ಇತ್ತೀಚಿನ ಆಧುನಿಕ ಫ್ಯಾಷನ್‌ ಪ್ರಕಾರ ಎಲ್ಲಾ ಹುಡುಗಿಯರಿಗೂ ಟೈಟ್‌ ಸ್ಕಿನ್ ಜೀನ್ಸ್ ಧರಿಸುವುದೇ ಇಷ್ಟ. ಅವರಿಗೆ ಇದು ಕಂಫರ್ಟೆಬಲ್ ಹೌದೋ ಅಲ್ಲವೋ ಇಲ್ಲಿ ಮುಖ್ಯವಲ್ಲ. ಎಲ್ಲಿಗೆ ಹೋದರೂ ಅದನ್ನೇ ಧರಿಸುವ ರೂಢಿಯಾಗಿದೆ. ಅವರ ಪ್ರಕಾರ ಈ ಉಡುಗೆಯಲ್ಲಿ ಅವರ ಫಿಗರ್‌ ಇನ್ನಷ್ಟು ಸೆಕ್ಸಿಯಾಗಿ ಎದ್ದು ಕಾಣುತ್ತದಂತೆ. ಆಗ ಎಲ್ಲರ ಗಮನ ಇವರ ಕಡೆಯೇ ಹರಿಯುತ್ತದೆ ಎನ್ನುತ್ತಾರೆ. ಆದರೆ ಈ ಟೈಟ್‌ ಜೀನ್ಸ್ ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂದು ನಿಮಗೆ ಗೊತ್ತಿದೆಯೇ? ಇದರ ಕಾರಣದಿಂದ ನೀವು ಆಸ್ಪತ್ರೆ ಸೇರಬೇಕಾಗಿ ಬಂದರೂ ಆಶ್ಚರ್ಯವಿಲ್ಲ.

ಇತ್ತೀಚೆಗೆ ನಗರದ ಒಬ್ಬ ಹುಡುಗಿಗೆ ಹೀಗೆ ಆಯಿತು. ಸ್ಟೈಲಿಶ್‌  ಸೆಕ್ಸೀ ಎನಿಸಲು ಈ ಹುಡುಗಿ ಸದಾ ನಡೆಯಲಾಗದಂಥ ಟೈಟ್‌ ಜೀನ್ಸ್ ಧರಿಸುತ್ತಿದ್ದಳು. ಕೊನೆಗೆ ಇದು ಅವಳನ್ನು ಆಸ್ಪತ್ರೆಗೆ ಸೇರಿಸಿತು. ಅವಳ ಕಾಲುಗಳಲ್ಲಿನ ಮಾಂಸಖಂಡದಲ್ಲಿ ರಕ್ತದ ಸಂಚಾರ ಆಗುತ್ತಿರಲಿಲ್ಲ ಎಂಬುದು ಅಲ್ಲಿ ಗೊತ್ತಾಯಿತು. ಅವಳ ಸ್ಥಿತಿ ಹೇಗಾಗಿತ್ತೆಂದರೆ, ಅವಳಿಂದ ನೆಟ್ಟಗೆ ನಿಲ್ಲಲಿಕ್ಕೂ ಆಗುತ್ತಿರಲಿಲ್ಲ. ಅವಳು ಇತರರ ನೆರವಿನಿಂದ ಒಂದೊಂದೇ ಹೆಜ್ಜೆ ಇಟ್ಟು ಬರುವಷ್ಟರಲ್ಲಿ ಬಸವಳಿದಿದ್ದಳು.

ಫ್ಯಾಷನ್‌ ಜೊತೆ ಹೆಜ್ಜೆ ಹಾಕುತ್ತಾ ತಮ್ಮನ್ನು ತಾವು ಅಪ್‌ಡೇಟ್‌ ಆಗಿರಿಸಿಕೊಳ್ಳುವುದು ಒಳ್ಳೆಯ ವಿಷಯ. ಆದರೆ ಈ ಕಾರಣಕ್ಕಾಗಿ ಆರೋಗ್ಯವನ್ನು ನಿರ್ಲಕ್ಷಿಸುವುದು ಖಂಡಿತಾ ಒಳ್ಳೆಯದಲ್ಲ. ಟೈಟ್‌ ಜೀನ್ಸ್ ಫಿಗರ್‌ಗೆ ಏನೇ ಸೆಕ್ಸೀ ಲುಕ್ಸ್ ನೀಡಲಿ, ಅದು ಲಾಸ್‌ ಮಾಡುವುದಂತೂ ನಿಜ. ಈ ಕಾರಣದಿಂದ  ಹೆಲ್ತ್ ಪ್ರಾಬ್ಲಮ್ಸ್ ಹೆಚ್ಚುತ್ತವೆ. ಇದನ್ನು ಹೆಣ್ಣುಮಕ್ಕಳು ಕಡೆಗಣಿಸುತ್ತಾರೆ.

ಪ್ರಜ್ಞೆ ತಪ್ಪುವುದು : ಸದಾ ಟೈಟ್‌ ಫಿಟಿಂಗ್‌ನ ಉಡುಗೆ ಧರಿಸುವುದರಿಂದ, ಉಸಿರು ಕಟ್ಟಿದಂತೆ ಆಗುತ್ತದೆ. ಅದು ಅಪಾಯದ ಮುನ್ಸೂಚನೆ ಆಗದಿರಲಿ. ಇದರಿಂದ ಪ್ರಜ್ಞೆ ತಪ್ಪುವ ಸಾಧ್ಯತೆ ಉಂಟು.

ಬೆನ್ನು ನೋವಿನ ಸಮಸ್ಯೆ : ಇಂದಿನ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಲೋ ವೇಯ್ಸ್ಟ್ ಜೀನ್ಸ್  ಧರಿಸ ಬಯಸುತ್ತಾರೆ. ಟೈಟ್‌  ಲೋ ವೇಯ್ಸ್ಟ್ ಜೀನ್ಸ್ ಬೆನ್ನಿನ ಮಸಲ್ಸ್ ನ್ನು ಕಂಪ್ರೆಸ್‌ ಮಾಡಿ, ಹಿಪ್‌ ಬೋನ್‌ನ ಮೂಮೆಂಟ್‌ಗೆ ಅಡ್ಡಿಪಡಿಸುತ್ತವೆ. ಇದರಿಂದ  ಸ್ಪೈನಲ್  ಬ್ಯಾಕ್‌ಗೆ ಹೆಚ್ಚಿನ ಒತ್ತಡ ಬಿದ್ದು, ನೋವಿನ ಸಮಸ್ಯೆ ಹೆಚ್ಚುತ್ತದೆ.

ಹೊಟ್ಟೆನೋವು : ಟೈಟ್‌ ಡ್ರೆಸ್‌ ಧರಿಸಿದಾಗ ಬಟ್ಟೆ ಹೊಟ್ಟೆ ಭಾಗಕ್ಕೆ ಗಟ್ಟಿಯಾಗಿ ಬಿಗಿಯುತ್ತದೆ. ಇದರಿಂದ ಹೊಟ್ಟೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಹೊಟ್ಟೆ ನೋವು ಹೆಚ್ಚುತ್ತದೆ. ಜೊತೆಗೆ ಟೈಟ್‌ ಜೀನ್ಸ್ ನಿಂದ ಪಚನಕ್ರಿಯೆಯೂ ಸರಿಯಾಗದೆ, ಅಸಿಡಿಟಿಗೆ ದಾರಿ ಮಾಡುತ್ತದೆ.

ಮೈಕೈ ನೋವು :  ಟೈಟ್‌ ಜೀನ್ಸ್ ತೊಡೆಯ ನರಗಳನ್ನು ಕಂಪ್ರೆಸ್‌ ಮಾಡುತ್ತದೆ, ಇದರಿಂದ ಆ ಭಾಗ ಉರಿ ಉರಿ, ಹಿಂಸಕಾರಕ ಎನಿಸುತ್ತದೆ. ಇದರಿಂದ ತಲೆ ನೋವು, ಮೈಕೈ ನೋವು ಮುಂತಾದವು ಹೆಚ್ಚುತ್ತದೆ. ಇಷ್ಟು ಮಾತ್ರವಲ್ಲ, ಟೈಟ್‌ ಜೀನ್ಸ್ ದೆಸೆಯಿಂದ ಕುರ್ಚಿ ಮೇಲೆ ಕುಳಿತೇಳುವುದು ಕಷ್ಟವಾಗುತ್ತದೆ. ಚಕ್ಕಳಮಕ್ಕಳ ಹಾಕಿ ನೆಲದ ಮೇಲೆ ಕೂರುವುದಂತೂ ಅಸಾಧ್ಯದ ಮಾತು. ಇದರಿಂದ ಬಾಡಿ ಪೋಸ್ಚರ್‌ ಕೆಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ