- ಎಸ್‌. ಸಾಧನಾ.

ಮನೆಯಲ್ಲಿ ಅಥವಾ ಬಾಹ್ಯ ವಾತಾವರಣದಲ್ಲಿ ಎಲ್ಲೆಲ್ಲೂ ಮಾಲಿನ್ಯವಿದೆ. ಹೊರಗಿನ ಮಾಲಿನ್ಯದ ಮೇಲೆ ನಮ್ಮ ನಿಯಂತ್ರಣ ಅಷ್ಟಾಗಿ ಇಲ್ಲ. ಆದರೆ ಮನೆಯ ಮಾಲಿನ್ಯದ ಮೇಲೆ ನಾವು ನಿಯಂತ್ರಣ ಹೇರುವುದು ಖಂಡಿತ ಸಾಧ್ಯವಿದೆ. ಚಳಿಗಾಲದಲ್ಲಂತೂ ನಾವು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಏಕೆಂದರೆ ಚಳಿಯ ವಾತಾವರಣದಲ್ಲಿ ಧೂಳು ಮತ್ತು ಹೊಗೆ ಬಹಳ ಎತ್ತರಕ್ಕೆ ಹೋಗವುದು. ಇಡೀ ಮಾಲಿನ್ಯ ನಮ್ಮ ಸುತ್ತಮುತ್ತಲೂ ಗಿರಕಿ ಹೊಡೆಯುತ್ತಿರುತ್ತದೆ.

ಚಳಿ ವಾತಾರಣದಲ್ಲಿ ಮಂಜು ಇರುವ ಕಾರಣದಿಂದ ಕಾರ್ಬನ್‌ ಡೈಆಕ್ಸೈಡ್‌, ಮೀಥೇನ್‌ ಮತ್ತು ನೈಟ್ರಸ್‌ ಆಕ್ಸೈಡ್‌ನಂತಹ ಅಪಾಯಕಾರಿ ಗ್ಯಾಸುಗಳ ಪ್ರಕೋಪ ಮತ್ತಷ್ಟು ಹೆಚ್ಚುತ್ತದೆ.

ಹಾಗೆ ನೋಡಿದರೆ ಮಂಜು ಅಪಾಯಕಾರಿಯೇನೂ ಅಲ್ಲ, ಆದರೆ ಅದರಲ್ಲಿ ಧೂಳು, ಹೊಗೆ ಸೇರಿಕೊಂಡಾಗ ಮಾತ್ರ ಅದು ಅಪಾಯಕಾರಿ. ಹೀಗಾಗಿ ಚಳಿಯ ವಾತಾವರಣದಲ್ಲಿ ಮಾಲಿನ್ಯ ಮತ್ತಷ್ಟು ಹೆಚ್ಚುತ್ತದೆ. ಇದೇ ಕಾರಣದಿಂದ ಈ ಹವಾಮಾನದಲ್ಲಿ ಕಣ್ಣುಗಳಲ್ಲಿ ಉರಿ, ಮೂಗಿನಲ್ಲಿ ತುರಿಕೆ, ಗಂಟಲಿನಲ್ಲಿ ಕಿರಿಕಿರಿ, ಕೆಮ್ಮಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರ ಹೊರತಾಗಿ ಶ್ವಾಸಕೋಶದಲ್ಲಿ ಸೋಂಕಿನ ತಕರಾರುಗಳು ಕೇಳಿಬರುತ್ತವೆ.

ಅಂಕಿಅಂಶಗಳ ಪ್ರಕಾರ, ಪ್ರತಿವರ್ಷ 43 ಲಕ್ಷ ಜನರು ಮನೆಯ ಮಾಲಿನ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಮನೆಯ ಮಾಲಿನ್ಯದಿಂದ ಮುಕ್ತರಾಗುವುದು ಒಂದು ಸವಾಲಿನ ಕೆಲಸವೇ ಸರಿ. ಆದಾಗ್ಯೂ ಅಷ್ಟಿಷ್ಟು ಎಚ್ಚರಿಕೆ ವಹಿಸುವುದರ ಮೂಲಕ ಮನೆಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವುದು ಸಾಧ್ಯವಿದೆ.

ಅದ್ಹೇಗೆ ಎಂಬುದನ್ನು ತಿಳಿದುಕೊಳ್ಳಿ.

- ಧೂಮಪಾನ ಆರೋಗ್ಯಕ್ಕೆ ಹಾನಿಕರ. ಆದರೂ ಜನರು ಧೂಮಪಾನ ಮಾಡುತ್ತಾರೆ. ಸ್ವತಃ ಧೂಮಪಾನ ಮಾಡದವರಿಗಂತೂ ಅದು ಹಾನಿಕರ. ಧೂಮಪಾನಿಗಳ ಆಸುಪಾಸು ಇರುವವರಿಗೂ ಕೂಡ ಅದು ಅಷ್ಟೇ ಹಾನಿಕಾರಕ. ಹೀಗಾಗಿ ಕುಟುಂಬದಲ್ಲಿ ಯಾರಾದರೂ ಧೂಮಪಾನ ಮಾಡುವವರಿದ್ದರೆ, ಹೊಗೆ ಮನೆಯಲ್ಲಿ ಪಸರಿಸದ ಹಾಗೆ ನೋಡಿಕೊಳ್ಳಬೇಕು. ಸಿಗರೇಟು ಬೀಡಿಯ ಹೊಗೆ ವೃದ್ಧರು ಹಾಗೂ ಮಕ್ಕಳಿಗೆ ತುಂಬಾ ಅಪಾಯಕಾರಿ. ಅದರ ಹೊರತಾಗಿ ಮನೆಯಲ್ಲಿ ಯಾರಾದರೂ ಹೃದ್ರೋಗಿಗಳು ಇದ್ದರೆ, ಶ್ವಾಸಕೋಶದ ತೊಂದರೆಯಿಂದ ಬಳಲುವವರಿದ್ದರೆ, ಅವರಿಗೆ ಈ ಅಪರೋಕ್ಷ ಹೊಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

- ಕ್ರಿಮಿನಾಶಕಗಳ ಬಳಕೆಯಲ್ಲಿ ಎಚ್ಚರವಿರಲಿ. ಮನೆಯನ್ನು ನೊಣ, ಜಿರಲೆಯಿಂದ ಮುಕ್ತಗೊಳಿಸಲು ಮಾರುಕಟ್ಟೆಯಲ್ಲಿ ಬಗೆಬಗೆಯ ರಿಪಲೆಂಟ್‌ ಅಗರಬತ್ತಿ ಹಾಗೂ ಲಿಕ್ವಿಡ್‌ ರೂಪದಲ್ಲಿ ಲಭ್ಯವಿವೆ. ಈ ಎಲ್ಲ ಬಗೆಯ ರಿಪಲೆಂಟ್‌ಗಳು ಕ್ರಿಮಿಕೀಟಗಳನ್ನು ನಿವಾರಿಸುವಲ್ಲಿ ನೆರವಾಗುತ್ತವೆ. ಎರಡೂ ಬಗೆಯ ರಿಪಲೆಂಟ್‌ಗಳಲ್ಲಿ ಹಾನಿಕಾರಕ ಕೆಮಿಕಲ್ಸ್ ಗಳಿರುತ್ತವೆ. ಇವುಗಳಿಂದ ವೃದ್ಧರಿಗೆ ಮತ್ತು ಮಕ್ಕಳಿಗೆ ಶ್ವಾಸಕೋಶದ ತೊಂದರೆ, ಕೆಮ್ಮು ಮತ್ತು ಅಲರ್ಜಿಯಂತಹ ತೊಂದರೆ ಕಾಣಿಸಬಹುದು.

- ಮನೆಯಲ್ಲಿ ಕ್ರಿಮಿಕೀಟಗಳು ಇರುವುದರಿಂದಲೂ ಮನೆಯ ಮಾಲಿನ್ಯ ಹೆಚ್ಚುತ್ತದೆ. ಇರುವೆ, ಜಿರಲೆ, ಜೇಡ ಇವು ಮನೆಯಲ್ಲಿ ಮಾಲಿನ್ಯ ಪಸರಿಸುತ್ತವೆ. ಇವುಗಳ ಹೊರತಾಗಿ ನೊಣಗಳು ಹಾಗೂ ಹಲ್ಲಿಗಳಿಂದಾಗಿಯೂ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಪರದೆಗಳು ಮತ್ತು ಕಾರ್ಪೆಟ್‌ಗಳು ಸಾಕಷ್ಟು ಧೂಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹೀಗಾಗಿ ಮೇಲಿಂದ ಮೇಲೆ ಅವುಗಳಲ್ಲಿನ ಧೂಳನ್ನು ಸ್ವಚ್ಛಗೊಳಿಸುತ್ತ ಇರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ