ಎಷ್ಟೋ ಸಲ ಮೇಕಪ್‌ ಕಿಟ್‌ ಅಪ್‌ಡೇಟ್‌ ಆಗಿಟ್ಟುಕೊಂಡಿದ್ದರೂ, ಡ್ರೆಸಿಂಗ್‌ ಟೇಬಲ್ ಬಳಿ ಮೇಕಪ್‌ ಕಿಟ್‌ ತೆರೆದಿಟ್ಟುಕೊಂಡಾಗ ಒಮ್ಮೊಮ್ಮೆ ಫೌಂಡೇಶನ್‌ ಒಣಗಿಹೋಗಿರಬಹುದು, ಬಿಸಿಲಿನ ಝಳಕ್ಕೆ ಲಿಪ್‌ಸ್ಟಿಕ್‌ ಕರಗಿರಬಹುದು. ಹಾಗಾಗಿ ಇಡೀ ಮೇಕಪ್‌ ಕಿಟ್‌ ಅಸ್ತವ್ಯಸ್ತವಾಗುತ್ತದೆ. ಹೀಗಾದಾಗ ಕೋಪ ಹೆಚ್ಚಿ ಪಾರ್ಟಿಗೆ ಹೋಗುವ ಮೂಡೇ ಹಾಳಾಗುತ್ತದೆ. ಹೀಗಾದಾಗ ಚಿಂತೆ ಮಾಡುವ ಬದಲು ಕೆಟ್ಟಿರುವ ಕಾಸ್ಮೆಟಿಕ್‌ ಪ್ರಾಡಕ್ಟ್ ಗೆ ಬದಲಾಗಿ ಪರ್ಯಾಯ ಯಾವುದೆಂದು ಗಮನಿಸೋಣ.

ಸೀರಮ್ : ಇದನ್ನು ಹಚ್ಚುವುದರಿಂದ ಕೂದಲು ಹೊಳಪು ಪಡೆದು ದಟ್ಟ ಆಗುತ್ತದೆ. ಇದರ ಬದಲಿಗೆ ಹ್ಯಾಂಡ್‌ ಲೋಶನ್‌, ಬಾಡಿ ಲೋಶನ್‌ ಅಥವಾ ಫೇಸ್‌ ಮಾಯಿಶ್ಚರೈಸರ್‌ ಬಳಸಿರಿ. ಮಾಯಿಶ್ಚರೈಸರ್‌ನ ಪ್ರಮಾಣ ಹೆಚ್ಚಾಗಬಾರದು ಎಂಬುದು ನೆನಪಿರಲಿ. ಇಲ್ಲದಿದ್ದರೆ ಕೂದಲು ಜಿಡ್ಡು ಜಿಡ್ಡಾಗುತ್ತದೆ.

ಮಸ್ಕರಾ : ಅಕಸ್ಮಾತ್‌ ಇದು ಸಿಗದಿದ್ದರೆ, ಪೆಟ್ರೋಲಿಯಂ ಜೆಲಿ ಬಳಸಬಹುದು. ಕಣ್ಣೆವೆಗಳಿಗೆ ಈ ಜೆಲಿ ತೀಡಿರಿ. ಹಾಗೆ ಮಾಡಿದಾಗ ಐ ಲ್ಯಾಶೆಸ್‌ ದಟ್ಟ ಹಾಗೂ ಹೊಳೆಯುತ್ತಿರುವಂತೆ ಕಾಣಿಸುತ್ತದೆ.

ಬ್ಲಶರ್‌ : ಇದರ ಬದಲಿಗೆ ಲಿಪ್‌ಸ್ಟಿಕ್‌ ಬಳಸಬಹುದು. ಇದು ಅಧಿಕ ಕ್ರೀಮೀ ಎಂಬುದು ನೆನಪಿರಲಿ. ಹೀಗೆ ಕೆನ್ನೆ ಮೇಲೆ ಲಿಪ್‌ಸ್ಟಿಕ್‌ನ್ನು ಬೆರಳಿನಿಂದ ತೀಡಿದ ನಂತರ, ಅದನ್ನು ಚೆನ್ನಾಗಿ ಹರಡಿರಿ. ಫೈನ್‌ ಟಚ್‌ಗಾಗಿ ಟಿಶ್ಯು ಪೇಪರ್‌ನಿಂದ ಹೆಚ್ಚುವರಿ ಶೈನ್‌  ಆಯಿಲ್ ಒರೆಸಿಬಿಡಿ.

ಲಿಪ್‌ಸ್ಟಿಕ್‌ : ತುಟಿಗಳಿಗೆ ಬ್ಲಶರ್‌ನ ಬಳಕೆಯಿಂದ ಲಿಪ್‌ಸ್ಟಿಕ್‌ನ ಕೊರತೆ ಕಾಡದು. ಎಲ್ಲಕ್ಕೂ ಮೊದಲು ಕ್ರೀಂ ಯಾ ಮಾಯಿಶ್ಚರೈಸರ್‌ ಹಚ್ಚಿ ತುಟಿಗಳನ್ನು ಸಾಫ್ಟ್ ಗೊಳಿಸಿ. ಈಗ ಬ್ರಾನ್ಝ್ ಬ್ಲಶರ್‌ನ್ನು ಬೆರಳಿನಿಂದ ತುಟಿಗಳಿಗೆ ತೀಡಿ, ನೀಟಾಗಿ ಹರಡಿರಿ.

ಐ ಲೈನರ್‌ : ಇದರ ಬದಲಿಗೆ ಐ ಶ್ಯಾಡೋ ಬಳಸಬಹುದು. ಇದನ್ನು ಐ ಲೈನರ್‌ ತರಹ ಬಳಸಲು ಐ ಶ್ಯಾಡೋ ಬ್ರಶ್‌ನ್ನು ತುಸು ಒದ್ದೆ ಮಾಡಿ. ಈಗ  ಈ ಬ್ರಶ್‌ ಮೇಲೆ ಐ ಶ್ಯಾಡೋ (ಬ್ಲ್ಯಾಕ್‌ ಗ್ರೇ ಯಾ ನೇವಿ ಬ್ಲೂ) ಹಚ್ಚಿರಿ. ಇದನ್ನು ಲಘುವಾಗಿ ಕೈಗಳಿಂದಲೇ ಅಪ್ಪರ್‌ ಐಲಿಡ್‌ ಮೇಲೆ ಹಚ್ಚಿರಿ.

ಫೌಂಡೇಶನ್‌ : ಅಕಸ್ಮಾತ್‌ ಫೌಂಡೇಶನ್‌ ಕ್ರೀಂ ಇಲ್ಲದಿದ್ದರೆ, ಆ ಜಾಗದಲ್ಲಿ ಲೂಸ್‌ ಪೌಡರ್‌ ಬಳಸಿಕೊಳ್ಳಬಹುದು. ಬೈ ಚಾನ್ಸ್ ಅದೂ ಇಲ್ಲದಿದ್ದರೆ, ಕನ್ಸೀಲರ್‌ನ್ನು ಬಳಸಬೇಕು. ಎರಡನ್ನೂ ಮಾಯಿಶ್ಚರೈಸರ್‌ನಲ್ಲಿ ಬೆರೆಸಿ ಬಳಸಬೇಕು.

ಕನ್ಸೀಲರ್‌ : ಒಂದು ಪಕ್ಷ ಕನ್ಸೀಲರ್‌ ಒಣಗಿ ಹೋಗಿದ್ದರೆ, ಲಿಕ್ವಿಡ್‌ ಫೌಂಡೇಶನ್ನಿನ ಬಾಟಲಿಯ ಹೊರಭಾಗದಲ್ಲಿನ ಅರೆ ಒಣಗಿದ ಪದರಗಳನ್ನೇ ಬಳಸಿಕೊಳ್ಳಬಹುದು.

ಐ ಶ್ಯಾಡೋ : ಇದು ಇಲ್ಲದಿದ್ದಾಗ ಬ್ಲಶರ್‌ ಬಳಸಬಹುದಾಗಿದೆ. ಕಾಟನ್‌ ಬಾಲ್‌ ಮೇಲೆ ಬ್ಲಶರ್‌ ಹಚ್ಚಿ, ಎರಡೂ ಕಂಗಳಿಗೆ ತೀಡಿರಿ.

- ಎನ್‌. ದೀಪ್ತಿ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ