ನಾನೊಂದು ಸಲ ಸುತ್ತಾಡಲೆಂದು ಬೆಂಗಳೂರಿಗೆ ಹೋಗಿದ್ದೆ. ಹಾಗೆಯೇ ಪ್ರವಾಸ ಸ್ಥಳಗಳನ್ನು ಸುತ್ತಾಡುತ್ತಾ ನನ್ನದೇ ವಯಸ್ಸಿನ ಒಬ್ಬ ಯುವಕನ ಪರಿಚಯವಾಗಿ ಸ್ನೇಹಿತರಾಗಿ ಬಿಟ್ಟಿದ್ದೆವು. ನನ್ನ ಮತ್ತು ಅವನ ಅಭಿರುಚಿಗಳು ಹೆಚ್ಚು ಕಡಿಮೆ ಒಂದೇ ರೀತಿ ಆಗಿದ್ದುದರಿಂದ ಸ್ನೇಹವಾಗಿತ್ತು. ನಾನು ರಾತ್ರಿ ಹೋಟೆಲ್‌ಗೆ ಬಂದಾಗ ನನ್ನ ಪರ್ಸ್‌ ಕಳೆದು ಹೋಗಿರುವುದು ಗೊತ್ತಾಯಿತು. 2000 ರೂ., ಎಟಿಎಂ ಕಾರ್ಡ್‌ ಎಲ್ಲ ಅದರಲ್ಲಿಯೇ ಇತ್ತು. ಇನ್ನೇನು ಮಾಡಬೇಕೆಂದು ತೋಚದೇ ಇದ್ದಾಗ ಮಧ್ಯಾಹ್ನ ಗೆಳೆಯನೊಬ್ಬ ಕೊಟ್ಟು ಹೋದ ವಿಳಾಸ ಹಾಗೂ ಫೋನ್‌ ನಂಬರ್‌ ಇದ್ದ ಕಾರ್ಡ್‌ ಕೈಗೆತ್ತಿಕೊಂಡೆ. ನಾನು ಫೋನ್‌ ಕೂಡ ಮಾಡದೆ, ಅವನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ ಬಳಿ ಹೋದೆವು. ಅಲ್ಲಿ ನನಗೆ ಅವನಿಂದ ಹಣ ಕೇಳುವುದು ಸರಿಯೇ? ಅವನು ಇಲ್ಲ ಎಂದರೆ ಏನು ಮಾಡುವುದು ಎಂದು ಯೋಚಿಸತೊಡಗಿದೆ. ಯೋಗಾಯೋಗ ಎಂಬಂತೆ ಅವನು ಅಪಾರ್ಟ್‌ಮೆಂಟ್ ಎದುರುಗಡೆಯೇ ಭೇಟಿಯಾದ. ನನ್ನನ್ನು ನೋಡಿ ಅವನಿಗೆ ಬಹಳ ಖುಷಿಯಾಯಿತು. ಆದರೆ ನನ್ನ ಇಳಿದುಹೋದ ಮುಖ ಕಂಡು ಏನಾಯ್ತು ಎಂದು ಕೇಳಿದ. ನಾನು ಪರ್ಸ್‌ ಕಳೆದುಕೊಂಡ ವಿಷಯ ತಿಳಿಸಿದೆ. ಆಗ ಅವನು ತಕ್ಷಣವೇ ತನ್ನ ಜೇಬಿನಿಂದ 1000 ರೂ. ತೆಗೆದು, ನನ್ನ ಕೈಗಿಡುತ್ತಾ, ``ಗೆಳೆಯ, ಈ ಹಣ ಇಟ್ಟುಕೊಂಡು ಊರಿಗೆ ಮರಳು. ಮತ್ತೊಮ್ಮೆ ಬೆಂಗಳೂರಿಗೆ ಬಾ. ಆದರೆ ಈ ಹಣ ಕೊಡಲು ಅಲ್ಲ, ನನ್ನ ಭೇಟಿಗೆಂದು ಬಾ,'' ಎಂದ. ಆ ಸ್ನೇಹಿತನ ನೆನಪು ಸದಾ ನನ್ನ ಮನಸ್ಸಿನಲ್ಲಿ ಇದ್ದೇ ಇರುತ್ತದೆ.

- ಸಂಜಯ್‌, ದಾವಣಗೆರೆ.

 

ನಮ್ಮ ಮನೆಗೆ ಆಗಾಗ ಅತಿಥಿಗಳು ಬರುವುದು ಹೊಸ ವಿಷಯವೇನಲ್ಲ. ಏನಾದರೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇದ್ದ. ಅದೊಂದು ದಿನ ಸೊಸೆ ಸಾಕಷ್ಟು ತರಕಾರಿಗಳನ್ನು ತೆಗೆದುಕೊಂಡು ಬಂದು, ಅವನ್ನು ಹೆಚ್ಚಲು ನೆರವಾಗಬೇಕೆಂದು ನನ್ನನ್ನು ಕೇಳಿದಳು. ನಾನು ಖುಷಿಯಿಂದಲೇ ಒಪ್ಪಿದೆ. ಮಧ್ಯಾಹ್ನ ಆಗುವ ಹೊತ್ತಿಗೆ ಬಹಳಷ್ಟು ಜನ ಕೈಯಲ್ಲಿ ಪ್ಯಾಕೆಟ್‌ ಹಿಡಿದುಕೊಂಡು ಬಂದದ್ದನ್ನು ಕಂಡು ಯಾರದೊ ಬರ್ಥ್‌ ಡೇ ಇರಬೇಕೆಂದು ನಾನು ಅಂದುಕೊಂಡೆ. ಅವರು ಮಾತ್ರ ಏನು ಕಾರ್ಯಕ್ರಮ ಎಂದು ರಹಸ್ಯ ಬಿಟ್ಟುಕೊಟ್ಟಿರಲಿಲ್ಲ.

ನಾನು ಏನೋ ತರಲೆಂದು ಸೊಸೆಯ ರೂಮಿಗೆ ಹೋದರೆ, ಅಲ್ಲಿ ನನ್ನ ಮಗಳು ಹಾಗೂ ಸೊಸೆ ಒಂದು ಸುಂದರ ಸೀರೆ ತೆಗೆದು ನೋಡುತ್ತಿದ್ದರು. ``ಯಾರದ್ದು ಆ ಸೀರೆ?'' ಎಂದು ನಾನು ಕೇಳಿದೆ.

``ಅಣ್ಣ ಅತ್ತಿಗೆಗಾಗಿ ತಂದಿದ್ದಾನೆ,'' ಎಂದು ಮಗಳು ಹೇಳಿದಳು.

ನಾನು ಯೋಚಿಸತೊಡಗಿದೆ, `ಯಾವುದೇ ಹಬ್ಬದ ಕಾರಣವಿಲ್ಲದೆ ಮಗ ಈಗೇಕೆ ಸೀರೆ ತಂದಿದ್ದಾನೆ,' ಎಂದು.

ಬಳಿಕ ಸೊಸೆ ಕೇಳಿದಳು, ``ಹೇಗಿದೆ ಅತ್ತೆ ಈ ಸೀರೆ?''

``ಸೀರೆ ಚೆನ್ನಾಗಿದೆ. ನಿನಗೆ ಬಹಳ ಚೆನ್ನಾಗಿ ಒಪ್ಪುತ್ತೆ,'' ಎಂದು ನಾನು ಹೇಳಿದೆ. ಆದರೆ ಇಬ್ಬರೂ ಸೇರಿ ನನಗೆ ಸೀರೆ ಉಟ್ಟುಕೊಳ್ಳಲು ಆಗ್ರಹಿಸಿದರು.

ಸೊಸೆ ಹೇಳಿದಳು, ``ನೀವು ಸ್ವಲ್ಪ ಬೇಗ ಸೀರೆ ಉಟ್ಟುಕೊಂಡು ಬನ್ನಿ. ಎಲ್ಲ ಸಿದ್ಧವಾಗಿದೆ,'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ