ಮುಖದಲ್ಲಿನ ಓಪನ್ ಪೋರ್ಸ್‌ಗಳ ಕಾರಣ ಚರ್ಮ ಮುದಿಯಾಗಿ, ಅಸ್ತವ್ಯಸ್ತವಾದಂತೆ ತೋರಬಹುದು. ಇದರ ಜೊತೆಯಲ್ಲೇ ಇದರ ಕಾರಣದಿಂದ ಮೊಡವೆ, ಬ್ಲ್ಯಾಕ್‌ಹೆಡ್ಸ್ ಸಮಸ್ಯೆಗಳೂ ಹೆಚ್ಚುತ್ತವೆ. ಅದರಲ್ಲೂ ಆಯ್ಲಿ ತ್ವಚೆ ಉಳ್ಳವರಿಗೆ ಈ ಕಾಟ ಇನ್ನೂ ಹೆಚ್ಚು. ಎಷ್ಟೋ ಹೆಂಗಸರು ಇದರಿಂದ ಮುಕ್ತಿ ಪಡೆಯಲು ಹಲವಾರು ಬಗೆಯ ಉತ್ಪನ್ನಗಳನ್ನು ಬಳಸುತ್ತಾರೆ, ದುಬಾರಿ ಚಿಕಿತ್ಸೆ ಪಡೆಯುತ್ತಾರೆ. ಇಂಥವು ಎಷ್ಟೋ ಸಲ ಮುಖವನ್ನು ಇನ್ನಷ್ಟು ಕೆಟ್ಟದಾಗಿಸುತ್ತದೆ.
ಹಾಗಿದ್ದರೆ ಈ ಸಮಸ್ಯೆಗಳಿಗೆ ಪರಿಹಾರವೇನು? ಬನ್ನಿ, ಇಲ್ಲಿನ ವಿವರಗಳನ್ನು ಅನುಸರಿಸೋಣ :
ಕಿತ್ತಳೆ ಸಿಪ್ಪೆ ಹಾಗೂ ಬಾದಾಮಿ ಈ ಓಪನ್ ಪೋರ್ಸ್‌ಗೆ ಎಣ್ಣೆ ಇಳಿದಾಗ ಇವು ಇನ್ನಷ್ಟು ದೊಡ್ಡದಾಗಿ ಕಾಣುತ್ತವೆ. ಮುಖದ ಮತ್ತು ಮೂಗಿನಲ್ಲಿನ ಪೋರ್ಸ್‌ನ್ನು ತೊಲಗಿಸಲು ಒಂದು ಸುಲಭ ಮಾರ್ಗ ಎಂದರೆ, ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು. ಇದರ ಆಕಾರ ಕಡಿಮೆಗೊಳಿಸಲು, ಆ ಭಾಗದ ಚರ್ಮದ ಮೇಲ್ಪದರ ಉದುರುತ್ತಿರಬೇಕು. ಇದಕ್ಕಾಗಿ ಕಿತ್ತಳೆಯ ಸಿಪ್ಪೆಯನ್ನು, ಬಾದಾಮಿ ತಿರುಳಿನೊಂದಿಗೆ ಅರೆದು, ಆ ಪೇಸ್ಟ್ ನ್ನು ಆ ಭಾಗಕ್ಕೆ ಹಚ್ಚಬೇಕು. ಈ ಮಿಶ್ರಣ ತ್ವಚೆಯ ಡೆಡ್ ಸ್ಕಿನ್ ತೊಲಗಿಸಲು, ತ್ವಚೆಯ ಶುಭ್ರಗೊಳಿಸಲಿಕ್ಕೂ ಸಹಕಾರಿ. ಇದು ಮುಖ, ಮೂಗಿನ ಓಪನ್ ಪೋರ್ಸ್ ತಗ್ಗಿಸಲು ಸರ್ವಶ್ರೇಷ್ಠ ಎನಿಸಿದೆ.
ತ್ವಚೆಯ ಬಿಗಿತಕ್ಕಾಗಿ ಮೊಸರು
ತ್ವಚೆಯ ಪೋರ್ಸ್‌ನ್ನು ಕಡಿಮೆ ಮಾಡಿ, ಕಲೆಗುರುತುಗಳನ್ನು ದೂರಗೊಳಿಸಲು ಮೊಸರು ಒಂದು ಉತ್ತಮ ನೈಸರ್ಗಿಕ ಉಪಾಯವಾಗಿದೆ. ಒಂದಷ್ಟು ತಾಜಾ ಗಟ್ಟಿ ಮೊಸರನ್ನು ಮುಖದ ಮೇಲೆ ಚೆನ್ನಾಗಿ ಲೇಪಿಸಿಕೊಂಡು ಒಂದು ಗಂಟೆ ಕಾಲ ಒಣಗಲು ಬಿಡಿ. ಇದರಲ್ಲಿನ ಲ್ಯಾಕ್ಟಿಕ್ ಆ್ಯಸಿಡ್ ಪೋರ್ಸ್‌ನ ಆಕಾರ ಕುಗ್ಗಿಸಿ, ಚರ್ಮವನ್ನು ಬಿಗಿಗೊಳಿಸಿ, ಡೆಡ್ ಸ್ಕಿನ್ ತೊಲಗಿಸಿ ಹೆಚ್ಚುವರಿ ಜಿಡ್ಡನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ.
ಮೊಟ್ಟೆ ನಿಂಬೆ ಮಿಶ್ರಣ
ಮೊಟ್ಟೆ ಒಡೆದು ಅದರ ಬಿಳಿ ಭಾಗ ಬೇರ್ಪಡಿಸಿ. ಈ ಭಾಗ ತ್ವಚೆಯ ಹೆಚ್ಚುವರಿ ಜಿಡ್ಡು ತೆಗೆಯುವಲ್ಲಿ ಹೆಚ್ಚು ಪೂರಕ. ಮೊಟ್ಟೆಯ ಬಿಳಿ ಭಾಗ ಮತ್ತು ನಿಂಬೆರಸದ ಮಿಶ್ರಣ ಉತ್ತಮ ಫೇಸ್‌ಪ್ಯಾಕ್ ಆಗಿ ಪೋರ್ಸ್ ಕಡಿಮೆ ಮಾಡುತ್ತದೆ. ಇದು ತ್ವಚೆಯನ್ನು ತಿಳಿಯಾಗಿಸಿ, ಅದನ್ನು ಬಲಪಡಿಸುತ್ತದೆ.
ಒಂದು ಮೊಟ್ಟೆ ಒಡೆದು, ಅದರ ಬಿಳಿ ಭಾಗಕ್ಕೆ ಒಂದು ಹೋಳು ನಿಂಬೆಹಣ್ಣು ಹಿಂಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಸಮಾನವಾಗಿ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ಮುಖಕ್ಕೆ ಬೆಚ್ಚಗಿನ ನೀರು ಚಿಮುಕಿಸಿ ತೊಳೆಯಿರಿ. ಇದನ್ನು 2-3 ಸಲ ಪುನರಾವರ್ತಿಸಿ.
ಆ್ಯಪಲ್ ವಿನಿಗರ್
ಆ್ಯಪಲ್ ವಿನಿಗರ್ ಒಂದು ನೈಸರ್ಗಿಕ ಆ್ಯಸ್ಟ್ರಿಂಜೆಂಟ್ ಟೋನರ್ ರೂಪದಲ್ಲಿ ಕೆಲಸ ಮಾಡುತ್ತದೆ. ಇದು ತ್ವಚೆಯಿಂದ ಜಿಡ್ಡು, ಬ್ಲಾಕ್‌ಹೆಡ್ಸ್ ತೊಲಗಿಸುತ್ತದೆ. ಜೊತೆಗೆ ಇದು ಸಹಜವಾಗಿಯೇ ತ್ವಚೆಯನ್ನು ಸಶಕ್ತಗೊಳಿಸಿ, ಪೋರ್ಸ್ ಇಲ್ಲದಂತೆ ಮಾಡುತ್ತದೆ.
ಆ್ಯಪಲ್ ವಿನಿಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು, ಹತ್ತಿಯಿಂದ ನಿಧಾನವಾಗಿ ಪೋರ್ಸ್ ಭಾಗಕ್ಕೆ ಹಚ್ಚಿರಿ. 15 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಪ್ರತಿ ರಾತ್ರಿ ಮಲಗುವ ಮುನ್ನ ಈ ಕ್ರಮ ಅನುಸರಿಸಿ.