ಸುಗುಣಾ ವಿಧವೆ ಎಂದು ಗೊತ್ತಿದ್ದರೂ, ಮಾಧವ ಅವಳಿಗಾಗಿ ಹೊಸ ಬಾಳು ನೀಡಲು ಮುಂದಾದ. ಇದನ್ನು ಒಪ್ಪದ ಅವನ ತಂದೆ ತಾಯಿಯರನ್ನು ಹೇಗೆ ಓಲೈಸಿದ........?

``ಇದೇನು ಸುಶೀಲಮ್ಮ..... ಇಡೀ ಓಣಿ ತುಂಬಾ ಜನ ನಿಮ್ಮ ಮಗನ ಬಗ್ಗೆ ಮಾತಾಡ್ಕೋತಿರೋದು..... ನಿಮಗೆ ಗೊತ್ತಿಲ್ವಾ.....?'' ಎಂದು ಆ ಸಂಜೆ ಎದುರು ಮನೆ ಪಂಕಜಮ್ಮ ಕಟ್ಟೆ ಮೇಲೆ ಬಂದು ಕುಳಿತು ಹೇಳಿದರು.

ಅವರಾಡಿದ ಮಾತುಗಳನ್ನು ಕೇಳಿಸಿಕೊಂಡ ಮಾಧವನ ತಾಯಿ ಸುಶೀಲಮ್ಮ, ``ನೀವು ಏನು ಹೇಳ್ತಿದ್ದೀರೋ ಗೊತ್ತಾಗ್ತಿಲ್ಲ. ಏನಂತೆ ವಿಷಯ....?'' ಎಂದು ಮರು ಪ್ರಶ್ನಿಸಿದರು.

ಮುಂದುವರಿದ ಪಂಕಜಮ್ಮ, ``ಅಯ್ಯೋ, ಸುಶೀಲಮ್ಮಾ.... ಬ್ಯಾಂಕ್‌ ನಲ್ಲಿ ಕೆಲಸ ಮಾಡ್ತಿದ್ದಾನಲ್ಲ ನಿಮ್ಮ ಮಗ ಮಾಧವ, ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡ್ತಿರೋ ಸುಗುಣಾ ಎಂಬ ವಿಧವೆ ಜೊತೆ ಆಡುತ್ತಿರುವ ಪ್ರೇಮ ಲೀಲೆ ಎಲ್ಲಾ ಕಡೆಗೆ ಹರಡಿದರೂ ಅದರ ಗಾಳಿ ಗಂಧ ನಿಮಗೆ ಗೊತ್ತಾಗಿಲ್ವಾ.....?'' ಎಂದರು.

``ಏನು ನಮ್ಮ ಮಾಧವನಾ.....? ಸಾಧ್ಯವೇ ಇಲ್ಲಾ ಕಣ್ರೀ.....'' ಎಂದು ಸ್ವಲ್ಪ ಗಡುಸಾಗಿ ಹೇಳಿದರು.

ಅಷ್ಟಕ್ಕೇ ಸುಮ್ಮನಿರದ ಪಂಕಜಮ್ಮ, ``ಹೌದು ಕಣ್ರೀ... ನಾನು ನಿಮ್ಮ ಮಗ ಅದೇ ಮಾಧವನ ಬಗ್ಗೆನೇ ಮಾತಾಡ್ತಿರೋದು,'' ಎಂದರು ವ್ಯಂಗ್ಯವಾಗಿ.

ಇದನ್ನು ಕೇಳಿದ ಸುಶೀಲಮ್ಮರಿಗೆ ಆ ಸಂಜೆಯ ತಂಪು ಹೊತ್ತಿನಲ್ಲೂ ಹಣೆ ಮೇಲೆ ಬೆವರು ಬರಲಾರಂಭಿಸಿತು. ಆದರೂ ಸಾವರಿಸಿಕೊಂಡ ಅವರು, ``ಇಲ್ಲಾರೀ ಪಂಕಜಮ್ಮ, ನಿಮಗೆಲ್ಲೋ ತಪ್ಪು ಸುದ್ದಿ ಬಂದಿರಬೇಕು.... ನಮ್ಮ ಮಾಧವ ಅಂಥವನಲ್ಲವೇ ಅಲ್ಲ....'' ಎಂದರು.

``ಬೇಕಿದ್ರೆ ನಿಮ್ಮ ಮಗನನ್ನೇ ವಿಚಾರಿಸಿ ಕನ್ಛರ್ಮ್ ಮಾಡ್ಕೊಳ್ಳಿ,'' ಎನ್ನುತ್ತಾ ಎದ್ದು ಮನೆಗೆ ಹೊರಟ ಆಕೆ, ``ಅವಳಿಗೆ ಮೂರು ವರ್ಷದ ಮಗನೂ ಇದ್ದಾನಂತೆ,'' ಎಂದು ಒಂದಿಷ್ಟು ಒಗ್ಗರಣೆ ಹಾಕಿಯೇ ಹೋದರು.

ಇದರಿಂದ ಬಹಳ ಚಿಂತಿತರಾದ ಸುಶೀಲಮ್ಮ ಮನೆಯೊಳಗೆ ಬಂದು, ತಮ್ಮ ರೂಮಿನಲ್ಲಿ ಪೇಪರ್‌ ಓದುತ್ತಾ ಕುಳಿತಿದ್ದ ಪತಿಯ ಬಳಿ ಹೋದರು. ಪತ್ನಿಯ ಕಳೆಗುಂದಿದ ಮುಖ ಕಂಡ ಅವರು, ``ಸುಶೀಲಾ.... ಏನಾಯ್ತು? ಯಾಕೆ ಮೈಗೆ ಹುಷಾರಿಲ್ವಾ.... ಯಾಕೆ ಒಂಥರಾ ಇದೀಯಲ್ಲಾ..... ಸ್ವಲ್ಪ ಹೊತ್ತಿಗೆ ಮುಂಚೆ ಚೆನ್ನಾಗಿದ್ದೆಯಲ್ಲಾ, ಏನಾಯ್ತು ನಿನಗೆ?'' ಎಂದು ಕಕ್ಕುಲತೆಯಿಂದ ಕೇಳಿದರು.

ಸ್ವಲ್ಪ ಹೊತ್ತು ಮೌನವಾಗಿದ್ದ ಸುಶೀಲಮ್ಮ, ಎದುರು ಮನೆ ಪಂಕಜಮ್ಮ ಹೇಳಿದ ಮಗನ ವಿಷಯವನ್ನು ಪತಿಗೆ ವಿವರಿಸಿದರು. ನಂತರ, ``ನಮ್ಮ ಮಗನ ಪ್ರೇಮ ಪುರಾಣದಿಂದಾಗಿ ಬೀದಿಯಲ್ಲಿ ತಲೆ ಎತ್ಕೊಂಡು ಓಡಾಡದ ಹಾಗಾಗಿದೆ. ನಾವು ಮರ್ಯಾದೆ, ಗೌರವ ಅಂತ ಎಷ್ಟು ಹೆದರಿ ನಡೀತಿದ್ದೇವೋ ಅದಕ್ಕೆ ತಕ್ಕ ಶಾಸ್ತಿ ಮಾಡಿದ ಕಣ್ರೀ.... ಛೇ ಇಂಥ ವಿಷಯ ಕೇಳೋಕ್ಕಿಂತ ಮೊದಲೇ ಸಾವಾದ್ರೂ ಬರಬಾರದಾಗಿತ್ತಾ.... ಅವನಿಗೆ ಏನು ಕಡಿಮೆ ಮಾಡಿದ್ದೆವು ಹೇಳಿ....

``ಅವನ ಇಚ್ಛೆಯಂತೆ ಒಳ್ಳೆಯ ಶಿಕ್ಷಣ ಕೊಡಿಸಿದೆವು, ಸಂಸ್ಕಾರ ಕೊಟ್ಟೆವು. ಅವನ ಬ್ಯಾಂಕ್‌ ನಲ್ಲಿರುವ ಅದ್ಯಾವುದೋ ವಿಧವೆ ಜೊತೆ ಓಡಾಟ ಶುರು ಮಾಡ್ಕೊಂಡಿದ್ದಾನೆ ಅಂತ ಊರೆಲ್ಲಾ ಸುದ್ದಿ ಹರಡಿದೆ. ಇಲ್ಲ ಇಲ್ಲ... ನಾನಂತೂ ಆ ವಿಧವೆಯನ್ನು ಮನೆ ಸೊಸೆಯಾಗಿ ಒಪ್ಪಿಕೊಳ್ಳುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ