸುವಾಸನೆಯುಳ್ಳ ಕೃತಕ ಬಣ್ಣಗಳ ಶ್ಯಾಂಪೂಗಳು ಲಭ್ಯವಿದ್ದು, ಅವು ಹಸುಗೂಸುಗಳ ಎಳೆಯ ತ್ವಚೆಗೆ ಹಾನಿಯನ್ನುಂಟು ಮಾಡುತ್ತವೆ. ಎಳೆಯ ಮಕ್ಕಳಿಗೆ ನೋವು ಟಿಯರ್ಸ್‌ವುಳ್ಳ ಗ್ಲಿಸರಿನ್‌ಯುಕ್ತ ಶ್ಯಾಂಪೂವನ್ನು ಆಯ್ದುಕೊಳ್ಳಿ.

ಶಿಶುವಿನ ತ್ವಚೆಯನ್ನು ಹಾಟ್‌ ರಾಶೆಸ್‌ನಿಂದಲೂ ರಕ್ಷಿಸಿ. ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಮಗುವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ತನಕ ಬಿಸಿಲಿನಲ್ಲಿ ಹೊರಗೆ ಕರೆದುಕೊಂಡು ಹೋಗಬೇಡಿ. ಬೇಸಿಗೆಯಲ್ಲಿ ಮಲಗಿಸುವಾಗ 30 ಎಸ್‌ಪಿಎಫ್‌ನ ಸನ್‌ಸ್ಕ್ರೀನ್‌ನ್ನು ದೇಹದ ಇತರೆಡೆ ಲೇಪಿಸಿ.

ಸ್ಕಿನ್‌ ಕೇರ್‌ ಪ್ರಾಡಕ್ಟ್ ಗಳನ್ನು ಆಯ್ಕೆ ಮಾಡುವಾಗ ಟಿಯರ್‌ಫ್ರೀ, ಪಿ.ಎಚ್‌. ನ್ಯೂಟ್ರಲ್ ಇರುವಂಥಾಗಿರಬೇಕು. ಅವು ಸಿಂಥೆಟಿಕ್‌ಸುವಾಸನೆ ಹಾಗೂ ಪ್ರಖರ ಸುವಾಸನೆ ಹೊಂದಿದ ಆಗಿರಬಾರದು. ಅಂತಹ ಉತ್ಪನ್ನಗಳು ಮೈಲ್ಡ್ ಪ್ರಿಸರ್ವೇಟಿವ್ ‌ಆಗಿರಬೇಕು. ಒಂದು ವೇಳೆ ಮಗುವಿನ ತ್ವಚೆಯ ಮೇವೆ ಯಾವುದಾದರೂ ಉತ್ಪನ್ನದ ಬಳಕೆಯಿಂದ ರಾಶೆಸ್‌ ಉಂಟಾದರೆ ಅದರ ಬಳಕೆ ನಿಲ್ಲಿಸಿಬಿಡಿ.

- ಪಿ. ಸುಜಾತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ