ನೈರ್ಮಲ್ಯದ ಬಗ್ಗೆ ಚರ್ಚಿಸುತ್ತಿದ್ದರೆ, ನಾವು ವೆಟ್‌ ಲೈಪ್ಸ್ ನ್ನು ಹೇಗೆ ಮರೆಯಲು ಸಾಧ್ಯ. ವೆಟ್‌ ವೈಪ್ಸ್ ಅಂದರೆ ಫೋಲ್ಡ್ ‌ಮಾಡಿದ ಟಿಶ್ಶೂ/ಪೇಪರ್‌ ಟವೆಲ್ಸ್ ಈಚೆಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ.

ಬೇರೆ ಬೇರೆ ಅಗತ್ಯಗಳಿಗನುಸಾರ ನೀವು ಬಗೆಬಗೆಯ ವೈಪ್ಸ್ ಗಳನ್ನು ಖರೀದಿಸಬಹುದು. ಉದಾಹರಣೆಗೆ ಆಲ್ಕೋಹಾಲ್ ಫ್ರೀ ವೆಟ್‌ ವೈಪ್ಸ್, ವೆಟ್‌ ವೈಪ್ಸ್ ಫಾರ್‌ ಸೆನ್ಸಿಟಿವ್ ‌ಸ್ಕಿನ್‌, ಫ್ರ್ಯಾಗೆನ್ಸ್ ಫ್ರೀ ವೆಟ್‌ ವೈಪ್ಸ್, ವೆಟ್‌ ವೈಪ್ಸ್ ವಿತ್‌ ಬೇಬಿ ಆಯಿಲ್ ‌ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ವೈಪ್ಸ್ ಇವನ್ನು ನೀವು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಉಪಯೋಗಿಸಬಹುದು. ಅದು ಬಹೂಪಯೋಗಿ ಉತ್ಪನ್ನ. ಕೈ ಸ್ವಚ್ಛಗೊಳಿಸಲು, ಮುಖಕ್ಕೆ ತಾಜಾತನ ನೀಡಲು, ದೇಹದ ಕೆಲವು ವಿಶೇಷ ಅಂಗಗಳ ಉಪಯೋಗಕ್ಕೆ ಇದನ್ನು ಉಪಯೋಗಿಸಲಾಗುತ್ತದೆ.

ಕೈ ಸ್ವಚ್ಛಗೊಳಿಸಲು ಮೇಲಿಂದ ಮೇಲೆ ಒಂದೇ ಟವೆಲ್/ನ್ಯಾಪ್‌ಕಿನ್‌ನ್ನು ಉಪಯೋಗಿಸುವುದು ಅಥವಾ ಸೋಪ್‌/ಹ್ಯಾಂಡ್‌ ವಾಶ್‌ನ ಬಳಕೆ ಸ್ವಲ್ಪ ಕಷ್ಟವಾದುದು. ನೀವು ಎಲ್ಲಿಯಾದರೂ ಹೊರಗಡೆ ಹೋದಾಗ ಏನಾದರೂ ಕೆಲಸ ಮಾಡಬೇಕಾಗಿ ಬಂದರೆ ಅಥವಾ ಮಗುವಿನ ಸ್ವಚ್ಛತೆಯ ಕೆಲಸ ಮಾಡಬೇಕಾಗಿ ಬಂದರೆ ಅಥವಾ ಏನನ್ನಾದರೂ ತಿನ್ನಬೇಕಿದ್ದರೆ ಈ ನ್ಯಾಪ್‌ಕಿನ್‌ ಕೈ ಸ್ವಚ್ಛಗೊಳಿಸಲು ಅತ್ಯಂತ ಉಪಯುಕ್ತವಾಗಿದೆ. ಇದರ ಬಳಕೆ ಕೂಡ ಅತ್ಯಂತ ಸುಲಭವಾಗಿದೆ. ನೀವು ಇವನ್ನು ಎಲ್ಲಿಯಾದರೂ ಹೊರತೆಗೆದು ಬಳಸಬಹುದಾಗಿದೆ. ವೆಟ್‌ ವೈಪ್ಸ್ ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗುವುದು ಸುಲಭ. ಇನ್ನು ಪರ್ಸ್‌ನಲ್ಲೂ ಕೂಡ ಇಡಬಹುದು. ಅವು ಕಡಿಮೆ ಜಾಗ ಆರಿಸಿಕೊಳ್ಳುತ್ತವೆ. ಒಂದು ಸಲ ಉಪಯೋಗಿಸಿದ ಬಳಿಕ ನೀವು ಇವನ್ನು ಎಸೆದುಬಿಡುತ್ತೀರಿ. ಪುನಃ ಉಪಯೋಗಿಸುವುದಿಲ್ಲ.

ಈ ರೀತಿ ಇವು ನೈರ್ಮಲ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿವೆ. ಸಾಫ್ಟ್ ನೆಸ್‌, ಸ್ಮೂತ್‌ನೆಸ್‌ ಮತ್ತು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ ಇವನ್ನು ಪ್ರತಿಯೊಂದೂ ಬಗೆಯಲ್ಲೂ ಉಪಯೋಗಿಸಬಹುದು. ಅಷ್ಟೇ ಅಲ್ಲ, ನೀವು ಇವನ್ನು ಬೆಡ್‌ ಶೀಟ್‌, ಲೆದರ್‌ ಬ್ಯಾಗ್‌, ಕಾರ್ಪೆಟ್‌ ಮುಂತಾದವುಗಳ ಮೇಲೆ ಬಿದ್ದ ಯಾವುದಾದರೂ ಆಹಾರ ಪದಾರ್ಥವನ್ನು ಸ್ವಚ್ಛಗೊಳಿಸಬಹುದಾಗಿದೆ. ಇದರಿಂದ ಡೆಸ್ಕ್, ಕನ್ನಡಿ, ಕಂಪ್ಯೂಟರ್‌ ಹಾಗೂ ಪೀಠೋಪಕರಣಗಳನ್ನು ಕೆಲವೇ ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದಾಗಿದೆ.

ಸ್ವಚ್ಛ ಕೈ ಆರೋಗ್ಯಕರ ದೇಹ

ಕೈಗಳನ್ನು ಸ್ವಚ್ಛಗೊಳಿಸುವುದೆಂದರೆ ನಮ್ಮನ್ನು ನಾವು ರೋಗಗಳಿಂದ ಸುರಕ್ಷಿತವಾಗಿಡುವ ಮೊದಲ ಹೆಜ್ಜೆಯಾಗಿದೆ. ರೋಗಗಳು ರೋಗಿಯೊಬ್ಬನ ಸಂಪರ್ಕಕ್ಕೆ ಬರುವುದಕ್ಕಿಂತ ಹೆಚ್ಚಾಗಿ ಕೊಳೆಯಿಂದ ಅಥವಾ ಬ್ಯಾಕ್ಟೀರಿಯಾಗಳ ಕಾರಣ ಉಂಟಾಗುವುದು ಹೆಚ್ಚು. ಇಂತಹ ಸ್ಥಿತಿಯಲ್ಲಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಆಗಾಗ ಕೈಗಳ ಸ್ವಚ್ಛತೆ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದರಿಂದ ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ನೀವು ಪಬ್ಲಿಕ್‌ ಟಾಯ್ಲೆಟ್‌ ಅಥವಾ ಮನೆಯ ಟಾಯ್ಲೆಟ್‌ ಬಳಸುತ್ತಿರಬಹುದು. ಎರಡೂ ಕಡೆ ಉಪಯೋಗದ ಬಳಿಕ ಕೈಗಳನ್ನು ಅವಶ್ಯವಾಗಿ ಸ್ವಚ್ಛಗೊಳಿಸಿಕೊಳ್ಳಿ. ನೀವು ಸೋಪ್‌ನಿಂದ ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದರೆ 2 ಸೆಕೆಂಡುಗಳ ಕಾಲ ಕೈಗಳನ್ನು ಅವಶ್ಯವಾಗಿ ಉಜ್ಜಿ. ಆದರೆ ನೀವು ಯಾವಾಗಲೂ ಸೋಪನ್ನೇ ಬಳಸಬೇಕು ಎಂದೇನಿಲ್ಲ. ಇಂತಹ ಸ್ಥಿತಿಯಲ್ಲಿ ವೆಟ್‌ ಪೈಪ್ಸ್ ನಿಂದ ಸ್ವಚ್ಛಗೊಳಿಸಿಕೊಳ್ಳಿ.

ವೆಟ್‌ ವೈಪ್ಸ್ ಹಲವು ರೀತಿಯದ್ದಾಗಿರಬಹುದು

ಬೇಬಿ ವೈಪ್ಸ್ : ಇನ್ನು ವಿಶೇಷವಾಗಿ ಮಕ್ಕಳ ಸೂಕ್ಷ್ಮ ತ್ವಚೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ನ್ಯಾಪಿಯನ್ನು ತೆಗೆದ ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸುವುದಾಗಿರಬಹುದು ಅಥವಾ ತಿಂಡಿ ತಿನ್ನಿಸಿದ ಬಳಿ ಬಾಯಿ ಸ್ವಚ್ಛ ಮಾಡುವಾಗ ನೀವು ಬೇಬಿ ವೈಪ್ಸ್ ನ್ನು ಉಪಯೋಗಿಸಬಹುದು.

ಕ್ಲೆನ್ಸಿಂಗ್‌ ವೈಪ್ಸ್ : ಇವುಗಳ ಉಪಯೋಗದಿಂದ ನಿಮ್ಮನ್ನು ನೀವು ಸೋಂಕಿನಿಂದ ರಕ್ಷಿಸಿಕೊಳ್ಳ ಬಹುದಲ್ಲದೆ, ಇಡೀ ಕುಟುಂಬಕ್ಕೆ ನೈರ್ಮಲ್ಯದಾಯಕ ರಕ್ಷಣೆ ಕೊಡಬಹುದು.

ಬ್ಯೂಟಿ ವೈಪ್ಸ್ : ಇಡೀ ದಿನ ಕೆಲಸ ಮಾಡುತ್ತ ನೀವು ಫ್ರೆಶ್‌ ಹಾಗೂ ಸುಂದರವಾಗಿ ಗೋಚರಿಸುವಂತೆ ಮಾಡಲು ಬ್ಯೂಟಿ ವೈಪ್ಸ್ ಗಿಂತ ಅತ್ಯುತ್ತಮ ಆಪ್ಶನ್‌ ಮತ್ತೊಂದಿಲ್ಲ. ಇದರಿಂದ ಕೆಲವೇ ನಿಮಿಷಗಳಲ್ಲಿ ಮುಖವನ್ನು ಸ್ವಚ್ಛ ಮಾಡಿಕೊಳ್ಳಬಹುದು. ಧೂಳು, ಮಣ್ಣು, ಕೊಳೆ, ಬೆವರು ಸ್ವಚ್ಛಗೊಂಡು ಮುಖ ಫ್ರೆಶ್‌ ಹಾಗೂ ಕಾಂತಿಯುತಗೊಳ್ಳುವುದು.

– ಗಿರಿಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ