ನಾವು ಶರೀರ ರಕ್ಷಣೆ ಮಾಡುವಾಗ ಕಾಲುಗಳ ಬಗ್ಗೆ ಗಮನ ನೀಡುವುದೇ ಇಲ್ಲ. ಹಗಲು ರಾತ್ರಿ ಮುಖಕ್ಕೆ ಕ್ರೀಮ್ ಹಚ್ಚುತ್ತೇವೆ. ಆದರೆ ಕಾಲುಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಈ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಹಾನಿ ಉಂಟಾಗುವ ಸಂಭವಿರುತ್ತದೆ. ಇದರಿಂದ ಬ್ಯಾಕ್ಟೀರಿಯಲ್ ಅಥವಾ ಫಂಗಲ್ ಇನ್‌ಫೆಕ್ಷನ್‌, ಕಾರ್ನ್‌, ಪಾದದ ಚರ್ಮದಲ್ಲಿ ಸೀಳುವಿಕೆ, ದುರ್ಗಂಧ ಮೊದಲಾದ ಸಮಸ್ಯೆಗಳಾಗಬಹುದು.

ಮಳೆಗಾಲದಲ್ಲಿ ಕಾಲುಗಳ ರಕ್ಷಣೆಯ ಬಗ್ಗೆ ವಿಶೇಷ ಗಮನ ನೀಡುವುದು ಅಗತ್ಯ. ಏಕೆಂದರೆ ಈ ಕಾಲದಲ್ಲಿ ಕಾಲುಗಳು ಕೊಳೆ ನೀರಿನ ಸಂಪರ್ಕಕ್ಕೆ ಬರುತ್ತಿರುತ್ತದೆ.

ಕಾಲಿನ ಚರ್ಮದಲ್ಲಿ ಕಡಿತ, ಊತ ಅಥವಾ ಚರ್ಮ ಕಿತ್ತು ಬರುವುದು ಮುಂತಾದ ತೊಂದರೆ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಅದು ಗಂಭೀರವಾದ ಸ್ಕಿನ್‌ ಅಲರ್ಜಿ ಆಗಿರಬಹುದು ಮತ್ತು ಅದಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ.

ರಕ್ಷಣಾ ವಿಧಾನಗಳು

ಕಾಲುಗಳನ್ನು ಚೆನ್ನಾಗಿ ತೊಳೆಯಿರಿ : ಕಾಲಿನ ಚರ್ಮಕ್ಕೆ ಬ್ಯಾಕ್ಟೀರಿಯಲ್ ಮತ್ತು ಫಂಗಲ್ ಇನ್‌ಫೆಕ್ಷನ್‌ ಬಲು ಬೇಗನೆ ತಗುಲುವ ಸಾಧ್ಯತೆ ಇರುತ್ತದೆ. ನಾವು ಹೆಚ್ಚು ಸಮಯ ಕಾಲು ಚೀಲ, ಚಪ್ಪಲಿಗಳನ್ನು ಧರಿಸಿದ್ದರೂ ಅವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಫಂಗಸ್‌ ಕಾಲಿನ ಸಂಪರ್ಕದಲ್ಲಿರುತ್ತದೆ. ಇದಲ್ಲದೆ ಬರಿಗಾಲಿನಲ್ಲಿರುವಾಗ ನೆಲದ ಮೇಲಿನ ಧೂಳು ಮತ್ತು ಕೊಳೆಯ ಸಂಪರ್ಕವಾಗುತ್ತದೆ. ಕಾಲುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಕಾಲ್ಬೆರಳುಗಳ ಮಧ್ಯದ ಚರ್ಮ ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳ ಉಗಮಕ್ಕೆ ಒಳ್ಳೆಯ ಸ್ಥಳವಾಗುತ್ತದೆ. ಆದ್ದರಿಂದ ಕಾಲುಗಳಲ್ಲಿ ಸೇರಿರುವ ಬೆವರು ಮತ್ತು ಕೊಳೆಯನ್ನು ದೂರ ಮಾಡಲು ದಿನಕ್ಕೊಮ್ಮೆಯಾದರೂ ಸಾಬೂನಿನಿಂದ ತೊಳೆದುಕೊಳ್ಳಬೇಕು.

ಕಾಲುಗಳು ಒಣಗಿದಂತಿರಲಿ : ಅಥ್ಲೀಟ್ಸ್ ಫುಟ್‌ ಒಂದು ಸಾಮಾನ್ಯ ಫಂಗಲ್ ಇನ್‌ಫೆಕ್ಷನ್‌ ಆಗಿದೆ. ಅದರಿಂದ ನವೆ, ಉರಿ, ಚರ್ಮ ಸೀಳುವಿಕೆ, ಬೊಬ್ಬೆ ಮುಂತಾದ ತೊಂದರೆ ಉಂಟಾಗಬಹುದು. ಇದಕ್ಕೆ ಕಾಲುಗಳು ಒದ್ದೆಯಾಗಿರುವುದೇ ಕಾರಣವಾಗುತ್ತದೆ. ಆದ್ದರಿಂದ ಕಾಲುಗಳನ್ನು ತೊಳೆದ ನಂತರ ಮುಖ್ಯವಾಗಿ ಕಾಲ್ಬೆರಳುಗಳ ನಡುವಿನ ಜಾಗವನ್ನು ಒರೆಸಬೇಕು.

ಮಾಯಿಶ್ಚರೈಸಿಂಗ್‌ : ಮುಖ ಮತ್ತು ಕೈಗಳಿಗೆ ಮಾತ್ರವಲ್ಲ, ಕಾಲುಗಳನ್ನೂ ಮಾಯಿಶ್ಚರೈಸ್‌ ಮಾಡಿ. ಏಕೆಂದರೆ ಅವುಗಳಲ್ಲಿ ಆರ್ದ್ರತೆ ಕಡಿಮೆಯಾದಾಗ ಚರ್ಮ ಒಣಗಿ ಸಿಪ್ಪೆಯುಂಟಾಗುತ್ತದೆ ಮತ್ತು ಚರ್ಮ ಒಡೆಯಲೂಬಹುದು. ಹಿಮ್ಮಡಿಯ ಚರ್ಮ ಒಡೆದು, ಒಡೆದ ಚರ್ಮದಲ್ಲಿ ಕೊಳೆ ಸೇರತೊಡಗುತ್ತದೆ. ಅದು ನೋಡಲು ಆಸಹ್ಯವಾಗಿರುತ್ತದೆ. ಅಲ್ಲದೆ, ನೋವು ಉಂಟಾಗಬಹುದು. ಆದ್ದರಿಂದ ದಿನ ಕಾಲು ತೊಳೆದ ನಂತರ ಮಾಯಿಶ್ಚರೈಸಿಂಗ್‌ ಕ್ರೀಮ್ ಹಚ್ಚಿ. ಕೋಕೋ ಬಟರ್‌ ಅಥವಾ ಪೆಟ್ರೋಲಿಯಂ ಜೆಲ್ಲಿ ಬಳಸಬಹುದು.

ಒಣ ಚರ್ಮ ನಿವಾರಿಸಿ : ಮೃತ ಚರ್ಮಕ್ಕೆ ಮಾಯಿಶ್ಚರೈಸಿಂಗ್‌ ಮಾಡುವುದರಿಂದ ಯಾವ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ತಿಂಗಳಿಗೊಮ್ಮೆ ಎಕ್ಸ್ ಫೋಲಿಯೇಟ್‌ ಮಾಡಿ ಮೃತ ಚರ್ಮವನ್ನು ನಿವಾರಿಸಬೇಕು. ಇದಕ್ಕಾಗಿ ಪ್ಯೂಮಿಕ್‌ ಸ್ಟೋನ್‌ನಿಂದ ಚರ್ಮವನ್ನು ಹಗುರವಾಗಿ ಉಜ್ಜಬೇಕು. ಇದರಿಂದ ಅಲ್ಲಿ ಸೇರಿರುವ ಕೊಳೆಯೂ ದೂರಾಗುತ್ತದೆ. ನಂತರ ಮಾಯಿಶ್ಚರೈಸರ್‌ ಹಚ್ಚಿ ಹೈಡ್ರೇಟ್‌ ಮಾಡಿ ಮತ್ತು ರಾತ್ರಿಯಿಡೀ ಹಾಗೇ ಬಿಡಿ.

ಆಲಿವ್ ‌ಆಯಿಲ್ ಮತ್ತು ಸಕ್ಕರೆಯ ಮಿಶ್ರಣಕ್ಕೆ ಕೆಲವು ಹನಿ ಮಿಂಟ್‌ ಆಥವಾ ಟೀ ಟ್ರೀ ಆಯಿಲ್ ‌ಸೇರಿಸಿ ಸ್ಕ್ರಬಿಂಗ್‌ ಮಾಡಬಹುದು. ಏಕೆಂದರೆ ಇದು ಬ್ಯಾಕ್ಟೀರಿಯ ವಿರೋಧಿ ಗುಣವನ್ನು ಹೊಂದಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ