32 ವರ್ಷ ವಯಸ್ಸಿನ ಆನಂದ್‌ ಬೆನ್ನುನೋವಿನಿಂದ ಬಳಲುತ್ತಿದ್ದ. ಅವನಿಗೆ ಬೆನ್ನನ್ನು ಅಲುಗಾಡಿಸಲೇ ಆಗದಂತಾಗಿತ್ತು. ವಿಶ್ರಾಂತಿ ಮತ್ತು ಔಷಧ ಸೇವನೆಯ ನಂತರ ನೋವು ಕಡಿಮೆಯಾಗಲಿಲ್ಲ. ಬೆನ್ನುನೋವು ಪ್ರಾರಂಭವಾದ 6 ವಾರಗಳಲ್ಲಿ ಅವನ ಶರೀರದ ತೂಕ ಬಹಳ ಕಡಿಮೆಯಾಗಿಬಿಟ್ಟಿತು.

ಆನಂದ್‌ ತಜ್ಞ ವೈದ್ಯರ ಬಳಿ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡ. ಎಕ್ಸ್ ರೇನಿಂದ ಏನೂ ತಿಳಿಯದಿದ್ದಾಗ ಬ್ಲಡ್‌ ಟೆಸ್ಟ್ ಮಾಡಿಸಲು ಹೇಳಲಾಯಿತು. ಹೆಚ್ಚಿನ ಪರೀಕ್ಷೆಗಾಗಿ ಎಂ.ಆರ್‌.ಐ ಮಾಡಿಸಿದಾಗ ಅವನ ಬೆನ್ನುಮೂಳೆಯಲ್ಲಿ ಇನ್‌ಫೆಕ್ಷನ್‌ ಆಗಿ ಡಿಸ್ಕ್ ಸ್ಪೇಸ್‌ ಮತ್ತು ಸುತ್ತಮುತ್ತಲು ಜೀವಕೋಶಗಳಲ್ಲಿ ಕೀವು ತುಂಬಿರುವುದು ತಿಳಿದು ಬಂದಿತು.

ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡು ವೈದ್ಯರು ಅವನಿಗೆ ಕೂಡಲೇ ಸ್ಪೈನಲ್ ಟ್ರೇಸಸ್‌ ಹಾಕಲು ಸಲಹೆ ನೀಡಿದರು. 6 ವಾರಗಳ ಕಾಲ ಆ್ಯಂಟಿ ಬಯೋಟಿಕ್‌ ಮಾತ್ರೆ ಸೇವಿಸಲು ಮತ್ತು ವಿಶ್ರಾಂತಿ ಪಡೆಯಲು ಸೂಚಿಸಿದರು. ಜೊತೆಗೆ ಸಿಟಿ ಗೈಡೆಡ್‌ಬಯಾಪ್ಸಿಯನ್ನು ಮಾಡಿಸಿದರು.

ಇವೆಲ್ಲ ಚಿಕಿತ್ಸೆಗಳಿಂದ ತಿಳಿದು ಬಂದ ಅಂಶವೆಂದರೆ, ಆನಂದನ ಬೆನ್ನುಮೂಳೆಯು ಸುರುಟಿಕೊಂಡಿದೆ ಮತ್ತು ಅದರಿಂದ ಅವನ ಕಾಲು, ಕರುಳು ಮತ್ತು ಬ್ಲಾಡರ್‌ಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಅದರ ಪರಿಹಾರಕ್ಕಾಗಿ ಆ ಕೂಡಲೇ ಸರ್ಜಿಕಲ್ ಟ್ರೀಟ್‌ಮೆಂಟ್‌ ಅಗತ್ಯವಾಗಿತ್ತು. ನ್ಯೂರೊಸರ್ಜಿಕಲ್ ಕಂಪ್ರೆಶನ್‌ನ್ನು ದೂರಗೊಳಿಸಲು ಮತ್ತು ಪೆಡಿಕ್‌ಸ್ಕ್ರೂ ಮತ್ತು ರಾಡ್ಸ್ ನಿಂದ ಬೆನ್ನುಮೂಳೆಯನ್ನು ಸ್ಥಿರಗೊಳಿಸಲು ಆನಂದನಿಗೆ ಸರ್ಜರಿ ಮಾಡಲಾಯಿತು.

ರೋಗಿಯ ನೋವನ್ನು ದೂರಗೊಳಿಸುವುದು, ಅವನು ಅಂಗವಿಕಲನಾಗುವುದನ್ನು ತಪ್ಪಿಸುವುದು ಮತ್ತು ಬೆನ್ನುಮೂಳೆಯ ಆಕಾರ ಮತ್ತಷ್ಟು ವಿಕೃತವಾಗದಂತೆ ತಡೆಯುವುದು, ಶಸ್ತ್ರಕ್ರಿಯೆಯ ಉದ್ದೇಶವಾಗಿತ್ತು. ಸರ್ಜರಿಯ ನಂತರ ರೋಗಿಯ ಪರಿಸ್ಥಿತಿ ಸುಧಾರಿಸಿತು ಮತ್ತು ನೋವು ಸಹ ದೂರವಾಯಿತು.

ಏನಿದು ಸ್ಪೈನಲ್ ಇನ್‌ಫೆಕ್ಷನ್‌?

ಇದು ಒಂದು ಬಗೆಯ ರೇರ್‌ ಇನ್‌ಫೆಕ್ಷನ್‌ ಆಗಿದ್ದು, ಬೆನ್ನುಮೂಳೆಗಳ ಮಧ್ಯದಲ್ಲಿರುವ ಡಿಸ್ಕ್ ಸ್ಪೇಸ್‌, ಸ್ಪೈನಲ್ ಕೆನಾಲ್‌ ಮತ್ತು ಅದರ ಸುತ್ತಮುತ್ತಲಿನ ಜೀವಕೋಶಗಳು ಹಾಗೂ ಸಾಫ್ಟ್ ಟಿಶ್ಯೂಗಳನ್ನು ಪ್ರಭಾವಗೊಳಿಸುತ್ತದೆ. ಈ ಇನ್‌ಫೆಕ್ಷನ್‌ಗೆ ಕಾರಣವಾದ ಬ್ಯಾಕ್ಟೀರಿಯಾಗಳು ರಕ್ತನಾಳಗಳ ಮೂಲಕ ಬೆನ್ನುಮೂಳೆ ಮತ್ತು ವರ್ಟಿಬ್ರಲ್ ಡಿಸ್ಕ್ ಗಳಿಗೆ ಹರಡಿ ಅವುಗಳ ಸುತ್ತಮುತ್ತಲ ಭಾಗಗಳಿಗೆ ಇನ್‌ಫೆಕ್ಷನ್‌ ತಗುಲುತ್ತದೆ. ಇದರಿಂದ ಡಿಸೈಟಿಸ್‌ ಉಂಟಾಗುವ ಸಾಧ್ಯತೆ ಇರುತ್ತದೆ.

ಡಿಸೈಟಿಸ್‌ ಸಹ ಒಂದು ಬಗೆಯ ಇನ್‌ಫೆಕ್ಷನ್‌ ಆಗಿದ್ದು, ಬೆನ್ನುಮೂಳೆಯ ಡಿಸ್ಕ್ ಗಳಿಗೆ ತಗಲುತ್ತದೆ. ಇನ್‌ಫೆಕ್ಷನ್‌ ಹೆಚ್ಚಾದಂತೆ ಡಿಸ್ಕ್ ಗಳ ನಡುವಿನ ಸ್ಪೇಸ್‌ ಕಡಿಮೆಯಾಗತೊಡಗುತ್ತದೆ. ಕ್ರಮೇಣ ಅದು ಶರೀರದ ಬೇರೆ ಭಾಗಗಳಿಗೂ ಹರಡಿ ಆಸ್ಟ್ರೊಮೈಟಿಸ್‌ಎಂಬ ಮೂಳೆಗಳ ಇನ್‌ಫೆಕ್ಷನ್‌ಗೆ ಕಾರಣವಾಗುತ್ತದೆ.

ಇನ್‌ಫೆಕ್ಷನ್‌ನಿಂದಾಗಿ ದುರ್ಬಲಗೊಳ್ಳುವ ಮೂಳೆಗಳು ಮುರಿಯುವ ಅಥವಾ ವಿಕಾರಗೊಳ್ಳುವ ಸಂಭವಿರುತ್ತದೆ. ಕೆಲವು ಸಲ ಇಂತಹ ಮೂಳೆಗಳು ಸ್ಪೈನಲ್ ಕಾರ್ಡ್‌ನ ನರಗಳನ್ನು ಎಳೆಯತೊಡಗಿದಾಗ ಸುಸ್ತು, ಜೋಮು, ಪ್ರಜ್ಞೆ ತಪ್ಪುವಿಕೆ, ತೀವ್ರ ನೋವು, ಬ್ಲಾಡರ್‌ ಡಿಸ್‌ಫಂಕ್ಷನ್‌, ಮೊದಲಾದ ನ್ಯೂರಲಾಜಿಕಲ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇಂಟರ್‌ ವರ್ಟಿಬ್ರಲ್ ಡಿಸ್ಕ್ ಸ್ಪೇಸ್‌ನಲ್ಲಿನ ಇನ್‌ಫೆಕ್ಷನ್‌ 3 ವಿಭಾಗಗಳಲ್ಲಿ ವಿಂಗಡಿಸಲ್ಪಡುತ್ತದೆ.

ಮೊದಲನೆಯದು ಸ್ಪೈನಲ್ ಕೆನಾಲ್‌ ಇನ್‌ಫೆಕ್ಷನ್‌. ಇದರಲ್ಲಿ ಸೇರಿರುವುದೆಂದರೆ :

ಸ್ಪೈನಲ್ ಎಪಿಡ್ಯೂರಲ್ ಆ್ಯಬ್ಸೆಸ್‌ ಅಂದರೆ ಬೆನ್ನುಮೂಳೆಯ ಹೊರ ಭಾಗದಲ್ಲಿ ಹುಣ್ಣು ಆಗುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ