ವಯಸ್ಸಿನ ಪ್ರಭಾವ ನಮ್ಮ ಮುಖದಲ್ಲಿ ಕ್ರಮೇಣ ಇಣುಕತೊಡಗುತ್ತದೆ. ಅದನ್ನು ನಿರ್ಲಕ್ಷಿಸಿದರೆ ನಿಧಾನವಾಗಿ ಸೂಕ್ಷ್ಮ ಗೆರೆಗಳು, ಚರ್ಮ ಸಡಿಲಗೊಂಡು ಜೋತು ಬೀಳುವಿಕೆ, ಕಂಗಳ ಸುತ್ತಲೂ ಸುಕ್ಕು, ನೆರಿಗೆ, ಡಾರ್ಕ್‌ ಸರ್ಕಲ್ಸ್ ಕಾಣಲಾರಂಭಿಸುತ್ತವೆ.

ತಪ್ಪಾದ ಪ್ರಾಡಕ್ಟ್ಸ್ ಇಂದಿನ ಆಧುನಿಕ ಮಹಿಳೆ, ಗೃಹಿಣಿ ಅಥವಾ ಉದ್ಯೋಗಸ್ಥೆ ಆಗಿರಲಿ, ತನ್ನನ್ನು ತಾನು ಸುಂದರವಾಗಿ ತೋರಿಸಿಕೊಳ್ಳಲು ಎಲ್ಲಾ ವಿಧದಲ್ಲೂ ಪ್ರಯತ್ನಪಡುತ್ತಾಳೆ.

ಅವಳ ಮುಖದ ಮೇಲೆ ವಯಸ್ಸಿನ ಪ್ರಭಾವ ಕಾಣುತ್ತಿದ್ದಂತೆ, ತಕ್ಷಣ ಆ್ಯಂಟಿ ಏಜಿಂಗ್‌ ಕ್ರೀಂ ಕೊಳ್ಳಲು ಧಾವಿಸುತ್ತಾಳೆ. ಆದರೆ ಅವಳು ಮೆಡಿಕಲ್ ಶಾಪಿಗೆ ಹೋದಾಗ ಅಲ್ಲಿ ಬೇಕಾದಷ್ಟು ವಿವಿಧ ಆಯ್ಕೆ ಗಮನಿಸಿ ಗೊಂದಲಗೊಳ್ಳುತ್ತಾಳೆ. ಬುದ್ಧಿ ಮಂಕಾಗಿ ಓಡುವುದೇ ಇಲ್ಲ. ಆಗ ಎಷ್ಟೋ ಸಲ ಕೈಗೆ ಸಿಕ್ಕಿದ ಯಾವುದೋ ತಪ್ಪಾದ ಅಗ್ಗದ ಪ್ರಾಡಕ್ಟ್ ಹಿಡಿದು ಬರುತ್ತಾಳೆ.

ನಿಮಗೂ ಹೀಗಾಗಬಾರದು ಎಂದರೆ, ಅದಕ್ಕಾಗಿ ಈ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಆಗ ಮಾತ್ರ ನೀವು ನಿಮ್ಮ ಚರ್ಮಕ್ಕೆ ಒಪ್ಪು ಆ್ಯಂಟಿ ಏಜಿಂಗ್‌ ಕ್ರೀಂ ಪರ್ಫೆಕ್ಟ್ ಆಗಿ ಕೊಳ್ಳಬಲ್ಲಿರಿ. ಸ್ಕಿನ್‌ ಟೈಪ್‌ಗೆ ತಕ್ಕಂತೆ ಆಯ್ಕೆ

ಆಯ್ಲಿ : ಈ ತರಹದ ಚರ್ಮದವರಿಗೆ ಬೇಗ ಸುಕ್ಕುಗಳಾಗುವುದಿಲ್ಲ. ಆದರೆ ಆ್ಯಕ್ನೆ, ಮೊಡವೆಗಳ ಗೊಡವೆ ಹೆಚ್ಚು. ಹೀಗಾಗಿ ಕ್ರೀಂ ಆರಿಸುವಾಗ ವಹಿಸಬೇಕಾದ ಎಚ್ಚರಿಕೆ ಎಂದರೆ, ಅದನ್ನು ಹಚ್ಚಿದ ನಂತರ ನಮ್ಮ ಚರ್ಮ ಇನ್ನಷ್ಟು ಆಯ್ಲಿ ಎನಿಸಬಾರದು.

ನಾರ್ಮಲ್ : ಈ ತರಹದ ಚರ್ಮದವರಿಗೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಇರುವ ಪ್ರಾಡಕ್ಟ್ ಆರಿಸುವಾಗ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ತಪ್ಪಾದ ಕ್ರೀಂ ಬಳಸಿದರೆ ಅದರಿಂದ ಸೈಡ್‌ಎಫೆಕ್ಟ್ ತಪ್ಪಿದ್ದಲ್ಲ.

ಸೆನ್ಸಿಟಿವ್ ‌ಸ್ಕಿನ್‌ : ಇಂಥವರು ತಮ್ಮ ಚರ್ಮವನ್ನು ಹೆಚ್ಚು ಜೋಪಾನವಾಗಿ ರಕ್ಷಿಸಿಕೊಳ್ಳತಕ್ಕದ್ದು. ಏಕೆಂದರೆ ಯಾವುದೇ ತಪ್ಪಾದ ಪ್ರಾಡಕ್ಟ್ ಬಳಕೆ, ಈ ಚರ್ಮದವರಿಗೆ ಬೇಗನೆ ಸೈಡ್‌ ಎಫೆಕ್ಟ್ ನೀಡುತ್ತದೆ.

ಡ್ರೈ : ಇಂಥವರಿಗೆ ತಮ್ಮ ಚರ್ಮದಲ್ಲಿ ಬೇಗ ಸುಕ್ಕುಗಳು ಕಾಣಿಸುತ್ತವೆ. ಹೀಗಾಗಿ ಇಂಥವರು ಆ್ಯಂಟಿ ಏಜಿಂಗ್‌ ಕ್ರೀಂ ಆರಿಸುವಾವಾಗ ಹೆಚ್ಚಿನ ಎಚ್ಚರ ವಹಿಸತಕ್ಕದ್ದು.

ಮುಖದ ಪರೀಕ್ಷೆ : ಆ್ಯಂಟಿ ಏಜಿಂಗ್‌ ಕ್ರೀಂ ಕೊಳ್ಳುವ ಮೊದಲು ನಿಮ್ಮ ಮುಖದಲ್ಲಿ ಎಂಥ ಸಮಸ್ಯೆ ಕಾಡಬಹುದು ಎಂದು ನೀಟಾಗಿ ನೋಡಿಕೊಳ್ಳಿ.

ಸುಕ್ಕು ಬಂತೆ? ಮುಖದಲ್ಲಿನ ಚರ್ಮ ಬಿಗಿತ ಕಳೆದುಕೊಂಡು ಸಡಿಲವಾಯ್ತೇ? ಹೀಗಾಗಿ ಇನ್ನು ಹೆಚ್ಚಿಸದೆ ಫ್ರೆಂಡ್ಲಿ ಕ್ರೀಂ ಖರೀದಿಸಿ.

ಅತ್ಯಗತ್ಯ ತಜ್ಞರ ಸಲಹೆ ಪಡೆಯಿರಿ : ಆ್ಯಂಟಿ ಏಜಿಂಗ್‌ ಕ್ರೀಂ ಆರಿಸುವ ಮುನ್ನ ಅಗತ್ಯ ಚರ್ಮ ತಜ್ಞರ ಸಲಹೆ ಪಡೆಯಿರಿ. ಅವರು ನಿಮ್ಮದು ಯಾವ ಬಗೆಯ ಚರ್ಮ ಎಂದು ಪರೀಕ್ಷಿಸಿ, ನಿಮಗೆ ಅಗತ್ಯವಿರುವಂಥ ಪ್ರಾಡಕ್ಟ್ ಸೂಚಿಸುತ್ತಾರೆ, ಅದನ್ನೇ ಬಳಸಿಕೊಳ್ಳಿ.

ಈ ತರಹ ನೀವು ಚರ್ಮದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

ಕ್ರೀಂ ಬಳಸುವ ಮುನ್ನ

ಬಹಳಷ್ಟು ಕಂಪನಿಗಳು ಹೇಳಿಕೊಳ್ಳುವುದೆಂದರೆ ತಮ್ಮ ಪ್ರಾಡಕ್ಟ್ ಬಳಸುವುದರಿಂದ ಕೆಲವೇ ದಿನಗಳಲ್ಲಿ, ಪರಿಣಾಮ ಕಾಣಿಸಿಕೊಂಡು ಬಹಳ ಚಿಕ್ಕವರಾಗಿ ಕಾಣುತ್ತೀರಾ, ಯಂಗ್‌ ಲುಕ್ಸ್ ಬಂದುಬಿಡುತ್ತೆ ಅಂತ. ಆದರೆ ಇದೆಲ್ಲ ಖಂಡಿತಾ ನಿಜವಲ್ಲ! ಇಂಥ ಕ್ರೀಂ ಪರಿಣಾಮ ಬೀರಲು 1-2 ತಿಂಗಳಾದರೂ ಬೇಕೇಬೇಕು.

ದುಬಾರಿ ಕ್ರೀಂ : ಬಹಳ ಹೆಂಗಸರು ಭಾವಿಸುವುದೆಂದರೆ, ಕ್ರೀಂ ಎಷ್ಟು ದುಬಾರಿಯೋ ಅದು ಅಷ್ಟು ಪರಿಣಾಮಕಾರಿ ಅಂತ! ಅಸಲಿಗೆ ಹಾಗೇನೂ ಇಲ್ಲ. ನೀವು ನಿಮ್ಮ ಚರ್ಮದ ಸಮಸ್ಯೆ ಗುರುತಿಸಿಕೊಂಡ ನಂತರವೇ ಅದಕ್ಕೆ ತಕ್ಕಂತೆ ಆ್ಯಂಟಿ ಏಜಿಂಗ್‌ ಕ್ರೀಂ ಬಳಸಬೇಕು.

ಮಲ್ಟಿ ಟಾಸ್ಕಿಂಗ್‌ ಕ್ರೀಂ : ಈ ಒಂದು ಆ್ಯಂಟಿ ಏಜಿಂಗ್‌ ಕ್ರೀಂ ತಮ್ಮೆಲ್ಲ ಚರ್ಮದ ಸಮಸ್ಯೆಗಳನ್ನೂ ಬಗೆಹರಿಸಬಲ್ಲದು ಎಂದು ಬಹುತೇಕರು ಭಾವಿಸುತ್ತಾರೆ, ಖಂಡಿತಾ ಹಾಗೇನಿಲ್ಲ. ಇದರಿಂದ ಡಾರ್ಕ್‌ ಸರ್ಕಲ್ಸ್, ಕಲೆ, ಮೊಡವೆ, ಆ್ಯಕ್ನೆ ಯಾವುದೂ ಹೋಗೋಲ್ಲ. ಇದು ಸುಕ್ಕು ದೂರ ಮಾಡಿ ಸಡಿಲ ಚರ್ಮ ಬಿಗಿಗೊಳಿಸುತ್ತದಷ್ಟೆ.

– ಜಿ. ಜ್ಯೋತಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ