ಹುಡುಗಿಯೇ ಆಗಿರಬಹುದು ಅಥವಾ ಹುಡುಗ, ಇಬ್ಬರಿಗೂ ಮದುವೆಯ ದಿನ ವಿಶೇಷವಾಗಿರುತ್ತದೆ. ಆ ದಿನದಂದು ಅವರಿಬ್ಬರೂ ತಾವು ಎಲ್ಲರಿಗಿಂತ ಸುಂದರವಾಗಿ ಕಾಣಲು ಇಚ್ಛಿಸುತ್ತಾರೆ. ತಮ್ಮ ವ್ಯಕ್ತಿತ್ವವನ್ನು ಆಕರ್ಷಕಗೊಳಿಸಲು ಯತ್ನಿಸುತ್ತಾರೆ. ಇಂದು ವೈದ್ಯ ವಿಜ್ಞಾನದಲ್ಲಿ ಅದೆಷ್ಟೊ ಚಿಕಿತ್ಸೆಗಳು ಲಭ್ಯ ಇವೆ, ಅವು ನಿಮ್ಮನ್ನು ಈಗಿರುವುದಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ಸುಂದರವಾಗಿ ಕಾಣಲು ನೆರವಾಗುತ್ತವೆ. ಆದರೆ ಯಾವುದೇ ಒಂದು ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚೆ ನಿಮ್ಮ ಬಳಿ ಮೊದಲು ಎಷ್ಟು ದಿನ ಸಮಯ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ಮದುವೆಗೂ 5-6 ತಿಂಗಳ ಪೂರ್ವದಲ್ಲಿಯೇ ಕೆಲವು ವಿಶೇಷ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದು.

ಇನ್‌ವೇಸಿವ್‌ ಸರ್ಜಿಕಲ್ ಟ್ರೀಟ್‌ ಮೆಂಟ್ಸ್

ಮದುವೆಗೂ ಕೆಲವು ತಿಂಗಳು ಮುಂಚೆ ನೀವು ಕೆಳಕಂಡ ಕೆಲವು ಟ್ರೀಟ್‌ ಮೆಂಟ್‌ಗಳ ಬಗ್ಗೆ ಯೋಚಿಸಬಹುದು. ಉದಾಹರಣೆಗೆ, ಮೂಗಿನ ಆಕಾರ ಬದಲಿಸಲು ರೈನೋಪ್ಲಾಸ್ಟಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಮೂಗು ದೊಡ್ಡದಾಗಿದ್ದರೆ ಅದನ್ನು ಚಿಕ್ಕದಾಗಿ ಮಾಡಬಹುದು. ಚಿಕ್ಕದಿದ್ದರೆ ದೊಡ್ಡದು ಮಾಡಬಹುದು. ಮೂಗು ಚಪ್ಪಟೆಯಾಗಿದ್ದರೆ ಅದನ್ನು ಚೂಪಾಗಿ ಮಾಡಬಹುದು.

ಅಂದಹಾಗೆ ಸುಂದರ ಶೇಪ್‌ ಬರಲು ಸುಮಾರು 3-4 ತಿಂಗಳ ಸಮಯ ತಗಲಬಹುದು. ಈ ತೆರನಾದ ಆಪರೇಶನ್‌ಗಳಿಗೆ 1 ರಿಂದ 2 ಗಂಟೆ ಸಮಯ ಬೇಕಾಗಬಹುದು. ಖರ್ಚು 35,000 ರೂ. ಗಳಿಂದ ಹಿಡಿದು 1 ಲಕ್ಷ ರೂ.ತನಕ ಆಗಬಹುದು.

ಬ್ರೆಸ್ಟ್ ಆಗ್ಮೆಂಟೇಶನ್

bridal-beauty

ಬಹಳಷ್ಟು ಮಹಿಳೆಯರ ತಕರಾರು ಏನೆಂದರೆ, ತಮ್ಮ ಸ್ತನಗಳ ಗಾತ್ರ ಚಿಕ್ಕದು ಅಥವಾ ಅವುಗಳ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದಾಗಿರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಬ್ರೆಸ್ಟ್ ಆಗ್ಮೆಂಟೇಶನ್‌ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಸಿಲಿಕಾನ್‌ ಇಂಪ್ಲಾಂಟ್ಸ್ ಅಳವಡಿಸಿಕೊಳ್ಳಬಹುದು.

ಈ ಶಸ್ತ್ರಚಿಕಿತ್ಸೆಗೆ 2-3 ಗಂಟೆ ಸಮಯ ಸಾಕು. ಖರ್ಚು 1 ರಿಂದ 2 ಲಕ್ಷ ರೂ. ಆಗುತ್ತದೆ. ಕೆಲವು ತಿಂಗಳುಗಳ ತನಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದಹಾಗೆ ಈ ಶಸ್ತ್ರಚಿಕಿತ್ಸೆಯನ್ನು ಮದುವೆಗೂ 6-7 ತಿಂಗಳುಗಳ ಮುಂಚೆಯೇ ಮಾಡಿಸಿಕೊಳ್ಳಬೇಕು.

ಕೆಲವು ಪುರುಷರಿಗೆ `ಗೈನಿಕೊಮಾಸ್ಟಿಯಾ' ಸಮಸ್ಯೆ ಮುಜುಗರಕ್ಕೆ ಕಾರಣವಾಗುತ್ತದೆ. ಅಂಥವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರ ಮೂಲಕ ನಿರಾಳತೆ ಪಡೆದುಕೊಳ್ಳಬಹುದು. ಲೋಕಲ್ ಅನಸ್ತೇಶಿಯಾದಿಂದ ಉಬ್ಬಿರುವ ಎದೆ ಭಾಗವನ್ನು ಕಡಿಮೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಕೆಲವು ದಿನಗಳ ಕಾಲ ಯಾವುದೇ ವ್ಯಾಯಾಮ ಮಾಡದಿರಲು ಸಲಹೆ ನೀಡಲಾಗುತ್ತದೆ. ಅದೇ ರೀತಿ ಚೀಕ್‌ ಬೋನ್ಸ್ ಗೆ ವಾಲ್ಯೂಮ್ ಕೊಡಲು ಚೀಕ್‌ ಆಗ್ಮೆಂಟೇಶನ್‌ ಮಾಡಿಸಬಹುದು. ಇದಕ್ಕೆ 25,000 ರೂ.ಗಳಿಂದ 1 ಲಕ್ಷ ರೂ.ತನಕ ಖರ್ಚು ಬರಬಹುದು. ಮದುವೆಗೂ 3-4 ತಿಂಗಳ ಮುಂಚೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು.

ತ್ವಚೆಗೆ ಸುಂದರ ರೂಪ

ತ್ವಚೆಗೆ ಮೆರುಗು ಕೊಡಲು ಡೀಪ್‌ ಮೆಡಿಕಲ್ ಸ್ಕಾರ್‌ ರಿಮೂವ್ ‌ಟ್ರೀಟ್‌ ಮೆಂಟ್‌ಗಳಾದ ಸರ್ಜಿಕಲ್ ಡರ್ಮಾಬ್ರೇಶನ್‌ ಮಾಡಿಸಲು ಸಲಹೆ ನೀಡಲಾಗುತ್ತದೆ. ಡರ್ಮಾಬ್ರೇಶನ್‌ ಮೃತ ಚರ್ಮದ ಪದರುಗಳನ್ನು ನಿವಾರಿಸುತ್ತದೆ. ಅದರಿಂದ ಮಗುವಿನಂತಹ ಕೋಮಲ ತ್ವಚೆ ಮತ್ತು ಕಲೆರಹಿತ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. ತ್ವಚೆಯ ಪಸರಿಸುವ ಕಾರಣದಿಂದಾಗಿ ಸ್ಟ್ರೆಚ್‌ ಮಾರ್ಕ್ಸ್ ನ ಸಮಸ್ಯೆಯನ್ನು ಸರ್ಜಿಕಲ್ ಡರ್ಮಾಬ್ರೇಶನ್‌ನ ನೆರವಿನಿಂದ ನೀಗಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ