ಓಟ್ ಮೀಲ್ ಪೋಷಕಾಂಶವುಳ್ಳ ಆಹಾರವಾಗಿದ್ದು, ಅದರಲ್ಲಿ ಪ್ರೋಟೀನ್, ನಾರಿನಂಶ ಮತ್ತು ಬೀಟಾ ಗ್ಲೂಕೋಸ್ ಅಂಶ ಹೇರಳವಾಗಿರುತ್ತದೆ. ಇದು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ. ಜೊತೆಗೆ ರುಚಿಕರವಾಗಿಯೂ ಇರುತ್ತದೆ. ಓಟ್ ಮೀಲ್ ಒಂದು ಬಗೆಯ ಜವೆಗೋಧಿಯ ಉತ್ಪನ್ನವಾಗಿದ್ದು, ಮಾರುಕಟ್ಟೆಯಲ್ಲಿ ಹಲವು ರೀತಿಯಲ್ಲಿ ಲಭಿಸುತ್ತದೆ.
ಓಟ್ಸ್ ಪ್ರಕಾರಗಳು
ಓಟ್ಸ್ ಗ್ರೋಟ್ಸ್ : ಗ್ರೋಟ್ಸ್ ಸಿದ್ಧಪಡಿಸಲು ಓಟ್ಸ್ ನ ಹೊರಭಾಗದ ಸಿಪ್ಪೆಯನ್ನು ನಿವಾರಿಸಲಾಗುತ್ತದೆ. ಗ್ರೋಟ್ಸ್ ನ್ನು ನೆನೆಸಿಟ್ಟು ಇಲ್ಲಿ ಬೇಯಿಸಿ ಕೂಡ ಸೇವಿಸಬಹುದು.
ಸ್ಟೀಲ್ ಕಟ್ ಓಟ್ಸ್ : ಇದನ್ನು ಐರಿಶ್ ಅಥವಾ ಸ್ಕಾಚ್ ಓಟ್ಸ್ ಎಂದೂ ಕರೆಯಲಾಗುತ್ತದೆ. ಗ್ರೋಟ್ಸ್ ಗೆ ಹೋಲಿಸಿದರೆ ಇದು ಬಹುಬೇಗ ಬೇಯುತ್ತದೆ ಹಾಗೂ ಅಗಿಯಲು ಸುಲಭವಾಗುತ್ತದೆ.
ಓಲ್ಡ್ ಫ್ಯಾಷನ್ಡ್ ಓಟ್ಸ್ : ಇದನ್ನು `ರೋಲ್ಡ್ ಓಟ್ಸ್' ಎಂದೂ ಹೇಳುತ್ತಾರೆ. ಇದರಲ್ಲಿ ಕಾಳುಗಳನ್ನು ತರಿ ಮಾಡಿಕೊಳ್ಳಲಾಗುತ್ತದೆ. ಬೇಗನೇ ಬೇಯಬೇಕೆಂದು ಹೀಗೆ ಮಾಡಲಾಗುತ್ತದೆ. ಬೆಂದ ಬಳಿಕ ಅವು ಸ್ವಲ್ಪ ಗಟ್ಟಿಯಾಗಿಯೇ ಉಳಿಯುತ್ತವೆ.
ಕ್ವಿಕ್ ಓಟ್ಸ್ : ಇನ್ನು ಕೂಡ ರೋಲ್ ಮಾಡಲಾಗುತ್ತದೆ. ಆದರೆ ಇವು ಓಲ್ಡ್ ಫ್ಯಾಷನ್ಡ್ ಓಟ್ಸ್ ಗೆ ಹೋಲಿಸಿದರೆ ಹೆಚ್ಚು ತೆಳ್ಳಗಿರುತ್ತವೆ. ಕೇವಲ ಒಂದೇ ನಿಮಿಷದಲ್ಲಿ ಬೇಯುತ್ತವೆ. ಬೆಂದ ಬಳಿಕ ಮೆತ್ತಗಾಗುತ್ತವೆ.
ಇನ್‌ಸ್ಟೆಂಟ್ ಓಟ್ ಮೀಲ್ : ಇವು ತೆಳ್ಳಗೆ ಹಾಗೂ ಮೊದಲೇ ಬೆಂದ ಫ್ಲ್ಯಾಕ್ಸ್ ಆಗಿರುತ್ತವೆ. ಅವನ್ನು ತಿನ್ನುವ ಮುಂಚೆ ಯಾವುದಾದರೂ ಬಿಸಿ ಪೇಯದಲ್ಲಿ ಸೇರಿಸಲಾಗುತ್ತದೆ.
ಓಟ್ಸ್ ನಿಂದಾಗುವ ಲಾಭಗಳು
ಆ್ಯಂಟಿ ಆಕ್ಸಿಡೆಂಟ್‌ನ ಖಜಾನೆ : ಓಟ್ ಮೀಲ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅದು ದೇಹವನ್ನು ಆರೋಗ್ಯದಿಂದಿಡುತ್ತದೆ.
ಕಾರ್ಡಿಯೋ ವ್ಯಾಸ್ಕ್ಯುಲರ್ ರೋಗಗಳಿಂದ ರಕ್ಷಣೆ : ಇದರಲ್ಲಿ ಕ್ಯಾಲ್ಶಿಯಂ ಮತ್ತು ಪೊಟ್ಯಾಶಿಯಂ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.
ರಕ್ತ ಶರ್ಕರ ನಿಯಂತ್ರಣ : ಓಟ್ ಮೀಲ್‌ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಇದರಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಹೀಗಾಗಿ ಇದು ರಕ್ತ ಶರ್ಕರದ ಪ್ರಮಾಣ ನಿಯಂತ್ರಿಸಲು ಅತ್ಯಂತ ಲಾಭಕರ.
ಕ್ಯಾನ್ಸರ್‌ನ ಸಾಧ್ಯತೆ ಕಡಿಮೆಗೊಳಿಸುತ್ತದೆ : ಇದರಲ್ಲಿರುವ ಲಿಗನೆನ್ ಹೃದ್ರೋಗಗಳ ಹೊರತಾಗಿ ಹಾರ್ಮೋನ್‌ಗೆ ಸಂಬಂಧಪಟ್ಟ ಕ್ಯಾನ್ಸರಿನ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
ಅತಿ ರಕ್ತದೊತ್ತಡನ್ನು ಕಡಿಮೆಗೊಳಿಸುತ್ತದೆ : ಒತ್ತಡವನ್ನುಂಟು ಮಾಡುವ ಹಾರ್ಮೋನ್‌ಗಳ ಮಟ್ಟ ಕಡಿಮೆಗೊಳಿಸುತ್ತದೆ ಹಾಗೂ ಸೆರೊಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಕೋಲನ್ ಕ್ಯಾನ್ಸರ್‌ನ ಸಾಧ್ಯತೆ ಕಡಿಮೆ : ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ಸೇವನೆಯಿಂದ ಕೋಲನ್ ಕ್ಯಾನ್ಸರ್‌ನ ಸಾಧ್ಯತೆ ಕಡಿಮೆಯಾಗುತ್ತದೆ. ಆಹಾರದಲ್ಲಿ ನಾರಿನಂಶ ಇದ್ದರೆ ಆಹಾರ, ತ್ಯಾಜ್ಯ ಸಾಗಾಣಿಕೆ ಸುಲಭವಾಗುತ್ತದೆ.
ಸಾಲ್ಯೂಬ್ ಫೈಬರ್ ನೀರಿನಲ್ಲಿ ವಿಲೀನವಾಗುತ್ತದೆ. ಅದರಿಂದ ಹೊಟ್ಟೆ ಬಹಳ ಹೊತ್ತಿನತನಕ ತುಂಬಿದ ಅನುಭವ ಇರುತ್ತದೆ. ಇನ್‌ಸಾಲ್ಯೂಬ್ ನೀರಿನಲ್ಲಿ ವಿಲೀನವಾಗುವುದಿಲ್ಲ. ಹೀಗಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದೇ ಕಾರಣದಿಂದ ನಾರಿನಂಶಯುಕ್ತ ಓಟ್ಸ್ ಕೋಲೋನ್ ಅಂದರೆ ಮಾಶಯವನ್ನು ಆರೋಗ್ಯದಿಂದಿಡುತ್ತದೆ.
ಮೂಳೆಗಳಿಗೆ ಉಪಯುಕ್ತ : ಓಟ್ಸ್ ನಲ್ಲಿ ಅತ್ಯವಶ್ಯ ವಿಟಮಿನ್ ಮತ್ತು ಮಿನರಲ್ಸ್ ಇರುವುದರಿಂದ ಅದು ಮೂಳೆಗಳನ್ನು ಆರೋಗ್ಯದಿಂದಿಡಲು ನೆರವಾಗುತ್ತದೆ. ಅದರಲ್ಲಿ ಸಿಲಿಕಾನ್ ಅಂಶ ಇರುವುದರಿಂದ ಮುಟ್ಟು ನಿಂತ ಬಳಿಕ ಮಹಿಳೆಯರಲ್ಲಿ ಉಂಟಾಗುವ ಆಸ್ಟೂಲೆಪೊರೊಸಿಸ್ ಚಿಕಿತ್ಸೆಗೂ ಅದು ನೆರವಾಗುತ್ತದೆ.