ಮಳೆಗಾಲದ ವಾತಾವರಣ ನಿಮಗೆ ಖುಷಿಯ ಸಿಂಚನ ಮಾಡಿರಬಹುದು. ಆದರೆ ಮಳೆಗಾಲದ ಬಳಿಕ ಮನೆಯ ಗೋಡೆಗಳಿಗೆ ಹೊಸತನದ ಸ್ಪರ್ಶ ಕೊಡಲೇಬೇಕಾಗುತ್ತದೆ. ಅಂದರೆ ಪುನಃ ಬಣ್ಣ ಹೊಡೆಸಬೇಕಾಗುತ್ತದೆ. ಜೊತೆಗೆ ಆಗ ಸಾಲುಸಾಲು ಹಬ್ಬಗಳು ಬೇರೆ ಬರುತ್ತಿರುತ್ತವೆ. ಹೀಗಾಗಿ ಹಬ್ಬಕ್ಕೆ ವಿಶೇಷ ಮೆರುಗು ಬರಲು ಗೋಡೆಗಳಿಗೆ ಬಣ್ಣಗಳ ಸೊಗಸನ್ನು ತುಂಬಬೇಕಾಗುತ್ತದೆ. ಮನೆಗೆ ಬಣ್ಣ ಹೊಡೆಸುವುದು ಒಂದು ವಿಶೇಷ ಕೆಲಸ. ಅದಕ್ಕಾಗಿ ನಿಮ್ಮ ಮೆಚ್ಚಿನ ಬಣ್ಣಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಇಷ್ಟದ ಬಣ್ಣಗಳನ್ನಷ್ಟೇ ಆಯ್ಕೆ ಮಾಡಿದರೆ ಸಾಲದು, ಬದಲಿಗೆ ವಿಭಿನ್ನ ಬಣ್ಣಗಳನ್ನು ಸಂಯೋಜನೆ ಮಾಡುವ ಕಲೆಯೂ ನಿಮಗೆ ತಿಳಿದಿರಬೇಕು. ಏಕೆಂದರೆ ಮನೆಯ ಅಂದಚೆಂದಕ್ಕೆ ಮತ್ತಷ್ಟು ಕಳೆ ಬರುತ್ತದೆ. ಮನೆಯ ಪೇಂಟ್‌ ಹೇಗೆ ಮಾಡಿಸಬೇಕು, ಅದರಲ್ಲಿ ಬಗೆಬಗೆಯ ಬಣ್ಣಗಳನ್ನು ಹೇಗೆ ಸಂಯೋಜನೆಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಣ್ಣಗಳಲ್ಲಿ ಇರಲಿ ಸಮತೋಲನ

ಬಣ್ಣಗಳಲ್ಲಿ ಹಲವು ಬಗೆ. ಆದರೆ ಎಲ್ಲಕ್ಕೂ ಮುಖ್ಯ ಸಂಗತಿಯೆಂದರೆ ಕೋಣೆಗಳಿಗೆ ಯಾವ ಬಗೆಯ ಬಣ್ಣ ಉಪಯೋಗಿಸಬೇಕು ಮತ್ತು ಅದರ ಗುಣಮಟ್ಟ ಹೇಗಿರಬೇಕು ಎಂಬುದು ಮುಖ್ಯವಾಗಿರುತ್ತದೆ. ಅಂದಹಾಗೆ ಕೋಣೆಗೆ ಯಾವ ಬಗೆಯ ಬಣ್ಣ ಮಾಡಿಸಬೇಕು ಎನ್ನುವುದು ವ್ಯಕ್ತಿಯೊಬ್ಬರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೂ ಡಿಸೈನರ್‌ಗಳ ಸಲಹೆ ಪಡೆಯುವುದು ಉಪಯುಕ್ತ ಆಗಿರುತ್ತದೆ. ನೀವು ನಿಮ್ಮ ಇಷ್ಟದ ಬಣ್ಣನ್ನು ಮನೆಯಲ್ಲಿ ಮಾಡಿಸಬೇಕೆಂದಿದ್ದರೆ, ಅದು ಯಾವ ಭಾಗದಲ್ಲಿ ಹೇಗೆ ಮಾಡಿಸಬೇಕು ಎನ್ನುವುದು ಮುಖ್ಯವಾಗಿರುತ್ತದೆ.

ಒಂದು ವೇಳೆ ನೀವು ಯಾವುದಾದರೂ ಪ್ರಖರ ಬಣ್ಣವನ್ನು ಬಳಸುವ ಯೋಚನೆ ಮಾಡುತ್ತಿದ್ದರೆ, ಅದರ ತೀವ್ರತೆ ಕಡಿಮೆ ಮಾಡಲು ಅದರಲ್ಲಿ ಕಂಟ್ರಾಸ್ಟ್ ಉಪಯೋಗ ಮಾಡಬೇಕು. ಏಕೆಂದರೆ ಆ ಬಣ್ಣ ಕಣ್ಣಿಗೆ ರಾಚದಂತಿರಬೇಕು. ಒಂದು ಮಹತ್ವದ ಸಂಗತಿಯೆಂದರೆ, ಬಣ್ಣ ಒಂದು ಸ್ಥಳದ ಮಹತ್ವವನ್ನು ಹೆಚ್ಚಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ ಎನ್ನುವುದಾದರೆ, ಅದೇ ಬಣ್ಣ ಆ ಸ್ಥಳದ ಅಂದ ಹಾಳುಗೆಡಹುವ ಅಪಾಯ ಇರುತ್ತದೆ. ಅದರ ಸಂಯೋಜನೆ ಸಮರ್ಪಕ ಆಗಿರದೇ ಇದ್ದಾಗ ಈ ಸ್ಥಿತಿ ಉತ್ಪನ್ನ ವಾಗುತ್ತದೆ. ನೀವು ಕೋಣೆಗೆ ಗಾಢ ವರ್ಣದಿಂದ ಪೇಂಟ್‌ ಮಾಡಿಸಿದ್ದರೆ, ಕೋಣೆಯ ಗಾತ್ರವೇ ಚಿಕ್ಕದೆಂಬಂತೆ ಭಾಸವಾಗಬಹುದು, ಇಲ್ಲಿ ಅತ್ಯಂತ ತಿಳಿವರ್ಣದಿಂದ ಪೇಂಟ್‌ ಮಾಡಿಸಿದ್ದರೆ, ಅದು ಪ್ಲೇನ್‌ ಎಂಬಂತೆ ಭಾಸ ಆಗಬಹುದು. ಹೀಗಾಗಿ ವರ್ಣ ಸಂಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕು. ನೀವು ಡಾರ್ಕ್‌ ಹಾಗೂ ಲೈಟ್‌ ಕಲರ್‌ ಬಳಸುವುದಾದರೆ ಅದರ ಅನುಪಾತ 30:70 ಆಗಿರಬೇಕು. ಒಂದು ವೇಳೆ ನೀವು ಯಾವುದಾದರೊಂದು ವಿಶೇಷ ವರ್ಣವನ್ನು ಆಯ್ಕೆ ಮಾಡಿಕೊಂಡಿದ್ದರೆ, ನಿಮಗೆ ಕೊಡಬಹುದಾದ ಒಂದು ಸಲಹೆಯೆಂದರೆ, ಇಡೀ ಮನೆಗೆ ಒಂದೇ ಬಣ್ಣ ಬಳಿಯಬೇಡಿ. ಒಂದು ವೇಳೆ ನೀವು ಬಿಳಿ ಬಣ್ಣ ಹೊಡೆಸಿದ್ದರೆ ಆ ಮಾತು ಬೇರೆ. ನೀವು ಯಾವುದಾದರೂ ಬಣ್ಣ ಆಯ್ಕೆ ಮಾಡುವ ಸಂದರ್ಭ ಬಂದಾಗ, ನೀವು ಅದನ್ನು ವಾಲ್‌ಪೇಪರ್ಸ್‌ ರೂಪದಲ್ಲಿ ಲಗತ್ತಿಸಬೇಕೆಂದಿದ್ದರೆ, ಮನೆಯಲ್ಲಿ ಎಲ್ಲಕ್ಕೂ ಹೆಚ್ಚು ಎದ್ದು ಕಾಣುವ ಗೋಡೆಗೆ ಅಂದರೆ ಫೀಚರ್‌ ವಾಲ್‌ಗೆ ನಿಮ್ಮ ಇಷ್ಟದ ಬಣ್ಣವನ್ನು ಸೇರ್ಪಡೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ