- ಪಿ. ಭಾರತಿ ಹೆಗಡೆ
ಐ ಮೇಕಪ್ ಎಕ್ಸೆರ್‌ಸೈಜ್ ಯುವರ್ ಐಸ್ : ಅತ್ಯಾಕರ್ಷಕ ವ್ಯಕ್ತಿತ್ವಕ್ಕಾಗಿ ಹೆಚ್ಚಿನ ಪಾಲು ಮಹಿಳೆಯರು ಕೇವಲ ಸ್ಟೈಲಿಶ್ ಡ್ರೆಸ್ ಹಾಗೂ ಬ್ಯೂಟಿಫುಲ್ ಮೇಕಪ್‌ನತ್ತ ಮಾತ್ರ ಗಮನಿಸುತ್ತಾರೆ. ಜೊತೆಗೆ ಕಂಗಳಿಗಾಗಿ ವಿಭಿನ್ನ ವಿಶಿಷ್ಟ ಆ್ಯಕ್ಸೆಸರೀಸ್ ಬಳಸುವುದೂ ಅತ್ಯಗತ್ಯ. ಲೇಟೆಸ್ಟ್ ಮೇಕಪ್ ಟ್ರೆಂಡ್ ಕುರಿತು ಹೇಳುವುದಾದರೆ, ಇತ್ತೀಚೆಗೆ ಕಂಗಳಿಗೆ ಆ್ಯಕ್ಸೆಸರೀಸ್ ಬಳಸಿ, ಅದನ್ನು ಡಿಫರೆಂಟ್ ಆಗಿ ತೋರ್ಪಡಿಸುವ ಸ್ಟೈಲ್ ಹೆಚ್ಚುತ್ತಿದೆ. ರೆಪ್ಪೆಗಳಿಗೆ ಕೃತಕ ಟ್ರಿಮ್ಡ್ ಲಾಂಗ್ ಲ್ಯಾಶೆಸ್, ಇನ್ನರ್ ಕಾರ್ನರ್‌ಗೆ ಸ್ವರೋಸ್ಕಿ ಸ್ಟಡ್ ಮತ್ತು ವಾಟರ್ ಲೈನ್ ಕೆಳಗೆ ಸ್ಟೋನ್ ಲೈನ್, ಇತ್ತೀಚೆಗೆ ಟ್ರೆಂಡ್ ಎನಿಸಿದೆ.
ಸ್ಟ್ರಾಂಗ್ ಐ ಬ್ರೋಸ್ : ಮುಖಕ್ಕೆ ಸ್ಟ್ರಾಂಗ್ ಫ್ರೇಂ ನೀಡಲು ಥಿಕ್ ಐ ಬ್ರೋಸ್‌ನ ಫ್ಯಾಷನ್ ಮತ್ತೆ ಮರಳಿದೆ. ಈಗ ಬ್ರಶ್ ಜೆಲ್‌ನಿಂದ ಬೋಲ್ಡ್ ಲುಕ್ ಕ್ರಿಯೇಟ್ ಮಾಡಿ ಹಾಗೂ ಪ್ಲಕರ್‌ಗೆ ಬೈ ಬೈ ಹೇಳಿ.
ಗ್ರಾಫಿಕ್ ಐಸ್ : ಈ ವಿಂಟರ್‌ನ ಮೇಕಪ್ ಟ್ರೆಂಡ್‌ನಲ್ಲಿ ಕಂಗಳ ಆಕಾರ ಜ್ಯಾಮಿತೀಯ ವಿನ್ಯಾಸದಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ. ಡಬಲ್ ವಿಂಗ್ಡ್, ಫಿಶ್‌ಟೇಲ್, ಬೋಲ್ಡ್ ಬ್ಯಾಟ್‌ವಿಂಗ್, ಕ್ಯಾಟಿ ಸ್ಟೈಲ್ ಗಳಿಂದ ಕಂಗಳ ಅಕ್ಕಪಕ್ಕ ಅಬ್‌ಸ್ಟ್ರಾಕ್ಟ್ ಅಲ್ಟ್ರಾಡಿಜಿಟಲ್ ಲುಕ್ಸ್ ಕ್ರಿಯೇಟ್ ಮಾಡಬಹುದು. ಅಂದರೆ..... ನಿಮ್ಮ ಬಿಗ್ ಬೋಲ್ಡ್ ಲೈನರ್ ಎಷ್ಟು ದೊಡ್ಡದೋ ನೀವು ಅಷ್ಟೇ ಟ್ರೆಂಡಿ ಫ್ಯಾಷನೆಬಲ್ ಎಂದರ್ಥ.
ಕಮ್ಬ್ಯಾಕ್ ಆಫ್ ಆರೆಂಜ್ : ಕಳೆದ ವರ್ಷಗಳಲ್ಲಿ ತುಟಿಯ ಮೇಲೆ ಹರಡಿಕೊಳ್ಳುತ್ತಿದ್ದ ಈ ಕೋರಲ್ ಶೇಡ್‌ಗೆ ಕೆಲ ಕಾಲ ಹೆಂಗಸರು ಬಿಡುವು ನೀಡಿದ್ದರು. ಆದರೆ ವಿಂಟರ್ ಫ್ಯಾಷನ್ ವೀಕ್‌ನಿಂದಾಗಿ ಆರೆಂಜ್ ಶೇಡ್‌ಗೆ ಮತ್ತೆ ಕಮ್ಬ್ಯಾಕ್ ಆಗಿದೆ. ಏಪ್ರಿಕಾಟ್, ಕೋರ್, ಮ್ಯಾಂಡರಿನ್‌ನಂಥ ಎಗ್ಝಾಟಿಕ್ ಶೇಡ್ಸ್ ಕಂಗಳ ಮೇಲೆ ತಮ್ಮ ಮೋಡಿ ಬೀರಲಿವೆ.
ನ್ಯೂ ಸ್ಮೋಕ್ ಐಸ್ : ಸ್ಮೋಕಿ ಐಸ್ ಎವರ್ ಗ್ರೀನ್ ಎನಿಸಿದೆ. ನ್ಯೂಡ್ ಬೇಸ್ ಲಿಪ್ಸ್ ಜೊತೆ ನೀವು ಇದನ್ನು ಈಗಲೂ ಬಯಸಿದಾಗ ಕ್ಯಾರಿ ಮಾಡಬಹುದು. ಈ ಸೀಸನ್‌ನಲ್ಲಿ ಶಿಮರ್ಸ್ ಇನ್ ಅನಿಸಿವೆ. ಹೀಗಾಗಿ ಶಿಮರಿ ಸ್ಮೋಕಿ ಐಸ್‌ನ್ನೂ ಕ್ರಿಯೇಟ್ ಮಾಡಬಹುದು. ನೈಟ್ ಪಾರ್ಟಿಗಳಲ್ಲಿ ತುಸು ಹೆಚ್ಚು ಶಿಮರ್ ಆ್ಯಡ್ ಆನ್ ಮಾಡುವುದಕ್ಕಾಗಿ ಸ್ಟಡ್ ಸಹ ಬಳಸಬಹುದು.
ಜೆಟ್ ಬ್ಲ್ಯಾಕ್ : ಇದೀಗ ಜೆಟ್ ಬ್ಲ್ಯಾಕ್ ಸಮಯ. ಕಂಗಳಿಗೆ ಸೆನ್ಶುಯಲ್ ಸೆಕ್ಸೀ ಲುಕ್ಸ್ ನೀಡಲು ಜೆಟ್ ಬ್ಲ್ಯಾಕ್ ಶೇಡ್ ಬಳಸಲಾಗುತ್ತದೆ. ರಾತ್ರಿ ಹೊತ್ತು ಕಾಡಿಗೆ ಸ್ಮಜ್‌ಗೊಳಿಸಿ ಸಾಕಷ್ಟು ಟ್ರೆಂಡಿ ಲುಕ್ ಸಹ ಕೊಡಬಹುದು.
ಫೇಸ್ ಮೇಕಪ್ 2 ಡೀಪ್ ಟ್ಯಾನ್ : ಗೌರವರ್ಣ ಹೊಂದಬೇಕೆಂದು ಬಯಸುತ್ತಿದ್ದ ಮಹಿಳೆಯರು, ಈಗ ಟ್ಯಾನ್ಡ್ ಲುಕ್ ಬಯಸುತ್ತಿದ್ದಾರೆ. ಹೀಗಾಗಿ ಈಗ ಬ್ಲಶ್ ಆನ್‌ಗೆ ಬದಲಾಗಿ ಬ್ರಾಂಝರ್ ಬಳಸಬಹುದು. ಬ್ರಾಂಝರ್ ಬಳಕೆಯಿಂದ ಮುಖ ಕಳೆಕಳೆಯಾಗಿ ಹೊಳೆಯುತ್ತದೆ. ಜೊತೆಗೆ ಮುಖಕ್ಕೆ ಸನ್‌ಕಿಸ್ಡ್ ಲುಕ್ ಸಿಗುತ್ತದೆ.