ಪ್ರ : ನಾನು 25 ವರ್ಷದವಳು. 2-3 ತಿಂಗಳಿನಲ್ಲಿಯೇ ನನಗೆ ಮದುವೆ ನಡೆಯಲಿದೆ. ನನ್ನ ಭಾವಿ ಪತಿ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾನೆ. ಆದರೆ ಅವನು ಮದುವೆಗೂ ಮುಂಚೆ ನನ್ನೊಂದಿಗೆ ಸಂಬಂಧ ಬೆಳೆಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ, ಅವನು ಮೊಬೈಲ್ ಫೋನ್‌ನಲ್ಲಿ ಪೋರ್ನ್‌ ವಿಡಿಯೋಗಳನ್ನು ಕಳಿಸುತ್ತಾನೆ. ನಮ್ಮಿಬ್ಬರ ನಡುವೆ ಏನೇ ಮಾತುಕತೆಯ ವಿಷಯ ಬಂದರೂ ಅವನು ಸೆಕ್ಸ್ ಬಗ್ಗೆಯೇ ಮಾತನಾಡಲು ಇಷ್ಟಪಡುತ್ತಾನೆ. ವಿಡಿಯೋ ಕಾಲ್ ‌ಸಂದರ್ಭದಲ್ಲಿ ಅವನು ನನಗೆ ನಗ್ನಳಾಗಲು ಹೇಳುತ್ತಾನೆ. ನನ್ನ ಭಾವಿ ಪತಿ ಮಾನಸಿಕ ವಿಕೃತಿಗೆ ತುತ್ತಾಗಿರಬಹುದೆ? ನಾನೇನು ಮಾಡಬೇಕು ದಯವಿಟ್ಟು ತಿಳಿಸಿ.

ಉ : ಮದುವೆಗೂ ಮುನ್ನ ಸೆಕ್ಸ್ ಸಲ್ಲದು. ನಿಮ್ಮ ಭಾವಿ ಪತಿ ಅದಕ್ಕೆ ಒತ್ತಡ ಹೇರುತ್ತಿದ್ದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿ. ಇನ್ನು ಅವನ ಮಾನಸಿಕ ವಿಕೃತಿಯ ಬಗ್ಗೆ ಕೇಳಿರುವ ಪ್ರಶ್ನೆಗೆ ಕೊಡಬೇಕಾದ ಉತ್ತರ ಅವನ ನಿಕಟವರ್ತಿಗಳಿಂದ ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಪತಿ ಸದಾ ಸೆಕ್ಸ್ ಬಗ್ಗೆ ಮಾತನಾಡುತ್ತಿದ್ದರೆ, ಪೋರ್ನ್‌ ಫಿಲ್ಮ್ ನೋಡಲು ಇಷ್ಟಪಡುತ್ತಾನೆಂದರೆ, ಅದು ಅವನ ವಿಕೃತಿಯೇ ಹೌದು.

ಸೆಕ್ಸ್ ಅಡಿಕ್ಷನ್‌ ಒಂದು ರೀತಿಯ ಮಾನಸಿಕ ರೋಗವೇ ಆಗಿದೆ. ಅದು ಕೇವಲ ಮಾನಸಿಕ ಆರೋಗ್ಯ, ಕೆರಿಯರ್‌ ಹಾಗೂ ಸಂದರ್ಭಗಳ ಮೇಲೂ ಪ್ರಭಾವ ಬೀರುತ್ತದೆ. ಸಂಶೋಧಕರ ಪ್ರಕಾರ, ಇದರಿಂದ ಗ್ರಸ್ತನಾದ ವ್ಯಕ್ತಿ ಸದಾ ಸೆಕ್ಸ್ ಫ್ಯಾಂಟಸಿಯಲ್ಲಿರಲು ಬಯಸುತ್ತಾನೆ. ಸೆಕ್ಸ್ ಬಗ್ಗೆ ಮಾತನಾಡುವುದು, ಪೋರ್ನ್‌ ಮೂವಿ ನೋಡಬೇಕೆನಿಸುತ್ತದೆ. ಸಂಶೋಧಕರ ಪ್ರಕಾರ, ಯಾರು ಸೆಕ್ಸ್ ವಿಷಯದಲ್ಲಿ ತಮ್ಮ ಮೇಲೆ ನಿಯಂತ್ರಣ ಹೊಂದಿರುವುದಿಲ್ಲವೋ ಅವರು ತಮ್ಮ ಜೊತೆಗೆ ಇತರರ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತಾರೆ. ತನ್ನ ಸ್ಟ್ರೆಸ್‌ ಕಡಿಮೆ ಮಾಡಿಕೊಳ್ಳಲು ಅವನು ಸೆಕ್ಸ್ ನಲ್ಲಿ ತೊಡಗಬೇಕೆನ್ನುತ್ತಾನೆ.

ನಿಮ್ಮ ಭಾವಿ ಪತಿ ಸೆಕ್ಸ್ ಅಡಿಕ್ಷನ್‌ಗೆ ತುತ್ತಾಗಿದ್ದಾನೆಂದು ಅವನೇ ಸ್ವತಃ ಹೇಳಿದರೆ ಅಥವಾ ಅವನ ನಿಕಟವರ್ತಿಗಳು ಹೇಳಿದರೆ ಮಾತ್ರ ಅದು ಖಚಿತವಾಗುತ್ತದೆ. ನೀವು ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಯೋಚಿಸಿ ನಿರ್ಧಾರ ಮಾಡಿ. ಮದುವೆಯೆನ್ನುವುದು ಗೊಂಬೆ ಆಟವಲ್ಲ. ನಿಮ್ಮ ಭಾವಿ ಪತಿಯ ವರ್ತನೆ ಅಥವಾ ವಿಕೃತಿಯ ಬಗ್ಗೆ ಗೊತ್ತಾದರೆ, ಅವನ ಜೊತೆ ಮದುವೆ ಮಾಡಿಕೊಳ್ಳಬೇಕೊ, ಬೇಡವೋ ಎನ್ನುವುದನ್ನು ನೀವೇ ನಿರ್ಧರಿಸಿ.

ಪ್ರ : ನಾನು 24 ವರ್ಷದ ಯುವತಿ. 3-4 ತಿಂಗಳಲ್ಲಿ ನನ್ನ ಮದುವೆ ಇದೆ. ಈವರೆಗೂ ನಾನು ಯಾರೊಂದಿಗೂ ದೈಹಿಕ ಸಂಪರ್ಕ ಮಾಡಿಲ್ಲ. ಆದರೆ ನಾನು ನಿಯಮಿತವಾಗಿ ಮಾಸ್ಟರ್‌ ಬೇಷನ್‌ ಮಾಡಿಕೊಳ್ಳುತ್ತೇನೆ. ಅದರಿಂದಾಗಿ ನನ್ನ ಗುಪ್ತಾಂಗದ ಚರ್ಮ ಸಡಿಲವಾದಂತೆ ಭಾಸವಾಗುತ್ತದೆ. ಈ ಕಾರಣದಿಂದ ನಾನು ಬಹಳಷ್ಟು ಒತ್ತಡದ ಸ್ಥಿತಿಯಲ್ಲಿದ್ದೇನೆ. ದಯವಿಟ್ಟು ಈ ಬಗ್ಗೆ ಸೂಕ್ತ ಸಲಹೆ ನೀಡಿ.

ಉ : ಯಾವ ರೀತಿ ಲೈಂಗಿಕ ಸಂಪರ್ಕದಿಂದ ಗುಪ್ತಾಂಗದ ಚರ್ಮ ಸಡಿಲವಾಗುವುದಿಲ್ಲಿ, ಅದೇ ರೀತಿ ಹಸ್ತಮೈಥುನದಿಂದಲೂ ವ್ಯತ್ಯಾಸ ಆಗಲಾರದು. ಅದು ನಿಮ್ಮ ಭ್ರಮೆ. ವಾಸ್ತವ ಸಂಗತಿ ಏನೆಂದರೆ ಕಡಿಮೆ ಉಪಯೋಗದಿಂದಲೇ ಅದರಲ್ಲಿ ಶಿಥಿಲತೆ ಉಂಟಾಗಬಹುದೇ ಹೊರತು ನಿಯಮಿತ ಉಪಯೋಗದಿಂದಲ್ಲ. ನೀವು ನಿಮ್ಮ ಮದುವೆಯ ಸಿದ್ಧತೆಯನ್ನು ಶುರು ಮಾಡಿ ಹಾಗೂ ಮನದಲ್ಲಿರುವ ಭಯವನ್ನು ಪೂರ್ಣವಾಗಿ ನಿವಾರಿಸಿಕೊಳ್ಳಿ. ಅದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ