ನನ್ನ ವಯಸ್ಸು 20 ವರ್ಷ. ನನ್ನ ಕೂದಲು ಬಹಳ ಉದುರಿ ಹೋಗಿದೆ ಮತ್ತು ಎಷ್ಟೋ ಕೂದಲು ಬೆಳ್ಳಗಾಗಿವೆ. ದಯವಿಟ್ಟು ಯಾವುದಾದರೂ ಮನೆಯ ಮತ್ತು ಮಿತ್ಯಯದ ಚಿಕಿತ್ಸೆ ಸೂಚಿಸಿ.

ಕೂದಲುದುರುವುದರಿಂದ ಬೇಸರಿಸಬೇಡಿ. ಅನೇಕ ಸಲ ಚಿಂತೆ, ದುರ್ಬಲತೆ ಮತ್ತು ತೀಕ್ಷ್ಣ ಔಷಧಿಗಳ ನಿತ್ಯ ಸೇವನೆಯಿಂದಲೂ ಕೂದಲು ಉದುರುತ್ತವೆ. ಕೂದಲು ಚಿಕ್ಕದಾಗಿದ್ದರೆ ಯಾರಾದರೂ ಕೇಶ ಶೃಂಗಾರ ತಜ್ಞರನ್ನು ಕಂಡು ನಿಮ್ಮ ಮುಖಕ್ಕೊಪ್ಪುವ ಶೈಲಿಯಲ್ಲಿ ಕೂದಲು ಕತ್ತರಿಸಿಕೊಳ್ಳಿ. ಆಮೇಲೆ ಗೋರಂಟಿಯಿಂದ ಹೊಸ ಬಣ್ಣ ಕೊಡಿ, ಬಿಳಿ ಕೂದಲು ಮರೆಯಾಗುತ್ತದೆ ಮತ್ತು ಬಹು ಕಡಿಮೆ ಖರ್ಚಿನಲ್ಲಿ ಆಧುನಿಕ ಸೌಂದರ್ಯವನ್ನೂ ಪಡೆಯುವಿರಿ.

ನನ್ನ ಕಣ್ಣು ರೆಪ್ಪೆಗಳ ಕೂದಲಿನಲ್ಲಿ ಒಣಗಿದ ಹಿಪ್ಪೆ ಸೇರಿಕೊಳ್ಳುತ್ತದೆ. ಎಷ್ಟೋ ಸಲ ಕಣ್ಣುಗಳ ಒಳಗೆ ಬೀಳುತ್ತದೆ. ಹುಬ್ಬುಗಳ ಕೂದಲಿನಲ್ಲಿ ಹಿಪ್ಪೆ ದೂರಮಾಡಲು ಏನಾದರೂ ಉಪಾಯವಿದೆಯೇ?

ಕಣ್ಣುಗಳು ಅಮೂಲ್ಯವಾದ ಆಸ್ತಿ, ಇವುಗಳ ಬಗ್ಗೆ ಯಾವ ರೀತಿಯ ನಿರ್ಲಕ್ಷ್ಯ ಸಲ್ಲದು. ಅದೇ ರೀತಿ ಕಣ್ಣುಗಳ ಸುತ್ತಮುತ್ತ, ಯೋಚನೆ ಮಾಡದೆ ಯಾವುದೇ ಪ್ರಯೋಗ ಮಾಡಬಾರದು. ನಿಮ್ಮ ಸಮಸ್ಯೆಯಿಂದ ನಿಮಗೆ ಹುಬ್ಬುಗಳ ಒಂದು ವಿಶೇಷ ಕಾಯಿಲೆ ಆಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ಸಾಧಾರಣವಾಗಿ ಸ್ಟೈ ಎಂದು ಕರೆಯುತ್ತಾರೆ. ಇದರಲ್ಲಿ ಹುಬ್ಬುಗಳ ತುದಿಯಲ್ಲಿ ಚರ್ಮ ಒಣಗಿದಂತಾಗುತ್ತದೆ. ಇದರ ಚಿಕಿತ್ಸೆಗೆ ಸೂಕ್ತ ನೇತ್ರ ವಿಶೇಷಜ್ಞರನ್ನು ಕಾಣಬೇಕು. ಅಲಕ್ಷ್ಯ ಮಾಡಿದರೆ ರೆಪ್ಪೆಗಳ ತುದಿಯಲ್ಲಿ ಕೂದಲು ಉದುರುವುದು ಆರಂಭವಾಗುತ್ತದೆ.

ನನ್ನ ಮುಖದ ಮೇಲಿನ ಸಣ್ಣ ಸಣ್ಣ ಕೂದಲುಗಳಿಂದ ಬಹಳ ಯೋಚನೆ ಆಗಿದೆ. ಮುಖವನ್ನು ಎಷ್ಟು ಶುಭ್ರವಾಗಿಟ್ಟುಕೊಂಡರೂ ಕಪ್ಪು ಕೂದಲು ಇರುವುದರಿಂದ ಸ್ವಚ್ಛವಾಗಿ ಕಾಣುವುದೇ ಇಲ್ಲ. ಕೂದಲುಗಳನ್ನು ತೆಗೆಸಬಹುದೆ?

ಮುಖದ ಮೇಲಿನ ಕೂದಲುಗಳು ಬಹಳ ಚಿಕ್ಕವಾಗಿದ್ದರೆ ಅವುಗಳನ್ನು ಥ್ರೆಡಿಂಗ್‌ ಮಾಡಿಸಿ. ಕೂದಲು ಕಪ್ಪಗೆ ದಪ್ಪಗೆ ಉದ್ದವಾಗಿದ್ದರೆ ವ್ಯಾಕ್ಸಿಂಗ್‌ ಅಥವಾ ಎಲೆಕ್ಟ್ರೋಲಿಸಿಸ್‌ ಚಿಕಿತ್ಸೆಯಿಂದ ಕೀಳಬಹುದು. ಕೂದಲು ಮಧ್ಯಮ ಆಕಾರವಾಗಿದ್ದರೆ ಇದನ್ನು ಬ್ಲೀಚ್‌ಮಾಡಿಸಬಹುದಷ್ಟೆ. ಬ್ಲೀಚ್‌ ಮಾಡಿಸಿದರೆ ಕೂದಲು ಮುಖದ ಜೊತೆ ಹೊಂದಿಕೊಳ್ಳಬೇಕು, ನೋಡಲು ಕೆಟ್ಟದಾಗಿ ಕಾಣಬಾರದು.

ನನ್ನ ಕೂದಲು ರೇಶಿಮೆಯಂತಿದೆ. ನನಗೆ ರೇಶಿಮೆಯಂಥ ಕೂದಲು ಇಷ್ಟವಿಲ್ಲ. ಕೂದಲು ಗುಂಗುರಾಗಿ ಮಾಡಿಸಲು ಇಷ್ಟ. ಗುಂಗುರು ಮಾಡಿಸಿದ ಮೇಲೆ ಎಷ್ಟು ಸಮಯದವರೆಗೆ ಹಾಗೇ ಉಳಿಯುತ್ತದೆ?

ಕೂದಲು ಉದ್ದವಾಗಿದ್ದವರಿಗೆ ಗುಂಗುರು ಕೂದಲು ಚೆನ್ನಾಗಿ ಕಾಣಿಸುವುದಿಲ್ಲ. ಆದ್ದರಿಂದ ನಿಮ್ಮ ಕೂದಲು ಉದ್ದವಾಗಿದ್ದರೆ ಕತ್ತರಿಸಿ ಮತ್ತು `ಪರ್ಮ್' ಮಾಡಿಸಿರಿ. ಪರ್ಮ್ ಶಾಶ್ವತವಾಗಿ ಇರಬೇಕೋ, ತತ್ಕಾಲಕ್ಕೆ ಮಾತ್ರ ಇರಬೇಕೋ ಅಥವಾ ಕೆಲವಾರು ದಿನಗಳವರೆಗೆ ಇರಬೇಕೋ ಎಂಬುದು ನಿಮ್ಮ ಇಷ್ಟ ಮತ್ತು ಕೇಶ ಶೃಂಗಾರವನ್ನು ಅವಲಂಬಿಸಿದೆ. ಆದರೆ ಮೊದಲು ನೀವು ಡ್ರೈಯರ್‌ ಸೆಟಿಂಗ್‌ ಅಥವಾ ಟೆಂಪರರಿ ಪರ್ಮ್ ಮಾಡಿಸಿಕೊಳ್ಳಲೇಬೇಕು. ಹೀಗೆ ಮಾಡಿದಾಗ ನಿಮ್ಮ ಕೇಶ ಶೃಂಗಾರ ಯಾವುದೋ ಕಾರಣದಿಂದ ನಿಮಗೆ ಇಷ್ಟವಾಗದಿದ್ದರೆ, ನಿಮ್ಮ ಮುಖಕ್ಕೆ ಹೊಂದಿಕೆಯಾಗದಿದ್ದರೆ ಸುಲಭವಾಗಿ ಬದಲಾಯಿಸಬಹುದು.

ನಾನು 21 ವರ್ಷದವಳು. ಕನ್ನಡಕ ಹಾಕುತ್ತೇನೆ. ಕಣ್ಣಿನ ದೃಷ್ಟಿ ಸಾಕಷ್ಟು ದುರ್ಬಲವಾಗಿದ್ದರಿಂದ ಕನ್ನಡಕದ ಗಾಜು ದಪ್ಪವಾಗಿ, ನೋಡಲು ಕೆಟ್ಟದಾಗಿ, ಕಾಣಿಸುತ್ತದೆ. ನಂಬರ್ಕಳೆಯಲು ಏನಾದರೂ ಉಪಾಯ ಇದೆಯೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ