ಉ : ರೀಬೌಂಡಿಂಗ್‌ ಮಾಡುವಾಗ ರಸಾಯನಯುಕ್ತ ಉತ್ಪನ್ನಗಳನ್ನು ಬಳಸಲಾಗುತ್ತದೆ. ಹೀಗಾಗಿ ರೀಬೌಂಡಿಂಗ್‌ ಮಾಡಿಸಿದ ಬಳಿಕ ಕೂದಲಿನ ಆರೈಕೆ ಚೆನ್ನಾಗಿ ಮಾಡಬೇಕು. ನೀವು ಸ್ಮೂದನಿಂಗ್‌ ಶ್ಯಾಂಪೂ ಬಳಸಿ. ಜೊತೆಗೆ ವಾರಕ್ಕೊಮ್ಮೆ ಹೇರ್‌ ಮಾಸ್ಕನ್ನು ಅವಶ್ಯ ಬಳಸಿ. ಅಷ್ಟೇ ಅಲ್ಲ, ಕೂದಲಿಗೆ ಸ್ಟೀಮ್ ಕೂಡ ಕೊಡಿ.

ಪ್ರ : ನನಗೆ 18 ವರ್ಷ. ಬಿಸಿಲಿನಲ್ಲಿ ನನ್ನ ಮುಖದಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಮುಕ್ತಿ ಕಂಡುಕೊಳ್ಳಲು ಏನಾದರೂ ಮನೆ ಉಪಾಯ ತಿಳಿಸಿ.

ಉ : ಬೇವು ಹಾಗೂ ತುಳಸಿಯ ಪೇಸ್ಟ್ ಪ್ಯಾಕ್‌ನ್ನು ಲೇಪಿಸಿ. ಇದರಿಂದ ತ್ವಚೆಯೊಳಗಿನ ಕೊಳಕು ನಿವಾರಣೆಯಾಗುತ್ತದೆ. ವಾರದಲ್ಲಿ 1 ವಾರ ಜೆಲ್ ‌ಸ್ಕ್ರಬ್‌ ಅವಶ್ಯವಾಗಿ ಲೇಪಿಸಿ. ಆಹಾರದಲ್ಲಿ ಸ್ನಿಗ್ಧ ಪದಾರ್ಥಗಳನ್ನು ಕಡಿಮೆ ಬಳಸಿ. ಹೊರಗೆ ಹೋಗುವಾಗ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೋಗಿ.

ಪ್ರ : ಸನ್‌ ಬರ್ನ್‌ನ ಕಾರಣದಿಂದ ಕುತ್ತಿಗೆಯ ಹಿಂಭಾಗ ಕಪ್ಪಗಾಗಿದೆ. ಉತ್ತಮ ಗುಣಮಟ್ಟದ ಬ್ಲೀಚ್‌ ಹಾಗೂ ವ್ಯಾಕ್ಸ್ ಬಳಸಿ ನೋಡಿದೆ. ಆದರೆ ಯಾವುದೇ ಲಾಭ ಆಗಿಲ್ಲ. ನನ್ನ ಸಮಸ್ಯೆ ನಿವಾರಿಸುವ ಯಾವುದಾದರೂ ಮನೆ ಉಪಾಯ ತಿಳಿಸಿ.

ಉ : ಸನ್‌ ಬರ್ನ್‌ನ ಕಾರಣದಿಂದ ಕುತ್ತಿಗೆಯ ಹಿಂಭಾಗ ಕಪ್ಪಗಾಗಿದ್ದರೆ, ಟೊಮೇಟೊ, ಸೌತೆಕಾಯಿ ಹಾಗೂ ಆಲೂಗಡ್ಡೆಯ ಪ್ಯಾಕ್‌ ಮಾಡಿಕೊಂಡು ಲೇಪಿಸಿ. 20 ನಿಮಿಷಗಳ ಬಳಿಕ ನಿಧಾನವಾಗಿ ಉಜ್ಜಿ ಅದನ್ನು ನಿವಾರಿಸಿ. ಬಳಿಕ ಮಾಯಿಶ್ಚರೈಸರ್‌ ಲೇಪಿಸಿ. ದಿನಕ್ಕೆ 3 ಸಲ ಇದನ್ನು ಅನುಸರಿಸಿ.

ಪ್ರ : ನನ್ನದು ಗೋದಿವರ್ಣ. ಮುಖದಲ್ಲಿ ಹೊಳಪು ಇಲ್ಲ. ನನಗೆ ಯಾವುದಾದರೂ ಮನೆ ಉಪಾಯ ತಿಳಿಸಿ.

ಉ : ಮುಖದಲ್ಲಿ ಕಾಂತಿ ಬರಲು ಒಂದು ಸರಳ ಉಪಾಯವೆಂದರೆ, ದಿನಕ್ಕೆ 10-15 ಗ್ಲಾಸ್‌ ನೀರನ್ನು ಅವಶ್ಯವಾಗಿ ಕುಡಿಯಿರಿ. ಇದರ ಜೊತೆಗೆ ಆ್ಯಲೋವೇರಾ ಜೆಲ್‌ನಿಂದ ಮುಖಕ್ಕೆ ಮಸಾಜ್‌ ಮಾಡಿ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ಅವಶ್ಯವಾಗಿ ಮುಖವನ್ನು ಮುಚ್ಚಿಕೊಳ್ಳಿ.

ಪ್ರ : ನನಗೆ 19 ವರ್ಷ. 4-5 ವರ್ಷಗಳಿಂದ ನನ್ನ ಮುಖದಲ್ಲಿ ಮೊಡವೆಗಳು ಇವೆ. ಅವನ್ನು ನಾನು ಆಗಾಗ ಒಡೆದು ಹಾಕುತ್ತಿದ್ದೆ. ಹೀಗಾಗಿ ಅವುಗಳ ಕಲೆಗಳು ಮುಖದಲ್ಲಿ ಕಂಡುಬರುತ್ತಿವೆ. ಈ ಮೊಡವೆ ಕಲೆಗಳಿಂದ ನಾನು ಮುಕ್ತಿ ಕಂಡುಕೊಳ್ಳುವುದು ಹೇಗೆ?

ಉ : ನಿಮಗೆ ಈ ಸಮಸ್ಯೆ ಏಕೆ ಕಾಣಿಸಿಕೊಂಡಿದೆ ಎಂದರೆ, ನಿಮ್ಮ ಚರ್ಮದ ರಂಧ್ರಗಳು ಮುಚ್ಚಿಹೋಗಿವೆ. ಅವುಗಳಲ್ಲಿ ಧೂಳು ಮಣ್ಣು ತುಂಬಿಹೋಗಿದೆ. ನೀವು ಮುಖವನ್ನು ಪ್ರತಿ ದಿನ ಸ್ವಚ್ಛಗೊಳಿಸಿಕೊಳ್ಳಿ. ಅದಕ್ಕಾಗಿ ಕ್ಲೀನಿಂಗ್‌, ಟೋನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡಿ. ಮೊಡವೆಗಳನ್ನು ಒಡೆಯಬೇಡಿ. ಕಲೆಗಳನ್ನು ನಿವಾರಿಸಲು ನೀಮ್ ಪ್ಯಾಕ್‌ ಲೇಪಿಸಿ. ಜೊತೆಗೆ ಎಣ್ಣೆ ಪದಾರ್ಥಗಳ ಸೇವನೆಯನ್ನು ಆದಷ್ಟೂ ಕಡಿಮೆ ಮಾಡಿ. ಪ್ರತಿದಿನ 8-10 ಗ್ಲಾಸ್‌ ನೀರು ಕುಡಿಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ