ಪ್ರ : ನಾನು 25 ವರ್ಷದ ವಿವಾಹಿತ ಮಹಿಳೆ. ನನ್ನ ಅತ್ತೆಮನೆ ಹಾಗೂ ತವರುಮನೆ ಹತ್ತಿರದಲ್ಲಿಯೇ ಇವೆ. ಹೀಗಾಗಿ ತವರಿನವರು ಹಾಗೂ ಸಂಬಂಧಿಕರು ಆಗಾಗ ಮನೆಗೆ ಬರುತ್ತಿರುತ್ತಾರೆ. ಇದಕ್ಕೆ ಗಂಡನ ಆಕ್ಷೇಪವೇನೂ ಇಲ್ಲ. ಆದರೆ ಅತ್ತೆಗೆ ಮಾತ್ರ ಇದು ಇಷ್ಟವಿಲ್ಲ. ಅವರು ಈ ಬಗ್ಗೆ ಬಹಿರಂಗವಾಗಿಯೇ ನಿನ್ನಮ್ಮನಿಗೆ ಈ ವಿಷಯ ತಿಳಿಸು, ಅವರುಗಳು ಯಾವಾಗಲಾದರೊಮ್ಮೆ ಬರುವುದು ಹೋಗುವುದು ಸರಿ ಇರುತ್ತದೆ ಎಂದು ಹೇಳುವ ಎನ್ನುತ್ತಿರುತ್ತಾರೆ. ಅತ್ತೆ ಮನೆಯಲ್ಲಿ ನನ್ನ ತವರಿನವರಿಗೆ ಕೊಡುವ ಆದರ ಸತ್ಕಾರದಲ್ಲಿ ಯಾವುದೇ ಕೊರತೆಯಿಲ್ಲ. ಸಂಬಂಧದಲ್ಲಿ ಒಂದಿಷ್ಟು ಅಂತರ ಕಾಪಾಡುವುದರಲ್ಲಿಯೇ ದಾಂಪತ್ಯದಲ್ಲಿ ಹೊಸತನ ಇರುತ್ತದೆ ಎನ್ನುವುದು ಅತ್ತೆಯ ಹೇಳಿಕೆ. ಈ ಕುರಿತಂತೆ ಮನೆಯಲ್ಲಿ ಆಗಾಗ ಮನಸ್ತಾಪಗಳು ಕೂಡ ಆಗುತ್ತಿವೆ. ನಾನು ಅಮ್ಮನಿಗೆ ಈ ಕುರಿತಂತೆ ಏನು ಹೇಳಬೇಕು? ಮಗಳಾಗಿರುವ ಕಾರಣದಿಂದ ನಾನು ಅವರ ಮನಸ್ಸು ನೋಯಿಸಲಾಗದು. ದಯವಿಟ್ಟು ನನಗೆ ಸೂಕ್ತ ಸಲಹೆ ನೀಡಿ.

ಉ : ನಿಮ್ಮ ಅತ್ತೆಯ ಹೇಳಿಕೆ ಸರಿಯಾಗಿದೆ. ಸಂಬಂಧಗಳನ್ನು ಹೃದಯಪೂರ್ವಕ ನಿಭಾಯಿಸಿ, ಆದರೆ ಅದರಲ್ಲಿ ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಆದ್ದರಿಂದ ಸಂಬಂಧ ಬಹು ವರ್ಷಗಳ ಕಾಲ ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ.

ಬಹಳಷ್ಟು ಪ್ರಕರಣಗಳಲ್ಲಿ ಕಂಡುಕೊಂಡ ಸಂಗತಿ ಏನೆಂದರೆ, ಮಗಳ ಮನೆ ಹತ್ತಿರದಲ್ಲಿಯೇ ಇದ್ದರೆ ಸಂಬಂಧಿಕರು ಆಗಾಗ ಬರುತ್ತಿರುತ್ತಾರೆ. ಕೌಟುಂಬಿಕ ಸಮಸ್ಯೆಗಳಲ್ಲಿ ಹಸ್ತಕ್ಷೇಪ ಕೂಡ ಮಾಡುತ್ತಾರೆ. ಅದರಿಂದಾಗಿ ಮಗಳ ಜೀವನದಲ್ಲಿ  ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಪ್ರತಿಯೊಬ್ಬರ ಕಷ್ಟಸುಖದಲ್ಲಿ ಭಾಗಿಯಾಗಬೇಕು. ಆದರೆ ಸಂಬಂಧದಲ್ಲಿ ಅಂತರವಂತೂ ಇರಬೇಕು. ನೀವು ನಿಮ್ಮ ಅಮ್ಮನ ಜೊತೆ ಈ ಬಗ್ಗೆ ಅವಶ್ಯವಾಗಿ ಮಾತುಕತೆ ನಡೆಸಿ. ಅವರಿಂದಾಗಿ ಕುಟುಂಬದಲ್ಲಿ ಜಗಳಗಳಾಗುವುದನ್ನು ಅವರೆಂದೂ ಸಹಿಸರು. ಒಬ್ಬ ಮಗಳಾಗಿರುವ ಕಾರಣದಿಂದ ನೀವು ಕೂಡ ಕೆಲವೊಂದು ಜವಾಬ್ದಾರಿಗಳನ್ನು ನಿಭಾಯಿಸಬೇಕು. ವಿಶೇಷ ದಿನಗಳಂದು ನೀವು ತವರಿಗೆ ಹೋಗಿ ಅಮ್ಮ ಹಾಗೂ ಇತರರ ಯೋಗಕ್ಷೇಮ ವಿಚಾರಿಸುತ್ತಿರಿ. ಜೊತೆಗೆ ಫೋನ್‌, ವಿಡಿಯೋ ಕಾಲ್ ಮೂಲಕ ತವರಿನವರ ಜೊತೆ ಸಂಪರ್ಕದಲ್ಲಿರಬಹುದು. ಇದರಿಂದ ಸಂಬಂಧದಲ್ಲಿ ಮಾಧುರ್ಯ ಕಾಪಾಡಿಕೊಂಡು ಹೋಗಬಹುದು.

ಪ್ರ : ನಾನು 24 ವರ್ಷದ ಮಹಿಳೆ. ಇತ್ತೀಚೆಗಷ್ಟೆ ಮದುವೆಯಾಗಿದೆ.  ಸದ್ಯಕ್ಕೆ ನಮಗೆ ಮಗು ಬೇಡ. ಗರ್ಭ ನಿರೋಧಕ್ಕಾಗಿ ಗಂಡ ಕಾಂಡೋಮ್ ಬಳಸುತ್ತಾರೆ. ಸೆಕ್ಸನ್ನು ಮತ್ತಷ್ಟು ಆನಂದದಾಯಕಗೊಳಿಸಲು ಮಾರುಕಟ್ಟೆಯಲ್ಲಿ ಹಲವು ಪ್ರಕಾರದ ಫ್ಲೇವರ್‌ ಗಳ ಕಾಂಡೋಮ್ ಗಳು ಲಭ್ಯವಿವೆ. ಆದರೆ ನಾನು ಮಹಿಳಾ ಕಾಂಡೋಮ್ ಬಗ್ಗೆ ಕೇಳಿರುವೆ. ಅದು ಸುರಕ್ಷಿತವೇ? ಅದು ಸೆಕ್ಸನ್ನು ಆನಂದದಾಯಕಗೊಳಿಸುತ್ತದೆಯೇ?

ಉ : ಪುರುಷ ಕಾಂಡೋಮ್  ಹಾಗೆ ಮಹಿಳಾ ಕಾಂಡೋಮ್ ಕೂಡ ಗರ್ಭ ನಿರೋಧಕದ ಹಾಗೂ ಮಿತ್ಯಯದ ಪರ್ಯಾಯವಾಗಿದೆ. ಅದು ಕೇವಲ ಗರ್ಭವನ್ನಷ್ಟೇ ತಡೆಯುವುದಿಲ್ಲ, ಸೆಕ್ಸ್ ನಲ್ಲಿ ವೈರಸ್ ಕೂಡ ಹರಡದಂತೆ ತಡೆಯುತ್ತದೆ. ಶೇಪ್ ನಲ್ಲಿರುವ ಅದನ್ನು ವಜೈನಾದಲ್ಲಿ ಅವಳವಡಿಸಲಾಗುತ್ತದೆ. ಆರಂಭದಲ್ಲಿ ಈ ಪ್ರಕ್ರಿಯೆ ಸ್ವಲ್ಪ ಜಟಿಲ ಅನಿಸಿದರೂ ಆ ಬಳಿಕ ಇದರ ಬಳಕೆ ಅತ್ಯಂತ ಸುಲಭ ಎನಿಸುತ್ತದೆ. ಇದು ಅತ್ಯಂತ ಸುರಕ್ಷಿತವಾಗಿದ್ದು, ಇದರ ಡಬಲ್ ಕೋಟಿಂಗ್‌ ಪುರುಷ ವೀರ್ಯಾಣುವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ವಜೈನಾದಲ್ಲಿ ಅಳವಡಿಸುವಾಗ ಇದರ ಆಂತರಿಕ ರಿಂಗ್‌ ಸ್ವಲ್ಪ ಫ್ಲೆಕ್ಸಿಬಲ್ ಆಗುತ್ತದೆ ಹಾಗೂ ಬಾಹ್ಯ ರಿಂಗ್‌ ವಜೈನಾದಿಂದ 1 ಇಂಚು ಹೊರಗೆ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ