ಹಬ್ಬಗಳೆಂದರೆ ಎಲ್ಲೆಡೆ ಸಂಭ್ರಮ..... ಸಡಗರ.....! ಹಬ್ಬಗಳು ಕುಟುಂಬದ ಸದಸ್ಯರನ್ನೆಲ್ಲಾ ಒಂದೆಡೆ ಸೇರಿಸುತ್ತವೆ. ಇಂದಿನ ಧಾವಂತದ ಯಾಂತ್ರಿಕ ಬದುಕಿನಲ್ಲಿ ಪತಿ ಪತ್ನಿಯರಿಬ್ಬರೂ ನೌಕರಿ ಮಾಡುತ್ತಿದ್ದು, ಮನೆಯವರು ಒಟ್ಟಿಗೆ ಕುಳಿತು ಊಟ ಮಾಡುವುದೇ ಅಪರೂಪವಾಗಿದೆ. ಇನ್ನು ಅವರಿಬ್ಬರೂ ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಕೇಳುವುದೇ ಬೇಡ. ತಮ್ಮ ಮಕ್ಕಳ ಆಟಪಾಠಗಳನ್ನು ಗಮನಿಸಲೂ ಅವರಿಗೆ ಸಮಯ ಇರುವುದಿಲ್ಲ. ಹಬ್ಬಗಳು ಬಂದಾಗ ಅವರು ತಮ್ಮ ತಂದೆತಾಯಿಯರ, ಗುರುಹಿರಿಯರ ಆಶೀರ್ವಾದ ಪಡೆಯುತ್ತಾರೆ. ಸಿಹಿ ಮತ್ತು ಕಾಣಿಕೆಗಳನ್ನು ಹಂಚಿ ಸಂತೋಷಿಸುತ್ತಾರೆ.

ವಿಕ್ರಮ ಶಕೆ ಪ್ರಾರಂಭವಾಗಿ 2069 ರ್ಷಗಳಾಗಿವೆ. ಹಿಂದೂ ಪಂಚಾಂಗದನ್ವಯ `ಯುಗಾದಿ' ವರ್ಷದ ಮೊದಲ ದಿನವಾಗಿದ್ದು, ಜನ ಅದನ್ನು ಸಂಭ್ರಮ, ಉಲ್ಲಾಸ, ಹರ್ಷಗಳಿಂದ ಆಚರಿಸುತ್ತಾರೆ. ಯುಗಾದಿ ಹಬ್ಬವನ್ನು ಚಾಂದ್ರಮಾನ ಮತ್ತು ಸೌರಮಾನ ರೀತಿಯಲ್ಲಿ ಆಚರಿಸುವ ಎರಡೂ ಪದ್ಧತಿಗಳೂ ನಮ್ಮಲ್ಲಿವೆ.

ಭಾರತದ ವಿವಿಧ ರಾಜ್ಯಗಳಲ್ಲಿ ವರ್ಷಾಗಮನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ `ಯುಗಾದಿ' ಎಂದು ಕರೆದರೆ, ತಮಿಳುನಾಡಿನಲ್ಲಿ `ಸೌರ ಯುಗಾದಿ' (ಪುತ್ತಾಂಡುವಿಳಾ), ಕೇರಳದಲ್ಲಿ `ಚೈತ್ರ ವಿಶು' ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು `ಗುಡಿಪಾಡ್ವ,' ಬಂಗಾಳದಲ್ಲಿ `ಬಸಂತ್‌ ಪಂಚಮಿ' ಮತ್ತು ಪಂಜಾಬ್‌ನಲ್ಲಿ `ಬೈಸಾಖಿ,' ಸಿಂಧ್‌ನಲ್ಲಿ  `ಚೇಟಿ ಚಾಂದ್‌' ಎಂದು ಕರೆಯುತ್ತಾರೆ.  ಇಷ್ಟೇ ಅಲ್ಲದೆ, ಇನ್ನಿತರ ರಾಜ್ಯಗಳಲ್ಲಿ ತಮ್ಮ ಪ್ರಾದೇಶಿಕತೆಗೆ ಅನ್ವಯಿಸುವಂತೆ ಹೊಸ ವರ್ಷದ ಮೊದಲ ದಿನವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಯುಗಾದಿ ಒಂದು ವಿಶಿಷ್ಟ ಹಬ್ಬವಾಗಿದ್ದು, ಜನ ಸಂಭ್ರಮಾತುರಗಳಿಂದ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಆ ದಿನ ಉಷಃಕಾಲದಲ್ಲಿ ಎದ್ದು ಪರಮಾತ್ಮನ ಸ್ಮರಣೆ ಮಾಡುತ್ತಾ, ದೇವರ ಕೋಣೆ ಮತ್ತು ಮನೆಯ ಮುಖ್ಯ ದ್ವಾರಗಳನ್ನು ರಂಗವಲ್ಲಿ, ತೋರಣಾದಿಗಳಿಂದ ಸಿಂಗರಿಸಿ ಅಭ್ಯಂಜನ ಸ್ನಾನ ಮಾಡಿ ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಶ್ರೀ ಗಣಪತಿ ಪೂಜೆಯೊಡನೆ ಕುಲದೇವತೆಯನ್ನು ಅರ್ಚಿಸಿ, ನಂತರ ಬೇವು ಬೆಲ್ಲ ಸೇವಿಸಿ ಬಂಧುಗಳು ಸ್ನೇಹಿತರು, ಸುಜನರೊಡಗೂಡಿ ಪಂಚಾಗ ಶ್ರವಣ ಮಾಡುತ್ತಾರೆ. ನೂತನ ಸಂವತ್ಸರಾರಂಭದ ದಿನವಾದ ಚೈತ್ರ ಶುಕ್ಲ ಪ್ರತಿಪತ್‌ ದಿನ ಯುಗಾದಿ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದು ವರ್ಷದ ಮೊದಲ ದಿನವಾಗಿರುವುದರಿಂದ ಜನ ತಮ್ಮ ಆಸೆ ಆಕಾಂಕ್ಷೆ ಅಭೀಷ್ಟೆಗಳ ಈಡೇರಿಕೆಗಾಗಿ ಸಂಭ್ರಮವನ್ನು ಪ್ರಕಟಿಸುತ್ತಾ ಹೊಸ ಬಟ್ಟೆ ತೊಟ್ಟು, ಹಿರಿಯರಿಗೆ ನಮಿಸಿ, ಬೇವು ಬೆಲ್ಲವನ್ನು ಸವಿದು ಇದನ್ನು ಸಾಂಸ್ಕೃತಿಕವಾಗಿ ಒಂದು ಪ್ರಮುಖ ದಿನವನ್ನಾಗಿಸುತ್ತಾರೆ. ಹಿಂದೆ ಹಬ್ಬದ ಹಿಂದಿನ ದಿನವೇ ತೋರಣಕ್ಕೆ ಮಾವಿನ ಎಲೆ ಮತ್ತು ಬೇವಿನ ಎಲೆಗಳ ಗುತ್ತಿಗಳನ್ನು ಕೀಳುವುದೇ ಒಂದು ಸೊಗಸು. ಆಗ  ಆ ಮನೆಯವರೂ ಧಾರಾಳವಾಗಿ ಎಲೆಗಳನ್ನು ಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಸುಲಭವಾಗಿ ದೊರೆಯುತ್ತದೆ. ಹಿಂದಿನ ದಿನ ಸಂಜೆಯೇ ಪುರುಷರು ಮುಂಬಾಗಿಲಿಗೆ ಮತ್ತು ಮಂಟಪಕ್ಕೆ ಮಾವಿನ ತೋರಣವನ್ನು ಕಟ್ಟುತ್ತಾರೆ. ಮಹಿಳೆಯರು ಅಂಗಳವನ್ನು ಸಾರಿಸಿ, ಸುಂದರವಾದ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸುತ್ತಾರೆ. ಚೈತ್ರಮಾಸದ ಹಸಿರು ಚಿಗುರು, ಕೋಗಿಲೆಯ ಇಂಪಾದ ಸ್ವರ ಎಲ್ಲರಲ್ಲೂ ಆನಂದ ತರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ