ಮಳೆಯಲ್ಲಿ ನೆನೆಯುವುದು ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಈ ಮಳೆ ನಮ್ಮ ಕೂದಲನ್ನು ಡಲ್, ನಿರ್ಜೀವ ಹಾಗೂ ಡ್ರೈ ಮಾಡಿಬಿಡುತ್ತದೆ. ಹೀಗಾದಾಗ ನಾವು ವಿಶೇಷವಾಗಿ ಕೂದಲಿನ ಆರೈಕೆಯತ್ತ ಗಮನ ಕೊಡಬೇಕು.

ಈ ಕೊರೋನಾ ಮಧ್ಯೆ ಸೆಲೂನಿಗೆ ಹೋಗುವುದು ಸರಿಯಲ್ಲ ಎಂಬುದು ನಿಜ. ಹೀಗಿರುವಾಗ ಮನೆಯಲ್ಲೇ ನಿಮ್ಮ ಕೂದಲಿನ ಆರೈಕೆ ಮಾಡುವುದು ಹೇಗೆ ಅಂತೀರಾ? ಸೆಲೂನಿನಂಥ ಆರೈಕೆ ಮನೆಯಲ್ಲೇ ಪಡೆಯಬಹುದು, ಅದಕ್ಕಾಗಿ ಈ ಸಲಹೆಗಳನ್ನು ಅಗತ್ಯ ಪಾಲಿಸಿ. ಇದರಿಂದ ನಿಮ್ಮ ಕೂದಲು ಸುಂದರ ಆಗುವುದಲ್ಲದೆ, ನೀವು ಸೇಫ್‌ ಆಗಿರ್ತೀರಿ, ಹಣದ ಉಳಿತಾಯ ಕೂಡ! ಇದರ ಕ್ರಮ ಹೇಗೆ ಎಂದು ತಿಳಿಯೋಣವೇ? :

ಫ್ರಿಝಿನೆಸ್‌ ಸಮಸ್ಯೆ ಕಾಡಿದಾಗ

ಮಳೆ ಬರುವ ದಿನಗಳಲ್ಲಿ ಗಾಳಿಯಲ್ಲಿ ಆರ್ದ್ರತೆ ಹೆಚ್ಚಾಗಿರುವುದರಿಂದ ತಲೆಗೂದಲನ್ನು ಫ್ರಿಝಿನೆಸ್‌ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಇದರಿಂದ ಕೂದಲು ತುಂಡರಿಸುವುದು ಹೆಚ್ಚು. ಆಗ ಪಾರ್ಲರಿಗೆ ಹೋಗಿ ಇದಕ್ಕಾಗಿ ಸಾವಿರಾರು ರೂ. ಖರ್ಚು ಮಾಡಬೇಕಲ್ಲ ಎನಿಸುತ್ತದೆ. ಅಸಲಿಗೆ ಅದರ ಅಗತ್ಯವಿಲ್ಲ. ಋತುಮಾನಕ್ಕೆ ತಕ್ಕಂತೆ ನೀವು ಕೂದಲಿನ ಆರೈಕೆಗೆ ತೊಡಗಬೇಕಷ್ಟೆ. ಇದಕ್ಕಾಗಿ ಮೊದಲು ನೀವು ನಿಮ್ಮ ಕೂದಲನ್ನು ಆಲಿಲ್ ‌ಆಯಿಲ್ ‌(ಹಿಪ್ಪೆ ಎಣ್ಣೆ) ನಿಂದ ಮಸಾಜ್‌ ಮಾಡಿ. ಏಕೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಧಾರಾಳ ಅಡಗಿದ್ದು, ಅದು ಕೂದಲಿನ ಫ್ರಿಝಿನೆಸ್‌ ಓಡಿಸುವಲ್ಲಿ ಪೂರಕ. ಇದು ಕೂದಲಲ್ಲಿ ನೈಸರ್ಗಿಕ ಮಾಯಿಶ್ಚರ್‌ ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಇದಕ್ಕಾಗಿ ವಾರದಲ್ಲಿ 3-4 ಸಲ ನೀವು ಹಿಪ್ಪೆ ಎಣ್ಣೆ ಬಿಸಿ ಮಾಡಿ ನೆತ್ತಿಗೆ ತಿಕ್ಕಿ, ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ. 2-3 ವಾರಗಳಲ್ಲಿ ನಿಮ್ಮ ಸಮಸ್ಯೆ ದೂರವಾಗುತ್ತದೆ.

ಆಗ ನಿಮಗೆ ನಿಮ್ಮ ಕೂದಲಲ್ಲಿ ಸ್ಮಾರ್ಟ್‌ ನೆಸ್‌ ಮತ್ತು ಹೊಳಪು ಕಾಣಿಸುತ್ತದೆ.

ಪ್ರತಿ ವಾಶಿಗೂ ಕಂಡೀಶನರ್

Healthy-Diet

ಯಾವಾಗ ನಮ್ಮ ತಲೆಯ ನೆತ್ತಿ (ಸ್ಕಾಲ್ಪ್) ಯಿಂದ ಸಹಜ ಜಿಡ್ಡು ಮಾಯವಾಗುತ್ತದೋ ಕೂದಲು ಒರಟು, ಡ್ರೈ, ಗುಂಗುರಾಗ ತೊಡಗುತ್ತದೆ. ಹೀಗಾಗಿ ಮಳೆಯ ದಿನಗಳಲ್ಲಿ ಇಂಥ ತಲೆಗೂದಲನ್ನು ವಾಶ್‌ ಮಾಡಿದ ಪ್ರತಿ ಸಲ ಕಂಡೀಶನರ್‌ ಅಗತ್ಯ ಬಳಸಬೇಕು. ಏಕೆಂದರೆ ಆಗ ಇದು ಕೂದಲಿನ ಮಾಯಿಶ್ಚರನ್ನು ಸದಾ ಉಳಿಸಿಕೊಂಡು, ಅದನ್ನು ಹೆಲ್ದಿ ಆಗಿರಿಸುತ್ತದೆ. ಕೂದಲನ್ನು ಹೈಡ್ರೇಟ್‌ ಮಾಡುವಂಥ ಕಂಡೀಶನರನ್ನೇ ಬಳಸಬೇಕು ಎಂಬುದನ್ನು ಮರೆಯದಿರಿ.

ಕೂದಲುದುರುವಿಕೆ ತಡಯಬೇಕೇ?

ಮಳೆಗಾಲದಲ್ಲಿ ಕೂದಲು ಉದುರುವಿಕೆ ದೊಡ್ಡ ಸಮಸ್ಯೆಯೇ ಸರಿ. ಇದನ್ನು ಸರಿಪಡಿಸಲು ನೀವು ಮಾರ್ಕೆಟಿನಿಂದ ದುಬಾರಿ ಮಾಸ್ಕ್ ಕೊಂಡು ತಂದು ತಲೆಗೆ ಹಚ್ಚು ಅಗತ್ಯವಿಲ್ಲ. ಬದಲಿಗೆ ಮನೆಯಲ್ಲೇ ತಯಾರಿಸಿ ಬಳಸುವಂಥ ಮಾಸ್ಕ್ ಬಗ್ಗೆ ತಿಳಿದುಕೊಳ್ಳಿ. ಇದರಿಂದ ಹೆಚ್ಚಿನ ಲಾಭಗಳಿವೆ. ಮನೆಯಲ್ಲೇ ಲಭ್ಯವಿರುವ ಸಾಮಗ್ರಿಗಳನ್ನೇ ಬಳಸಿ ಇವನ್ನು ತಯಾರಿಸಬಹುದು.

ಮೊಸರಿಗೆ ನಿಂಬೆ ರಸ ಹಿಂಡಿ ಬಳಸುವ ಹೇರ್‌ ಮಾಸ್ಕ್ ಕೂದಲಿಗೆ ಹೆಚ್ಚಿನ ಮಾಯಿಶ್ಚರ್‌ ಒದಗಿಸಿ ಅದನ್ನು ದೀರ್ಘಕಾಲ ಉಳಿಸಿಕೊಳ್ಳುತ್ತದೆ. ಇದಕ್ಕಾಗಿ ನೀವು ಒಂದು ಬಟ್ಟಲಿಗೆ 2-3 ಸೌಟು ಮೊಸರು, ಒಂದು ಹೋಳು ನಿಂಬೆಹಣ್ಣು ಹಿಂಡಿಕೊಳ್ಳಿ, ಚೆನ್ನಾಗಿ ಕದಡಿಕೊಂಡು ಇದನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ. 1 ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತಲೆಗೂದಲು ತೊಳೆಯಿರಿ. ಇದರಿಂದ ಕೂದಲು ಹೆಚ್ಚು ಸಶಕ್ತವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ