ಕೋವಿಡ್ಎಲ್ಲೆಡೆ ಹರಡಿ, ಕೊರೋನಾ ಮಹಾಮಾರಿಯ ಕೃಪೆಯಿಂದ ಎಲ್ಲರಿಗೂ ವರ್ಕ್ಫ್ರಮ್ ಹೋಮ್ ಅಲಾಟ್ಆಗಿತ್ತು. ರಾಜೀವನಂಥ ಎಡಬಿಡಂಗಿ ವಿಷಯದಲ್ಲಿ ಬಾಸ್ಮುಂದೆ ಸಿಕ್ಕಿಹಾಕಿಕೊಂಡದ್ದು ಹೇಗೆ.......?

ಕುಹೂ ಕುಹೂ ಎಂಬ ಕೋಗಿಲೆಯ ಇಂಪಾದ ಧ್ವನಿಯ ಅಲಾರಂ ಮೊಳಗುತ್ತಲೇ ಟಪ್‌ ಅಂತ ಅದರ ಬಟನ್‌ ಒತ್ತಿ ಆಫ್‌ ಮಾಡಿದ ರಾಜೀವ್ ಗಾಢವಾದ ನಿದ್ರೆಗೆ ಜಾರಿದ. ಮುಂದೆ ಮೂರು ತಾಸಿನ ಸುಖ ನಿದ್ರೆಯಲ್ಲಿದ್ದಾಗ ಕಾಲಿಂಗ್‌ ಬೆಲ್ ‌ಸದ್ದಾಯಿತು. ತಕ್ಷಣ ಎದ್ದು ನೋಡಿದರೆ ಆಗಲೇ ಗಂಟೆ ಎಂಟೂವರೆ.....!

ಬಾಗಿಲು ತೆರೆದಾಗ ಕೆಲಸದ ನಿಂಗಿ ಬಂದಿದ್ದಳು. ``ಅಣ್ಣಾ.... ಏನು ಇವತ್ತು ಈಟೊತ್ತು ಮನ್ಕಂಡಿದೀರಿ....'' ಎನ್ನುತ್ತಾ ಒಳಗೆ ಬಂದವಳು ನೇರ ಕಿಚನ್‌ ಗೆ ಹೋಗಿ ಪಾತ್ರೆ ತೊಳೆಯ ತೊಡಗಿದಳು.

``ಅಯ್ಯೋ ವರ್ಕ್‌ ಫ್ರಮ್ ಹೋಮ್ ಅಲ್ವಾ ಅದಕ್ಕೆ......'' ಎಂದವನೆ ನೇರ ಬಾಥ್‌ ರೂಮಿಗೆ ಹೋಗಿ ಪಟಪಟನೇ ಬ್ರಶ್ ಮಾಡಿಕೊಂಡು, ಕೈ ಕಾಲು ಮುಖ ತೊಳೆದು, ಲೈಟ್‌ ಶರ್ಟ್‌ಮೇಲೆ ನೆವಿ ಬ್ಲೂ ಟೈ ಕಟ್ಟಿಕೊಂಡು, ಡಿಯೋ ಸ್ಪ್ರೇ ಮಾಡಿಕೊಂಡ.

``ನಿಂಗಮ್ಮ ಚಹಾ ಮಾಡಿಬಿಡು..... ನನಗಿತ್ತು ಒಂಬತ್ತು ಗಂಟೆಗೆ ಮುಖ್ಯವಾದ ಆನ್‌ ಲೈನ್‌ ಮೀಟಿಂಗ್‌ ಇದೆ,'' ಎಂದು ಹೇಳಿ ಲ್ಯಾಪ್‌ ಟಾಪ್‌ ಆನ್‌ ಮಾಡಿ ಚಾರ್ಜಿಂಗ್‌ ಹಾಕಿ ಡೈರಿ ತೆಗೆದಿಟ್ಟುಕೊಂಡು, ``ವೆರಿ ಗುಡ್‌ ಮಾರ್ನಿಂಗ್‌ ಸರ್‌....'' ಎಂದು ಖುಷಿಯಿಂದ ಬಾಸ್‌ ಗೆ ವಿಶ್‌ ಮಾಡಿದ.

ಬಾಸ್‌ಫುಲ್ ಗರಮ್ ಆಗಿದ್ದರು. ಕಾರಣ ಅದಾಗಲೇ ಒಂಬತ್ತು ಗಂಟೆ ಹತ್ತು ನಿಮಿಷವಾಗಿತ್ತು.

``ಸಾರಿ ಸರ್‌... ಐ ಆ್ಯಮ್ ಎಕ್ಸ್ ಟ್ರೀಮ್ಲಿ ಸಾರಿ.....'' ಎಂದು ಹೇಳಿದ.

ಅದೇ ಸಮಯಕ್ಕೆ ಕೆಲಸದ ನಿಂಗಿ ಚಹಾದ ಕಪ್‌ ತಂದು ಟೇಬಲ್ ಮೇಲಿಟ್ಟು ಒಳ ಹೋದಳು. ಬಾಸ್‌ ಬುಸುಗುಡುತ್ತಲೇ ಮೀಟಿಂಗ್‌ ಶುರು ಮಾಡಿದರು..... ಆಫೀಸ್‌ ಸಿಬ್ಬಂದಿಯವರೆಲ್ಲರೂ ಸೇರಿ ಇನ್ನೇನು ಇಂಪಾರ್ಟೆಂಟ್‌ ವಿಷಯ ಮಾತನಾಡುತ್ತಿರುವಾಗಲೇ, ನಿಂಗಿ ಪೊರಕೆ ಹಿಡಿದುಕೊಂಡು ಬಂದವಳೇ, ``ವಸೀ ಏಳಣ್ಣ ಕುರ್ಚಿ ತೆಗೆದು ಕಸ ಗುಡಿಸ್ಕಂತೀನಿ.....,'' ಎಂದು ಅವನ ಮುಖವನ್ನೇ ನೋಡುತ್ತಾ ನಿಂತಳು.

ಎದುರಿಗಿದ್ದ ಲ್ಯಾಪ್‌ ಟಾಪ್‌ ನಲ್ಲಿ ಮಾತನಾಡುತ್ತಿದ್ದ ಬಾಸ್‌ ನ್ನು ನೋಡುವುದೋ, ಇಲ್ಲ ನಿಂಗಿ ಮುಖ ನೋಡುವುದೋ ತಿಳಿಯದ ಗೊಂದಲದಲ್ಲಿದ್ದ ರಾಜೀವ, ವಿಡಿಯೋ ಮ್ಯೂಟ್‌ ಮಾಡದೇ ಕುರ್ಚಿಯಿಂದ ಎದ್ದು ಪಕ್ಕದಲ್ಲಿ ನಿಂತ.

ಎಲ್ಲರೂ ರಾಜೀವನ ಡ್ರೆಸ್‌ ನೋಡಿ ಕಿಸಕ್ಕನೆ ನಕ್ಕರು. ಏಕೆಂದರೆ ಅವನು ಬರ್ಮುಡಾ ಮೇಲೆ ಶರ್ಟ್‌ ಹಾಕಿಕೊಂಡು ಟೈ ಕಟ್ಟಿಕೊಂಡಿದ್ದ. ಅವನನ್ನು ನೋಡಿ ಬಾಸ್‌ ಗೆ ವಿಪರಿತ ಕೋಪ ಬಂದಿತು, ``ಏನ್ರೀ ಇದು ನಿಮ್ಮ ಅವತಾರ...... ಈ ಅವತಾರದಲ್ಲಿ ಜಾಯಿನ್‌ ಆಗೋಕೆ ಹತ್ತು ನಿಮಿಷ ಲೇಟ್‌ ಬೇರೆ.....'' ಎಂದು ಸಹಸ್ರ ನಾಮಾರ್ಚನೆ ಮಾಡತೊಡಗಿದರು.

ಕೆಲಸದ ನಿಂಗಿಯೂ ಅವನ ಅವತಾರ ನೋಡಿ ಮುಖ ಮುಚ್ಚಿಕೊಂಡು ಮುಸಿ ಮುಸಿ ನಗತೊಡಗಿದಳು. ರಾಜೀವನ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಾಗಿತ್ತು.....!!  ಹರಳೆಣ್ಣೆ ಕುಡಿದವನಂತೆ ಮುಖ ಕಿವುಚಿದ ರಾಜೀವ ಬಾಸ್‌ ಗೆ ಹೇಗೆ ಸಮಾಧಾನ ಹೇಳುವುದೋ ತಿಳಿಯದೆ, ನಿಂಗಿಗೆ ಬೇಗ ಕಸ ಗುಡಿಸಿ ಹೋಗುವಂತೆ ಸನ್ನೆ ಮಾಡತೊಡಗಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ