ವಾಟರ್‌ ಪ್ರೂಫ್‌ ಮೇಕಪ್‌ ನ ಎಲ್ಲಕ್ಕಿಂತಲೂ ದೊಡ್ಡ ವೈಶಿಷ್ಟ್ಯವೆಂದರೆ, ಇದನ್ನು ಮಳೆಯ ಹನಿಗಳು ಏನೂ ಹಾಳು ಮಾಡಲಾರ. ಮದುವೆ ಮತ್ತು ಇತರ ಪಾರ್ಟಿಗಳಲ್ಲಿ ಕ್ಯಾಮೆರಾ ಲೈಟ್‌ ಎದುರು ಅಧಿಕ ಸೆಕೆ ಆಗುವುದರಿಂದ ಮೇಕಪ್‌ ಕರಗಿ ಹರಿಯುತ್ತದೆ. ಇಂಥ ಸಂದರ್ಭಕ್ಕೂ ವಾಟರ್‌ ಪ್ರೂಫ್‌ ಮೇಕಪ್‌ ಬೇಕೇ ಬೇಕು. ರೇನ್‌ ಡ್ಯಾನ್ಸ್, ಸ್ವಿಮ್ಮಿಂಗ್‌ ಪೂಲ್‌, ಸಾಗರ ತೀರಗಳಲ್ಲಿ ರಜೆಯ ಮಜಾ ಪಡೆಯಲು ಹೋದಾಗಲೂ ಸಹ ವಾಟರ್‌ ಪ್ರೂಫ್‌ ಮೇಕಪ್‌ ನ ಚಮತ್ಕಾರವನ್ನು ಗಮನಿಸಬಹುದು.

ವಾಟರ್ಪ್ರೂಫ್ಮೇಕಪ್

ಬೆವರು ಹೆಚ್ಚಾದಾಗ ಮೇಕಪ್‌ ಕರಗಿ ಚರ್ಮದ ರೋಮ ರಂಧ್ರಗಳಲ್ಲಿ ಜಮೆಯಾಗುತ್ತದೆ. ಇದರಿಂದಾಗಿ ಮೇಕಪ್‌ ವಿಕಾರವಾಗಿ ಕಾಣುತ್ತದೆ. ಮೇಕಪ್‌ ಈ ರೀತಿ ರೋಮ ರಂಧ್ರಗಳೊಳಗೆ ಇಳಿಯಬಾರದು ಎಂಬ ಉದ್ದೇಶದಿಂದಲೇ ವಾಟರ್‌ ಪ್ರೂಫ್‌ ಮೇಕಪ್ ರೂಪಿಸಲಾಗಿದೆ.

ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡಿಸುವಂಥ ಸಾಮರ್ಥ್ಯವಿರುವ ಮೇಕಪ್ಪೇ ವಾಟರ್‌ ಪ್ರೂಫ್‌ ಮೇಕಪ್‌. ರೋಮ ರಂಧ್ರಗಳನ್ನು 2 ವಿಧದಲ್ಲಿ ಕ್ಲೋಸ್‌ ಮಾಡಬಹುದು. ಮೊದಲನೆಯದು.... ನ್ಯಾಚುರಲ್ ವಾಟರ್‌ ಪ್ರೂಫ್‌. ಇದರಲ್ಲಿ ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡಲು ಕೋಲ್ಡ್ ಟರ್ಕಿ ಟವೆಲ್ ‌ಬಳಸಲಾಗುತ್ತದೆ. ಯಾವ ತರಹ ಸ್ಟೀಂ ತೆಗೆದುಕೊಳ್ಳುವುದರಿಂದ ರೋಮ ರಂಧ್ರ ಓಪನ್‌ ಆಗುತ್ತದೋ ಹಾಗೆ, ವಿರುದ್ಧ ಕ್ರಮದಿಂದ ಕ್ಲೋಸ್‌ ಆಗುತ್ತದೆ. ಇದಕ್ಕಾಗಿ ಐಸ್ ಬಳಸಲಾಗುತ್ತದೆ. ಇದಾದ ಮೇಲೆ ಮೇಕಪ್‌ ಮಾಡುವುದರಿಂದ ಬೆವರು ಅದನ್ನು ಕರಗಿಸಲಾಗದು.

ವಾಟರ್‌ ಪ್ರೂಫ್‌ ಮೇಕಪ್‌ ನ ಹೆಚ್ಚುತ್ತಿರುವ ಬೇಡಿಕೆ ಗಮನಿಸಿ, ಮೇಕಪ್‌ ಪ್ರಾಡಕ್ಟ್ಸ್ ತಯಾರಿಸುವ ಕಂಪನಿಗಳು ಅದನ್ನು ಹೆಚ್ಚು ಹೆಚ್ಚಾಗಿ ತಯಾರಿಸಲು ಆರಂಭಿಸಿದ.

ಈ ಪ್ರಾಡಕ್ಟ್ಸ್ ಗಳಲ್ಲೇ ಚರ್ಮದ ರೋಮ ರಂಧ್ರಗಳನ್ನು ಕ್ಲೋಸ್‌ ಮಾಡುವಂಥ ಅಂಶಗಳನ್ನು ಬೆರೆಸಲಾಗುತ್ತದೆ. ಹೀಗಾಗಿ ಮೇಕಪ್‌ ಚರ್ಮದ ಆಂತರಿಕ ಭಾಗಕ್ಕೆ ಇಳಿಯಲಾಗದು, ಬೆವರು ಅದನ್ನು ಕರಗಿಸಲಿಕ್ಕೂ ಆಗದು. ಈ ತರಹ ಮೇಕಪ್‌ ಪ್ರಾಡಕ್ಟ್ಸ್ ನಿಂದ ಮೇಕಪ್‌ ಮಾಡಿಕೊಳ್ಳುವಾಗ, ಚರ್ಮವನ್ನು ವಾಟರ್‌ ಪ್ರೂಫ್‌ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ವಾಟರ್‌ ಪ್ರೂಫ್ ಪ್ರಾಡಕ್ಟ್ ಗಳಲ್ಲಿ ಕ್ರೀಂ, ಲಿಪ್‌ ಸ್ಟಿಕ್‌, ಫೇಸ್‌ ಬೇಸ್‌, ರೂಸ್‌, ಮಸ್ಕರಾ, ಕಾಜಲ್ ನಂಥ ಅನೇಕ ವಸ್ತುಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ.

ವಾಟರ್‌ ಪ್ರೂಫ್‌ ಮೇಕಪ್‌ ಪ್ರಾಡಕ್ಟ್ ನ್ನು ಸಿಲಿಕಾನ್‌ ನೆರವಿನಿಂದ ತಯಾರಿಸಿರುತ್ತಾರೆ. ಇದರಲ್ಲಿ ಬಳಸಲಾಗುವ ಡೈನೋಥಿ ಕಾನ್‌ ಆಯಿಲ್ ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡುತ್ತದೆ. ಇದು ವಾಟರ್‌ ಪ್ರೂಫ್‌ ಮೇಕಪ್‌ ನ್ನು ಸುಲಭವಾಗಿ ಹರಡಿಕೊಳ್ಳುವಂತೆ ಮಾಡುತ್ತದೆ. ವಾಟರ್‌ ಪ್ರೂಫ್‌ ಮೇಕಪ್‌ ನಲ್ಲಿ ಇಷ್ಟೆಲ್ಲ ಲಾಭ ಇರುವ ಹಾಗೆ ತುಸು ನಷ್ಟ ಇದೆ, ಅದನ್ನು ತಿಳಿಯುವುದೂ ಮುಖ್ಯ. ಇದನ್ನು ರಿಮೂವ್ ಮಾಡಲು ನೀರನ್ನಷ್ಟೇ ಬಳಸಿದರೆ ಸಾಲದು, ಬದಲಿಗೆ ಸಿಲಿಕಾನ್‌/ ಬೇಬಿ ಆಯಿಲ್ ಬಳಸಬೇಕು. ಇವುಗಳ ಬಳಕೆ ಚರ್ಮದ ಮೇಲೆ ತುಸು ಕೆಟ್ಟದಾಗಿ ಕಾಣಬಹುದು. ಚರ್ಮಕ್ಕೆ ತುಸು ನಷ್ಟ ಆದೀತು. ಚರ್ಮಕ್ಕೆ ಸೋಂಕು ತಗುಲುತ್ತದೆ. ವಾಟರ್‌ ಪ್ರೂಫ್‌ ಮೇಕಪ್‌ ಜಾಸ್ತಿ ಬಳಸಿದಂತೆ ಸಮಯಕ್ಕೆ ಮೊದಲೇ ಚರ್ಮ ಸುಕ್ಕನ್ನು ಕಂಡೀತು. ಆದ್ದರಿಂದ ಇದನ್ನು ತೀರಾ ಅಪರೂಪದ ಸಂದರ್ಭಕ್ಕೆ ಬಳಸಬೇಕೇ ಹೊರತು ಡೇಲಿ ಬಳಸುವಂತಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ