ಮುಖದ ಸೌಂದರ್ಯಕ್ಕಾಗಿ ಪ್ರತಿಯೊಬ್ಬ ಹೆಂಗಸೂ ಏನಾದರೂ ವಿಶೇಷ ಪ್ರಯತ್ನ ಪಡುತ್ತಲೇ ಇರುತ್ತಾಳೆ. ಅದರಿಂದ ಅವಳ ಚರ್ಮ ಕಲೆರಹಿತ ಹಾಗೂ ಸದಾ ಹೊಳೆ ಹೊಳೆಯುತ್ತಿರಲಿ ಅಂತ. ಆದರೆ ಮುಖದ ಕೇಂದ್ರ ಭಾಗಗಳಲ್ಲಿ ಸದಾ ಜಿಡ್ಡಿನಂಶ ಕಾಡಿಸುವುದರಿಂದ, ಅದು ನೋಡಲಿಕ್ಕೂ ಕೆಟ್ಟದಾಗಿ ಇರುತ್ತದೆ, ಬದಲಿಗೆ ಚರ್ಮ ಅಂಟಂಟಾಗಿ ಇರುತ್ತದೆ. ಆಗ ನಮಗೆ ಹೊಳೆಯುವ ಮೊದಲ ಪ್ರಶ್ನೆ ಎಂದರೆ, ಇದೇಕೆ ನಮ್ಮ ಚರ್ಮ ಬೇರೆಯವರ ತರಹ ಪರ್ಫೆಕ್ಟ್ ಆಗಿಲ್ಲ  ಅಂತ.

ಹೀಗಾಗಲು ಮುಖ್ಯ ಕಾರಣ ಬಹುತೇಕ ಯುವತಿಯರಿಗೆ ಮುಖ ಚರ್ಮದ T ಝೋನಿನಲ್ಲಿ ಅತಿ ಹೆಚ್ಚು ಜಿಡ್ಡಿನಂಶ ಮೆತ್ತಿಕೊಂಡಿರುವುದು ಕಂಡುಬರುತ್ತದೆ. ಮುಖ್ಯವಾಗಿ ಆಯ್ಲಿ  ಕಾಂಬಿನೇಶನ್‌ ಸ್ಕಿನ್‌ವುಳ್ಳರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಆದ್ದರಿಂದ ಈ ಝೋನನ್ನು ಅತಿ ಆರೈಕೆ ಮಾಡಿ ನೋಡಿಕೊಳ್ಳಬೇಕು.

T ಝೋನ್ಎಂದರೇನು?

T ಝೋನ್‌ ಅಂದ್ರೆ ಮುಖದ T ಶೇಪ್‌ ಏರಿಯಾ ಇದರಲ್ಲಿ ಹಣೆ, ಮೂಗು, ಗಲ್ಲ, ಬಾಯಿಯ ಸುತ್ತಮುತ್ತಲ ಜಾಗ ಕವರ್ ಆಗುತ್ತದೆ. ಇಲ್ಲಿ ನೀವು ಮುಖದ ಇತರ ಭಾಗಗಕ್ಕಿಂತ ಹೆಚ್ಚು ಜಿಡ್ಡು ಜಮೆಗೊಂಡಿರುವುದನ್ನು ಕಾಣಬಹುದು. ಕಾರಣ, ಇಲ್ಲಿ ಹೆಚ್ಚು ತೈಲೀಯ ಗ್ರಂಥಿಗಳು ಅಡಗಿದ್ದು, ಅವು ಬ್ಲ್ಯಾಕ್‌ ಹೆಡ್ಸ್, ವೈಟ್‌ ಹೆಡ್ಸ್, ಸ್ಕಿನ್‌ ಇರಿಟೇಶನ್‌ಗೆ ಮೂಲವಾಗುತ್ತದೆ.

ಸರಿಯಾದ ಕ್ಲೆನ್ಸರ್ಆಯ್ಕೆ

ಯಾವಾಗಲೂ ನಾವು ಯೋಚಿಸುವುದೆಂದರೆ ನಾವು ಇಷ್ಟೆಲ್ಲ ದುಬಾರಿ ಕಾಸ್ಮೆಟಿಕ್ಸ್ ಕೊಂಡು ಬಳಸುತ್ತಿದ್ದೇವೆ, ಆದರೂ ಇಂಥ ಸಮಸ್ಯೆ ಬರುತ್ತಿರುವುದೇಕೆ? ಮುಖ್ಯ ವಿಷಯ ಎಂದರೆ ಎಲ್ಲಾ ದುಬಾರಿ ಪ್ರಾಡಕ್ಟ್ ಅತ್ಯುತ್ತಮ ಅಂತೇನಲ್ಲ. ನಿಮಗೆ ನಿಮ್ಮ ್ಡ ಝೋನ್‌ ಏರಿಯಾದಿಂದ ಜಿಡ್ಡು ಹೋಗಲಾಡಿಸಬೇಕಿದ್ದರೆ, ಪರ್ಫೆಕ್ಟ್ ಆದ ಕ್ಲೆನ್ಸರ್‌ನ್ನು ಆವರಿಸಿಕೊಂಡಿರಬೇಕು. ಅಂದ್ರೆ ನೀವು ಆರಿಸಿದ ಕ್ಲೆನ್ಸರ್‌ನಲ್ಲಿ ಆಲ್ಕೋಹಾಲ್ ಅಂಶ ಇರಬಾರದು. ಸಾಕಷ್ಟು ಮೈಲ್ಡ್ ಆಗಿರಬೇಕು. ಇದರಿಂದ ಚರ್ಮಕ್ಕೆ ಇರಿಟೇಶನ್ ಆಗುವುದಿಲ್ಲ ಹಾಗೂ ಹೆಚ್ಚಿನಂಶ ಜಿಡ್ಡು ಸುಲಭವಾಗಿ ಹೋಗಿಬಿಡುತ್ತದೆ. ಮತ್ತೊಂದು ಮುಖ್ಯ ವಿಷಯ ನೆನಪಿಡಬೇಕೆಂದರೆ, ಫೇಸ್ ವಾಶ್‌ನ್ನು 2 ಸಲಕ್ಕಿಂತ ಹೆಚ್ಚು ಬಾರಿ ಬಳಸಬಾರದು ಎಂಬುದು.

ವಾಟರ್ಬೇಸ್ಡ್ ಮಾಯಿಶ್ಚರೈಸರ್

ಮೊದಲೇ ನನ್ನ ಚರ್ಮ ಆಯ್ಲಿ ಅದರ ಮೇಲೆ ಈ ಮಾಯಿಶ್ಚರೈಸರ್‌ ಬಳಸುವ ಸಲಹೆಯೇ ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು. ಏಕೆಂದರೆ ನೀವು ನಿಮ್ಮ ಜಿಡ್ಡಿನ ಚರ್ಮಕ್ಕೆ ಮಾಯಿಶ್ಚರೈಸರ್‌ ಹಚ್ಚದಿದ್ದರೆ, ನಿಮ್ಮ ಚರ್ಮ ಇನ್ನಷ್ಟು ಮತ್ತಷ್ಟು ಡ್ರೈ ಆದೀತು! ಅದರಿಂದ ಚರ್ಮ ಇನ್ನಷ್ಟು ಜಿಡ್ಡು ಜಿಡ್ಡಾಗುತ್ತದೆ. ಇದು ನಿಮ್ಮ ಚರ್ಮವನ್ನು ಹೈಡ್ರೇಟೆಡ್‌ ಆಗಿಡುತ್ತದೆ ಹಾಗೂ ಸ್ಕಿನ್‌ ಆಯ್ಲಿ ಆಗುವುದನ್ನೂ ತಪ್ಪಿಸುತ್ತದೆ.

ಪೋರ್ಸ್ಸದಾ ಶುಚಿಯಾಗಿರಲಿ

ನಿಮ್ಮ ಚರ್ಮದ ಪೋರ್ಸ್‌ ಗಳನ್ನು ಸದಾ ಶುಚಿಯಾಗಿಟ್ಟುಕೊಂಡರೆ ನಿಮ್ಮನ್ನು ಕಾಡುವ ಮೊಡವೆಗಳ ಗೊಡವೆಯಿಂದ ದೂರವಿರಬಹುದು! ಹೇಗೆಂದರೆ, ಪೋರ್ಸ್‌ ಕ್ಲೋಸ್‌ ಆಗಿದ್ದರೆ ಜಿಡ್ಡು ಚರ್ಮದ ಒಳಗೇ ಇದ್ದುಬಿಡುತ್ತದೆ, ಅದರಿಂದ ಮೊಡವೆ ಹೆಚ್ಚುತ್ತದೆ. ಬದಲಿಗೆ ನೀವು ಇದನ್ನು ಸದಾ ನೀಟ್‌ಶುಚಿಯಾಗಿಟ್ಟುಕೊಂಡರೆ, ಸ್ಕಿನ್‌ ಅತ್ತ ಆಯ್ಲಿಯೂ ಆಗುವುದಿಲ್ಲ, ನಿಮಗೆ ಆ್ಯಕ್ನೆ, ಮೊಡವೆಗಳ ಗೊಡವೆಯೂ ಇರೋದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ