ಫೆಸ್ಟಿವಲ್ಸ್ ನಲ್ಲಿ ಮನೆಯ ವೈಬ್ಸ್ ಮತ್ತಷ್ಟು ಉತ್ತಮಗೊಳಿಸಲು, ಈ ಫ್ರಾಗ್ರೆನ್ಸ್ ಟ್ರೈ ಮಾಡಿ ನೋಡಿ…..
ದಿನವಿಡೀ ಹೊರಗಿನ ಓಡಾಟ, ಟ್ರಾಫಿಕ್ ಗಿಜಿಗಿಜಿ, ಆಫೀಸ್ ಟೆನ್ಶನ್ಸ್…. ಎಲ್ಲವನ್ನೂ ದಾಟಿ ಮನೆಗೆ ಬಂದಾಗ, ಹಾಯೆನಿಸುವ ವಾತಾವರಣವಿದ್ದರೆ ಸಾಕು ಎಂದಾಗಿ ಬಿಡುತ್ತದೆ. ಈ ತಾಜಾತನ ಕೇವಲ ನೀಟಾಗಿರುವ ಕೋಣೆಗಳಿಂದ ಮಾತ್ರವಲ್ಲ, ಉತ್ತಮ ಸುಗಂಧದಿಂದ ಲಭಿಸುತ್ತದೆ. ಮನೆಯ ವಾತಾವರಣ ಇಂಥ ಸುವಾಸನೆಯಿಂದ ಸಮೃದ್ಧವಾಗಿದ್ದರೆ, ಮನಸ್ಸಿಗೆ ನಿಜಕ್ಕೂ ಲವಲವಿಕೆಯ ಆಹ್ಲಾದಕತೆ ಸಿಗುತ್ತದೆ.
ಇತ್ತೀಚೆಗೆ ಜನ ತಮ್ಮ ಗೃಹಾಲಂಕಾರದ ಜೊತೆಗೆ ಹೋಮ್ ಫ್ರಾಗ್ರೆನ್ಸ್ ಗೂ ಅಷ್ಟೇ ಮಹತ್ವ ಕೊಡುತ್ತಿದ್ದಾರೆ. ನೀವು ನಿಮ್ಮ ಮನೆಯನ್ನು ಕೇವಲ ನೋಟದಿಂದ ಮಾತ್ರವಲ್ಲ, ಸುಗಂಧದಿಂದ ಇನ್ನಷ್ಟು ಸುಂದರಗೊಳಿಸಬಹುದು ಹೇಗೆ ಎಂದು ವಿವರವಾಗಿ ತಿಳಿಯೋಣ, ಬನ್ನಿ. ಕೆಲವು ಹಳತು, ಕೆಲವು ಹೊಸತು, ಉಳಿದವು ಬಲು ಲೇಟೆಸ್ಟ್, ರೂಮ್ ಫ್ರೆಶ್ ನರ್ ಐಡಿಯಾಗಳು :
ಈಗ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ಹೋಮ್ ಫ್ರೆಶ್ ನರ್ ಸಿಗುತ್ತದೆ. ಇದು ಮನೆಯಲ್ಲಿನ ಬೂಷ್ಟು, ಒದ್ದೆ ಬಟ್ಟೆಗಳ ದುರ್ವಾಸನೆ, ಕಿಚನ್ನಿನ ಅನಗತ್ಯ ವಾಸನೆಗಳನ್ನು ಕೆಲವೇ ನಿಮಿಷಗಳಲ್ಲಿ ದೂರಗೊಳಿಸಬಲ್ಲದು. ಇವುಗಳಲ್ಲಿ ಹಲವು ಕೋಣೆಯ ಮೂಡ್ ಸೆಟ್ಟಿಂಗ್ ಮಾಡುವುದರಲ್ಲೂ ಹೆಸರಾಗಿವೆ. ನಿಮ್ಮ ಮೂಡ್ ಹಾಗೂ ಇಷ್ಟಕ್ಕೆ ಅನುಸಾರವಾಗಿ ಇದರಿಂದ ಆರಿಸಿಕೊಳ್ಳಿ.
ಹೋಮ್ ಫ್ರಾಗ್ರೆನ್ಸ್ ನಲ್ಲಿ ಆಪ್ಶನ್ಸ್ : ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಹೋಮ್ ಫ್ರಾಗ್ರೆನ್ಸ್ ಲಭ್ಯ. ಇವನ್ನು ನೀವು ನಿಮ್ಮ ಇಷ್ಟ, ಅಗತ್ಯಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು. ಇವುಗಳಲ್ಲಿ ಪರ್ಫ್ಯೂಮ್ ಡಿಸ್ಪೆನ್ಸರ್, ಆ್ಯರೋಮಾ ಲ್ಯಾಂಪ್ಸ್, ರೂಮ್ ಸ್ಪ್ರೇ, ಏರ್ ಫ್ರೆಶ್ ನರ್ಸ್, ಪಾಟ್ ಪೌರಿ, ಸೆಂಟೆಂಡ್ ಆಯಿಲ್ಸ್, ಸೆಂಟೆಂಡ್ ಕ್ಯಾಂಡಲ್ಸ್….. ಇತ್ಯಾದಿ ಉಂಟು. ಫ್ರಾಗ್ರೆನ್ಸ್ ನಲ್ಲೂ ಹಲವಾರು ವೈವಿಧ್ಯಗಳಿವೆ. ಉದಾ: ಫ್ರೂಟೀ (ವೆನಿಲಾ, ಸ್ಟ್ರಾಬೆರಿ, ಚಾಕಲೇಟ್) ಹಾಗೂ ಪ್ಲೇವರ್ (ಜ್ಯಾಸ್ಮಿನ್, ಗುಲಾಬಿ, ಲ್ಯಾವೆಂಡರ್, ಇಂಡಿಯನ್ ಸ್ಪೈಸ್) ಇತ್ಯಾದಿ. ಈ ಸುವಾಸನೆ ಇಡೀ ಮನೆ ತುಂಬಾ ಹರಡಿಕೊಂಡು ಆಹ್ಲಾದಕತೆ ನೀಡುವುದಲ್ಲದೆ, ನಮ್ಮ ಒತ್ತಡವನ್ನೂ ನಿವಾರಿಸಿ, ನಮ್ಮ ಮೂಡ್ ಸರಿಪಡಿಸುತ್ತದೆ.
ಟ್ರೆಡಿಶನಲ್ ನ್ಯಾಚುರಲ್ ಫ್ರಾಗ್ರೆನ್ಸ್ : ಇವುಗಳಲ್ಲಿ ಹಲವಾರು ವಿಧಗಳಿದ್ದು, ಒಂದೊಂದಾಗಿ ಗಮನಿಸೋಣ.
ಅಗರಬತ್ತಿ : ಈ ಗಂಧದ ಕಡ್ಡಿಗಳು ಅನಾದಿ ಕಾಲದಿಂದ ಚಾಲ್ತಿಯಲ್ಲಿವೆ. ಗಿಡಮೂಲಿಕೆ, ತೈಲ, ಮಸಾಲೆ, ಮಲ್ಲಿಗೆ, ಚಂದನ, ಗುಲಾಬಿ, ದೇವದಾರುಗಳಂಥ ವೈವಿಧ್ಯಮಯ ನೈಸರ್ಗಿಕ ಪದಾರ್ಥ ಬಳಸಿ ಇವನ್ನು ತಯಾರಿಸುತ್ತಾರೆ. ಇದರಲ್ಲೂ 2 ವಿಧ ಉಂಟು :
ಡೈರೆಕ್ಟ್ ಬರ್ನ್ : ಇವು ಸ್ಟಿಕ್ ರೂಪದಲ್ಲಿ ಇರುತ್ತವೆ. ಇವನ್ನು ಉರಿಸುವುದರಿಂದ ನಿಧಾನವಾಗಿ ಮನೆಯ ಪ್ರತಿ ಮೂಲೆಯಲ್ಲೂ ಸುವಾಸನೆ ಹರಡುತ್ತದೆ.
ಪಾಟ್ ಪೌರಿ : ಇದನ್ನು ನೀವು ಡ್ರೈ ಫ್ಲವರ್ಸ್, ಎಲೆಬಳ್ಳಿ, ಮಣ್ಣಿನ ಕಡ್ಡಿ ಯಾ ಸೆರಾಮಿಕ್ ನ ಬ್ಯೂಟಿಫುಲ್ ಬೌಲ್ ನಲ್ಲಿ ಇರಿಸಬಹುದು. ಬಯಸಿದರೆ ನೀವು ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿ, ತಾಜಾ ಗುಲಾಬಿ ದಳಗಳನ್ನು ಅದರಲ್ಲಿ ತೇಲಿಬಿಟ್ಟು ಇದನ್ನು ಮನೆಯ ಮುಂದೆ, ಅಂಗಳದಲ್ಲಿ ರಂಗೋಲಿ ಮಧ್ಯೆ ಇರಿಸಬಹುದು. ನೈಸರ್ಗಿಕವಾಗಿ ಗಾಳಿಯಲ್ಲಿ ಇದು ಹಾಗೆ ಮನೆ ತುಂಬಾ ಹರಡುತ್ತದೆ.
ಏರ್ ಫ್ರೆಶ್ ನರ್ಸ್ : ಇವು ಸಣ್ಣಪುಟ್ಟ ಕೋನ್ ಗಳಲ್ಲಿ ಬರುತ್ತವೆ, ಇವನ್ನು ಗೋಡೆಗಳಿಗೆ ಅಳವಡಿಸಿ ಒಂದು ಬಟನ್ ಒತ್ತುವುದರಿಂದ ಮನೆ ತುಂಬಾ ತಾಜಾತನದ ಸುಗಂಧ ಹರಡಿಕೊಳ್ಳುತ್ತದೆ. ಇವು ನಮ್ಮ ಗೃಹಾಲಂಕಾರದ ಬಳಕೆಗೆ ಬಲು ಸುಲಭ, ಹೆಚ್ಚು ಪರಿಣಾಮಕಾರಿ.
ರೀಡ್ ಡಿಫ್ಯೂಝರ್ : ಇದರಲ್ಲಿ ನ್ಯಾಚುರಲ್ ಹಾಗೂ ಸಿಂಥೆಟಿಕ್ ಆಯಿಲ್ ನ ಬಳಕೆಯಾಗುತ್ತದೆ. ಇದು ಗಾಳಿಯಲ್ಲಿ ಸುಗಂಧ ಬೆರೆಸಿ, ಉತ್ತಮವಾಗಿ ವಿಲೀನಗೊಳಿಸಿ, ಸುದೀರ್ಘ ಕಾಲ ಇಡೀ ಮನೆಯನ್ನು ಸುವಾಸನಾಯುಕ್ತ ಗೊಳಿಸುತ್ತದೆ. ಇದನ್ನು ಮತ್ತೆ ಮತ್ತೆ ಹಚ್ಚಿಡುವ ಗೋಜಿಲ್ಲ. ಇದು ಬೇರೆ ಬೇರೆ ಗಾತ್ರ, ಸುವಾಸನೆಗಳಲ್ಲಿ ಲಭ್ಯ.
ಫ್ರಾಗ್ರೆನ್ಸ್ ಕ್ಯಾಂಡಲ್ಸ್ : ಮಾರುಕಟ್ಟೆಯಲ್ಲಿ ಇದೀಗ ಹಲವು ಬಣ್ಣಗಳು, ಡಿಸೈನ್ಸ್, ಸುಗಂಧಗಳಲ್ಲಿ ಫ್ರಾಗ್ರೆನ್ಸ್ ಕ್ಯಾಂಡಲ್ಸ್ ಲಭ್ಯ. ಡಿಸೈನರ್ ಆ್ಯರೋಮಾ ಲ್ಯಾಂಪ್ ನಲ್ಲಿ ನೀರಿನ ಕೆಲವು ಹನಿಗಳೊಂದಿಗೆ, ಆ್ಯರೋಮಾ ಆಯಿಲ್ ಸಿಂಪಡಿಸಿ, ಮನೆಯನ್ನು ಸುದೀರ್ಘ ಕಾಲ ಸುಗಂಧಮಯ ಗೊಳಿಸಬಹುದು.
ರೂಮ್ ಫ್ರೆಶ್ ನರ್ಸ್ : ಇದೇ ನಿಟ್ಟಿನಲ್ಲಿ ಹಲವು ಹೊಸ ಬಗೆಯ, ಅತ್ಯಂತ ವಿಭಿನ್ನ ರೂಪದ ರೂಮ್ ಫ್ರೆಶ್ ನರ್ ಐಡಿಯಾಗಳು ಲಭ್ಯವಿವೆ. ಅವುಗಳ ವಿವರ ಗಮನಿಸೋಣ.
ಆ್ಯರೋಮಾ ಡಿಫ್ಯೂಝರ್ ಮೆಶೀನ್ : ಇದೊಂದು ಸಣ್ಣ ಎಲೆಕ್ಟ್ರಾನಿಕ್ ಮೆಶೀನ್ ಆಗಿದ್ದು, ಅದರಲ್ಲಿ ನೀರು ಮತ್ತು ಆ್ಯರೋಮಾ ಆಯಿಲ್ ಬೆರೆಸಲಾಗುತ್ತದೆ. ಇದನ್ನು ಆನ್ ಮಾಡುತ್ತಲೇ ಮಿಸ್ಟ್ ಜೊತೆ ಸುಗಂಧ ಇಡೀ ಮನೆ ತುಂಬಾ ಹರಡುತ್ತದೆ. ಇದರಿಂದ ಲಿವಿಂಗ್ ರೂಮ್ ನ ಗೃಹಾಲಂಕಾರಕ್ಕೆ ಹೊಸ ಕಳೆಗಟ್ಟುತ್ತದೆ.
ಆ್ಯರೋಮ್ಯಾಟಿಕ್ ಸ್ಯಾಶೆ : ಈ ಸಣ್ಣಪುಟ್ಟ ಪೌಚುಗಳಲ್ಲಿ ಡ್ರೈ ಫ್ಲವರ್ಸ್ ಹಾಗೂ ಆ್ಯರೋಮಾ ಆಯಿಲ್ ಇರುತ್ತದೆ. ಇದನ್ನು ನೀವು ವಾರ್ಡ್ ರೋಬ್, ಬೀರು, ಶೂ ರಾಕ್ ಯಾ ಬ್ಯಾಗುಗಳಲ್ಲಿ ಇಟ್ಟುಕೊಳ್ಳಬಹುದು. ನಿಮ್ಮ ಬಟ್ಟೆಗಳಿಗೂ ಇದರಿಂದ ಸುಗಂಧ ಸಿಗುತ್ತದೆ, ವಾರ್ಡ್ ರೋಬ್ ಬೀರುವಿಗೂ ಸಹ!
ಫ್ಯಾಬ್ರಿಕ್ ಸ್ಪ್ರೇ : ಸೋಫಾ, ಕರ್ಟನ್ಸ್, ಕುಶನ್ಸ್, ಬೆಡ್ ಶೀಟ್ ಇತ್ಯಾದಿಗಳ ಮೇಲೆ ಇದನ್ನು ಸ್ಪ್ರೇ ಮಾಡುವುದರಿಂದ ಹೆಚ್ಚಿನ ಲಾಭವಿದೆ. ಇದರಿಂದ ನಿಮ್ಮ ಇಡೀ ಬೆಡ್ ರೂಂ, ಲಿವಿಂಗ್ ರೂಂ ಸುಗಂಧಮಯ ಆಗುತ್ತದೆ!
ಸ್ಮಾರ್ಟ್ ಸೆನ್ಸಿಂಗ್ ಫ್ರೆಶ್ ನರ್ : ಇವು ಆಟೋಮೆಟಿಕ್ ಸೆನ್ಸರ್ಸ್ ಆಗಿದ್ದು, ಯಾರೇ ಕೋಣೆಗೆ ಬಂದರೂ, ಸುಗಂಧದ ಸುವಾಸನೆ ಚೆಲ್ಲುತ್ತದೆ. ಇದರಲ್ಲಿ ಕೆಲವನ್ನು ಮೊಬೈಲ್ ಆ್ಯಪ್ ನಿಂದಲೂ ಕಂಟ್ರೋಲ್ ಮಾಡುವ ಸಾಧ್ಯತೆಗಳಿವೆ.
– ಕುಸುಮಾ ಭಟ್





