ಪ್ರ : ನನಗೆ 42 ವರ್ಷ. ಹಲವು ವರ್ಷಗಳಿಂದ ಮಾರ್ಕೆಟಿಂಗ್‌ನಲ್ಲಿ ಇದ್ದೇನೆ. ಯಾವಾಗಲೂ ಟಾರ್ಗೆಟ್‌ ಮುಗಿಸುವ ಒತ್ತಡ ಇದ್ದೇ ಇರುತ್ತದೆ. ಹೆಂಡತಿಯ ಒತ್ತಡದ ಮೇರೆಗೆ ನಾನು ಇತ್ತೀಚೆಗೆ ರಕ್ತದೊತ್ತಡ ಪರೀಕ್ಷಿಸುವ ಒಂದು ಉಪಕರಣವನ್ನು ಮನೆಗಾಗಿ ಖರೀದಿಸಿದ್ದೇನೆ. ಅದರ ರೀಡಿಂಗ್‌ ಸಾಮಾನ್ಯವಾಗಿ ನಾರ್ಮಲ್ ಬರುತ್ತದೆ. ಆದರೆ ಒಮ್ಮೊಮ್ಮೆ ರಕ್ತದೊತ್ತಡ ಹೆಚ್ಚಾಗಿರುತ್ತದೆ. ರಕ್ತದೊತ್ತಡ ಪರೀಕ್ಷಿಸುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗುತ್ತದೆ. ಆ ನಿಮಯಗಳು ಯಾವುದು ಎನ್ನುವುದನ್ನು ತಿಳಿಸಿ :

ಉ : ರಕ್ತದೊತ್ತಡ ಪರೀಕ್ಷಿಸಲು ಕೆಲವು ಸರಳ ನಿಯಮಗಳಿದ್ದು ಅವುಗಳ ಬಗ್ಗೆ ಗಮನ ಕೊಡುವುದು ಅತ್ಯಗತ್ಯ. ಇಲ್ಲದಿದ್ದರೆ ಬಿಪಿ ತಪ್ಪಾಗಿ ರೀಡ್‌ ಆಗುತ್ತದೆ.

ಪರೀಕ್ಷೆಗೂ ಮುನ್ನ ವಿಶ್ರಾಂತಿ : ಮನೆಯಲ್ಲೇ ಇರಿ ಅಥವಾ ವೈದ್ಯರ ಬಳಿ ಹೋದಾಗ ಬಿ.ಪಿ ಪರೀಕ್ಷೆಗೂ ಮುನ್ನ 5 ನಿಮಿಷ ಅವಶ್ಯವಾಗಿ ವಿಶ್ರಾಂತಿ ಪಡೆಯಿರಿ.

ಬಿ.ಪಿ. ಯಂತ್ರ ಸೂಕ್ತ ಎತ್ತರದಲ್ಲಿಡಿ : ನಿಮ್ಮ ತೋಳು ಹಾಗೂ ಬಿ.ಪಿ ಮಾಪನ ಯಂತ್ರ ಯಾವ ಎತ್ತರದಲ್ಲಿರಬೇಕೆಂದರೆ, ನಿಮ್ಮ ಹೃದಯ ಇರುವಷ್ಟು ಎತ್ತರದಲ್ಲಿರಲಿ.

ಕೋಲಾ ಕೆಫಿನ್‌ ಬೇಡ : ಬಿ.ಪಿ ಪರೀಕ್ಷೆಗೂ 30 ನಿಮಿಷಗಳ ಮುಂಚೆ ಚಹಾ, ಕಾಫಿ, ಕೋಲ್ಡ್ ಡ್ರಿಂಕ್ಸ್ ಹಾಗೂ ಧೂಮಪಾನ ಮಾಡಿರಬಾರದು.

ಸೂಕ್ತ ಬಿ.ಪಿ ಮಾಪನ ಯಂತ್ರ : ಬಿ.ಪಿ ಮಾಪನ ಉಪಕರಣ ಬಾಹುಗಳಿಗೆ ಸುತ್ತಲ್ಪಡುವ ಕಫ್‌ ನ ಅಗಲ ಬಾಹುಗಳ ಸುತ್ತಳತೆಗೆ ತಕ್ಕಂತೆ ಇರಲಿ. ಒಂದು ವೇಳೆ ನಿಮ್ಮ ಬಾಹುಗಳ ಸುತ್ತಳತೆ ಜಾಸ್ತಿ ಇದ್ದು ಸಾಧಾರಣ ಕಫ್‌ನಿಂದ ಬಿ.ಪಿ ಚೆಕ್‌ ಮಾಡುವುದರಿಂದ ರೀಡಿಂಗ್‌ ಹೆಚ್ಚಾಗಿರುವುದು ಕಂಡುಬರುತ್ತದೆ. ಬಾಹುಗಳ ಸುತ್ತಳತೆ ತೆಳ್ಳಗಿದ್ದರೆ, ಕಫ್‌ ಅಗಲವಾಗಿದ್ದರೆ ಆಗ ಬಿ.ಪಿ ಕಡಿಮೆ ಇರುತ್ತದೆ.

ಮನೆಯ ಬಿ.ಪಿ ಯಂತ್ರ ಬ್ರಾಂಡೆಡ್‌ ಆಗಿರಲಿ : ನೀವು ಮನೆಯಲ್ಲಿ ಯಾವ ಬಿ.ಪಿ. ಮಾಪನ ಉಪಕರಣದಿಂದ ಬಿ.ಪಿ ಚೆಕ್‌ಮಾಡುತ್ತಿದ್ದೀರೊ, ಅದರ ವಿಶ್ವಾಸರ್ಹತೆಯನ್ನು ಡಾಕ್ಟರ್‌ ಮುಖಾಂತರ ತೆಗೆದುಕೊಂಡ ರೀಡಿಂಗ್‌ನ ಆಧಾರದ ಮೇಲೆ ಪರಿಶೀಲಿಸಿ. ವಾಸ್ತವ ಸಂಗತಿ ಏನೆಂದರೆ, ಹೃದಯ ಗತಿಯ ವೇಗ, ಉಸಿರಾಟದ ವೇಗ ಹಾಗೂ ದೇಹದ ಇತರೆ ಜೈವಿಕ ಮಾನದಂಡಗಳ ಪ್ರಕಾರ ಯಾವುದೇ ವ್ಯಕ್ತಿಯ ಬಿ.ಪಿ ಸದಾ ಒಂದೇ ರೀತಿಯಲ್ಲಿ ಇರುವುದಿಲ್ಲ. ನಾವೇನು ಮಾಡುತ್ತಿದ್ದೇವೆ, ನಮ್ಮ ದೈಹಿಕ ಮಾನಸಿಕ ಅವಸ್ಥೆ ಹೇಗಿದೆ ಎನ್ನುವುದರ ಮೇಲೂ ಅದು ಅಲಂಬಿಸಿರುತ್ತದೆ.

ಯಾವಾಗಲೊ ಒಮ್ಮೆ ರೀಡಿಂಗ್‌ ಅಷ್ಟಿಷ್ಟು ಏರುಪೇರಾಗಿದೆ ಎನ್ನುವುದರ ಬಗ್ಗೆ ಚಿಂತೆ ಮಾಡದೆ, ಯಾವಾಗಲಾದರೂ ಬಿ.ಪಿ ಸ್ವಲ್ಪ ಹೆಚ್ಚಾಗಿದೆ ಎಂದೆನಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ಬಿ.ಪಿ ಹೆಚ್ಚುವುದರಿಂದ ದೇಹದ ಇತರೆ ಅಂಗಗಳ ಮೇಲೆ ಪರಿಣಾಮ ಆಗಿಯೇ ಆಗುತ್ತದೆ.

ಹೃದಯದ ಕೊರೋನರಿ ಧಮನಿಗಳ ಕುಗ್ಗುವಿಕೆಯಿಂದ ಹೃದಯಾಘಾತ, ಮೆದುಳಿನಲ್ಲಿ ರಕ್ತ ಸಂಚಾರ ಏರುಪೇರಿನಿಂದ ಸ್ಟ್ರೋಕ್‌, ಕಿಡ್ನಿಗಳ ಧಮನಿಗಳಲ್ಲಿ ಒತ್ತಡ ಹೆಚ್ಚುವುದರಿಂದ ಕಿಡ್ನಿ ಫೇಲ್ಯೂರ್‌, ಕಣ್ಣಿನ ರೆಟಿನಾಗಳಲ್ಲಿ ರಕ್ತಸ್ರಾವ ಹಾಗೂ ದೇಹದ ಯಾವುದೇ ಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚಿರುವುದು ಬಹುದೊಡ್ಡ ತೊಂದರೆಗೆ ಕಾರಣವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ