ಸುಂದರವಾದ ಬಣ್ಣಗಳನ್ನು ಬಯಸದವರು ಯಾರು? ಬೇರೆಯವರು ತಮ್ಮ ಸೌಂದರ್ಯ ಪ್ರಶಂಸೆ ಮಾಡಲಿ ಎಂದು ಯಾರಿಗೆ ತಾನೇ ಇಷ್ಟವಿಲ್ಲ? ಲಿಪ್ ಸ್ಟಿಕ್‌ನ ಲೋಕದಲ್ಲಿ ನಾವು ಪ್ರವೇಶಿಸಿದಾಗ ನಮಗೆ ಅದರ ಅನೇಕ ವೈವಿಧ್ಯತೆ ಕಾಣಿಸುತ್ತದೆ. ಉದಾ?: ಹೊಳೆಯುವ, ದೀರ್ಘಕಾಲ ಬಾಳಿಕೆ ಬರುವ, ಮ್ಯಾಟ್, ಶಿಮರ್..... ಇತ್ಯಾದಿ. ಇದರಲ್ಲಿ ಮ್ಯಾಟ್ ಲಿಪ್ ಸ್ಟಿಕ್ ಹೆಚ್ಚು ಜನಪ್ರಿಯ. ಏಕೆಂದರೆ ಬಹುತೇಕ ಕಾಲೇಜು ಕಿಶೋರಿಯರು, ಉದ್ಯೋಗಸ್ಥ ವನಿತೆಯರು ಇದನ್ನೇ ಬಳಸುತ್ತಾರೆ. ಇದು ಬಹುಕಾಲ ಬಾಳಿಕೆ ಬರುತ್ತದೆ ಕೂಡ. ಗ್ಲಾಸಿ ಲಿಪ್ ಸ್ಟಿಕ್ ತರಹ ಬೇಗನೇ ಸ್ಮಜ್ ಆಗುವಂಥದ್ದಲ್ಲ.
ಈ ಮಳೆಗಾಲಕ್ಕೆ ಎಂಥ ಮ್ಯಾಟ್ ಲಿಪ್ ಸ್ಟಿಕ್ ಸರಿಹೋದೀತೆಂದು ನೋಡೋಣವೇ?
ಗುಲಾಬಿ ಕೋರ್ ಇಂಪ್ರೆಶನ್ ಲಿಪ್‌ಸ್ಟಿಕ್ : ಇವೆರಡೂ ಬಣ್ಣದ ಕಾಂಬಿನೇಶನ್ ಎಲ್ಲಾ ಬಗೆಗಳಲ್ಲೂ ಮಿಗಿಲಾದುದು. ಗುಲಾಬಿ ಕೋರ್ ಅಂಡರ್ ಟೋನ್ಸ್ ಜೊತೆ ಈ ಸೂಪರ್ ಗಾರ್ಜಿಯಸ್ ಶೇಡ್ ನಿಮಗೆ ಒಂದು ಮಸ್ತ್ ಎಫೆಕ್ಟ್ ನೀಡುತ್ತದೆ. ಬೇಸಿಗೆ ನಂತರದ ರೇನಿ ಸೀಸನ್‌ನಲ್ಲಿ ಬಲು ತಂಪೆನಿಸುವ ಈ ಲಿಪ್ ಕಲರ್ ಶೇಡನ್ನು ನಿಮಗಾಗಿ ಆರಿಸಿ. ನ್ಯೂಡ್ ಲುಕ್ಸ್ ನೀಡುವ ಶೇಡಿನ ಈ ಲಿಪ್ ಸ್ಟಿಕ್‌ನ್ನು ಕಡಿಮೆ ಖರ್ಚಿನಲ್ಲೇ ಮ್ಯಾನೇಜ್ ಮಾಡಬಹುದು. ಹೀಗಾಗಿ ಈ ಸಲದ ಮಳೆಗಾಲದಲ್ಲಿ ಟಚ್ ಅಪ್ ಕುರಿತಾಗಿ ಚಿಂತಿಸುವ ಅಗತ್ಯವಿಲ್ಲ.
ವೆಲ್ವೆಟ್ ಕಲರ್ ಮ್ಯಾಟ್ ಲಿಪ್ ಸ್ಟಿಕ್ : ಮ್ಯಾಟ್ ಲಿಪ್ ಸ್ಟಿಕ್‌ನಲ್ಲಿ ವೆಲ್ವಟ್ ಕಲರ್ ಒಂದು ವಿಭಿನ್ನ ಲುಕ್ ನೀಡುತ್ತದೆ. ಇದೀಗ ಹಳೆಯ ನ್ಯೂಡ್ ಬ್ರೌನ್ ಕಲರನ್ನು ಬಿಟ್ಟು ವೆಲ್ವೆಟ್ ಕಲರನ್ನು ನಿಮ್ಮದಾಗಿಸಿಕೊಳ್ಳಿ. ಫೇರ್ ಕಾಂಪ್ಲೆಕ್ಷನ್ ವುಳ್ಳ ಹುಡುಗಿಯರಿಗೆ ಈ ವೆಲ್ವೆಟ್ ಕಲರ್ ಲಿಪ್ ಸ್ಟಿಕ್ ಚೆನ್ನಾಗಿ ಒಪ್ಪುತ್ತದೆ. ವೆಲ್ವೆಟ್ ಶೇಡಿನ ಕಲರಿನಿಂದ ನಿಮ್ಮ ಲುಕ್ಸ್ ಗೆ ಫನ್‌ಗ್ಲಾಮರ್ ಹೆಚ್ಚುತ್ತದೆ ಎಂಬುದನ್ನು ಮರೆಯದಿರಿ. ಹೀಗಾಗಿ ಈ ಲಿಪ್ ಸ್ಟಿಕ್ ಸದಾ ನಿಮ್ಮೊಂದಿಗಿರಿಸಿಕೊಳ್ಳಿ.
ಪೀಚ್ ಕಾರ್ನೇಶನ್ ಮ್ಯಾಟ್ ಲಿಪ್ ಸ್ಟಿಕ್: ಇಗೊಳ್ಳಿ, ಮತ್ತೊಂದು ಸುಂದರ ಬ್ಯೂಟಿ ಪ್ರಾಡಕ್ಟ್ ಎಂದರೆ ಪೀಚ್ ಕಾರ್ನೇಶನ್ ಮ್ಯಾಟ್ ಲಿಪ್ ಸ್ಟಿಕ್. ಇದು ಪಿಂಕಿಶ್ ಬ್ರೌನ್ ಕುರಿತದ್ದಾಗಿದ್ದು, ಇದನ್ನು ತೀಡಿದ ಬಳಿಕ ನ್ಯೂಡ್ ಲುಕ್ಸ್ ಕಾಣಿಸುತ್ತದೆ. ಈ ಪೀಚ್ ಕಾರ್ನೇಶನ್ ಮ್ಯಾಟ್ ಲಿಪ್ ಸ್ಟಿಕ್ ಕೇವಲ ಶ್ಯಾಮಲ ಸೌಂದರ್ಯ (ನಸುಗಪ್ಪು) ವುಳ್ಳರಿಗೆ ಮಾತ್ರ ಹೆಚ್ಚು ಒಪ್ಪುತ್ತದೆ. ಕಾಲೇಜು ಕಿಶೋರಿ ಹಾಗೂ ಉದ್ಯೋಗಸ್ಥ ವನಿತೆಯರು ಹಾಯಾಗಿ ಇದನ್ನು ಬಳಸಬಹುದು. ನಿಮ್ಮ ಬಳಿಯ ಯಾವುದೇ ಬಣ್ಣದ ಉಡುಗೆಗೂ ಇದು ಚೆನ್ನಾಗಿ ಒಪ್ಪುತ್ತದೆ. ತನ್ನ ತುಟಿಯ ಮೇಲಿನ ಬಣ್ಣ ಬೇರೆಯವರಿಗೆ ತಿಳಯಬಾರದೆಂದು ಬಯಸುವವರು ಹಾಯಾಗಿ ಈ ಲಿಪ್ ಸ್ಟಿಕ್ ಬಳಸಬಹುದು.
ಸ್ಯಾಟಿನ್ ಜೆಜ್ ಬೆರಿ ಜೆಮ್ : ಈ ಸೂಪರ್ ಕ್ರೀಮೀ ನ್ಯೂಡ್ ಲಿಪ್ ಸ್ಟಿಕ್ ಕಲರ್, ಪ್ರತಿಯೊಂದು ಬಗೆಯ ಸ್ಕಿನ್ ಟೋನಿಗೆ ಹೊಂದುವ ರೆಗ್ಯುಲರ್ ಕಲರ್ ಆಗಿದೆ. ನಿಮ್ಮ ರೆಗ್ಯುಲರ್ ಸ್ಟೈಲಿನಲ್ಲಿ ನೀವು ಬೆರಿಯ ಈ ಲಿಪ್ ಸ್ಟಿಕ್ ಬಳಸಿಕೊಳ್ಳಬಹುದು. ಇಂಥ ಡಾರ್ಕ್ ಕಲರ್ ಲಿಪ್ ಸ್ಟಿಕ್ ಗಳ ಜಾದೂ ನಿಜಕ್ಕೂ ಮೋಡಿ ಮಾಡುವಂಥದ್ದು.