ಒಂದು ಕಾಲದಲ್ಲಿ ಮಹಿಳೆಯರಿಗೆ ಮನೆಯಿಂದ ಹೊರಗೆ ಕೆಲಸ ಮಾಡುವುದು ಬಹಳ ಕಷ್ಟವಾಗಿತ್ತು. ಆದರೆ ಈಗ ಹೊರಗಿನ ಪ್ರಪಂಚವಷ್ಟೇ ಅಲ್ಲ ಚಂದ್ರನ ಮೇಲೂ ಅವರ ಲಾಂಛನ ಹಾರಾಡುತ್ತಿದೆ. ಹೀಗಿರುವಾಗ ಮನೆಯಲ್ಲಿ ಮತ್ತು ಹೊರಗೆ ಸಮತೋಲನ ಕಾಪಾಡಿಕೊಳ್ಳುವ ಮಹಿಳೆ ತನಗಾಗಿ ಸಮಯ ಮಾಡಿಕೊಳ್ಳುವುದಿಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಆರೋಗ್ಯದ ಬಗ್ಗೆ ಗಮನಿಸದಿರುವುದು, ಯಾಂತ್ರಿಕ ಜೀವನಶೈಲಿ ಮತ್ತು ಒತ್ತಡದಿಂದಾಗಿ ಇಂದು ಮಹಿಳೆಯರು ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಕ್ಯಾನ್ಸರ್‌, ಹಾರ್ಟ್‌ಡಿಸೀಸ್‌ ಮತ್ತು ಆರ್ಥ್‌ರೈಟಿಸ್‌ನಂತಹ ಕಾಯಿಲೆಗಳಿಂದ ಇಂದು ಪ್ರತಿ 3ನೇ ಮಹಿಳೆ ಪೀಡಿತಳಾಗಿದ್ದಾಳೆ. ಇವುಗಳಲ್ಲಿ ಒಂದು ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಅಂದರೆ ಪಿಸಿಓಎಸ್‌.

ಪಿಸಿಓಎಸ್ಎಂದರೇನು?

ಖ್ಯಾತ ಗೈನಕಾಲಜಿಸ್ಟ್ ಡಾ. ಇಂದಿರಾ ಹೀಗೆ ಹೇಳುತ್ತಾರೆ, “ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಮತ್ತು ಹಾರ್ಮೋನ್ ಅಸಮತೋಲನದಿಂದಾಗಿ ಈ ಕಾಯಿಲೆ ಬರುತ್ತದೆ. ಪ್ರತಿ ಹತ್ತರಲ್ಲಿ 5 ಮಹಿಳೆಯರು ಪಿಸಿಓಎಸ್‌ನ ಶಿಕಾರಿಗಳಾಗಿದ್ದಾರೆ. ಉತ್ತರ ಭಾರತದ ಶೇ.40ರಷ್ಟು ಮಹಿಳೆಯರಲ್ಲಿ ಈ ಕಾಯಿಲೆಯ ಲಕ್ಷಣಗಳು ಕಂಡುಬಂದಿದೆ.

ಹೊತ್ತಿಗೆ ಸರಿಯಾಗಿ ಊಟ ಮಾಡದಿರುವುದು, ಹೆಚ್ಚು ಒತ್ತಡ ಮತ್ತು ಶರೀರವನ್ನು ಸರಿಯಾಗಿ ನೋಡಿಕೊಳ್ಳದಿರುವುದರಿಂದ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಹೆಚ್ಚುತ್ತಿರುತ್ತದೆ. ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ನಲ್ಲಿ ಶರೀರದ ಪಚನಾ ಸಾಮರ್ಥ್ಯ ಗ್ರಹಿಸುವ ಗ್ರಂಥಿಗಳ ಸಾಮರ್ಥ್ಯ ಕಡಿಮೆಯಾಗುತ್ತದೆ. ಅದರಿಂದಾಗಿ ರಿಪ್ರೊಡೆಕ್ಟಿವ್‌ ಡಿಸಾರ್ಡರ್‌ ಕಂಡುಬರುತ್ತದೆ.

ಲಕ್ಷಣಗಳು

ಪಿಸಿಓಎಸ್‌ ಪೀಡಿತ ರೋಗಿಗಳಲ್ಲಿ ಪ್ರಾಯಶಃ ಕೆಳಕಂಡ ಲಕ್ಷಣಗಳು ಕಂಡುಬರುತ್ತವೆ.

ನಿಯಮಿತವಾಗಿ ಮುಟ್ಟಾಗದಿರುವುದು. ಕೆಲವೊಮ್ಮೆ 2-3 ತಿಂಗಳವರೆಗೆ ಆಗುವುದಿಲ್ಲ.

ಮುಖದ ಮೇಲೆ ಬೇಡದ ಕೂದಲು ಬೆಳೆಯುವುದು, ಆ್ಯಕ್ನೆಯ ಸಮಸ್ಯೆ ಇತ್ಯಾದಿ ಈ ಕಾಯಿಲೆಯ ಮುಖ್ಯ ಲಕ್ಷಣ.

ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಗೆ ಬಲಿಯಾಗುವವರಲ್ಲಿ ಶೇ.50ರಷ್ಟು ಮಹಿಳೆಯರಿಗೆ ಸ್ಥೂಲತೆ ಉಂಟಾಗುತ್ತದೆ.

ಪರೀಕ್ಷೆ ಹೇಗೆ?

ಡಾ. ಇಂದಿರಾ ಹೀಗೆ ಹೇಳುತ್ತಾರೆ, “ಈ ಕಾಯಿಲೆಯನ್ನು ತಡೆಯಲಾಗುವುದಿಲ್ಲ. ಆದರೆ ಅದನ್ನು ಬೇಗನೆ ನಿಯಂತ್ರಿಸಬಹುದು. ಪ್ರತಿ ಯುವತಿ ಹಾಗೂ ಮಹಿಳೆ ವರ್ಷಕ್ಕೆ 5-6 ಬಾರಿ ಅವಶ್ಯವಾಗಿ ಪೀರಿಯಡ್‌ ಬರಬೇಕೆಂದು ತಿಳಿದಿರಬೇಕು. ಒಂದುವೇಳೆ ಪೀರಿಯಡ್‌ ಬಹಳ ಕಡಿಮೆ ಬಂದರೆ ಅಥವಾ 2-3 ತಿಂಗಳ ಅಂತರದಲ್ಲಿ ಬಂದರೆ ಕೂಡಲೇ ಡಾಕ್ಟರ್‌ನ್ನು ಸಂಪರ್ಕಿಸಬೇಕು. ಅದಲ್ಲದೆ 2 ರೀತಿಯ ಹಾರ್ಮೋನ್‌ಗಳಿರುತ್ತವೆ. ಪ್ರೊಜೆಸ್ಟರಾನ್‌ ಮತ್ತು ಈಸ್ಟ್ರೋಜೆನ್‌. ಇದನ್ನು ಸಮತೋಲನದಲ್ಲಿ ಇಟ್ಟು ಔಷಧಿ ಕೊಡಲಾಗುತ್ತದೆ. ಈ ಕಾಯಿಲೆಯಿಂದ ಗರ್ಭ ನಿಲ್ಲುವುದಕ್ಕೂ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಈ ಕಾಯಿಲೆಯ ಲಕ್ಷಣಗಳು ಕಂಡ ಕೂಡಲೇ ಜಾಗೃತರಾಗಬೇಕು.”

ಚಿಕಿತ್ಸೆ ಈ ಕಾಯಿಲೆಯ ಬಗ್ಗೆ ತಿಳಿಯಲು ನಾವು ರೋಗಿಯ ಬ್ಲಡ್‌ ಟೆಸ್ಟ್ ಮಾಡುತ್ತೇವೆ. ಇದಲ್ಲದೆ ಅಲ್ಟ್ರಾಸೌಂಡ್‌ ಮೂಲಕ ಪರೀಕ್ಷಿಸಬಹುದು. ಅಲ್ಟ್ರಾಸೌಂಡ್‌ನಲ್ಲಿ ಓವರಿಯ ಸೈಜ್‌ ಮಿನಿಮಮ್ ಸೈಜ್‌ (6 ಎಂ.ಎಂ) ನಿಂದ ಹೆಚ್ಚಾಗಿ (8 ರಿಂದ 10 ಎಂ.ಎಂ.)ಗೆ ಬಂದರೆ ಅವರು ಈ ಕಾಯಿಲೆಯಿಂದ ಪೀಡಿತರಾಗಿದ್ದಾರೆಂದು ಅರ್ಥ.

ರಕ್ಷಣೆ

ಶರೀರ ಹಾಗೂ ಮುಖದಲ್ಲಿನ ಬೇಡದ ಕೂದಲು ಹಾಗೂ ಮೊಡವೆಗಳಿಗೆ ಚಿಕಿತ್ಸೆ ನೀಡುವುದು.

ಸಕಾಲದಲ್ಲಿ ಗರ್ಭ ಧರಿಸುವುದು.

ಗರ್ಭಕೋಶದ ಹೊರಗಿನ ಪದರ ತೆಳ್ಳಗಾದಾಗ ಕ್ಯಾನ್ಸರ್‌ನ ಹೆಚ್ಚುತ್ತಿರುವ ಅಪಾಯದಿಂದ ರಕ್ಷಿಸಿಕೊಳ್ಳುವುದು.

ಕೊಬ್ಬು ಉಂಟು ಮಾಡುವ ಕೋಶಗಳನ್ನು ನಿಯಂತ್ರಿಸುವುದು. ಹೀಗೆ ಮಾಡುವುದರಿಂದ ಹೃದಯದ ಕಾಯಿಲೆಗಳ ಮೇಲೂ ನಿಯಂತ್ರಣವಿಡಬಹುದು. ಪ್ರಭಾವ ಒಂದುವೇಳೆ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಗೆ ಬೇಗನೇ ಚಿಕಿತ್ಸೆ ನೀಡದಿದ್ದರೆ ಇಡೀ ಶರೀರದ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಈ ಕಾರಣದಿಂದಾಗಿ ಪಚನ ಸಾಮರ್ಥ್ಯವಿರುವ ಗ್ರಂಥಿಗಳೂ ಬಲಹೀನವಾಗುತ್ತವೆ. ಪಿಸಿಓಎಸ್‌ನ್ನು ಮೂಲದಿಂದ ಕೊನೆಗಾಣಿಸದಿದ್ದರೆ ಇನ್ನಷ್ಟು ಅಪಾಯಕಾರಿ ಕಾಯಿಲೆಗಳು ಉಂಟಾಗುತ್ತವೆ.

ಅಂದರೆ ಸ್ತನ ಕ್ಯಾನ್ಸರ್‌, ಓವರಿ ಕ್ಯಾನ್ಸರ್‌, ಮಧುಮೇಹ, ರಿಪ್ರೊಡಕ್ಟಿವ್‌ ಸಿಸ್ಟಂನಲ್ಲಿ ಅನಿಯಮಿತತೆ ಇತ್ಯಾದಿ.

ಗಿರಿಜಾ ಶಂಕರ್

Tags:
COMMENT