ಬಣ್ಣ ರಹಿತ, ವಾಸನೆ ರಹಿತ ಹಾಗೂ ರುಚಿ ರಹಿತ ನೀರೇ ಜೀವನ ಎಂದು ಹೇಳಲಾಗುತ್ತದೆ. ಇದು 100ಕ್ಕೆ 100ರಷ್ಟು ಸತ್ಯ. ಆಹಾರವಿಲ್ಲದೆ ಮನುಷ್ಯ ಅನೇಕ ದಿನಗಳ ಕಾಲ ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನ ಇರಲು ಆಗುವುದಿಲ್ಲ. ನೀರು ಕೇವಲ ದಾಹ ಹಿಂಗಿಸಲು ಅಷ್ಟೇ ಅಲ್ಲ, ಆಹಾರ ತಯಾರಿಸಲು, ಮನೆಯನ್ನು ಸ್ವಚ್ಛಗೊಳಿಸಲು, ಸ್ನಾನ ಮಾಡಲು, ಉದ್ಯೋಗ ವಹಿವಾಟು ನಡೆಸಲು ಕೃಷಿಗೆ ಅತ್ಯವಶ್ಯ.

ಶುದ್ಧ ನೀರು ಅತ್ಯವಶ್ಯ

ಕೇವಲ ನೀರು ಇದ್ದರಷ್ಟೇ ಸಾಲದು, ಅದು ಶುದ್ಧ ಆಗಿರಬೇಕು ಹಾಗೂ ಆರೋಗ್ಯಕರ ಆಗಿರಬೇಕಾದುದು ಅತ್ಯವಶ್ಯ. ನೀರಿನಲ್ಲಿ ಹಲವು ಬಗೆಯ ಹಾನಿಕರ ಬ್ಯಾಕ್ಟೀರಿಯಾಗಳಿರುತ್ತವೆ. ಅದರ ಜೊತೆಗೆ ನೀರಿನಲ್ಲಿ ಕರಗಬಲ್ಲ ಘಟಕಗಳು, ಅಶುದ್ಧ ಘನ ಪದಾರ್ಥಗಳು ಇರಬಹುದಾಗಿದೆ. ಈ ಬಗೆಯ ಅಶುದ್ಧ ನೀರು ನಮ್ಮನ್ನು ಅನಾರೋಗ್ಯಕ್ಕೆ ತುತ್ತಾಗಿಸಬಹುದು. ವಾಂತಿ, ಭೇದಿ,  ಟೈಫಾಯಿಡ್‌, ಪೋಲಿಯೊ, ಕಾಮಾಲೆಯಂತಹ ರೋಗಗಳಿಗೆ ನಮ್ಮನ್ನು ತುತ್ತಾಗಿಸಬಹುದು. ಕಲುಷಿತ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮ ಸಂಬಂಧಿ ರೋಗ ಉಂಟಾಗಬಹುದು.

ಟಿಡಿಎಸ್ಮಟ್ಟ

ನೀರಿನಲ್ಲಿ ಮಿಶ್ರಿತ ಘನ ಪದಾರ್ಥ ಅಂದರೆ ಟಿಡಿಎಸ್‌ ಲೆವೆಲ್ ‌ಬಗ್ಗೆ ಗಮನಹರಿಸುವುದು ಅತ್ಯವಶ್ಯಕ. ನೀರಿನಲ್ಲಿ ಹಲವು ಬಗೆಯ ಖನಿಜಗಳು ಅಂದರೆ ಮೆಗ್ನಿಶೀಯಂ, ಕ್ಯಾಲ್ಶಿಯಂ, ಸೋಡಿಯಂ ಮುಂತಾದವು ಮಿಶ್ರಣಗೊಂಡಿರುತ್ತವೆ. ಇದರ ಹೊರತಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಪಾಯಕಾರಿ ಖನಿಜ ಪದಾರ್ಥಗಳು ಕೂಡ ಮಿಶ್ರಣಗೊಂಡಿರಬಹುದಾಗಿದೆ. ಉದಾಹರಣೆಗಾಗಿ ಆರ್ಸೆನಿಕ್‌ ಫ್ಲೋರೈಡ್‌ ಮತ್ತು ನೈಟ್ರೇಟ್‌, ಸಾಮಾನ್ಯವಾಗಿ ಕುಡಿಯುವ ನೀರಿನಲ್ಲಿ ಟಿಡಿಎಸ್‌ ಲೆವೆಲ್ 2-3 ‌ಎಂ.ಜಿ. (ಪ್ರತಿ ಲೀಟರ್‌ಗೆ) ಗಿಂತ ಹೆಚ್ಚಿಗೆ ಇರಬಾರದು. ವಿಶ್ವ ಆರೋಗ್ಯ ಸಂಸ್ಥೆಯು 100-150ರ ಮಟ್ಟವನ್ನು ಉತ್ಕೃಷ್ಟ ಎಂದು ಹೇಳಿದೆ.

ನೀರನ್ನು ಶುದ್ಧಗೊಳಿಸುವ ವಿಧಾನಗಳು

ನೀರನ್ನು ಶುದ್ಧಗೊಳಿಸುವ ಎಲ್ಲಕ್ಕೂ ಹಳೆಯ ಹಾಗೂ ಸುಲಭ ವಿಧಾನವೆಂದರೆ ಬಟ್ಟೆಯಿಂದ ಸೋಸುವುದು. ನೀರಿನಲ್ಲಿರುವ ಘನ ಪದಾರ್ಥಗಳು ಮಾತ್ರ ಮೇಲೆ ಉಳಿಯುತ್ತವೆ. ನೀರಿನಲ್ಲಿ ಕರಗಿರುವ ಅಶುದ್ಧ ಘಟಕಗಳು ಖಂಡಿತಾ ನಿವಾರಣೆಯಾಗಿರುವುದಿಲ್ಲ.

ನೀರನ್ನು ಶುದ್ಧಗೊಳಿಸುವ ಎರಡನೇ ವಿಧಾನ ಎಂದರೆ ಅದನ್ನು ಕುದಿಸುವುದು. ನೀರನ್ನು 15-20 ನಿಮಿಷಗಳ ಕಾಲ ಕುದಿಸಲಾಗುತ್ತದೆ. ಇದರಿಂದ ಅದರಲ್ಲಿನ ಹಾನಿಕಾರಕ ರೋಗಾಣುಗಳು ನಿವಾರಣೆಯಾಗುತ್ತವೆ.

ರಾಸಾಯನಿಕಗಳನ್ನು ಬಳಸಿಯೂ ಕೂಡ ನೀರನ್ನು ಶುದ್ಧಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಇದಕ್ಕಾಗಿ ಕ್ಲೋರಿನ್‌ ಮತ್ತು ಅಯೋಡಿನ್‌ನ್ನು ಉಪಯೋಗಿಸಲಾಗುತ್ತದೆ. ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಿವಾರಿಸಲಾಗುತ್ತದೆ. ಆದರೆ ಈ ನೀರನ್ನು ಪರಿಪೂರ್ಣ ಶುದ್ಧೀಕರಣ ಹಾಗೂ ಆರೋಗ್ಯಕರ ಎಂದು ಹೇಳಲಾಗದು.

ಅನೇಕ ಹಂತದ ಶುದ್ಧೀಕರಣ ಪ್ರಕ್ರಿಯೆ ಮುಖಾಂತರ ನೀರನ್ನು ಶುದ್ಧೀಕರಣಗೊಳಿಸಬಹುದಾಗಿದೆ. ಆದರೆ ಇದರಲ್ಲಿ ವಿದ್ಯುತ್‌ನ್ನು ಬಳಸದೆಯೂ ನೀರನ್ನು ಶುದ್ಧಗೊಳಿಸಬಹುದಾಗಿದೆ. ಪ್ರೀ ಫಿಲ್ಟರ್‌ ಪ್ಯೂರಿಫಿಕೇಶನ್‌, ಆ್ಯಕ್ವಿವೇಟೆಡ್‌ ಕಾರ್ಬನ್‌ ಪ್ಯೂರಿಫಿಕೇಶನ್ ಬ್ಯಾಕ್ಟೀರಿಯಾವನ್ನು ಕೊನೆಗೊಳಿಸಿ ಕೊನೆಯಲ್ಲಿ ನೀರಿನ ರುಚಿಯನ್ನು ಕೂಡ ಹೆಚ್ಚಿಸುತ್ತದೆ.

ಆರ್‌.. ಸಿಸ್ಟಮ್

ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ನೀರು ಶುದ್ಧೀಕರಣಗೊಳಿಸುವ ಹೊಸ ತಂತ್ರಜ್ಞಾನ ಬಂದಿದೆ. ಸ್ವಲ್ಪ ದುಬಾರಿಯಾಗಿರುವುದರ ಹೊರತಾಗಿ ಜನರಿಗೆ ಇದು ಬಹಳ ಹಿಡಿಸುತ್ತದೆ. ಇದರಿಂದ ನೀರು ಪರಿಪೂರ್ಣ ಶುದ್ಧಗೊಳ್ಳುತ್ತದೆ. ಆರ್‌.ಓ. ಎಂದರೆ ರಿವರ್ಸ್‌ ಆಸ್ಮಾಸಿಸ್‌ ಪ್ರೊಸೆಸ್‌ನಡಿ ನೀರನ್ನು ತೀವ್ರ ಒತ್ತಡದನ್ವಯ ಶುದ್ಧೀಕರಣಗೊಳಿಸಲಾಗುತ್ತದೆ. ಇದು ಸಾಕಷ್ಟು ಪ್ರಭಾವಶಾಲಿ ವಿಧಾನವಾಗಿದೆ.

ಆರ್‌.ಓ. ಸಿಸ್ಟಮ್ ನನ್ವಯ ಮುಖ್ಯವಾಗಿ 5 ಹಂತದಲ್ಲಿ ಶುದ್ಧೀಕರಣಗೊಳಿಸಲಾಗುತ್ತದೆ. ನೀರಿನಲ್ಲಿರುವ ಘನ ಮತ್ತು ವಿಲೀನಕಾರಣ ಕೊಳೆ ಮತ್ತು ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸಿ ಅದನ್ನು ಸಿಹಿನೀರನ್ನಾಗಿ ಪರಿವರ್ತಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಟಿಡಿಎಸ್‌ ಒಂದು ವಿಶೇಷ ಮಟ್ಟಕ್ಕಿಂತ ಹೆಚ್ಚುತ್ತದೆ. ಹಾಗಾಗಿ ಆರ್‌.ಓ. ಒಂದು ಅತ್ಯುತ್ತಮ ಉಪಾಯ.

ಆದರೆ ಮಾರುಕಟ್ಟೆಯಲ್ಲಿರುವ ಎಲ್ಲ ಆರ್‌.ಓ. ಪ್ಯೂರಿಫೈರ್‌ಗಳೂ ಆರೋಗ್ಯದ ದೃಷ್ಟಿಯಿಂದ ಸೂಕ್ತವಾಗಿರುವುದಿಲ್ಲ. ನೀರಿನಲ್ಲಿ ಟಿಡಿಎಸ್‌ನ ಪ್ರಮಾಣ ಮೊದಲಿಗಿಂತ ಕಡಿಮೆ ಇದ್ದರೂ ಆರ್‌.ಓ. ಬಳಕೆಯಿಂದ ಟಿಡಿಎಸ್‌ನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಆರ್‌.ಓ. ಕುಡಿಯುವ ನೀರಿನಿಂದ ಅಗತ್ಯ ಪೋಷಕಾಂಶಗಳನ್ನು ಹೊರಹಾಕುತ್ತದೆ. ಇದರ ದೀರ್ಘಕಾಲದ ಬಳಕೆಯಿಂದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುತ್ತದೆ.

ಮಾರುಕಟ್ಟೆಯಲ್ಲಿ ಈಗ ಟಿ.ಡಿ.ಎಸ್‌ ಕಂಟ್ರೋಲ್ ತಂತ್ರಜ್ಞಾನದ ಪ್ಯೂರಿಫೈರ್‌ಗಳು ಲಭ್ಯವಿದೆ. ಇದರ ಪ್ರಯೋಗದಿಂದ ಟಿಡಿಎಸ್ ಪ್ರಮಾಣ ಸಮತೋಲನದಲ್ಲಿರುತ್ತದೆ.

ಈ ರೀತಿಯ ಪ್ಯೂರಿಫೈರ್‌ಗಳಲ್ಲಿ ಓ.ಆರ್‌. ಪಿ.ಎಚ್‌ ತಂತ್ರಜ್ಞಾನದ ಬಳಕೆಯಾಗುತ್ತದೆ. ಅದರಲ್ಲಿ ಅಗತ್ಯ ಮಿನರಲ್ಸ್ ನೀರಿನಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಈ ತಂತ್ರಜ್ಞಾನದಿಂದ ನೀರಿನ ಓ.ಆರ್‌.ಪಿ. ಮತ್ತು ಪಿ.ಎಚ್‌ ಮಟ್ಟ ಕೂಡ ಸಾಮಾನ್ಯಗೊಳ್ಳುತ್ತದೆ.

ಅತ್ಯುತ್ತಮ ಓ.ಆರ್‌.ಪಿ ಮಾಡಿ,

ಆರ್‌. ನೀರು ಕುಡಿಯುವುದರ ಲಾಭಗಳು

ಓ.ಆರ್‌.ಪಿ.ಎಚ್‌ ತಂತ್ರಜ್ಞಾನ ಉಪಯೋಗಿಸುವುದರೊಂದಿಗೆ ನೀರು 100% ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರವಾಗುತ್ತದೆ.

ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ.

ದೇಹದ ಚರ್ಮ ಮತ್ತಷ್ಟು ಹೊಳಪು ಪಡೆದುಕೊಳ್ಳುತ್ತದೆ.

ದೇಹದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅತ್ಯುತ್ತಮ ರುಚಿ

ಅತ್ಯುತ್ತಮ ನೀರು ಆಗಿರುವ ಕಾರಣದಿಂದ ಕ್ಯಾನ್ಸರ್‌, ರಕ್ತದೊತ್ತಡ, ಹೃದಯದ ಸಮಸ್ಯೆಗಳು ತ್ವಚೆಯ ರೋಗಗಳಂತಹ ಸಮಸ್ಯೆಗಳಿಂದ ರಕ್ಷಣೆ ದೊರೆಯುತ್ತದೆ ಮತ್ತು ಎನರ್ಜಿಯ ಮಟ್ಟ ಸಾಮಾನ್ಯವಾಗಿರುತ್ತದೆ.

ಈಗ ಭಾರತದಲ್ಲಿ ಹೊಸ ತಂತ್ರಜ್ಞಾನ ಬಂದಿದೆ ಮತ್ತು ಬಹಳಷ್ಟು ಕಂಪನಿಗಳು ಈ ಬಗೆಯ ಆರ್‌.ಓ.ಗಳನ್ನು ನಿರ್ಮಾಣ ಮಾಡುವಲ್ಲಿ ನಿರತವಾಗಿವೆ. ಅವು ನೀರಿನಲ್ಲಿ ಅಗತ್ಯ ಮಿನರಲ್ಸ್ ಸೇರ್ಪಡೆಗೊಳಿಸುತ್ತವೆ ಹಾಗೂ ಪಿ.ಎಚ್‌ ಲೆವೆಲ್‌ನ್ನು ಕಾಯ್ದುಕೊಂಡು ಹೋಗುತ್ತವೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ