ವಾತಾವರಣದಲ್ಲಿನ ಮಾಲಿನ್ಯ ಮತ್ತು ಮುಖವನ್ನು ನಿಯಮಿತವಾಗಿ ಎಕ್ಸ್ ಫಾಲಿಯೇಟ್‌ ಮಾಡಿಸದೆ ಇರುವುದರಿಂದ ಮುಖದ ಮೇಲಾಗುವ ಕಲೆ ಗುರುತುಗಳು ವಿಕಾರವಾಗಿ ಕಾಣಿಸುತ್ತದೆ. ಮುಖ್ಯವಾಗಿ ಮೂಗು ಮತ್ತು ಕೆಳತುಟಿಗಳ ಬಳಿ ಕಾಣಿಸಿಕೊಳ್ಳುವ ಬ್ಲ್ಯಾಕ್‌ ಹೆಡ್ಸ್ ವೈಟ್‌ ಹೆಡ್ಸ್ ಹಿಂಸೆ ಎನಿಸುತ್ತವೆ.

ಅಸಲಿಗೆ ಸಿಬೇಶಿಯರ್ಸ್ ಗ್ಲಾಂಡ್ಸ್ ಅಗತ್ಯಕ್ಕಿಂತ ಹೆಚ್ಚು ತೈಲಾಂಶ ಸ್ರವಿಸುವುದರಿಂದ, ಸ್ಕಿನ್‌ ಪೋರ್ಸ್‌ ಕ್ಲೋಸ್‌ ಆಗುತ್ತವೆ ಅಥವಾ ಡೆಡ್‌ ಸೆಲ್ಸ್ ಕೂಡಿಕೊಂಡು, ಹೇರ್‌ ಫಾಲಿಕ್ಸನ್ನು ಬ್ಲಾಕ್‌ ಮಾಡುವುದರಿಂದ ಚರ್ಮದ ಒಳಭಾಗಕ್ಕೆ ಆಮ್ಲಜನಕ ತಲುಪುದಿಲ್ಲ, ಹೀಗಾಗಿ ಚರ್ಮ ಉಸಿರಾಡಲು ಹೆಣಗಬೇಕಾಗುತ್ತದೆ.

ಇವನ್ನು ಸರಿಪಡಿಸಲು ಬಹಳಷ್ಟು ಉಪಾಯಗಳನ್ನು ಬಳಸುತ್ತಾರೆ. ಆದರೂ ಇವು ಮತ್ತೆ ಮತ್ತೆ ಕಾಡುತ್ತಿರುತ್ತವೆ. ಇದಕ್ಕೆ ತಜ್ಞರ ಸಲಹೆ ಏನು? ನಿಯಮಿತವಾಗಿ ನಿಮ್ಮ ಮುಖವನ್ನು ಸ್ಯಾಲಿಸಿಲಿಕ್‌ ಆ್ಯಸಿಡ್‌ಯುಕ್ತ ಕ್ಲೆನ್ಸರ್‌ ನಿಂದ ತೊಳೆಯಬೇಕಾಗುತ್ತದೆ.

ವೈಟ್ಹೆಡ್ಸ್ ಗಾಗಿ ಪರಿಹಾರ

ಬೇವು ಅರಿಶಿನದ ಪ್ಯಾಕ್‌ : ಬೇವು ಮತ್ತು ಅರಿಶಿನ ಎರಡೂ ತಮ್ಮ ಔಷಧೀಯ ಗುಣಗಳಿಗಾಗಿ ಪ್ರಸಿದ್ಧವಾಗಿವೆ. ಇವೆರಡರಲ್ಲಿ ಕಾಣ ಸಿಗುವ ಆ್ಯಂಟಿ ಆಕ್ಸಿಂಡೆಂಟ್ಸ್ ಕಾರಣ ಇವು ವೈಟ್ ಹೆಡ್ಸನ್ನು ದೂರ ಮಾಡಲು ಸಹಕಾರಿ. ಇದಕ್ಕಾಗಿ ಬೇವಿನ ಎಲೆಗಳನ್ನು ಚಿಟಕಿ ಅರಿಶಿನದ ಜೊತೆ ಅರೆದುಕೊಳ್ಳಿ. ನಂತರ ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದಾಗಿ ವೈಟ್‌ ಹೆಡ್ಸ್ ನಿಂದ ಮುಕ್ತಿ ಸಿಗುತ್ತದೆ.

ಕಡಲೆ ಬೇಳೆಯ ಸ್ಕ್ರಬ್‌ : ಕಡಲೆಹಿಟ್ಟು ಮುಖದ ಆಂತರಿಕ ಭಾಗವನ್ನು ಸ್ವಚ್ಛಗೊಳಿಸಬಲ್ಲದು. ಡೆಡ್‌ ಸ್ಕಿನ್‌ ಪ್ರಾಬ್ಲಮ್ಸ್ ದೂರ ಮಾಡುವುದಲ್ಲದೆ, ಇದು ಮುಖದ ರಂಗನ್ನೂ ತೇಲಿಸುತ್ತದೆ. 1 ಚಮಚ ಕಡಲೆಬೇಳೆ ನೆನೆಸಿ, ರುಬ್ಬಿಕೊಂಡು, ಅದಕ್ಕೆ 1 ಚಮಚ ಹಸಿ ಹಾಲು, 2 ಚಮಚ ಗುಲಾಬಿಜಲ ಬೆರೆಸಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ.

ಓಟ್ಮೀಲ್ : ಡೆಡ್‌ ಸ್ಕಿನ್‌ ದೂರಗೊಳಿಸುವುದಲ್ಲದೆ, ಓಟ್‌ ಮೀಲ್ ಸ್ಕಿನ್‌ ಫಾಲಿಯೇಟ್‌ ಮಾಡುವುದಕ್ಕೂ ಬೆಸ್ಟ್. ಇದು ಚರ್ಮದ ಹೆಚ್ಚುವರಿ ತೈಲ ಹೀರಿಕೊಂಡು ಪೋರ್ಸ್‌ ನ್ನು ಓಪನ್‌ ಮಾಡುತ್ತದೆ. ಇದರಿಂದಾಗಿ ಅದಕ್ಕೆ ಧಾರಾಳ ಆಮ್ಲಜನಕ ದೊರಕುತ್ತದೆ. ಇದಕ್ಕಾಗಿ 2 ಚಮಚ ಮೊಸರು, 1 ಚಮಚ ನಿಂಬೆ ರಸ, 1 ಚಮಚ ಜೇನು, 4 ಚಮಚ ಓಟ್‌ ಮೀಲ್ ಬೆರೆಸಿಕೊಳ್ಳಿ. ಚೆನ್ನಾಗಿ ಮುಖ ತೊಳೆದು ಒರೆಸಿದ ನಂತರ ಈ ಪೇಸ್ಟ್ ಹಚ್ಚಿರಿ. 20 ನಿಮಿಷ ಹಾಗೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.

ಬ್ಲ್ಯಾಕ್ಹೆಡ್ಸ್ ನಿವಾರಣೆಗಾಗಿ ಉಪಾಯ

ಮೊಟ್ಟೆ ಸ್ಟ್ರೈಪ್‌ : ಮೊಟ್ಟೆ ಚರ್ಮದಿಂದ ಕೊಳಕನ್ನು ಎಳೆದುಕೊಂಡು ಹೊರದಬ್ಬುತ್ತದೆ, ಇದರಿಂದ ರೋಮ ರಂಧ್ರಗಳು ಶ್ರಿಂಕ್ ಆಗುತ್ತವೆ, ಹಾಗಾಗಿ ಬ್ಲ್ಯಾಕ್‌ ಹೆಡ್ಸ್ ಕಥೆ ಮುಗಿಯುತ್ತದೆ. ಇದಕ್ಕಾಗಿ ಮೊದಲು 1 ಮೊಟ್ಟೆಯ ಬಿಳಿ ಭಾಗ ತೆಗೆದುಕೊಂಡು ಬೀಟ್ ಮಾಡಿ. ನೊರೆ ಬಂದ ಮೇಲೆ ಬೇಕಾದ ಕಡೆ ಹಚ್ಚಿರಿ. ಇದನ್ನು ಹಚ್ಚಿದ ನಂತರ ಸಣ್ಣ ಬ್ಲ್ಯಾಕ್‌ ಹೆಡ್ಸ್ ಸ್ಟ್ರೈಪ್ಸ್ ಹಚ್ಚಿರಿ. ಅದರ ಮೇಲೆ ಮತ್ತೊಂದು ಪದರ ಮೊಟ್ಟೆ ಬರಲಿ. 2 ಸಲ ಮೊಟ್ಟೆ ಪದರ, 2 ಸ್ಟ್ರೈಪ್ಸ್ ಲೆಕ್ಕವಿರಲಿ.

ಹೀಗೆ 40 ನಿಮಿಷ ಒಣಗಲು ಬಿಡಿ. ಆಮೇಲೆ ತಣ್ಣೀರು ಚಿಮುಕಿಸಿ ತೆಗೆದುಬಿಡಿ. ಈ ಪೇಸ್ಟನ್ನು ವಾರದಲ್ಲಿ 2 ಸಲ ಬಳಸಿರಿ. ಬ್ಯೂಟಿ ಪಾರ್ಲರ್‌, ಮೆಡಿಕಲ್ ಸ್ಟೋರ್‌ ಗಳಲ್ಲಿ ನಿಮಗೆ ಬ್ಲ್ಯಾಕ್‌ ಹೆಡ್ಸ್ ಸ್ಟ್ರೈಪ್ಸ್ ಸುಲಭವಾಗಿ ಸಿಗುತ್ತದೆ.

ಶುಗರ್ಪ್ಯಾಕ್‌ : ಇದನ್ನು ತಯಾರಿಸಲು 1 ಬಟ್ಟಲಿಗೆ 3 ಚಮಚ ಸಕ್ಕರೆ, 2 ಚಮಚ ಜೇನು, 1 ಚಮಚ ನಿಂಬೆ ರಸ ಬೆರೆಸಿಕೊಳ್ಳಿ. ಮಂದ ಉರಿಯಲ್ಲಿ ಇದನ್ನು ಕರಗಿಸಿ. ಗಟ್ಟಿ ಪೇಸ್ಟ್ ಆದ ಮೇಲೆ ಬೇರೊಂದು ಚಿಕ್ಕ ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1-2 ಹನಿ ಗ್ಲಿಸರಿನ್‌ ಬೆರೆಸಿ. ಈ ಪೇಸ್ಟನ್ನು ಮುಖದಲ್ಲಿ ಬೇಕಾದ ಕಡೆ ಹಚ್ಚಿರಿ. ಹೀಗೆ 20 ನಿಮಿಷ ಬಿಟ್ಟು ನಂತರ ತೊಳೆಯಿರಿ. ಹೀಗೆ ವಾರಕ್ಕೆ 2-3 ಸಲ ಈ ಪೇಸ್ಚ್ ಬಳಸುವುದರಿಂದ ಬ್ಲ್ಯಾಕ್‌ ಹೆಡ್ಸ್ ತೊಲಗಿಸುವಲ್ಲಿ ಪೂರಕ.

ಮಿಲ್ಕ್ ಪ್ಯಾಕ್‌ : 1 ಚಮಚ ಹಸಿ ಹಾಲಿಗೆ ಅಷ್ಟೇ ಪ್ರಮಾಣದ ಫ್ಲೇವರ್‌ ರಹಿತ ಜೆಲೆಟಿನ್‌ ಪೌಡರ್‌ ಬೆರೆಸಿರಿ. ಇದನ್ನು 2-3 ನಿಮಿಷ ಮೈಕ್ರೋವೇವ್ ‌ನಲ್ಲಿ ಬಿಸಿ ಮಾಡಿ. ಆಮೇಲೆ ತಂಪಾಗಿಸಿ, ಬೇಕಾದ ಕಡೆ 2-3 ಪದರ ಹಚ್ಚಿರಿ. ಈ ಪ್ಯಾಕ್‌ ನ್ನು 30 ನಿಮಿಷ ಹಾಗೇ ಬಿಡಿ, ನಂತರ ತೊಳೆಯಿರಿ. ಇದರ ಪರಿಣಾಮ ನಿಮಗೆ ಮೊದಲ ಬಳಕೆಯಲ್ಲೇ ತಿಳಿದು ಹೋಗುತ್ತದೆ. ಜಿಲೆಟಿನ್ ಪೋಷಕಾಂಶಗಳಿಂದ ತುಂಬಿದ್ದು, ಚರ್ಮವನ್ನು ರೀಜನರೇಟ್‌ ಮಾಡುತ್ತದೆ, ಚರ್ಮದಲ್ಲಿ  ಬಿಸುಪನ್ನು ತರುತ್ತದೆ. ರೋಮ ರಂಧ್ರಗಳನ್ನು ಶ್ರಿಂಕ್‌ ಆಗಿಸಿ ಕೊಳೆ ತೆಗೆಯುತ್ತದೆ. ಇಲ್ಲಿ ಹಾಲು ಪಿಎಚ್‌ ಬ್ಯಾಲೆನ್ಸ್ ಮಾಡುತ್ತದೆ.

ಭಾರತಿ ತನೇಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ