ನಮ್ಮ ಪಚನತಂತ್ರ ಸರಿಯಾಗಿ ಕೆಲಸ ಮಾಡದಿದ್ದರೆ, ಅಜೀರ್ಣದ ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗಿ ಈ ಅಜೀರ್ಣ ಸಮಸ್ಯೆ ಕಾಡಲು ಹಲವು ರೋಗಗಳು, ಜೀವನಶೈಲಿಗೆ ಸಂಬಂಧಿಸಿದ ಪ್ರಕ್ರಿಯೆಗಳೇ ಕಾರಣ. ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳ ಲಕ್ಷಣಗಳು ಈ ತರಹ ಇರುತ್ತವೆ.

ಹೊಟ್ಟೆ ಉಬ್ಬರ, ಗ್ಯಾಸ್‌, ಮಲಬದ್ಧತೆ, ಡಯೇರಿಯಾ, ವಾಂತಿ, ಎದೆಯಲ್ಲಿ ಉರಿ ಇತ್ಯಾದಿ. ಪಚನತಂತ್ರಕ್ಕೆ ಪೂರಕ ಆಹಾರ

ಸಿಪ್ಪೆ ಸಹಿತ ಬಳಸಬೇಕಾದ ತರಕಾರಿ : ತರಕಾರಿಗಳಲ್ಲಿ ನಾರಿನಂಶ ಹೇರಳವಾಗಿ ತುಂಬಿರುತ್ತದೆ, ಇದು ಪಚನಕ್ಕೆ ಬಲು ಮಹತ್ವಪೂರ್ಣ. ನಾರಿನಂಶ ಮಲಬದ್ಧತೆಯ ನಿವಾರಣೆಗೆ ರಾಮಬಾಣ. ತರಕಾರಿಗಳ ಸಿಪ್ಪೆಗಳಲ್ಲಿ ನಾರಿನಂಶ ಹೇರಳವಾಗಿರುವುದರಿಂದ, ನಾವು ತರಕಾರಿಯ ಪೂರ್ತಿ ಭಾಗ ಸೇವಿಸಬೇಕು. ಆಲೂ, ಸೋರೆ, ಕ್ಯಾರೆಟ್‌, ಸೌತೆ...... ಇತ್ಯಾದಿ ಯಾವುದೇ ತರಕಾರಿ ಇರಲಿ, ಅದರ ಸಿಪ್ಪೆ ಹೆರೆದು ಎಸೆಯದೆ ಇಡಿಯಾಗಿ ಅಡುಗೆಗೆ ಬಳಸಿ.

ಹಣ್ಣು : ಹಾಗೆಯೇ ಹಣ್ಣುಗಳಲ್ಲಿಯೂ ಫೈಬರ್‌ ಧಾರಾಳ ಅಡಗಿದೆ. ಇದರಲ್ಲಿ ವಿಟಮಿನ್ಸ್, ಮಿನರಲ್ಸ್ ಸಹ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಉದಾ: ವಿಟಮಿನ್‌|, ಪೊಟ್ಯಾಶಿಯಂ ಇತ್ಯಾದಿ. ಹೀಗಾಗಿ ಸೇಬು, ಕಿತ್ತಳೆಹಣ್ಣು, ಬಾಳೆಹಣ್ಣು ಪಚನಕ್ರಿಯೆಗೆ ಸಹಕಾರಿ.

ಇಡಿಯಾದ ಧಾನ್ಯಸಹಿತ ಆಹಾರ ಸೇವನೆ : ಇಡಿಯಾದ ಧಾನ್ಯ ಸಹಿತ ಸಾಲ್ಯುಬ್‌ ಇನ್‌ ಸಾಲ್ಯುಬ್‌ ಫೈಬರ್‌ನ ಮೂಲಸ್ರೋತ. ಸಾಲ್ಯುಬ್‌ ಫೈಬರ್‌ ದೊಡ್ಡ ಕರುಳಿನಲ್ಲಿ ಜೆಲ್‌ನಂಥ ಪದಾರ್ಥ ಉಂಟು ಮಾಡುತ್ತದೆ, ಇದರಿಂದ ಹೊಟ್ಟೆ ತುಂಬಿರುವಂತೆ ತೃಪ್ತಿ ಇರುತ್ತದೆ. ಇದರಿಂದಾಗಿ ದೇಹದಲ್ಲಿ ಆಂತರಿಕವಾಗಿ ಗ್ಲೂಕೋಸ್‌ ಕ್ರಮೇಣ ವಿಲೀನಗೊಳ್ಳುತ್ತಿರುತ್ತದೆ. ಇನ್‌ಸಾಲ್ಯುಬ್‌ ಫೈಬರ್ ಮಲಬದ್ಧತೆಯಿಂದ ಪಾರಾಗಲು ನೆರವಾಗುತ್ತದೆ.

ಫೈಬರ್‌ ಪಚನಕ್ರಿಯೆಗೆ ನೆರವಾಗುವ ಗುಡ್‌ ಬ್ಯಾಕ್ಟೀರಿಯಾ ನೀಡಿ ಪೋಷಿಸುತ್ತದೆ.

ಧಾರಾಳ ದ್ರವಾಹಾರ ಸೇವನೆ ಮಾಡಿ : ನಮ್ಮ ಚರ್ಮವನ್ನು ಸದಾ ನಳನಳಿಸುವಂತೆ ಇರಿಸಲು ಇಮ್ಯೂನಿಟಿ, ಶಕ್ತಿ ವರ್ಧಿಸಲು ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಪಚನಕ್ರಿಯೆ ಸಲೀಸಾಗಲು ನೀರೇ ಆಧಾರ. ಯಾವ ರೀತಿ ನಮ್ಮ ಪಚನತಂತ್ರದಲ್ಲಿ ಬ್ಯಾಕ್ಟೀರಿಯಾ ಇರಬೇಕಾದುದು ಅನಿವಾರ್ಯವೇ, ಅದೇ ರೀತಿ ಆಗಾಗ ದ್ರವಾಹಾರ ಸೇವನೆ ಅತ್ಯಗತ್ಯ.

ಶುಂಠಿ : ಇದು ಪಚನಕ್ರಿಯೆಯ ಎಲ್ಲಾ ಸಮಸ್ಯೆಗಳಿಂದ ಅಂದ್ರೆ ಹೊಟ್ಟೆ ಉಬ್ಬರ, ತೊಳೆಸುವಿಕೆ ಇತ್ಯಾದಿಗಳಿಂದ ಮುಕ್ತಿ ನೀಡುತ್ತದೆ. ಹಸಿ ಶುಂಠಿ ಲಭಿಸದಿದ್ದಾಗ ಒಣಶುಂಠಿ ಬಳಸುವುದು ಲೇಸು. ಈ ಮಸಾಲೆ ನಮ್ಮ ಆಹಾರಕ್ಕೆ ಉತ್ತಮ ಮಸಾಲೆಗಳಲ್ಲಿ ಒಂದು, ಹೆಚ್ಚಿನ ರುಚಿ ನೀಡುತ್ತದೆ. ಇದರ ಬಳಕೆ ಟೀ ತಯಾರಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸದಾ ಉತ್ತಮ ಗುಣಮಟ್ಟದ ರಸಭರಿತ ತಾಜಾ ಹಸಿಶುಂಠಿಯನ್ನೇ ಬಳಸಿರಿ.

ಅರಿಶಿನ : ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ ಅರಿಶಿನ ಆ್ಯಂಟಿ ಇನ್‌ಫ್ಲಮೇಟರಿಯ ಭಂಡಾರ. ಇದು ಆ್ಯಂಟಿ ಕ್ಯಾನ್ಸರ್‌ ಸಹ ಹೌದು. ಇದರಲ್ಲಿ ಕರ್ಕ್ಯುಮಿನ್‌ ಪಚನತಂತ್ರದ ಒಳಭಾಗವನ್ನು ಸುರಕ್ಷಿತವಾಗಿಡುತ್ತದೆ, ಉತ್ತಮ ಬ್ಯಾಕ್ಟೀರಿಯಾ ವೃದ್ಧಿಸಲು ಅನುಕೂಲ ಮಾಡುತ್ತದೆ. ಬೊವೆಲ್ ‌ರೋಗ, ಕೊಲೆಸ್ಟ್ರಾಲ್ ನಿಯಂತ್ರಣ, ಕೊಲೊರೆಕ್ಟ್‌ ಕ್ಯಾನ್ಸರ್‌ ನಿವಾರಣೆಗೆ ಬಲು ಹಿತಕಾರಿ.

ಯೋಗರ್ಟ್‌ : ಇದರಲ್ಲಿ ಅಧಿಕ ಪ್ರೊಬಯೋಟಿಕ್ಸ್ ತುಂಬಿರುತ್ತದೆ. ಇದು ಲೈವ್ ‌ಬ್ಯಾಕ್ಟೀರಿಯಾ, ಯೀಸ್ಟ್ ಗಳಿಗೆ ಅತಿ ಪೂರಕ. ನಮ್ಮ ಪಚನತಂತ್ರಕ್ಕೆ ಬಲು ಲಾಭಕಾರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ