`ತೂ ಝೂಠಿ ಮೈ ಮಕ್ಕಾರ್' ಚಿತ್ರ 200 ಕ್ರೋರ್ ಕ್ಲಬ್ ಸೇರಿದ ನಂತರ ಶ್ರದ್ಧಾ `ಸ್ತ್ರೀ-2' ಚಿತ್ರವನ್ನು ಸಹ 600 ಕ್ರೋರ್ ಕ್ಲಬ್ ಗೆ ಅತಿ ಸಮೀಪ ಕೊಂಡೊಯ್ದಿದ್ದಾಳೆ! ಇದಕ್ಕಾಗಿ ಇವಳಿಗೆ ಯಾವ ಬ್ಯಾನರ್ ಸಹಾಯ ಬೇಕಿರಲಿಲ್ಲ, ಯಾವ ಗಾಡ್ ಫಾದರ್ರೂ ಇರಲಿಲ್ಲ! ಇದೆಲ್ಲ ಇವಳ ಸರಿಯಾದ ನಿರ್ಧಾರಗಳ ಗುರುತಾಗಿತ್ತು. ಸುದ್ದಿಗಾರರ ಪ್ರಕಾರ ಶ್ರದ್ಧಾ ಇದೀಗ `ನೋ ಎಂಟ್ರಿ-2' ಹಾಗೂ `ಚಾಲ್ ಬಾಝ್ ಇನ್ ಲಂಡನ್' ಚಿತ್ರಗಳಲ್ಲಿ ನಟಿಸಲಿದ್ದಾಳೆ. ಇವೆರಡೂ ಕೋಟ್ಯಂತರ ರೂ.ಗಳ ಪ್ರಾಜೆಕ್ಟ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇವೆರಡೂ ಗೆದ್ದೇ ಗೆಲ್ಲುತ್ತೆ ಎಂದು ಇಂಡಸ್ಟ್ರಿಯಲ್ಲಿ ಎಲ್ಲೆಲ್ಲೂ ಚರ್ಚೆ ಕೇಳಿಬರುತ್ತಿದೆ. ಶಭಾಷ್ ಶ್ರದ್ಧಾ..... ನೀನು ಹೀಗೇ ಮುಂದುರಿಯುತ್ತಿದ್ದರೆ, ಮಮ್ಮಿಗಳಾಗಿರುವ ದೀಪಿಕಾ ಆಲಿಯಾ ಮನೆಗಂಟಿಕೊಂಡೇ ಇರಬೇಕಾದೀತು!!

ಕರಣ್ ನ ಸಹಾಯದಿಂದ ಉಳಿದಿರುವ ಅನನ್ಯಾ ಪಾಂಡೆ
ಅನನ್ಯಾ ಪಾಂಡೆಯನ್ನು ಸ್ಟಾರ್ ಪುತ್ರರ ಲಾಂಚಿಂಗ್ ಪ್ಯಾಡ್ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ `ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರಕ್ಕಾಗಿ ಲಾಂಚ್ ಮಾಡಿತ್ತು. ಅದಾದ ನಂತರ ಕರಣ್ ನ ಸಹಕಾರದಿಂದ ಅನನ್ಯಾಳ ಕೆರಿಯರ್ ನಿಧಾನಕ್ಕೆ ಮೇಲೇರ ತೊಡಗಿತು. ಇದೀಗ ಈಕೆ `ಕಾಲ್ ಮೀ ಬೇ' ವೆಬ್ ಸೀರೀಸ್ ನಲ್ಲಿ ಕ್ರಿಯೇಟಿವ್ ಆಗಿ ಕಾಣಿಸಿಕೊಂಡಿದ್ದಾಳೆ, ಇದರ ಪ್ರೊಡ್ಯೂಸರ್ ಕರಣ್ ಜೌಹರ್ ಅಲ್ಲದೆ ಬೇರೆ ಯಾರಾಗಿರಲು ಸಾಧ್ಯ? ಆದರೆ ಇಡೀ ಸೀರೀಸ್ ಮತ್ತು ಇವಳ ನಟನೆ ಎರಡೂ ಮಹಾ ಕಿರಿಕಿರಿ, ತಲೆನೋವು ಎಂದು ಪ್ರೇಕ್ಷಕರು ಸಾರಾಸಗಟಾಗಿ ಪಕ್ಕಕ್ಕೆ ಒತ್ತರಿಸಿದ್ದಾರೆ! ಈಗ ಪ್ರಶ್ನೆ ಎಂದರೆ, ಇವಳ ಗಾಡ್ ಫಾದರ್ ಕರಣ್ ಮುಂದೆ ಇವಳನ್ನು ಯಾವುದಕ್ಕೂ ರೆಕಮೆಂಡ್ ಮಾಡದಿದ್ದರೆ, ಇವಳ ಗತಿ ಏನಾದೀತು? ಇದರ ಕುರಿತು ತುಸು ಗಂಭೀರವಾಗಿ ಆಲೋಚಿಸಮ್ಮ ಅನನ್ಯಾ, ನಿನ್ನ ಮುಂದಿನ ಪ್ರಾಜೆಕ್ಟ್ಸ್, ಪಾತ್ರಗಳನ್ನು ಆರಿಸಿಕೊಳ್ಳುವಾಗ ಎಚ್ಚರವಾಗಿರು, ಇಂದು ನಿನ್ನ ಓರಗೆಯವರಾದ ಜಾಹ್ನವಿ ಕಪೂರ್. ಸಾರಾ ಆಲಿ ಖಾನ್ ಎಷ್ಟೋ ಮುಂದುರಿದಿದ್ದಾರೆ ಎಂದು ಹಿತೈಷಿಗಳು ಹೇಳುವ ಕಿವಿಮಾತುಗಳನ್ನು ಕೇಳಿದರೆ ಇವಳು ಗೆದ್ದಾಳು, ಇಲ್ಲದಿದ್ದರೆ.....?

ಪಂಜಾಬಿ ಚಿತ್ರಗಳಲ್ಲಿ ಮಿಂಚುತ್ತಿರುವ ಜ್ಯಾಸ್ಮಿನ್
ಕಾರ್ನಿಯಲ್ ಡ್ಯಾಮೇಜ್ ನಿಂದ ಹೇಗೋ ಹೊರಬಂದ ನಟಿ ಜ್ಯಾಸ್ಮಿನ್ ಭಸೀನ್, ತನ್ನ ಹೊಸ `ಅರ್ದಾಸ್ ಸರ್ಬತ್ ದೇ ಭೀ ದೀ' ಪಂಜಾಬಿ ಚಿತ್ರದಲ್ಲಿ ಎಲ್ಲರಿಂದ ಸೈ ಎನಿಸಿಕೊಂಡ ಈಕೆ, ಈಗ ಅದರ ಪ್ರಮೋಶನ್ ನಲ್ಲಿ ಭೀ ಬಿಝಿ ಆಗಿದ್ದಾಳೆ. ಇದು ಈಕೆಯ 4ನೇ ಪಂಜಾಬಿ ಚಿತ್ರ. ಕಿರು ತೆರೆಯಿಂದ ಹಿರಿ ತೆರೆಗೆ ಬಂದ ನಂತರ, ಜ್ಯಾಸ್ಮಿನ್ ಎಲ್ಲಕ್ಕಿಂತ ಹೆಚ್ಚಾಗಿ ಪಂಜಾಬಿ ಚಿತ್ರಗಳಲ್ಲಿ ಉತ್ತಮ ಹೆಸರು ಗಳಿಸಿದಳು. ಇವಳ ಸೋಕಾಲ್ಡ್ FB ಅಲೀ ಗೋನಿಯ ಜೊತೆಗೆ ತೆರೆಮರೆಯ ರೊಮಾನ್ಸ್ ನಲ್ಲೂ ಅಷ್ಟೇ ಚರ್ಚೆಯಲ್ಲಿರುತ್ತಾಳೆ. ಸುದ್ದಿಗಾರರ ಪ್ರಕಾರ ಇಷ್ಟರಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಕಿರುತೆರೆಯ `ಬಿಗ್ ಬಾಸ್'ನಿಂದ ಆರಂಭವಾದ ಇವರ ದೋಸ್ತಿ, ಇದೀಗ ದೊಡ್ಡ ಲವ್ ಸ್ಟೋರಿ ಆಗಿದೆ. ಲವ್ ಅಫೇರ್ ಸರಿ, ಆದರೆ ಇಷ್ಟು ಬೇಗ ಮದುವೆಯಾಗಿ ಆಂಟಿ ಆದರೆ ಮುಂದೆ ಫಿಲ್ಮಿ ಕೆರಿಯರ್ ಉದ್ಧಾರ ಆದೀತೇ? ಎನ್ನುತ್ತಿದ್ದಾರೆ ಹಿತೈಷಿಗಳು.





