ಅದರನ್ವಯ ಈಗ ಬಹುತೇಕ ಚಟುವಟಿಕೆಗಳು ಶುರುವಾಗಿವೆ. ಆಫೀಸ್‌, ದೇವಾಲಯ, ರೆಸ್ಟೋರೆಂಟ್‌, ಮಾರುಕಟ್ಟೆಗಳು ಅನ್ ಲಾಕ್‌ 2.0ನಲ್ಲಿ ಶುರುವಾಗಿದ್ದವು. ಅನ್‌ ಲಾಕ್‌ 3.0ನಲ್ಲಿ ಯೋೕಗ, ಜಿಮ್ ಚಟುವಟಿಕೆಗಳಿಗೆ ಚಾಲನೆ ಕೊಡಲಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರತಿ 2-3 ಗಂಟೆಗಳಿಗೊಮ್ಮೆ ಸ್ಯಾನಿಟೈಸೇಶನ್‌ ಅತ್ಯವಶ್ಯಕ. ನಿಜ ಅರ್ಥದಲ್ಲಿ ಇನ್ನು ಮುಂದೆಯೇ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಪ್ರಸ್ತುತ ಅಂಕಿ ಅಂಶಗಳ ಪ್ರಕಾರ, ವಿಶ್ವ ಮಟ್ಟದಲ್ಲಿ ಈವರೆಗೆ 7 ಲಕ್ಷ ಜನರು ಮೃತಪಟ್ಟಿದ್ದು, 18 ಕೋಟಿ ಜನರು ಸೋಂಕಿತರಾಗಿದ್ದಾರೆ. ಅದರಲ್ಲಿ 11 ಕೋಟಿಯಷ್ಟು ಜನ ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೆ 39,000 ಜನರು ಮೃತರಾಗಿದ್ದು, 18 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಅದರಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

ಒಂದೆಡೆ, ಬಹಳಷ್ಟು ದೇಶಗಳ ಗಮನ ಕೋವಿಡ್‌ಗಾಗಿ ಲಸಿಕೆ ಕಂಡುಹಿಡಿಯುವುದರ ಕಡೆ ಇದೆ. ಇನ್ನೊಂದೆಡೆ ಜನರು ಮೇಲಿನಿಂದ ಮೇಲೆ ಅದರ ನಿಯಂತ್ರಣದ ಉಪಾಯಗಳನ್ನು ಅನುಸರಿಸಬೇಕಾಗಿದೆ. ಅವುಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಶನ್‌, ಕೈ ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು, ಗ್ಲೌಸ್‌ ಧರಿಸುವುದು, ಹಸ್ತಲಾಘವ ಮಾಡದಿರುವುದು ಮುಖ್ಯವಾಗಿವೆ.

ಅನ್‌ ಲಾಕ್‌ ಪ್ರಕ್ರಿಯೆಯ ಜೊತೆಗೆ ಎಲ್ಲ ಕಡೆಯೂ ಥರ್ಮಲ್ ಸ್ಕ್ಯಾನಿಂಗ್‌ ಮತ್ತು ಸ್ಯಾನಿಟೈಸೇಶನ್‌ ಬಳಿಕವೇ ಒಳಗೆ ಬಿಡಲಾಗುತ್ತಿದೆ. ನಿಜಕ್ಕೂ ಇದು ಬಹಳ ಅಗತ್ಯ ಪ್ರಕ್ರಿಯೆಯಾಗಿದೆ. ಸರ್ಕಾರ ಕೂಡ ಮೇಲಿಂದ ಮೇಲೆ ಸ್ಯಾನಿಟೈಸೇಶನ್‌ ಹಾಗೂ ಕೈಗಳನ್ನು ಸ್ವಚ್ಛಗೊಳಿಸಲು ಸಲಹೆ ನೀಡುತ್ತಿರುತ್ತದೆ. ಜನರು ಈ ಭಯಾನಕ ರೋಗದ ಕಪಿಮುಷ್ಟಿಗೆ ಸಿಲುಕಬಾರದು ಎನ್ನುವುದೇ ಅದರ ಮುಖ್ಯ ಧ್ಯೇಯವಾಗಿದೆ.

ಸ್ಯಾನಿಟೈಸೇಶನ್‌ ಹಾಗೂ ಕೈ ತೊಳೆದುಕೊಳ್ಳುವ ಪ್ರಕ್ರಿಯೆ ಈ ಭಯಾನಕ ಸ್ಥಿತಿಯೊಂದಿಗೆ ಹೋರಾಡಲು ಮುಖ್ಯ ಪಾತ್ರ ವಹಿಸುತ್ತಿದೆ. ಕೆಲವರಿಗೆ ಇದರ ಬಗ್ಗೆ ಚೆನ್ನಾಗಿ ಮನವರಿಕೆಯಾಗಿದೆ. ಆದರೆ ಅವರು ಈಗಲೂ ಇದಕ್ಕೆ ಮಹತ್ವ ಕೊಡದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅದರ ದುಷ್ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ. ಇದೇ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸ್ಯಾನಿಟೈಸೇಶನ್‌ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.

ಸ್ಯಾನಿಟೈಸೇಶನ್‌ ಏಕೆ ಅತ್ಯವಶ್ಯಕ?

ಸಾಮಾನ್ಯವಾಗಿ ಜನರು ಸ್ವಚ್ಛತೆ ಮತ್ತು ಸ್ಯಾನಿಟೈಸೇಶನ್‌ ನಡುವೆ ವ್ಯತ್ಯಾಸ ಗುರುತಿಸುವುದಿಲ್ಲ. ವಾಸ್ತವದಲ್ಲಿ ಎರಡೂ ಭಿನ್ನ ಭಿನ್ನವಾಗಿವೆ. ಸ್ವಚ್ಛತೆಯು ಕೊಳಕು, ಧೂಳು, ಮಣ್ಣು ಹಾಗೂ ಕೆಲವು ಬಗೆಯ ರೋಗಾಣುಗಳನ್ನು ನಿವಾರಿಸಲು ನೆರವಾಗುತ್ತದೆ. ಸ್ವಚ್ಛತೆಯಿಂದ ಎಲ್ಲ ಬಗೆಯ ರೋಗಾಣುಗಳನ್ನು ನಿವಾರಿಸಲು ಆಗದು.

ಆದರೆ ಸ್ಯಾನಿಟೈಸೇಶನ್‌ ನಿಂದ ರೋಗಾಣುಗಳ ಸಂಖ್ಯೆಯನ್ನು ಇಲ್ಲದಂತೆ ಮಾಡಬಹುದು.

ಸ್ಯಾನಿಟೈಸೇಶನ್‌ ರೋಗಾಣುಗಳನ್ನು ನಿವಾರಿಸಿ ಸೋಂಕಿನ ಅಪಾಯವನ್ನು ಕಡಿಮೆಗೊಳಿಸುತ್ತದೆ.

ಸ್ಯಾನಿಟೈಸೇಶನ್‌ ಸೋಂಕು ಪಸರಿಸುವಿಕೆಯನ್ನು ತಡೆಯುತ್ತದೆ.

ಸ್ಯಾನಿಟೈಸೇಶನ್‌ ಗಾಗಿ ನಿಮಗೆ ನೀರು ಹಾಗೂ ಸೋಪಿನ ಅವಶ್ಯಕತೆ ಉಂಟಾಗುವುದಿಲ್ಲ.

ಸ್ಥಳ ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಸ್ಯಾನಿಟೈಸೇಶನ್‌ ಎಲ್ಲಿಯಾದರೂ ಸುಲಭವಾಗಿ ಮಾಡಬಹುದು.

ಕಂಟೈನ್‌ ಮೆಂಟ್‌ ಝೋನ್‌ ಹಾಗೂ ಆಸ್ಪತ್ರೆಗಳಿಂದ ಸೋಂಕು ಪಸರಿಸದಂತೆ ತಡೆಯಲು ನಿಯಮಿತವಾಗಿ ಸ್ಯಾನಿಟೈಸೇಶನ್ ಉಪಯೋಗ ಮಾಡಲಾಗುತ್ತದೆ.

ರೋಗಾಣು ಯಾವುದೇ ಪದರಿನಲ್ಲಿರಲಿ ಅಥವಾ ವಾತಾವರಣದಲ್ಲಿರಲಿ ಸ್ಯಾನಿಟೈಸೇಶನ್‌ ಪ್ರತಿಯೊಂದು ಬಗೆಯ ರೋಗಾಣುಗಳನ್ನು ಕೊನೆಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದೇ ಕಾರಣದಿಂದ ಮೇಲಿಂದ ಮೇಲೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಸ್ಯಾನಿಟೈಸೇಶನ್‌ ಕೂಡ ಮಾಡಲಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ