ಇತ್ತೀಚೆಗೆ ಎಲ್ಲದಕ್ಕೂ ಪಾರ್ಟಿ ಏರ್ಪಡಿಸುವುದು ಮಾಮೂಲಿಯಾಗಿದೆ. ಬಹಳಷ್ಟು ಜನರಿಗೆ ಪಾರ್ಟಿ ಅಟೆಂಡ್ ಮಾಡುವುದೇ ದೊಡ್ಡ ಟೈಂಪಾಸ್. ಪಾರ್ಟಿ ಅರೇಂಜ್ ಮಾಡಿಕೊಡುವುದೇ ಈಗ ದೊಡ್ಡ ವೃತ್ತಿಯಾಗಿದೆ. ಈಗೆಲ್ಲ ಚಿಟಿಕೆ ಹೊಡೆಯುವುಷ್ಟರಲ್ಲಿ ಎಲ್ಲ ಆನ್‌ಲೈನ್‌ನಲ್ಲಿ ಸಿಗುವುದರಿಂದ, ಪಾರ್ಟಿ ತಯಾರಿಗೆಂದೇ ಹಲವಾರು ವೆಬ್‌ಸೈಟ್‌ಗಳು ಲಭ್ಯವಿದ್ದು, ಅವು ಪಾರ್ಟಿಗೆ ಬೇಕಾದ ಎಲ್ಲಾ ಬಗೆಯ ಅಗತ್ಯಗಳನ್ನೂ ಪೂರೈಸುತ್ತವೆ. ನಿಮ್ಮ ಬಜೆಟ್‌ಗೆ ಹೊಂದುವಂಥದ್ದನ್ನು ಆರಿಸಿಕೊಳ್ಳಬೇಕಷ್ಟೆ. ಜೊತೆಗೆ ಜನರು ಪಾರ್ಟಿಗಳಿಗೆ ಅಗತ್ಯವಾದ ಶಿಷ್ಟಾಚಾರ ರೂಢಿಸಿಕೊಂಡು, ಆತಿಥೇಯರಿಗೆ ಸ್ವಲ್ಪ ತೊಂದರೆಯಾಗದಂತೆ ಪಾರ್ಟಿ ಎಂಜಾಯ್ ಮಾಡುವುದೂ ಅಷ್ಟೇ ಮುಖ್ಯ.ಬೆಂಗಳೂರಿನ 32ರ ಹರೆಯದ ಅವಿನಾಶ್ ತಮ್ಮ ಬಾಲ್ಯದಿಂದಲೇ ಪಾರ್ಟಿಗಳಿಗೆ ಹೋಗುತ್ತಿದುದ್ದರಿಂದ, ಕಳೆದ 10 ವರ್ಷಗಳಲ್ಲಿ ಅವರು ಅನೇಕ ಪಾರ್ಟಿಗಳನ್ನು ಆಯೋಜಿಸಿದ್ದಾರೆ. ಅದೇ ತರಹ 36ರ ಪ್ರಮೋದ್‌ಸಹ ತಮ್ಮ 16ನೇ ವರ್ಷದಿಂದಲೇ ಪಾರ್ಟಿಗಳನ್ನು ಅಟೆಂಡ್ ಮಾಡುತ್ತಿದ್ದಾರೆ. ಕಳೆದ 8-10 ವರ್ಷಗಳಿಂದ ವಾರಕ್ಕೆ 3 ಸಲ ಪಾರ್ಟಿಗಳಿಗೆ ಹೋಗುತ್ತಿರುತ್ತಾರೆ. ಹೀಗೆ ಪಾರ್ಟಿಗಳಿಗೆ ಹೋಗಿಬರುವುದು ಒಂದು ಹವ್ಯಾಸವಾಗಿ ಇದ್ದದ್ದು, ಈಗ ಇವರಿಬ್ಬರ ಕೆರಿಯರ್ ಆಗಿಹೋಗಿದೆ.
ಆರಂಭ : ಜನ ನಾನಾ ಕಾರಣಗಳಿಗಾಗಿ ಪಾರ್ಟಿ ಮಾಡುತ್ತಾ ಇರುತ್ತಾರೆ. ಅವಿನಾಶ್ ಹೇಳುವ ಪ್ರಕಾರ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಪಾರ್ಟಿಗಳಿರುತ್ತವೆ. ಅಂದರೆ ಬರ್ತ್‌ಡೇ ಪಾರ್ಟಿ, ವೆಡ್ಡಿಂಗ್ ಪಾರ್ಟಿ, ಫೇರ್‌ವೆಲ್ ಪಾರ್ಟಿ, ಫ್ರೆಶರ್ ಪಾರ್ಟಿ, ಗೆಟ್ ಟು ಗೆದರ್ ಪಾರ್ಟಿ ಇತ್ಯಾದಿ.
ಇದರ ಕುರಿತಾಗಿ ಪ್ರವೋದ್ ಹೇಳುತ್ತಾರೆ, ``ಜನ ಏನೇ ಕಾರಣ ಸಿಗಲಿ ಅಥವಾ ಕಾರಣ ಇಲ್ಲದಿರಲಿ, ಪಾರ್ಟಿ ಕೊಡುತ್ತಿರುತ್ತಾರೆ. ಎಷ್ಟೋ ಜನ ವಾರಾಂತ್ಯದಲ್ಲಿ ಶುಕ್ರವಾರ, ಶನಿವಾರ ತಪ್ಪದೇ ಪಾರ್ಟಿಗಳಿಗೆ ಹೋಗುತ್ತಾರೆ. ಇನ್ನು ಬ್ಯಾಚ್ಯುಲರ್ ಪಾರ್ಟಿಗಳ ಕುರಿತು ಹೇಳುವುದೇ ಬೇಡ. ಬರ್ತ್‌ಡೇ ಪಾರ್ಟಿಗಳು ಎಲ್ಲಕ್ಕಿಂತ ಕಾಮನ್. ಎಲ್ಲರಿಗೂ ತಮ್ಮ ಬರ್ತ್‌ಡೇ ಆಚರಿಸಿಕೊಳ್ಳುವ ಕಾತುರ. ನಮ್ಮ ಸಲಹೆ ಎಂದರೆ, ಪ್ರತಿ ಬರ್ತ್ ಡೇ ಪಾರ್ಟಿಯೂ ಸಾಧ್ಯವಾದಷ್ಟೂ ವಿಭಿನ್ನವಾಗಿರಬೇಕು. ಆಗ ಜನ ಸದಾ ಅದನ್ನು ನೆನಪಿನಲ್ಲಿಡುತ್ತಾರೆ.''
ಪಾರ್ಟಿಯ ಹವ್ಯಾಸವನ್ನೇ ತಮ್ಮ ಕೆರಿಯರ್ ಆಗಿಸಿಕೊಂಡ ಪ್ರಮೋದ್, ``ಈಗೆಲ್ಲ ಇರುವಂತೆ ವಾಟರ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಅಂತೆಲ್ಲ ಹಿಂದೆ ಇರಲಿಲ್ಲ. ಆಗಿನಿಂದ ನಾವು ಪಾರ್ಟಿ ಮಾಡುತ್ತಿದ್ದೇವೆ. ನಾನು ಪದವಿ ಕಾಲೇಜಿನಲ್ಲಿದ್ದಾಗಲೇ ಕ್ಲಬ್‌ಗಳಲ್ಲಿ ಪಾರ್ಟಿ ಅರೇಂಜ್ ಮಾಡಿಸುತ್ತಿದ್ದೆ, ಜನರನ್ನು ಒಟ್ಟುಗೂಡಿಸುತ್ತಿದ್ದೆ. ಪಾರ್ಟಿ ಮುಂದುವರಿದಂತೆ ಜನರೊಂದಿಗಿನ ನೆಟ್‌ವರ್ಕ್‌ಹೆಚ್ಚು ಬೆಳೆಯಿತು. ಇದರಿಂದಾಗಿ ನನ್ನ ಫ್ರೆಂಡ್ಸ್ ಜೊತೆ ಹೊಸ ಹೊಸ ಕ್ಲಬ್‌ಗಳಿಗೆ ಹೋಗಿ ಸದಸ್ಯರಾಗಲು ಸುಲಭವಾಯ್ತು. ಪಾರ್ಟಿ ನಡೆಸುವುದು ಒಂದು ಮೋಜಿನ ಹವ್ಯಾಸವಾಗಿದೆ. ಅದು ಆಧುನಿಕ ಬದುಕಿನ ಒಂದು ಭಾಗವೇ ಆಗಿದೆ.
``ಪಾರ್ಟಿ ಕೊಡುವುದೆಂದರೆ ನನಗೆ ಭಾರಿ ಖುಷಿ, ನನ್ನ ಈ ಚಟುವಟಿಕೆಗಳಿಂದ ಬಹಳಷ್ಟು ಜನರಿಗೆ ಹೆಚ್ಚಿನ ಮನರಂಜನೆ ಸಿಗುತ್ತದೆ. ಕೆಲವೊಮ್ಮೆ ನಾನು ನನ್ನ ಸ್ವಂತ ಖರ್ಚಿನಿಂದಲೇ ಗೆಳೆಯರು ಮತ್ತು ಪರಿಚಿತರಿಗೆ ಪಾರ್ಟಿ ಕೊಡುತ್ತೇನೆ, ಮತ್ತೆ ಉಳಿದಂತೆ ಈವೆಂಟ್ ಮೂಲಕ ಏರ್ಪಡಿಸುತ್ತೇನೆ.''