ಪ್ರ : ನನ್ನ ವಯಸ್ಸು 27, ಗಂಡನಿಗೆ 30. ಮದುವೆಯಾಗಿ 5 ವರ್ಷಗಳಾಗಿವೆ ನಮ್ಮಿಬ್ಬರ ಪರೀಕ್ಷೆಗಳು ನಾರ್ಮಲ್ ಆಗಿವೆ. ಗಂಡನ ವೀರ್ಯಾಣುಗಳ ಸಂಖ್ಯೆ ಸುಮಾರು 90 ಮಿಲಿಯನ್ ಎಂದು ಬಂದಿವೆ. ಇಷ್ಟಿದ್ದಾಗ್ಯೂ ನಾವು ಸಂತಾನ ಪ್ರಾಪ್ತಿಯಿಂದ ವಂಚಿತರಾಗಿದ್ದೇವೆ. ನಾವು ಐವಿಎಫ್ ತಂತ್ರಜ್ಞಾನದ ಲಾಭ ಪಡೆಯಬಹುದೇ?
ಉ : ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ. ನಿಮ್ಮ ಗಂಡನ ವೀರ್ಯಾಣುಗಳ ಸಂಖ್ಯೆ ಸಮರ್ಪಕವಾಗಿದೆ. ನಿಮಗೆ ಐಯುಐ ತಂತ್ರಜ್ಞಾನದ ಲಾಭವಿಲ್ಲ. ಆದರೆ ನಿಮಗೆ ಐವಿಎಫ್ ತಂತ್ರಜ್ಞಾನ ಸೂಕ್ತ ಎನಿಸುತ್ತದೆ. ಅದರ ನೆರವಿನಿಂದ ನಿಮಗೆ ಸಂತಾನಪ್ರಾಪ್ತಿ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಯಾರಾದರೂ ನುರಿತ ತಂತ್ರಜ್ಞರ ನೆರವು ಪಡೆದುಕೊಳ್ಳಿ.
ಪ್ರ : ನನ್ನ ಮದುವೆಯಾಗಿ 2 ವರ್ಷಗಳಾಗಿವೆ. ಆದರೆ ನಾನು ಈವರೆಗೂ ಗರ್ಭಿಣಿಯಾಗಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ನನ್ನ ವರದಿಗಳೆಲ್ಲ ಸರಿ ಎಂದು ಬಂದಿವೆ. ಗಂಡನ ವೀರ್ಯಾಣುಗಳ ಸಂಖ್ಯೆ 32 ಮಿಲಿಯನ್ ಎಂದು ವರದಿ ಬಂದಿದೆ. ವೈದ್ಯರ ಪ್ರಕಾರ, ಈ ಸಂಖ್ಯೆ ತೃಪ್ತಿಕರ ಎಂದು ಹೇಳಿದರು. ನಾನು ಮಾತ್ರ ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೇನಿರಬಹುದು?
ಉ : ನಿಮ್ಮ ಪತಿಯ ವೀರ್ಯಾಣುಗಳ ಸಂಖ್ಯೆ ತೃಪ್ತಿದಾಯಕವಾಗಿದೆ. ನಿಮ್ಮ ಪರೀಕ್ಷೆಯ ವರದಿಗಳು ನಿರ್ಧಾರಕ್ಕೆ ಬರುವ ಮುನ್ನ ನೀವು ಹತಾಶರಾಗಬಾರದು. ನೀವು ಪತಿಯ ಜೊತೆಗೆ ಯಾವಾಗ ಸಮಾಗಮ ನಡೆಸಬೇಕೆಂದರೆ, ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿಗೆ ಇರುವ ದಿನಗಳಲ್ಲಿ. ಉದಾಹರಣೆಗೆ ನಿಮ್ಮ ಮುಟ್ಟು ತಿಂಗಳ ಮೊದಲನೇ ತಾರೀಖಿಗೆ ಬರುತ್ತದೆಂದಾದರೆ ನೀವು ಆ ತಿಂಗಳ 8 ರಿಂದ 20ನೇ ತಾರೀಖಿನ ನಡುವೆ ಅವಶ್ಯವಾಗಿ ಸಮಾಗಮ ನಡೆಸಬೇಕು. ಆ ಬಳಿಕ ನಿಮಗೆ ಸಮಸ್ಯೆ ಉಂಟಾಗುತ್ತದೆ ಎಂದಾದರೆ, ನೀವು ಐಯುಐ ತಂತ್ರಜ್ಞರ ಮೊರೆ ಹೋಗಬಹುದು.
ಪ್ರ : ನನ್ನ ವಯಸ್ಸು 24. ಪ್ರೇಮಿಯ ಒತ್ತಡದಿಂದ ದೈಹಿಕ ಸಂಬಂಧ ಬೆಳೆಸುತ್ತಿರುವೆ. ಆದರೆ ನಾವು ಸುರಕ್ಷತೆಯ ಬಗ್ಗೆ ಸಂಪೂರ್ಣ ಎಚ್ಚರ ವಹಿಸುತ್ತೇವೆ. ಆದಾಗ್ಯೂ ಏನಾದರೂ ಗಡಿಬಿಡಿಯಾಗಬಹುದೆ ಎಂಬ ಆತಂಕ ಕಾಡುತ್ತಿರುತ್ತದೆ.
ಉ : ನೀವು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಗರ್ಭ ಪರೀಕ್ಷೆ ಕೂಡ ಮಾಡಿಸಬಹುದು. ಭವಿಷ್ಯದ ಹಿತದೃಷ್ಟಿಯಿಂದ ನಿಮಗೆ ಕೊಡಬಹುದಾದ ಸಲಹೆಯೆಂದರೆ, ನೀವು ಮುಂದೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರಿ.