ಭಾರತದಲ್ಲಿ ಶೇ.12ರಷ್ಟು ಮಹಿಳೆಯರು ಮಾತ್ರ ಪರ್ಸನಲ್ ಹೈಜೀನ್‌ ಕಡೆ ಗಮನ ಕೊಡುತ್ತಾರೆ, ಅಂದರೆ ಪ್ಯಾಡ್‌ಗಳನ್ನು ಬಳಸುತ್ತಾರೆ ಎನ್ನುವುದು ಚಕಿತಗೊಳಿಸುವ ಅಂಕಿ ಅಂಶ. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ನಾವು ಗಮನ ಕೊಡದೇ ಹೋದರೆ ಹಲವು ಗಂಭೀರ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಯುಟಿಐ, ಕ್ಯಾನ್ಸರ್‌ನಂತಹ ರೋಗಗಳು ಅದರಲ್ಲಿ ಮುಖ್ಯವಾದವುಗಳು.

`ದಿ ನ್ಯಾಷನ್‌ ಹೆಲ್ತ್ ಮಿಷನ್‌ ಆಫ್‌ವದಿ ಮಿನಿಸ್ಟ್ರಿ ಅಂಡ್‌ ಫ್ಯಾಮಿಲಿ ವೆಲ್‌ಫೇರ್‌ ಆಫ್‌ ಇಂಡಿಯಾ' ಸ್ವಚ್ಛ ಭಾರತ ಅಭಿಯಾನದ ಜೊತೆ ಸೇರಿಕೊಂಡು ಮುಟ್ಟಿನ ಸ್ವಚ್ಛತೆ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಕುರಿತಂತೆ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿದೆ. ದೇಶ ಹಲವು ದಶಕಗಳಿಂದ ಮಾಲಿನ್ಯದ ಮಾರಕ ಪರಿಣಾಮವನ್ನು ಎದುರಿಸುತ್ತಿದೆ. ಅದರಲ್ಲಿ ಪ್ಲಾಸ್ಟಿಕ್‌ಗಳ ಪಾತ್ರ ದೊಡ್ಡದು. ಇದರಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಕೂಡ ಸೇರಿವೆ. ಭಾರತದಲ್ಲಿ ಪ್ರತಿವರ್ಷ 11,300 ಟನ್‌ ಪ್ಲಾಸ್ಟಿಕ್‌ ಕಸ ಸಂಗ್ರಹವಾಗುತ್ತದೆ. ಅಂದಹಾಗೆ ಅದು ಮಣ್ಣಿನಲ್ಲಿ ಕರಗದ ಕಸ. ಇಂತಹ ಸ್ಥಿತಿಯಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತಹ ಮಣ್ಣಿನಲ್ಲಿ ವಿಲೀನವಾಗುವಂತಹ ಪರಿಸರಸ್ನೇಹಿ ಪ್ಯಾಡ್‌ಗಳನ್ನು ಬಳಸಬೇಕು.

ಕೊಳಕು ಬಟ್ಟೆಯಿಂದ ಮುಕ್ತಿ

ಗ್ರಾಮೀಣ ಕ್ಷೇತ್ರದಲ್ಲಿ ಮಹಿಳೆಯರು ಈಗಲೂ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಬದಲು ಹಳೆಯ ಬಟ್ಟೆ, ಕಾಗದ, ಎಲೆಗಳು, ಬೂದಿ ಇಲ್ಲಿ ಮಣ್ಣನ್ನು ಬಳಸುತ್ತಾರೆ. ಇದರಿಂದಾಗಿ ಅವರು ಸೋಂಕಿನ ಜೊತೆಗೆ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಹೀಗಾಗಿ ಈಗ ಸರ್ಕಾರೀ ಅಗ್ಗದ ದರದಲ್ಲಿ ಲಭ್ಯವಾಗುವ ಪ್ಯಾಡ್‌ಗಳನ್ನು ತಯಾರಿಸುತ್ತಿದೆ. ಇದರಿಂದ ಮುಟ್ಟಿನ ದಿನಗಳಲ್ಲಿ ಕೊಳಕು ಬಟ್ಟೆ ಬಳಸುವುದರಿಂದ ಮುಕ್ತಿ ದೊರಕುತ್ತದೆ.

ಪರಿಸರಸ್ನೇಹಿ ಪ್ಯಾಡ್ಗಳು

ಮಾರುಕಟ್ಟೆಯಲ್ಲಿ ಅಗ್ಗದ ಹಾಗೂ ದುಬಾರಿ ಬೆಲೆಯ ಪ್ಯಾಡ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿನ ವ್ಯತ್ಯಾಸ ಇಷ್ಟೆ. ಯಾವುದು ಸಿಂಥೆಟಿಕ್‌ ಪ್ಯಾಡ್‌ ಆಗಿರುತ್ತದೊ, ಅದರಲ್ಲಿ ಶೇ.90 ರಷ್ಟು ಪ್ಲಾಸ್ಟಿಕ್‌, ಪಾಲಿಮರ್ಸ್‌, ಪರ್ಫ್ಯೂಮ್ ಹಾಗೂ ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಅವು ಮಹಿಳೆಯರ ಸಂವೇದನಾಶೀಲ ತ್ವಚೆಗೆ ಹಾನಿಯನ್ನು ಉಂಟುಮಾಡುತ್ತವೆ. ಆದರೆ ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳು ಬಗೆಬಗೆಯ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವುದರಿಂದ ಅವು ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ. ಅವುಗಳ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಈ ಬಗೆಯ ಪ್ಯಾಡ್‌ಗಳು ಬಹಳ ಮೃದುವಾಗಿರುವುದರಿಂದ ಮಹಿಳೆಯರ ಸೂಕ್ಷ್ಮ ತ್ವಚೆಗೆ ಹಾನಿಯುಂಟು ಮಾಡುವುದಿಲ್ಲ.

ಬಯೋಡೀಗ್ರೆಡೆಬಲ್ ಪ್ಯಾಡ್ಗಳು

ಈ ಪ್ಯಾಡ್‌ಗಳು ನೈಸರ್ಗಿಕ ಸಸ್ಯಮೂಲಗಳ ಎಳೆಗಳಿಂದ ತಯಾರಾಗಿರುವುದರಿಂದ ಇವು 6 ತಿಂಗಳಿಂದ 2 ವರ್ಷಗಳ ಅವಧಿಯಲ್ಲಿ ಭೂಮಿಯಲ್ಲಿ ಕರಗುತ್ತವೆ. ಅವುಗಳಿಂದ ಪರಿಸರಕ್ಕೆ ಯಾವುದೇ ತೆರನಾದ ಹಾನಿಯಿಲ್ಲ.

ರೀಯೂಸೆಬಲ್ ಪ್ಯಾಡ್ಸ್

ಈ ತೆರನಾದ ಪ್ಯಾಡ್‌ಗಳನ್ನು ಸ್ವಚ್ಛಗೊಳಿಸಿ ಪುನಃ ಬಳಸಿಕೊಳ್ಳಬಹುದು. ಇವು ತ್ವಚೆಯ ಮೇಲೆ ಯಾವುದೇ ರೀತಿಯ ಉರಿ ಅಥವಾ ರಾಶೆಸ್‌ ಉಂಟು ಮಾಡುವುದಿಲ್ಲ. ನೀವು ಪ್ರವಾಸಕ್ಕೆ ಹೊರಡುತ್ತಿದ್ದರೆ, ಸ್ಯಾನಿಟರಿ ಪ್ಯಾಡ್‌ಗಳ ಜೊತೆಗೆ ಅವನ್ನು ಬಳಕೆಯ ಬಳಿಕ ಎಸೆಯಲು ಪಾಲಿಥಿನ್‌ ಬ್ಯಾಗ್‌ ಅಥವಾ ಟಿಶ್ಯು ಪೇಪರ್‌ಗಳನ್ನು ಜೊತೆಗೆ ಕೊಂಡೊಯ್ಯಬೇಕಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಎಂತಹ ಕೆಲವು ಪ್ಯಾಡ್‌ಗಳು ಬಂದಿವೆಯೆಂದರೆ ಅವು ಡಿಸ್ಪೋಸೆಬಲ್ ಬ್ಯಾಗ್‌ಗಳ ಜೊತೆಗೆ ಬರುತ್ತವೆ. ಪ್ಯಾಡ್ ಬಳಸಿ ನೀವು ಸುಲಭವಾಗಿ ಅವನ್ನು ವಿಲೇವಾರಿ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ