ಇಡೀ ವಿಶ್ವದ ತುಂಬಾ ಕೊರೋನಾದೇ ಕಾರುಬಾರು. ಯಾವ ಚಾನೆಲ್ ‌ಹಾಕಿದರೂ, ವಾಟ್ಸ್ ಆ್ಯಪ್‌ ಮೆಸೇಜ್‌ಗಳಲ್ಲೂ, ಯಾರನ್ನಾದರೂ ಮಾತನಾಡಿಸಿದರೂ ಸರಿ..... ಎಲ್ಲರದೂ ಒಂದೇ ಮಾತು. ಇದೇನಿದು ಪ್ರಪಂಚದ ಮೂಲೆ ಮೂಲೆಯಲ್ಲೂ ತನ್ನ ಕರಾಮತ್ತನ್ನು ತೋರಿಸಿದೆ. ಎಂತೆಂತಹ ಬಲಿಷ್ಠ ರಾಷ್ಟ್ರಗಳೂ ಸಹ ನಡುಗುವಂತೆ ಮಾಡಿದೆ. ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.

ಇದರಿಂದ ದೂರವಿರಲು ಅಥವಾ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಳ್ಳಿ ಎಂದು ಪ್ರಧಾನ ಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಎಲ್ಲರೂ ಸಾರಿ ಸಾರಿ ಜನತೆಯನ್ನು ವಿನಂತಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವೈದ್ಯರು ಹೇಳುವುದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು. ಇದು ಬರಿಯ ಕೊರೋನಾ ವ್ಯಾಧಿಗೆ ಮಾತ್ರವಲ್ಲ, ಯಾವುದೇ ಅನಾರೋಗ್ಯವಾದರೂ ಸರಿ ರೋಗ ನಿರೋಧಕ ಶಕ್ತಿ ಇದ್ದಾಗ ಇದು ನಿಮ್ಮನ್ನು ಹೆಚ್ಚು ಕಾಡುವುದಿಲ್ಲ. ಒಂದು ರೀತಿ ಫ್ಲೈಯಿಂಗ್‌ ವಿಸಿಟ್‌ ನೀಡಿ ಹೊರಟುಹೋಗಿ ಬಿಡುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹಾಗಾದರೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುದು ಹೇಗೆ.....?

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಸ್ಟ್ರೆಸ್‌ (ಮಾನಸಿಕ ಒತ್ತಡ) ಖಂಡಿತ ಇದು ಒಳ್ಳೆಯದಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಮಾನಸಿಕ ಒತ್ತಡದಿಂದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಹಾರ್ಮೋನುಗಳ ಲೆವೆಲ್‌ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಏರುಪೇರಾದಾಗ ನೆಗಡಿ, ಕೆಮ್ಮು, ಕೊರೋನಾ ವೈರಸ್‌ ಸಹ ನಿಮ್ಮನ್ನು ಆರಿಸಲು ಸುಲಭವಾಗುತ್ತದೆ. ಆದ್ದರಿಂದ ಎದೆಗುಂದದಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪಾಸಿಟಿವ್ ‌ಆಗಿ ಯೋಚಿಸಿ. ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಂಡಾಗ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಲೈಂಗಿಕ ಚಟುವಟಿಕೆ

ಲೈಂಗಿಕ ಚಟುವಟಿಕೆಯ ಬಗ್ಗೆ ಆತಂಕ ಬೇಡ. ಯೋಚಿಸುವ ಅಗತ್ಯವಿಲ್ಲ. ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಸಾಕು ಪ್ರಾಣಿಗಳು (ಪೆಟ್‌ಗಳು) ಅನೇಕ ಅಧ್ಯಯನಗಳ ಪ್ರಕಾರ ಸಾಕುಪ್ರಾಣಿಗಳಿಂದ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಲೆವೆಲ್ ‌ಸಹ ಕಡಿಮೆಯಾಗುತ್ತದೆ.

ಒಳ್ಳೆಯದನ್ನು ಯೋಚಿಸಿ, ನಿರೀಕ್ಷಿಸಿ

ನಾವು ಆಶಾವಾದಿಗಳಾಗಿದ್ದಾಗ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ  ಎಂದು ಅಧ್ಯಯನವೊಂದು ಹೇಳುತ್ತದೆ. ಅರ್ಧ ತುಂಬಿದ ಹಾಲಿನ ಲೋಟವನ್ನು ಕಂಡಾಗ ಅದು ಅರ್ಧ ತುಂಬಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅರ್ಧ ಖಾಲಿ ಇದೆಯೆಂದು ಅಂದುಕೊಳ್ಳಲೇಬೇಡಿ.

ಪ್ರತಿದಿನ ನಮಗೆ ಆಗಿರುವ ಒಳ್ಳೆಯ ವಿಷಯಗಳನ್ನು ನೆನಪಿಸಿಕೊಳ್ಳಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲದೆ ಇರಬಹುದು. ಆದರೆ ಅದರಿಂದ ಎಷ್ಟರ ಮಟ್ಟಿಗೆ ಒಳ್ಳೆಯದನ್ನು ನಿರೀಕ್ಷಿಸಬಹುದು ಎನ್ನುವುದನ್ನು ಯೋಚಿಸಿ. ಇದರಿಂದ ಖಂಡಿತ ಇಮ್ಯೂನಿಟಿ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯದನ್ನು ನಿರೀಕ್ಷಿಸಿ. ಆಗ ಒಳ್ಳೆಯದೇ ಆಗುತ್ತದೆ. ಕೆಲವು ಕಾನೂನು ವಿದ್ಯಾರ್ಥಿಗಳ ಅಧ್ಯಯನದ ಪ್ರಕಾರ ಜೀವನದಲ್ಲಿ ಆಶಾವಾದಿಗಳಾಗಿದ್ದಾಗ ಅರ್ಥಾತ್‌ ಆಪ್ಟಿಮಿಸ್ಟಿಕ್‌ ಆಗಿದ್ದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ನಗು ನಗುತಿರಿ

ನಗು ಸಹ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಖಂಡಿತ ಇದು ನಿಜ. ಒಂದು ಅಧ್ಯಯನದ ಪ್ರಕಾರ ಭಾವನಾತ್ಮಕ ಚಲನಚಿತ್ರಗಳನ್ನು ನೋಡುವವರಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಸದಾ ಹಾಸ್ಯಭರಿತ ಚಲನಚಿತ್ರಗಳನ್ನು ನೋಡುವವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ನಗೆ ಕೂಟಗಳು (ಲಾಫ್ಟರ್‌ ಕ್ಲಬ್‌) ಸಹ ಈ ವಿಷಯದಲ್ಲಿ ಬಹಳ ಸಹಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದ್ಯಾನವನಗಳಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ನಗೆ ಕೂಟಗಳು ಖಂಡಿತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ